ಮಮತಾ ಬ್ಯಾನರ್ಜಿ ಹಾಗು TMC ವಿರುದ್ಧ ತಿರುಗಿಬಿದ್ದ ರಾಮಕೃಷ್ಣ ಮಿಷನ್: ಕಂಗಾಲಾದ ಮಮತಾ ಬ್ಯಾನರ್ಜಿ, ಕಾರಣವೇನು ನೋಡಿ

in Uncategorized 320 views

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ಅವರ ಅವತಾರ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಡಾ.ನಿರ್ಮಲ್ ಮಾಝಿ ಕರೆದಿದ್ದಾರೆ. TMC ಶಾಸಕರ ಈ ಮಾತಿಗೆ ರಾಮಕೃಷ್ಣ ಮಿಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಮಾತಿನಿಂದ ಶಾಸಕರ ಅನೇಕ ಅನುಯಾಯಿಗಳಿಗೆ ನೋವಾಗಿದೆ ರಾಮಕೃಷ್ಣ ಮಿಷನ್ ಹೇಳಿದೆ.

Advertisement

ಗುರುವಾರ (30 ಜೂನ್ 2022), ರಾಮಕೃಷ್ಣ ಮಿಷನ್ ಮತ್ತು ರಾಮಕೃಷ್ಣ ಮಠದ ಅಂತರಾಷ್ಟ್ರೀಯ ಪ್ರಧಾನ ಕಛೇರಿಯಾದ ಬೇಲೂರು ಮಠವು ತೃಣಮೂಲ ಕಾಂಗ್ರೆಸ್ ಶಾಸಕ ನಿರ್ಮಲ್ ಮಜಿ ಅವರ ಹೇಳಿಕೆಯನ್ನು ಖಂಡಿಸಿದೆ, ಇದರಲ್ಲಿ ಅವರು ರಾಮಕೃಷ್ಣ ಪರಮಹಂಸ ಅವರ ಪತ್ನಿ ಮಾ ಶಾರದ ಅವರ ಅವತಾರ ನಮ್ಮ ಮಮತಾ ಬ್ಯಾನರ್ಜಿ ಎಂದು ಹೇಳಿದ್ದರು. ಮಾತೆಯ ಬಗ್ಗೆ ಈ ರೀತಿಯ ಮಾಝಿ ರವರ ಹೇಳಿಕೆ ದುರದೃಷ್ಟಕರ ಎಂದು ಕರೆದಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವಿರಾನಂದ್, ಮಾತೆ ಶಾರದಾ ಅವರ ಶಿಷ್ಯರಿಗೆ ಇದರಿಂದ ನೋವಾಗಿದೆ ಎಂದು ಹೇಳಿದ್ದಾರೆ.

ಸುವೀರಾನಂದ್ ಅವರು ಹೇಳಿದ್ದು ಹೀಗೆ, “ಮಾಜಿಯವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಮಗೆ ಅನೇಕ ಶಿಷ್ಯರಿಂದ ಕರೆಗಳು ಮತ್ತು ಇಮೇಲ್‌ಗಳು ಬಂದಿವೆ. ಈ ಮಾತು ಅನೇಕ ಶಿಷ್ಯರ ಭಾವನೆಗಳಿಗೆ ಧಕ್ಕೆ ತಂದಿದೆ. ಇದು ದುರದೃಷ್ಟಕರ’’ ಎಂದರು. ವರದಿಗಳ ಪ್ರಕಾರ, ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾಝಿ ಈ ಹೇಳಿಕೆ ನೀಡಿದ್ದರು. ಈ ಸಮಯದಲ್ಲಿ, ಅವರು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರನ್ನ ಫ್ಲಾರೆನ್ಸ್ ನೈಟಿಂಗೇಲ್, ಮದರ್ ತೆರೆಸಾ ಮತ್ತು ಸಿಸ್ಟರ್ ನಿವೇದಿತಾ ಎಂದೂ ಕರೆದಿದ್ದರು.

ಮಾಝಿ ಮಾತನಾಡುತ್ತ, “ಸ್ವಾಮಿ ವಿವೇಕಾನಂದರ ಮರಣದ ಕೆಲವು ದಿನಗಳ ಮೊದಲು, ತಾಯಿ ಶಾರದಾ ಸ್ವಾಮೀಜಿಯ ಸಂಗಡಿಗರಿಗೆ ತಾನು ಪುನರ್ಜನ್ಮ ಪಡೆದಾಗ, ಹರೀಶ್ ಚಟರ್ಜಿ ರಸ್ತೆಯ ಮೂಲಕ ಕಾಳಿಘಾಟ್ ತಲುಪುವ ಕಾಲುವೆಯನ್ನು ದಾಟುವುದಾಗಿ ಹೇಳಿದ್ದರು. ದೀದಿ (ಮಮತಾ) ಈಗ ಅಲ್ಲೇ ವಾಸಿಸುತ್ತಿದ್ದಾರೆ. ದೀದಿ ಮಾ ಶಾರದಾ” ಎಂದಿದ್ದರು.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts

Watch and Subscribe to the Channel to get such amazing facts

ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸುವೀರಾನಂದ್, ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಮತ್ತು ಇತರ ಯಾವುದೇ ಪುಸ್ತಕದಲ್ಲಿ ಅಂತಹ ಯಾವುದೇ ಮಾಹಿತಿ ಪ್ರಕಟವಾಗಿಲ್ಲ ಎಂದಿದ್ದಾರೆ. ಅವರು ಮುಂದೆ ಮಾತನಾಡುತ್ತ, “ನಾನು ಈ ಹೇಳಿಕೆಗೆ ಸಂಬಂಧಿಸಿದಂತೆ ಅನೇಕ ಭಕ್ತರು ಮತ್ತು ಶಿಷ್ಯರನ್ನು ಸಂಪರ್ಕಿಸಿದ್ದೇನೆ, ಆದರೆ ಅವರು ಅದರ ಬಗ್ಗೆ ಯಾರೂ ನನಗೆ ಈ ಮಾಹಿತಿ ತಿಳಿದಿದೆ ಅಂತ ಹೇಳಲಿಲ್ಲ. ನಾಯಕನಿಗೆ ಇಂತಹ ವಿಚಿತ್ರ ಮಾಹಿತಿ ಎಲ್ಲಿಂದ ಬಂದಿತೋ ಗೊತ್ತಿಲ್ಲ’’ ಎಂದು ಹೇಳಿದರು. ಮಾಝಿ ಅವರ ಹೇಳಿಕೆಗೆ ಸಮಾಜದ ವಿವಿಧ ವರ್ಗಗಳಿಂದ ಟೀಕೆ ವ್ಯಕ್ತವಾಗಿದೆ. ಅದೇ ಸಮಯದಲ್ಲಿ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರ ಹೇಳಿಕೆಗಳನ್ನು ಪಕ್ಷವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

Advertisement
Share this on...