ಮುಖ್ಯಮಂತ್ರಿ ಕೆಸಿಆರ್ ನಿದ್ದೆಗೆಡಿಸಿದ್ದ ತೆಲಂಗಾಣದಲ್ಲಿ ಎಮ್ಮೆ ಕಾಯುತ್ತಿದ್ದ ಈ ಹುಡುಗಿ ಪಡೆದ ಮತಗಳೆಷ್ಟು ಗೊತ್ತಾ..?

in Uncategorized 32,669 views

2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಆರ್‌ಎಸ್‌ ಪಕ್ಷ ಸತತವಾಗಿ ಎರಡು ಬಾರಿ ಆಡಳಿತ ನಡೆಸಿದ್ದರೂ, ಈ ಬಾರಿ ಕಾಂಗ್ರೆಸ್ ಮುಂದೆ ತಲೆಬಾಗಿದೆ. ಈ ನಡುವೆ, ಡಿಗ್ರಿ ಓದಿದ್ದರೂ ನಿರುದ್ಯೋಗದ ಕಾರಣ ಎಮ್ಮೆ ಕಾಯುತ್ತಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದ ಶಿರೀಷಾ, ಬರ್ರೆಲಕ್ಕ ಎಂಬ ಹೊಸ ಹೆಸರಿನೊಂದಿಗೆ ರಾತ್ರೋರಾತ್ರಿ ಸ್ಟಾರ್‌ ಆಗಿದ್ದರು. ಬಳಿಕ, ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯ ಕಣಕ್ಕಿಳಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರಿಗಿರುವ ಫಾಲೋವರ್ಸ್‌ ಕಂಡು ಇವರು ಈ ಬಾರಿ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿತ್ತು.

Advertisement

ಯಾರು ಈ ಬರ್ರೆಲಕ್ಕ?

ನಾಗರ್ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮರಿಕಲ್ ಗ್ರಾಮದ ನಿವಾಸಿ ಈ ಬರ್ರೆಲಕ್ಕ (ಎಮ್ಮೆಗಳಕ್ಕ). ಈಕೆಯ ಹೆಸರು ಕರ್ನೆ ಶಿರೀಷಾ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದ ಬಳಿಕ ಈಕೆ ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಚುನಾವಣಾ ಕಣಕ್ಕೆ ಇಳಿದಿದ್ದರು.

ಪಂಚ ರಾಜ್ಯಗಳ ಚುನಾವಣೆಯ ಮತದಾನಕ್ಕೂ ಮುನ್ನವೇ ಸೃಷ್ಟಿಸಿದ ಎಮ್ಮೆ ಕಾಯುತ್ತಿದ್ದ ಹುಡುಗಿ ಕಾರ್ಣೆ ಶಿರೀಷಾ(Barrelakka or buffalo girl aka Karne Sirisha) ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದ್ದಳು. ಪಕ್ಷೇತರ ಅಭ್ಯರ್ಥಿಯಾಗಿ ಕೊಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈ ಯುವತಿ ಘಟಾನುಘಟಿಗಳ ಎದುರು ಮುನ್ನಡೆ ಗಳಿಸಿದ್ದಳು.

ಕುಗ್ರಾಮದ ಕಡುಬಡ ಕುಟುಂಬದ ದಲಿತ ಯುವತಿ ಶಿರೀಷಾ ಅಲಿಯಾಸ್‌ ಎಮ್ಮೆಗಳಕ್ಕ. ಎಷ್ಟೇ ಡಿಗ್ರಿ ಓದಿದರೂ ಸರ್ಕಾರಿ ನೌಕರಿ ಸಿಗುತ್ತಿಲ್ಲ ಎಂದು ಕೊರಗುವ ವಿಡಿಯೋ ಮೂಲಕ ಶಿರೀಷಾ ಸುದ್ದಿಯಾದವರು. ಜತೆಗೆ ಲಘುಧಾಟಿಯಲ್ಲಿ ವ್ಯವಸ್ಥೆಯನ್ನು ಛೇಡಿಸುವ ವಿಡಿಯೋ ಮಾಡಿ ಫೇಮಸ್ ಆಗಿದ್ದರು. ಕೆಲವು ಸಂದರ್ಶನಗಳ ಮೂಲಕವೂ ಸುದ್ದಿಯಾಗಿದ್ದರು. ಒಂದು ಹಂತದಲ್ಲಿ ವಿಪರೀತ ಟ್ರೋಲ್‌ಗೂ ಒಳಗಾಗಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬರ್ರೆಲಕ್ಕ ಸ್ಟಾರ್

