ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ

in Uncategorized 1,005 views

ತ್ರಿಪುರಾದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಚುನಾವಣೆ ನಡೆದ 13 ನಗರ ಸಂಸ್ಥೆಗಳಲ್ಲಿ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ಕೂಡ ಸೇರಿದೆ. ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಒಟ್ಟು 20 ನಗರ ಸಂಸ್ಥೆಗಳಿವೆ.

Advertisement

ಪ್ರಸ್ತುತ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಬಿಪ್ಲಬ್ ಕುಮಾರ್ ದೇಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) 51 ಸ್ಥಾನಗಳ ಪೈಕಿ 19 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಉಳಿದ ಕಡೆಗಳಲ್ಲಿಯೂ ಬಿಜೆಪಿಯ ಸಾಧನೆ ಅದ್ಭುತವಾಗಿದೆ.

ಭಾರತೀಯ ಜನತಾ ಪಕ್ಷವು ಖೋವೈ ಮುನ್ಸಿಪಲ್ ಕೌನ್ಸಿಲ್ (ಕೆಎಂಸಿ) ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ, ಅಲ್ಲಿ 15 ರಲ್ಲಿ 15 ಸ್ಥಾನಗಳನ್ನೂ ಗೆದ್ದು ಬೀಗಿದೆ. ಅದೇ ರೀತಿ ‘ಮೇಲಾಘರ್ ಮುನ್ಸಿಪಲ್ ಕೌನ್ಸಿಲ್ (MMC)’ಯಲ್ಲಿ ಒಟ್ಟು 13 ಸ್ಥಾನಗಳಿದ್ದು, ಎಲ್ಲದರಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಸೋನ್ಮುಡಾ ನಗರ ಪಂಚಾಯತ್‌ನಲ್ಲೂ ಬಿಜೆಪಿ ಎಲ್ಲಾ 13 ಸ್ಥಾನಗಳನ್ನು ಗೆದ್ದಿದೆ. ಕೈಲಾಶಹರ್‌ನಲ್ಲಿ 17 ಸ್ಥಾನಗಳ ಪೈಕಿ 16ರಲ್ಲಿ ಬಿಜೆಪಿ ಅಭ್ಯರ್ಥಿಗಳು ಮುಂದಿದ್ದಾರೆ. ಇಲ್ಲಿ ಸಿಪಿಐ(ಎಂ) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಬೆಲೋನಿಯಾ ಕುರಿತು ಮಾತನಾಡುವುದಾದರೆ, ಇಲ್ಲಿನ 17 ಸ್ಥಾನಗಳಲ್ಲಿ 13 ರಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಗೆಲುವು ದಾಖಲಿಸಿದ್ದಾರೆ, ಉಳಿದ 4 ಸ್ಥಾನಗಳಲ್ಲಿ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಸಬ್ರೂಮ್ ನಗರ ಪಂಚಾಯತ್‌ನಲ್ಲಿಯೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ ಮತ್ತು 9 ರಲ್ಲಿ 9 ಸ್ಥಾನಗಳನ್ನು ಗೆದ್ದಿದೆ.

ಮತ್ತೊಂದೆಡೆ, ‘ಕುಮಾರ್‌ಘಾಟ್ ಮುನ್ಸಿಪಲ್ ಕೌನ್ಸಿಲ್’ ಬಗ್ಗೆ ಮಾತನಾಡುವುದಾದರೆ, ಎಲ್ಲಾ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟಿನಲ್ಲಿ ಈ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಬಲ್ಲೆ ಬಲ್ಲೆ ಎಂದೆ ಹೇಳಬಹುದಾಗಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಒಟ್ಟು 344 ಸ್ಥಾನಗಳ ಪೈಕಿ 222 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗಳು ಈಗಾಗಲೇ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದ್ದಾರೆ, ಅಲ್ಲಿ ಯಾವುದೇ ಪಕ್ಷವು ಯಾವುದೇ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವ್ಯಂಗ್ಯವಾಡಿದರು, ಮಮತಾ ಬ್ಯಾನರ್ಜಿಗೆ ತ್ರಿಪುರಾ ಕೇವಲ ಆರಂಭವಾಗಿದೆ, ಅವರು ಇನ್ನೂ ಹೆಚ್ಚಿನ ಹಿನ್ನಡೆಗಳನ್ನು ಕಾಣಬೇಕಿದೆ. ಇನ್ನು ಮುಂದೆ ಹಿಂ ಸಾಚಾರ ಮತ್ತು ಬೆದರಿಕೆಯ ರಾಜಕಾರಣ ನಡೆಯುವುದಿಲ್ಲ ಎಂದು ಹೇಳಿದರು. ಮಮತಾ ಬ್ಯಾನರ್ಜಿಯಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಬಳಿಕ ಈಗ ಈಶಾನ್ಯ ರಾಜ್ಯಗಳಲ್ಲೂ ತನ್ನ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲೇ ತ್ರಿಪುರಾದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ.

Advertisement
Share this on...