ಮಾಂ-ಸವನ್ನ ತೂಕ ಮಾಡಲು ಶಿವಲಿಂಗವನ್ನ ಬಳಸಿದ ಕಸಾಯಿ: ಬಳಿಕ ಆ ಕಸಾಯಿಯ ಜೊತೆ ಆಗಿದ್ದೇನು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 48,411 views

ಒಬ್ಬ ಕಸಾಯಿ ನರ್ಮದೇಶ್ವರ ಶಿವಲಿಂಗದ ಜೊತೆ ಮಾಂ-ಸ-ವನ್ನ ತೂಕ ಮಾಡಿದ ಬಳಿಕ ಏನಾಯ್ತು? ಆ ಘಟನೆಯ ಬಗ್ಗೆ ತಿಳಿದರೆ ನೀವೂ ಕೂಡ ಹೈರಾಣಾಗುತ್ತೀರ. ಭಕ್ತಿಯಲ್ಲಿ ಅಪಾರ ಶಕ್ತಿಯಿತರುತ್ತೆ, ಹೌದು ಅಂತಹುದೇ ಒಂದು ಘಟನೆ ಮು-ಸ್ಲಿಂ ವ್ಯಕ್ತಿಯೊಬ್ಬನ ಜೊತೆಗೂ ಘಟಿಸಿತ್ತು. ಆ ಘಟನೆಯ ಬಳಿಕ ಆ ಕಸಾಯಿಯಾಗಿಬಿಟ್ಟಿದ್ದ ಅಪ್ಪಟ ಶಿವಭಕ್ತ.

Advertisement

ಒಂದೂರಿನಲ್ಲಿ ಸದ್ನಾ ಹೆಸರಿನ ಕಸಾಯಿಯೊಬ್ಬನಿದ್ದ. ಆತ ಪ್ರಾಮಾಣಿಕ, ಕಠಿಣ ಪರಿಶ್ರಮಿ ಹಾಗು ಕೆಲಸ ಮಾಡುವ ಸಮಯದಲ್ಲಿ‌ ದೇವರನ್ನ ನೆನೆಯುತ್ತಲೇ ಕೆಲಸ ಮಾಡುತ್ತಿದ್ದ. ದೈವ ಭಕ್ತಿಯಿಂದಲೇ ತನಗೆ ಖುಷಿ ಸಿಗುತ್ತದೆ ಎನ್ನುತ್ತಿದ್ದ ಸದ್ನಾ. ಆತ ತನ್ನ ಅಂಗಡಿಯಲ್ಲಿ ಮಾಂ-ಸ ಕ-ಟ್ ಮಾಡುವಾಗಲೂ ಹರ್ ಹರ್ ಮಹಾದೇವ್ ಎಂದೇ ತನ್ನ ಕಲಸ ಶುರು ಮಾಡುತ್ತಿದ್ದ.