ಕರ್‍ನೆಶಿರೀಶ@ ಬರ್ರೆಲಕ್ಕ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ 5.73 ಲಕ್ಷ, ಫೇಸ್‌ಬುಕ್‌ನಲ್ಲಿ 1.07 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 1.61 ಲಕ್ಷ ಸಬ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಪ್ರಕರಣ (IPC 505 (2) ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ ಮತ್ತು ಶಿರೀಷಾ ನಡುವೆ ನಿಕಟ ಪೈಪೋಟಿ ನಡೆದಿತ್ತು. ತೆಲಂಗಾಣದ ಘಟಾನುಘಟಿಗಳೆದರು ಎಮ್ಮೆ ಕಾಯುವ ಹುಡುಗಿ ಲೀಡಿಂಗ್‍ನಲ್ಲಿದ್ದಳು. ನಿರುದ್ಯೋಗಿಗಳ ಪರ ಹೋರಾಟ ನಡೆಸುವುದಾಗಿ ಹೇಳಿಕೊಂಡಿದ್ದ ಶಿರೀಷಾ ಕೊಲ್ಲಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ದೇಶದ ಗಮನ ಸೆಳೆದಿದ್ದರು. ಎಮ್ಮೆ ಕಾಯುತ್ತಿದ್ದ ಈ ಯುವತಿಗೆ ಅನೇಕರು ಖ್ಯಾತ ವ್ಯಕ್ತಿಗಳ ಬೆಂಬಲ ದೊರೆತಿತ್ತು.

ನಾಮಪತ್ರ ವಾಪಸ್ ಪಡೆಯುವಂತೆ ಶಿರೀಷಾ ಸಾಕಷ್ಟು ಒತ್ತಡ ಸಹ ಬಂದಿತ್ತು. ಆದರೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದ ಶಿರೀಷಾ ಧೈರ್ಯವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಳು. ಇದೀಗ ಕೊಲ್ಲಾಪುರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ದೇಶದ ಗಮನ ಸೆಳೆದ ಈ ಯುವತಿ ಎಷ್ಟು ಮತಗಳನ್ನು ಪಡೆದಿದ್ದಾಳೆ ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲಿ ಮೂಡಿರುತ್ತದೆ.

ಕಾರ್ಣೆ ಶಿರೀಷಾ ಉತ್ತಮ ಸಾಧನೆ

ಕಾರ್ಣೆ ಶಿರೀಷಾ ಅಂಚೆ ಮತಗಳಲ್ಲಿ ಲೀಡ್‍ನಲ್ಲಿದ್ದರು. ಆದರೆ EVM ಮತ ಎಣಿಕೆಯಲ್ಲಿ ಅವರು ಹಿಂದೆ ಬಿದ್ದರು. 20 ಸುತ್ತುಗಳ ಮತ ಎಣಿಕೆ ಬಳಿಕ ಕೊಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜುಪಲ್ಲಿ ಕೃಷ್ಣರಾವ್ 93,609 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಭಾರತ್ ರಾಷ್ಟ್ರ ಸಮಿತಿ(BRS)ಯ ಬೀರಂ ಹರ್ಷವರ್ಧನ್ ರೆಡ್ಡಿ 63,678 ಮತಗಳನ್ನು ಗಳಿಸಿದರು. ಜುಪಲ್ಲಿ ಕೃಷ್ಣರಾವ್ ಮತ್ತು ಹರ್ಷವರ್ಧನ್ ರೆಡ್ಡಿ ನಡುವೆ 29,931 ಮತಗಳ ಗೆಲುವಿನ ಅಂತರವಿದೆ. ಇನ್ನೂ ಬಿಜೆಪಿ ಅಭ್ಯರ್ಥಿ 3ನೇ ಸ್ಥಾನಕ್ಕೆ ಏಳ್ಳೆನಿ ಸುಧಾಕರ ರಾವ್ ತೃಪ್ತಿಪಟ್ಟುಕೊಂಡಿದ್ದು, 20,389 ಮತಗಳನ್ನು ಗಳಿಸಿದ್ದಾರೆ. ಕಾರ್ಣೆ ಶಿರೀಷಾ 5,754 ಮತಗಳನ್ನು ಪಡೆದು 4ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

Advertisement
Share this on...