“ಇದುವರೆಗೆ, ರಷ್ಯಾ ತಾನೇ ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಯೋಚಿಸಿಲ್ಲ. ಯಾವುದೇ ಸಂದರ್ಭದಲ್ಲಿ, ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ತಪ್ಪಿಸುತ್ತದೆ, ಆದರೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲ ಅಂತ ಅಂದುಕೊಳ್ಳಬಾರದು” ಎಂದು ಪುಟಿನ್ ಈ ಹಿಂದೆ ಹೇಳಿದ್ದರು.
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ (CIA) ಮುಖ್ಯಸ್ಥ ವಿಲಿಯಂ ಬರ್ನ್ಸ್ ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ಪ್ರಧಾನಿ ಮೋದಿಯವರ ನಿಲುವಿನಿಂದಾಗಿ ರಷ್ಯಾ ಮೇಲೆ ಪರಿಣಾಮ ಬೀರಿದೆ ಎಂದು ಸಿಐಎ ಮುಖ್ಯಸ್ಥರು ಹೇಳಿದ್ದಾರೆ. ಇದುವರೆಗೆ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಿರುವುದಕ್ಕೆ ಇದೇ ಕಾರಣ. ಅಲ್ಲದೆ, ಅದರ ಬಳಕೆಯ ಯಾವುದೇ ಸೂಚನೆಗಳಿಲ್ಲ ಎಂದಿದ್ದಾರೆ.
ವಿಲಿಯಂ ಬರ್ನ್ಸ್ ಪಿಬಿಎಸ್ಗೆ ನೀಡಿದ ಸಂದರ್ಶನದಲ್ಲಿ, “ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ತಮ್ಮ ಕಳವಳವನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ರಷ್ಯಾದ ಮೇಲೂ ಪರಿಣಾಮ ಬೀರುತ್ತಿದೆ” ಎಂದಿದ್ದರೆ. ಬರ್ನ್ಸ್ ರವರ ಈ ಹೇಳಿಕೆಯು ಹಲವು ವಿಧಗಳಲ್ಲಿ ವಿಶೇಷವಾಗಿದೆ. ಆದರೆ ಕಳೆದ ವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ದೇಶವನ್ನು ರಕ್ಷಿಸಲು “ಎಲ್ಲಾ ವಿಧಾನಗಳನ್ನು” ಬಳಸುವುದಾಗಿ ಹೇಳಿದ್ದರು.
“ಇದುವರೆಗೆ, ರಷ್ಯಾ ತಾನೇ ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಯೋಚಿಸಿಲ್ಲ. ಯಾವುದೇ ಸಂದರ್ಭದಲ್ಲಿ, ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ತಪ್ಪಿಸುತ್ತದೆ, ಆದರೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲ ಅಂತ ಅಂದುಕೊಳ್ಳಬಾರದು” ಎಂದು ಪುಟಿನ್ ಈ ಹಿಂದೆ ಹೇಳಿದ್ದರು. ರಷ್ಯಾ ಗ-ಡಿ-ಯಲ್ಲಿ ದಾ-ಳಿ ನಡೆದರೆ ಪರಮಾಣು ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪುಟಿನ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ಅವರ ಹೇಳಿಕೆಯು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಸ್ಪಷ್ಟ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ.
ಬರ್ನ್ಸ್ ಮುಂದೆ ಮಾತನಾಡುತ್ತ, “ಈ ಎಚ್ಚರಿಕೆ ಕೇವಲ ಹೆದರಿಸೋಕೆ ಮಾತ್ರ ಎಂದು ನಾನು ಭಾವಿಸುತ್ತೇನೆ. ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಯೋಜನೆಗಳ ಬಗ್ಗೆ ಇಂದು ನಾವು ಯಾವುದೇ ಸ್ಪಷ್ಟ ಪುರಾವೆಗಳನ್ನು ಕಾಣುವುದಿಲ್ಲ” ಎಂದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ವಿಶ್ವ ನಾಯಕರು ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಅಥವಾ ವೈಯಕ್ತಿಕ ಮಾತುಕತೆ ನಡೆಸಿರುವುದನ್ನು ಗಮನಿಸಬಹುದು. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ‘ಕದನ ವಿರಾಮ’ ಸ್ಥಿತಿಗೆ ತರುವುದು ಈ ಮಾತುಕತೆಯ ಉದ್ದೇಶವಾಗಿತ್ತು.
ಶುಕ್ರವಾರ (ಡಿಸೆಂಬರ್ 16, 2022), ಪ್ರಧಾನಿ ಮೋದಿ ಅವರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಈ ಸಂವಾದದಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ಮುಂದಿನ ದಾರಿ ಎಂದು ಹೇಳಿದ್ದರು. ಸೆಪ್ಟೆಂಬರ್ 2022 ರಲ್ಲಿ, ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪುಟಿನ್ ಅವರನ್ನು ಭೇಟಿಯಾಗಿದ್ದರು.
ಸಮರ್ಕಂಡ್ ನಲ್ಲಿ ಪುಟಿನ್ ಗೆ ಪ್ರಧಾನಿ ಮೋದಿ, “ಈ ವಿಚಾರವಾಗಿ ನಿಮ್ಮೊಂದಿಗೆ ಮಾತನಾಡಿದ್ದೇನೆ. ಇಂದು ನಾವು ಶಾಂತಿಯ ಹಾದಿಯಲ್ಲಿ ಹೇಗೆ ಮುನ್ನಡೆಯಬೇಕು ಎಂಬುದರ ಕುರಿತು ಮಾತನಾಡಲು ಬಯಸುತ್ತೇವೆ. ಭಾರತ ಮತ್ತು ರಷ್ಯಾ ಹಲವು ದಶಕಗಳಿಂದ ಒಟ್ಟಿಗೆ ವಾಸಿಸುತ್ತಿವೆ. ಉಕ್ರೇನ್ ಸಂಘರ್ಷದ ಬಗ್ಗೆ ನಿಮ್ಮ ನಿಲುವು ನನಗೆ ತಿಳಿದಿದೆ. ನಿಮ್ಮ ಕಾಳಜಿ ನನಗೆ ಅರ್ಥವಾಗಿದೆ. ಈ ಕಾಳಜಿಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನನಗೆ ತಿಳಿದಿದೆ. ಈ ಬಿಕ್ಕಟ್ಟು ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದಿದ್ದರು.
ಇಷ್ಟೇ ಅಲ್ಲ, ಈ ವರ್ಷದ ಅಕ್ಟೋಬರ್ನಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೂ ಮಾತನಾಡಿದ್ದರು. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರಿಂದ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಅದರಲ್ಲಿ ಅವರು ಹೇಳಿದ್ದರು.