ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ, ಮೌಲಾನಾನಿಂದ ಮತಾಂತರವಾದರೆ ಮಾತ್ರ ಮದುವೆ ಮಾಡಸ್ತೀನಿ ಎಂಬ ಧಮಕಿ, ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ‌ #ದೀಪಕ್ ಶವ ಪತ್ತೆ

in Uncategorized 255 views

ಜಾರ್ಖಂಡ್‌ನ ರಾಂಚಿಯಲ್ಲಿ ಎಂಬಿಎ ವಿದ್ಯಾರ್ಥಿ ದೀಪಕ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಿಗಳ ಪ್ರಕಾರ ದೀಪಕ್ ಮುಸ್ಲಿಂ ಯುವತಿಯನ್ನ ಪ್ರೀತಿಸುತ್ತಿದ್ದ. ಯುವತಿ ದೀಪಕ್ ನಿಂದ ಅಂತರ ಕಾಯ್ದುಕೊಂಡ ನಂತರ ದೀಪಕ್ ಮೌಲಾನಾವೊಬ್ಬನ ಬಲೆಗ ಸಿಲುಕಿದ್ದ. ತನ್ನ ಮಗನನ್ನು ಮತಾಂತರ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು, ಇದರಿಂದ ಮನನೊಂದ ಆತ ನೇಣು ಬಿಗಿದುಕೊಂಡಿದ್ದಾನೆ ಎಂದು ದೀಪಕ್ ತಂದೆ ಹೇಳಿದ್ದಾರೆ. ಪ್ರಕರಣದಲ್ಲಿ ದೀಪಕ್ ಸ್ನೇಹಿತ ನಸೀಮ್ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದ್ದು ಆತನೇ ದೀಪಕ್‌ನನ್ನ ಮೌಲಾನ ಬಳಿ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ದೀಪಕ್ ಬುದ್ಮು ಬ್ಲಾಕ್‌ನ ಉಮೇದಂಡ ಗ್ರಾಮದ ನಿವಾಸಿಯಾಗಿದ್ದ. ಪಹಾರಿ ಮಂದಿರ ಚುನಾ ಭಟ್ಟಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಸಹೋದರಿಯೊಂದಿಗೆ ಎಂಬಿಎ ಓದುತ್ತಿದ್ದ. ಮಂಗಳವಾರ (ಜನವರಿ 17, 2023) ರಾತ್ರಿ ದೀಪಕ್‌ನ ಸಹೋದರಿಗೆ ಆಕೆಯ ಚಿಕ್ಕಮ್ಮನಿಂದ ಕರೆ ಬಂದಿತ್ತು. ಆತ್ಮಹತ್ಯೆಗೆ ಸ್ವಲ್ಪ ಹೊತ್ತಿನ ಮುಂಚೆ ದೀಪಕ್ ವಾಟ್ಸಾಪ್ ಸ್ಟೇಟಸ್ ನಲ್ಲಿ ‘ಗುಡ್ ಬೈ ಫ್ರೆಂಡ್ಸ್… ಮೌಲಾನಾ, ನಸೀಮ್‌ನನ್ನ ನೆನಪಿಟ್ಟುಕೊಳ್ಳಿ’ ಎಂದು ಬರೆದಿದ್ದರು. ದೀಪಕ್‌ನ ಈ ಸ್ಟೇಟಸ್ ನೋಡಿದ ನಂತರ ಆತನ ಚಿಕ್ಕಮ್ಮ ದೀಪಕ್‌ನ ತಂಗಿಗೆ ಕಾಲ್ ಮಾಡಿದರು. ತಂಗಿ ದೀಪಕ್‌ನ ಕೊಠಡಿ ತಲುಪಿದಾಗ ಆತನ ಶವ ಫ್ಯಾನ್‌ಗೆ ನೇತಾಡುತ್ತಿತ್ತು.

ತಂಗಿಯ ಚೀರಾಟ ಕೇಳಿ ಸುತ್ತಮುತ್ತಲಿನವರು ಮನೆಯೊಳಗೆ ಬಂದರು ಮತ್ತು ದೀಪಕ್‌ನನ್ನ ಆಸ್ಪತ್ರೆಗೆ (RIMS) ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಮತಾಂತರವಾಗುವಂತೆ ಆತನ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ದೀಪಕ್ ತಂದೆ ಆರೋಪಿಸಿದ್ದಾರೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ದೀಪಕ್ ಅನ್ಯ ಧರ್ಮದ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ತೆರಳಿದ ಬಳಿಕ ಯುವತಿ ದೀಪಕ್ ನಿಂದ ದೂರವಾಗಿದ್ದಳು. ಇದರಿಂದ ದೀಪಕ್ ಟೆನ್ಶನ್ ನಲ್ಲಿದ್ದ. ನಸೀಮ್ ಇದರ ಲಾಭ ಪಡೆದ.

