ಮುಖ್ಯಮಂತ್ರಿಯಾಗುತ್ತಲೆ ಬೋಲ್ಡ್ ಸ್ಟೆಪ್ ತೆಗೆದುಕೊಂಡ ಹಿಮಂತ್ ಶರ್ಮಾ: ರಾಜ್ಯದಲ್ಲಿ NRC ಹಾಗು ಲವ್ ಜಿ ಹಾ ದ್ ವಿರುದ್ಧ ಖಡಕ್ ಕಾರ್ಯಾಚರಣೆ

in Uncategorized 585 views

ಹಿಮಾಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದಲೂ ಆಕ್ಷನ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರ, ಮುಖ್ಯಮಂತ್ರಿಗಳು ಅನೇಕ ದೊಡ್ಡ ಕೆಲಸಗಳನ್ನು ಮಾಡುವ ಭರವಸೆಗಳನ್ನು ನೆನಪಿಸಿಕೊಂಡರು ಮತ್ತು “ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ದೇಶದ ಟಾಪ್ 5 ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವುದು ಅವರ ಸರ್ಕಾರದ ಗುರಿಯಾಗಿದೆ” ಎಂದು ಹೇಳಿದರು.

Advertisement

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಿಮಾಂತ ಬಿಸ್ವಾ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಈ ಗುರಿಯನ್ನು ಸಾಧಿಸಲು ನಾವು ನಾಳೆಯಿಂದಲೇ ಕೆಲಸವನ್ನು ಪ್ರಾರಂಭಿಸುತ್ತೇವೆ. ಅಸ್ಸಾಂನ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮುಖ್ಯ ಗಮನ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು, ಪರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದು ಮತ್ತು ವಾರ್ಷಿಕ ಪ್ರವಾಹದ ಬಿಕ್ಕಟ್ಟಿನಿಂದ ರಾಜ್ಯವನ್ನು ಮುಕ್ತಗೊಳಿಸುವುದು” ಎಂದು ಶರ್ಮಾ ಹೇಳಿದರು.

ಕೋವಿಡ್-19 ವೈರಸ್‌ನ ಮೇಲೆ ನಿಯಂತ್ರಣ

ಮುಖ್ಯಮಂತ್ರಿಗಳು ಮುಂದೆ ಮಾತನಾಡುತ್ತ “ಅಸ್ಸಾಂನಲ್ಲಿ ಕೋವಿಡ್-19 ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಪ್ರತಿದಿನ ಕರೋನಾ ವೈರಸ್‌ಗಳ ಸಂಖ್ಯೆ 5000 ದಾಟಿದೆ.‌ ನಾಳೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ, ನಾವು ಎಲ್ಲಾ ಅಂಶಗಳನ್ನು ಚರ್ಚಿಸುತ್ತೇವೆ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಸ್ಸಾಂನಲ್ಲಿ ಕರೋನಾ ವೈರಸ್ ಅನ್ನು ನಿಯಂತ್ರಿಸದಿದ್ದಲ್ಲಿ, ಇತರ ಈಶಾನ್ಯ ರಾಜ್ಯಗಳಲ್ಲಿನ ಪ್ರಕರಣಗಳೂ ಕಡಿಮೆಯಾಗುವುದಿಲ್ಲ” ಎಂದರು. ರಾಜ್ಯದಲ್ಲಿ ಶಾಂತಿ ನೆಲೆಸಲು ಮತ್ತು ಮುಖ್ಯವಾಹಿನಿಗೆ ಬರಲು ಬಂ-ಡಾ-ಯ ಗುಂಪುಗಳಿಗೆ, ವಿಶೇಷವಾಗಿ ಉಲ್ಫಾ (ಐ) ಗೆ ಮುಖ್ಯಮಂತ್ರಿ ವಿನಂತಿಸಿದ್ದಾರೆ