ಒಮ್ಮೆ ಆತ ದಾರಿಯಲ್ಲಿ ನಡೆದುಹೋಗುತ್ತಿರುವಾಗ ಆತನ ಕಾಲಿಗೆ ಕಲ್ಲೊಂದು ತಾಗುತ್ತೆ. ಬಳಿಕ ಸದ್ನಾ ಆ ಕಲ್ಲನ್ನ ನೋಡಿದಾಗ ಅದು ಆತನಿಗೆ ವಿಶೇಷ ರೂಪದ ಆಕರ್ಷಕ ಕಲ್ಲಾಗಿ ಕಾಣುತ್ತೆ. ಆತ ಅದನ್ನ ತನ್ನ ಜೇಬಿನೊಳಗೆ ಇಟ್ಟುಕೊಂಡು ಹೊರಟು ಹೋಗುತ್ತಾನೆ. ಬಳಿಕ ಆತ ಆ ಕಲ್ಲನ್ನ ತನ್ನ ಅಂಗಡಿಯಲ್ಲಿ ಮಾಂ-ಸ-ವನ್ನ ತೂಕಮಾಡುವ ತೂಕದ ಕಲ್ಲಿನಂತೆ ಬಳಸಲು ಪ್ರಾರಂಭಿಸುತ್ತಾನೆ. ಆ ಕಲ್ಲು ಎಷ್ಟು ವಿಸ್ಮಯಕಾರಿಯಾಗಿತ್ತೆಂದರೆ ಆತ ಎಷ್ಟು ಕೆಜಿ ಮಾಂ-ಸ-ವನ್ನ ತೂಕವನ್ನ ತೂಕಮಾಡಲು ಬಯಸುತ್ತಾನೋ ಆ ಕಲ್ಲು ಅಷ್ಟೇ ಕೆಜಿಗೆ ಬದಲಾಗುತ್ತಿತ್ತು. ಅಂದರೆ ಆತ ಒಂದು kg ಮಾಂ-ಸ ತೂಕಮಾಡಬೇಕೆಂದರೆ ಆ ಕಲ್ಲು ಒಂದು ಕೆಜಿ, ಆತ 2 kg ಮಾಂ-ಸ ತೂಕಮಾಡಬೇಕೆಂದರೆ ಆ ಕಲ್ಲು ಎರಡು ಕೆಜಿ ಹಾಗು 5 kg ಮಾಡಬೇಕೆಂದರೆ ಐದು ಕೆಜಿ ಹೀಗೆ ಆತ ತೂಕ ಮಾಡಲು ಆ ಕಲ್ಲನ್ನ ತಕ್ಕಡಿಯಲ್ಲಿಟ್ಟರೆ ಆ ಕಲ್ಲು ಅಷ್ಟು ಕೆಜಿ ತೂಕದ್ದಾಗಿ ಮಾರ್ಪಡುತ್ತಿತ್ತು.

ಈ ವಿಷಯ ಸುತ್ತಮುತ್ತಲಿನ ಜನರಿಗೆ ತಿಳಿಯುತ್ತಲೇ ಆತನ ಅಂಗಡಿಗೆ ಬರುವ ಜನರ ಸಂಖ್ಯೆಯೂ ಹೆಚ್ಚುತ್ತಲೇ ಹೋಯಿತು. ಈ ವಿಷಯ ಸ್ಥಳೀಯ ಬ್ರಾ-ಹ್ಮ-ಣ ಅರ್ಚಕರಿಗೂ ತಿಳಿಯಿತು. ಆದರೆ ಆ ಅರ್ಚಕರಿಗೆ ಅಂತಹ ಅಶುಭ ಜಾಗಕ್ಕೆ (ಮಾಂ-ಸ-ದಂಗಡಿ) ಹೋಗಲು ಇಷ್ಟವಿರಲಿಲ್ಲ ಆದರೆ ಅವರಿಗೆ ಆ ಚಮತ್ಕಾರಿ ಕಲ್ಲನ್ನ ನೋಡಲೇಬೇಕಾಗಿದ್ದರಿಂದ ಅವರು ಆ ಕಸಾಯಿಯಿ ಅಂಗಡಿಯ ಸ್ವಲ್ಲ ದೂರದಲ್ಲಿ ನಿಂತು ಅದನ್ನ ನೋಡತೊಡಗಿದರು. ಬಹಳ ಜನ ಇದ್ದ ಕಾರಣ ಅವರಿಗೆ ಆ ಕಲ್ಲು ಕಾಣಲಿಲ್ಲ, ಯಾವಾಗ ಜನಸಂದಣಿ ಕಡಿಮೆಯಾಯಿತೋ ಆಗ ಅವರಿಗೆ ಆ ಕಲ್ಲು ಕಾಣಲಾರಂಭಿಸಿತು.

