ಮಾಸ್ಕ್ ಹಾಕದಿದ್ದರೆ ಫೈನ್ ಬೀಳುತ್ತೆ ಅಂತ ಮಾಸ್ಕ್ ಬದಲಿಗೆ ಹಾವನ್ನ ಕಟ್ಟಿಕೊಂಡ ವ್ಯಕ್ತಿ: ಬಳಿಕ ಆಗಿದ್ದೇನು ನೋಡಿ

in Kannada News/News 155 views

ಕೊರೊನಾ ವೈರಸ್ ಬಂದಾಗಿನಿಂದ ಜನರಿಗೆ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಜನರು ಕೂಡ ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅನ್ನು ಆಯುಧವಾಗಿ ಬಳಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಫೇಸ್ ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ. ಭಾರತ ಸೇರಿದಂತೆ ವಿದೇಶದಲ್ಲಿಯೂ ಕೊರೊನಾದಿಂದ ಸಂರಕ್ಷಿಸಿಕೊಳ್ಳಲು ಮಾಸ್ಕ್ ಮಾತ್ರವಲ್ಲದೆ, ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಮಧ್ಯೆ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋ ಈಗ ಭಾರೀ ಚರ್ಚೆಯಲ್ಲಿದೆ. ಹೌದು, ಈ ವಿಡಿಯೋ ಇಂಗ್ಲೆಂಡ್‌ನಿಂದ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದನ್ನು ಇಂಗ್ಲೆಂಡ್ ಸರ್ಕಾರ ಕಡ್ಡಾಯಗೊಳಿಸಿದೆ. ಮಾಸ್ಕ್ ಧರಿಸದೆ ಯಾರಾದರೂ ಕಂಡುಬಂದರೆ ಅವರ ವಿರುದ್ಧ ದಂಡ ಮತ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ.

Advertisement

ಆದರೆ ಇದೆಲ್ಲದರ ನಡುವೆ ಮ್ಯಾಂಚೆಸ್ಟ್‌ನಲ್ಲಿ ಒಬ್ಬ ವ್ಯಕ್ತಿಯು ಮಾಸ್ಕ್ ಬದಲು ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ಸ್ವಿಂಟನ್‌ನಿಂದ ಮ್ಯಾಂಚೆಸ್ಟರ್‌ಗೆ ಹೋಗುವ ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಹೌದು, ಈ ವಿಚಿತ್ರ ದೃಶ್ಯ ನೋಡಿ ಮ್ಯಾಂಚೆಸ್ಟರ್‌ನ ಜನರು ಅದನ್ನು ರೆಕಾರ್ಡ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ನೀವು ನೋಡುವಂತೆ ಬಸ್’ನಲ್ಲಿ ಕುಳಿತ ವ್ಯಕ್ತಿಯೊಬ್ಬರು ಮಾಸ್ಕ್’ನಂತೆ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾರೆ.

ಆ ವ್ಯಕ್ತಿಯ ಹತ್ತಿರ ಕುಳಿತಿರುವ ಜನರಿಗೆ ಸಹ ಅವರ ಬಳಿ ಇರುವುದು ಮಾಸ್ಕಾ ಅಥವಾ ಹಾವಾ ಎಂದು ಕನ್ ಫ್ಯೂಸ್ ಆಗಿದೆ. ವಿಡಿಯೋ ನೋಡಿದರೆ ಅದು ಹಾವು ಎಂದು ಗೊತ್ತಾಗುವುದಿಲ್ಲ. ಆದರೆ ವ್ಯಕ್ತಿಯ ಗಂಟಲಿನಿಂದ ತೆವಳುತ್ತಾ ಕೈಯ್ಯಲ್ಲಿ ಹಾವು ಬಂದಾಗ ಜನರಿಗೆ ಹಾವು ಎಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ “ನಾವು ಮೊದಲಿಗೆ ಮಾಸ್ಕ್ ನೋಡಿ ಇದು ಹಾವಿನ ತರಹ ಇರುವ ಮಾಸ್ಕ್ ಇರಬಹುದು ಎಂದು ಭಾವಿಸದೆವು. ಆ ನಂತರ ಅದು ನಿಜವಾದ ಹಾವೆಂದು ತಿಳಿಯಿತು. ಆದರೆ ಅದು ಸಹ ಪ್ರಯಾಣಿಕರಿಗೆ ಯಾರಿಗೂ ತೊಂದರೆ ಕೊಡಲಿಲ್ಲ” ಎಂದು ತಿಳಿಸಿದ್ದಾರೆ.

ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿನ ಸಾರಿಗೆ ಮೇಲಾಧಿಕಾರಿಗಳು ಹಾವು ಮಾನ್ಯ ಫೇಸ್ ಮಾಸ್ಕ್ ಅಲ್ಲ ಎಂದು ದೃಢಪಡಿಸಿದ್ದಾರೆ. ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ವರದಿಯಾಗಿದೆ.

Advertisement
Share this on...