NRC: ಶೇ.20 ರಷ್ಟು ಹೆಸರುಗಳ ಮರು ಪರಿಶೀಲನೆ

ಮುಖ್ಯಮಂತ್ರಿಗಳು ಮಾತನಾಡುತ್ತ, “ಮಾತುಕತೆಗಾಗಿ ಬಂದು ಸಮಸ್ಯೆಗಳನ್ನು ಪರಿಹರಿಸಲು ನಾನು ಪರೇಶ್ ಬರುವಾ ಅವರನ್ನು ವಿನಂತಿಸುತ್ತೇನೆ. ಅ-ಪ-ಹ-ರ-ಣ-ಗಳು ಮತ್ತು ಕೊ-ಲೆ-ಗಳು ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಬದಲಾಗಿ ವ್ಯವಸ್ಥೆಯನ್ನ ಮತ್ತಷ್ಟು ಸಂಕೀರ್ಣಗೊಳಿಸುತ್ತವೆ, ಅವುಗಳನ್ನು ಪರಿಹರಿಸಲು ಸಮಯ ವ್ಯರ್ಥವಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಭೂ-ಗ-ತ ಬಂ-ಡು-ಕೋ-ರ-ರನ್ನು ಮುಖ್ಯವಾಹಿನಿಗೆ ಮರಳುವಂತೆ ಮಾಡಲು ನಾವು ಯೋಜನೆ ಸಿದ್ಧಪಡಿಸುತ್ತೇವೆ ಎಂದು ನಾನು ಭಾವಿಸುತ್ತೇನೆ” ಎಂದರು. ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್‌ಆರ್‌ಸಿ) ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಗಳು “ತಮ್ಮ ಸರ್ಕಾರ ಅಸ್ಸಾಂನ ಗಡಿ ಜಿಲ್ಲೆಗಳಲ್ಲಿ 20 ಪ್ರತಿಶತದಷ್ಟು ಮತ್ತು ಇತರ ಪ್ರದೇಶಗಳಲ್ಲಿ, ಶೇಕಡಾ 10 ರಷ್ಟು ಜನರ ಹೆಸರುಗಳನ್ನು ಮರು ಪರಿಶೀಲಿಸಲು ಬಯಸುತ್ತೇವೆ” ಎಂದರು.

ಜಾರಿಯಾಗಬಹುದು‌ ಲವ್ ಜಿ-ಹಾ-ದ್ ಕಾನೂನು

“ಬಹಳ ಸಣ್ಣ ತಪ್ಪುಗಳು ಕಂಡುಬಂದಲ್ಲಿ ನಾವು ಈಗಿರುವ ಎನ್‌ಆರ್‌ಸಿಯೊಂದಿಗೆ ಮುಂದುವರಿಯಬಹುದು. ಆದರೆ, ಪ್ರಮುಖ ತಪ್ಪುಗಳು ಕಂಡುಬಂದಲ್ಲಿ, ನ್ಯಾಯಾಲಯವು ಸ್ವಯಂಚಾಲಿತವಾಗಿ ಅದರ ಬಗ್ಗೆ ಬಗೆಹರಿಸುವ ದಾರಿಯನ್ನು ಮಾಡಿಕೊಡುತ್ತದೆ ಮತ್ತು ಹೊಸ ವಿಧಾನದೊಂದಿಗೆ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು. ಲವ್ ಜಿ-ಹಾ-ದ್ ವಿರುದ್ಧ ಕಾನೂನು ತರಲು ಬಿಜೆಪಿಯ ಆಶ್ವಾಸನೆಯ ಬಗ್ಗೆ ಕೇಳಿದಾಗ, ಅದನ್ನು ಪೂರೈಸುವ ಎಲ್ಲ ಭರವಸೆಗಳನ್ನು ನೀಡಲಾಗಿದೆ. ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾದಷ್ಟು ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಶರ್ಮಾ ಹೇಳಿದರು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ 126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 60 ಸ್ಥಾನಗಳನ್ನು ಗೆದ್ದಿದ್ದರೆ, ಅದರ ಸಮ್ಮಿಶ್ರ ಪಾಲುದಾರ ಅಸ್ಸಾಂ ಗಣ ಪರಿಷತ್ ಒಂಬತ್ತು ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 6 ಸ್ಥಾನಗಳನ್ನು ಗೆದ್ದಿದೆ ಹಾಗಾಗಿ ಬಿಜೆಪಿಗೆ ಸಂಪೂರ್ಣ ಬಹುಮತವಿದ್ದು ಯಾವ ಕಾನೂನುಗಳನ್ನ ಬೇಕಾದರೂ ಜಾರಿಗೊಳಿಸಬಹುದು‌.

ಇದನ್ನೂ ಓದಿ: ಮುಖ್ಯಮಂತ್ರಿಯಾಗುವ ಹಿಂದೆಯೂ ಇದೆ ಒಂದು ರೋಚಕ ಲವ್ ಸ್ಟೋರಿ

ಆ ಯುವಕನಿಗೆ 22 ವರ್ಷ ಮತ್ತು ಆ ಯುವತಿಗೆ ಕೇವಲ 17 ವರ್ಷ. ಆ ಯುವತಿ ತನ್ನ ಭವಿಷ್ಯದ ಬಗ್ಗೆ ತಾಯಿಗೆ ಏನು ಹೇಳಬೇಕೆಂದು ಹೇಳಿದಾಗ, ಯುವಕ, “ನಿಮ್ಮ ತಾಯಿಗೆ ಹೋಗಿ ಹೇಳಿ, ನಾನು ಒಂದು ದಿನ ಅಸ್ಸಾಂ ಮುಖ್ಯಮಂತ್ರಿಯಾಗುತ್ತೇನೆ” ಎಂದು ಉತ್ತರಿಸಿದ್ದನು. ಈ ಫಿಲಂ ಸ್ಟೋರಿಗಿಂತ ಕಮ್ಮಿಯೇನಿಲ್ಲ, ಇದು ಕಥೆ ಅಲ್ಲ ವಾಸ್ತವವಾಗಿ ನಡೆದಿದ್ದ ಘಟನೆ.

ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿಮಂತ ಬಿಸ್ವಾ ಶರ್ಮಾ ಅವರು ವರ್ಷಗಳ ಹಿಂದೆ ರಿನಿಕಿ ಭುಯಾನ್ ಅವರಿಗೆ ಈ ವಿಷಯವನ್ನು ಹೇಳಿದ್ದರು, ನಂತರ ಆಕೆಯೇ ಅವರ ಬಾಳಸಂಗಾತಿಯೂ ಆದರು. ಅದು ಹಿಮಂತ್ ಶರ್ಮಾ ಕಾಟನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯ. ತನ್ನ ಪತಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಮುಖ್ಯಮಂತ್ರಿಯಾಗುವ ವಿಶ್ವಾಸ ಹೊಂದಿದ್ದರು ಎಂದು ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಹೇಳುತ್ತಾರೆ. ವಿದ್ಯಾರ್ಥಿ ಜೀವನದಲ್ಲೇ ಹಿಮಂತ್ ತನ್ನ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು, ಭವಿಷ್ಯದಲ್ಲಿ ತಾನು ಏನಾಗಬೇಕೆಂಬುದನ್ನು ಅವರು ಹೇಳುತ್ತಲೇ ಇರುತ್ತಿದ್ದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಗಮನಿಸುವ ಅಂಶವೇನೆಂದರೆ ಹೇಮಂತ್ ಬಿಸ್ವಾ ಶರ್ಮಾ ರವರು ವರ್ಷಗಳ ಹಿಂದೆ ತನ್ನ ಗೆಳತಿಗೆ (ಈಗ ಅವರ ಹೆಂಡತಿ) ಹೇಳಿದ್ದ ಹಾಗೆ ನಿಜವಾಗಿಯೂ ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಅಸ್ಸಾಂನ 15 ನೇ ಮುಖ್ಯಮಂತ್ರಿಯಾಗಿ ಸೋಮವಾರ ಶರ್ಮಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಭೂಯಾನ್, “ನಾವು ಮೊದಲ ಬಾರಿಗೆ ಭೇಟಿಯಾದಾಗ ಅವರಿಗೆ 22 ವರ್ಷ ಮತ್ತು ನನಗೆ 17 ವರ್ಷ. ನನ್ನ ತಾಯಿಗೆ ನಿಮ್ಮ ಫ್ಯೂಚರ್ ಬಗ್ಗೆ ಏನಂತ ಹೇಳಲಿ? ಎಂದು ಅವರನ್ನ ಕೇಳಿದ್ದೆ. ಅದಕ್ಕೆ ಅವರು, ಮುಂದೊಂದು ದಿನ ನಾನು ಅಸ್ಸಾಂನ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳು” ಎಂದಿದ್ದರು. ಅವರು ಹಾಗೆ ಹೇಳಿದ್ದನ್ನ ಕೇಳಿ ನಾನು ಆಶ್ಚರ್ಯಚಕಿತಳಾಗಿದ್ದೆ. ಆದರೆ ನಾನು ಮದುವೆಯಾಗಲಿರುವ ವ್ಯಕ್ತಿ ರಾಜ್ಯದ ಬಗ್ಗೆ ಸ್ಪಷ್ಟ ಲಕ್ಷ್ಯವನ್ನ ಹೊಂದಿರುವ ಕನಸನ್ನ ಕಟ್ಟಿಕೊಂಡಿದ್ದಾರೆ, ಅವರಿಗೆ ನಿರ್ದಿಷ್ಟ ಗುರಿ ಮತ್ತು ಕನಸು ಇದೆ ಅನ್ನೋದನ್ನ ನಾನು ಆಗಲೇ ಅರಿತುಕೊಂಡಿದ್ದೆ ಎನ್ನುತ್ತಾರೆ ಪತ್ನಿ ಭೂಯಾನ್.