ಆ ಕಲ್ಲನ್ನ ನೋಡಿ ಆ ಅರ್ಚರಕರಿಗೆ ನಂಬಲಸಾಧ್ಯವಾಯಿತು ಕಾರಣ ಆ ಕಲ್ಲು ನರ್ಮದೇಶ್ವರ ರೂಪದಲ್ಲಿರುವ ಸಾಕ್ಷಾತ್ ಶಿವನ ಪ್ರತಿರೂಪವಾಗಿತ್ತು. ಬಳಿಕ ಆ ಬ್ರಾ-ಹ್ಮ-ಣ ಅರ್ಚಕರು ಸದ್ನಾ ನ ಬಳಿ ಹೋದರು. ಬ್ರಾ-ಹ್ಮ-ಣ-ರೊಬ್ಬರು ತಮ್ಮ ಅಂಗಡಿಗೆ ಬಂದಿದ್ದನ್ನ ಕಂಡು ಆಶ್ಚರ್ಯಕಕಿತನಾದ ಸದ್ನಾ ಅವರನ್ನ ಆದರದಿಂದ ಸ್ವಾಗತಿಸಿ ಅವರಿಗೆ ಕೂರಲು ಆಸನ ನೀಡಿದನು ಹಾಗು ಗುರುಗಳೇ ತಾವು ಇಷ್ಟು ದೂರ ಅದೂ ಈ ಜಾಗದಲ್ಲಿ ಬಂದಿರುವುದಕ್ಕೆ ಕಾರಣ? ಅಂತ ಕೇಳುತ್ತಾನೆ. ಆಗ ಉತ್ತರಿಸಿದ ಅರ್ಚಕರು, “ನನಗೆ ನಿನ್ನ ಬಳಿಯಿರುವ ಕಲ್ಲಿನ ಬಗ್ಗೆ ಜನ ಮಾತನಾಡುತ್ತಿರೋ ಬಗ್ಗೆ ತಿಳಿಯಿತು, ನನಗೂ ಈ ಜಾಗಕ್ಕೆ ಬರಲು ಇಷ್ಟವಿರಲಿಲ್ಲ ಆದರೆ ಆ ಚಮತ್ಕಾರಿ ಕಲ್ಲನ್ನ ಒಮ್ಮೆ ನೋಡಲೇಬೇಕೆಂದೆನಿಸಿ ಇಲ್ಲಿಗೆ ಬಂದೆ. ನಿನಗೆ ಗೊತ್ತಿಲ್ಲದಿರಬಹುದು‌ ನಿನಗೆ ಸಿಕ್ಕ ಈ ಕಲ್ಲು ಸಾಮಾನ್ಯ ಕಲ್ಲಲ್ಲ ಬದಲಾಗಿ ಅದು ಸಾಕ್ಷಾತ್ ನರ್ಮದೇಶ್ವರನ ರೂಪದಲ್ಲಿರುವ ಶಿವ, ಆ ಶಿವನೇ ನನ್ನನ್ನ ಇಲ್ಲಿಗೆ ಬರುವಂತೆ ಮಾಡಿದ್ದಾನೆ. ಈ ಶಿವಲಿಂಗವನ್ನ ನೀನು ಮಾಂ-ಸ-ವನ್ನ ತೂಕ ಮಾಡೋಕೆ ಬಳಸುತ್ತಿದ್ದೀಯ, ಇದು ಸರಿಯಲ್ಲ” ಎಂದು ಹೇಳುತ್ತಾರೆ.