ಭೂಯಾನ್ ಮುಂದೆ ಮಾತನಾಡುತ್ತ, “ನಾವು ಮದುವೆಯಾದಾಗ ಅವರು ಶಾಸಕರಾಗಿದ್ದರು, ನಂತರ ಅವರು ಸಚಿವರಾದರು. ನಂತರ ರಾಜಕೀಯದಲ್ಲಿ ಬೆಳೆದರು, ಆದರೆ ಇಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರೋದನ್ನ ನಂಬೋಕೆ ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ‌.

ಅವರು ಮುಂದೆ ಮಾತನಾಡುತ್ತ, “ನಾವು ಕಳೆದ ರಾತ್ರಿ ಮಾತುಕತೆ ನಡೆಸಿದಾಗಲೂ, ಅವರು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನ ಉಲ್ಲೇಖಿಸಿದ್ದರು. ಆಗ ನಾನು ಯಾರವರು? ಎಂದು ಕೇಳಿದಾಗ ಅವರು ‘ಮುಯಿ’ (ನಾನೇ) ಎಂದು ಉತ್ತರಿಸಿದರು. ಅವರು ನನ್ನ ಪಾಲಿಗೆ ಯಾವಾಗಲೂ ಹಿಮಂತ್ ಆಗೇ ಇದ್ದಾರೆ ಮತ್ತು ನಾನು ಅವರನ್ನು ಮುಖ್ಯಮಂತ್ರಿಯೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ. ಈ ಪದದ ಪರಿಚಯವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎನ್ನುತ್ತಾರೆ ಭೂಯಾನ್‌. ಶರ್ಮಾ ಅವರ ಪತ್ನಿ ಪತ್ರಕರ್ತೆಯಾಗಿದ್ದಾರೆ. ಹಿಮಂತ್ ಮತ್ತು ಭೂಯಾನ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 19 ವರ್ಷದ ನಂದಿಲ್ ಬಿಸ್ವಾ ಶರ್ಮಾ ಮತ್ತು 17 ವರ್ಷದ ಸುಕನ್ಯಾ ಶರ್ಮಾ.

ರಾಷ್ಟ್ರವಾದಿ ಹಾಗು ಕಟ್ಟರ್ ಹಿಂದೂವಾದಿಯೆಂದೇ ಪ್ರಖ್ಯಾತರು

ಹೇಮಂತ್ ಬಿಸ್ವಾ ಶರ್ಮಾ ಅವರನ್ನ ಕಟ್ಟರ್ ಹಿಂದುತ್ವವಾದಿ, ರಾಷ್ಟ್ರವಾದಿ ನಾಯಕನೆಂದೇ ಜನ‌ ಗುರುತಿಸುತ್ತಾರೆ. ಅಸ್ಸಾಂ ಸರ್ಕಾರ ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದರೆ ಕಳೆದ ವರ್ಷ ಅಸ್ಸಾಂನಲ್ಲಿನ ಮದರಸಾಗಳನ್ನ ಬಂದ್ ಮಾಡಿಸಿತ್ತು. ಅಸ್ಸಾಂ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಚ್ಚುವುದಾಗಿ ಘೋಷಿಸಿತ್ತು. ಈ ಸಂದರ್ಭದಲ್ಲಿ, ಧಾರ್ಮಿಕ ಶಿಕ್ಷಣವನ್ನು ಸಾರ್ವಜನಿಕ ಹಣದಿಂದ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ, ಆದ್ದರಿಂದ ಮುಂದಿನ ತಿಂಗಳಿನಿಂದ ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿತ್ತು. ಈ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಅಸ್ಸಾಂ ಸಚಿವರಾಗಿದ್ದ ಹೇಮಂತ್ ಬಿಸ್ವಾ ಶರ್ಮಾ ವಿರೋಧಿಗಳಿಗೆ ತಕ್ಕ ಉತ್ತರ ಕೊಡುತ್ತ ಸಾರ್ವಜನಿಕರ ಹಣ ಧಾರ್ಮಿಕ ಶಿಕ್ಷಣ ನೀಡಲಿಕ್ಕಾಗಿ ಇಲ್ಲ, ಹಾಗಾಗಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಮದರಸಾಗಳನ್ನ ಬಂದ್ ಮಾಡಲಾಗುವುದು. ಅಷ್ಟೇ ಅಲ್ಲ ಸರ್ಕಾರದ ಸಹಾಯದಿಂದ ನಡೆಯುತ್ತಿದ್ದ ಸಂಸ್ಕೃತ ವಿದ್ಯಾಲಯಗಳನ್ನೂ ಈಗ ಬಂದ್ ಮಾಡಲಾಗುವುದು. ಈ ಸಂಬಂಧ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು.

Advertisement
Share this on...