ಇದರದ ಆಶ್ಚರ್ಯಚಕಿತನಾದ ಸದ್ನಾ ತಾನೆಂಥಾ ಪಾ-ಪ ಮಾಡಿಬಿಟ್ಟೆನಲ್ಲಾ ಸಾಕ್ಷಾತ್ ಶಿವನನ್ನೇ ನಾನೂ ಮಾಂ-ಸ-ವನ್ನ ತೂಕ ಮಾಡಲು ಬಳಸಿಬಿಟ್ಟೆನಲ್ಲಾ ಎಂಬ ಪಾ-ಪ ಪ್ರಜ್ಞೆಯಿಂದ ಕಣ್ಣೀರಿಡುತ್ತ ಆ ಶಿವಲಿಂಗವನ್ನ ಆ ಬ್ರಾ-ಹ್ಮ-ಣ ಅರ್ಚಕರಿಗೆ ಕೊಟ್ಟು, “ಗುರುಗಳೇ ಈ ಶಿವಲಿಂಗವನ್ನ ನಿಮ್ಮ ಕೈಗೇ ಕೊಡುತ್ತೇನೆ, ನೀವೇ ಇದಕ್ಕೆ ಪೂಜೆ ಪುನಸ್ಕಾರ ಮಾಡಿ ಹಾಗು ನನ್ನ ಪಾ-ಪ-ವನ್ನೂ ನಿವಾರಿಸುವಂತೆ ಮಾಡಿ” ಎಂದು ಅದನ್ನ ಅವರ ಕೈಗೆ ಕೊಟ್ಟುಬಿಡುತ್ತಾನೆ.

ಬಳಿಕ‌ ಆ ಬ್ರಾ-ಹ್ಮ-ಣ ಅರ್ಚಕನು ಅದನ್ನ ಅಲ್ಲಿಂದ ಮನೆಗೆ ತೆಗೆದುಕೊಂಡು ಹೋಗಿ ಅದಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡುತ್ತಾರೆ. ಅದೇ ರಾತ್ರಿ ಶಿವನೇ ಅವರ ಕನಸಿನಲ್ಲಿ ಬಂದು, “ಭಕ್ತ, ನನ್ನನ್ನ ನೀನು ಸದ್ನಾ ನಿಂದ ಯಾಕೆ ವಾಪಸ್ ತಂದೆ? ಸದ್ನಾ ನನ್ನ ಪರಮಭಕ್ತ, ಆತ ಪ್ರತಿಬಾರಿಯೂ ನನ್ನ ಹೆಸರು ತೆಗೆದುಕೊಳ್ಳದೇ ಯಾವ ಕೆಲಸವನ್ನೂ ಮಾಡಲ್ಲ, ಅವನ ಭಕ್ತಿಗೆ ಮೆಚ್ಚಿಯೇ ಸ್ವಯಂ ನಾನೇ ಅವನ ಬಳಿ ಹೋಗಿದ್ದೆ. ಹಾಗಾಗಿ ನನ್ನನ್ನ ಅವನ ಬಳಿಯೇ ಕಳಿಸಿಕೊಡು” ಎಂದು ಹೇಳುತ್ತಾನೆ.

ಬಳಿಕ ಮರುದಿನ ಬೆಳಿಗ್ಗೆ ಆರ್ಚಕರು ಆ ಶಿವಲಿಂಗವನ್ನ ಸದ್ನಾನ ಕೈಗೆ‌ಕೊಟ್ಟು ನಡೆದ ವೃತ್ತಾಂತವನ್ನೆಲ್ಲಾ ತಿಳಿಸುತ್ತಾರೆ. ಆಗ ಸದ್ನಾ ಶಿವ ತಾನು ಜಪಿಸುವ ಹರ್ ಹರ್ ಮಹಾದೇವ್ ನಿಂದ ಸಂತುಷ್ಟರಾಗಿರುತ್ತಾನಂದ್ರೆ ಆ ಶಿವಲಿಂಗವನ್ನ ಮಾಂ-ಸ-ವನ್ನ ತೂಕ ಮಾಡದಿರಲು ಹಾಗು ಕಸಾಯಿ ವೃತ್ತಿಯನ್ನೇ ಬಿಟ್ಟು ಪರಮಶಿವಭಕ್ತನಾಗಿ ಶಿವನ ತಪಸ್ಸು ಮಾಡಲು ನಿರ್ಧರಿಸಿ ಆ ಊರನ್ನೇ ಬಿಟ್ಟು ಸನ್ಯಾಸಿಯಾಗಿಬಿಡುತ್ತಾನೆ.

Advertisement
Share this on...