ನಸೀಮ್ ಗೆ ತನ್ನ ಲವ್ ಬಗ್ಗೆ ದೀಪಕ್ ತಿಳಿಸಿದ್ದ ಎನ್ನಲಾಗಿದೆ. ಇದಾದ ನಂತರ ನಸೀಮ್ ದೀಪಕ್‌ನನ್ನ ಮೌಲಾನಾ ಬಳಿ ಕರೆದೊಯ್ದ. ದೀಪಕ್ ಮತ್ತು ಆತನ ಗರ್ಲ್ ಫ್ರೆಂಡ್ ನಡುವಿನ ಸಂಬಂಧವನ್ನು ಮೌಲಾನಾ ಸರಿಪಡಿಸುವುದಾಗಿ ಭರವಸೆ ನೀಡಿದ. ಇದೇ ವೇಳೆ ನಸೀಮ್ ಮತ್ತು ಮೌಲಾನಾ ದೀಪಕ್ ನಿಂದ ಹಣ ವಸೂಲಿ ಕೂಡ ಮಾಡಿದ್ದರು. ಯುವತಿಯ ಜೊತೆಗಿನ ರಿಲೇಶನ್‌ಶಿಪ್ ಸರಿಪಡಿಸಲು ದೀಪಕ್ ಬೈಕ್ ಮಾರಿ ಇಬ್ಬರಿಗೂ ಹಣ ನೀಡುತ್ತಿದ್ದ ಎನ್ನಲಾಗಿದೆ. ಆದಾಗ್ಯೂ, ಇದರಿಂದ ಆತನಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಆರೋಪಗಳ ಪ್ರಕಾರ, ಇದೇ ವೇಳೆ ದೀಪಕ್ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಲಾಗಿತ್ತು. ಧರ್ಮ ಬದಲಾಯಿಸಿದರೆ ಯುವತಿಯ ಜೊತೆ ಮದುವೆ ಮಾಡಿಸುವುದಾಗಿ ಮೌಲಾನಾ ಹೇಳಿದ್ದ.

ಆದರೆ ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ದೀಪಕ್ ಸಂಬಂಧ ಸರಿ ಹೋಗಲಿಲ್ಲ. ತಡರಾತ್ರಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರ್ಮಿಕ ಮತಾಂತರದ ಒತ್ತಡಕ್ಕೆ ಸಿಲುಕಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೀಪಕ್ ತಂದೆ ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ದೀಪಕ್ ಅಂತ್ಯಕ್ರಿಯೆಯನ್ನು ಬುಧವಾರ (ಜನವರಿ 18, 2023) ನಡೆಸಲಾಯಿತು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಪೊಲೀಸರು, ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದಕ್ಕೆ ದಲಿತ ಯುವಕ ಖತನಾ: ಕೈ ಕಾಲುಗಳನ್ನ ಗಟ್ಟಿಯಾಗಿ ಹಿಡಿದುಕೊಂಡ ಆಸಿಫ್, ಪ್ಯಾಂಟ್ ಬಿಚ್ಚಿದ ಹಾಜಿ ಸಾಹಬ್

ಮುಸ್ಲಿಂ ವಿಧವೆಯನ್ನು ಮದುವೆಯಾದ ದಲಿತ ಯುವಕನೊಬ್ಬ ತನಗೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಸುನ್ನತಿ ಮಾಡಿಸಿದ್ದಾರೆ ಎನ್ನಲಾಗಿದೆ. ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ದಲಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದಾನೆ. ಯುವಕನ ದೂರಿನ ಮೇರೆಗೆ ಪೊಲೀಸರು ಶುಕ್ರವಾರ ಕುಮೇಲ್ ಖುರೇಷಿ ಮತ್ತು ಆಸಿಫ್ ಶೇಖ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಪ್ರಕರಣವು ದೌಂಡ್ ಪ್ರದೇಶದ್ದಾಗಿದೆ. ಸೋಲಾಪುರದ ಮಾದ ಗ್ರಾಮದವರಾದ ಸಂತ್ರಸ್ತ ಯವಕ‌ ಜೂನ್ 2018 ರಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ‌ನು. ಆಕೆ ವಿಧವೆಯಾಗಿದ್ದು  ಇಬ್ಬರು ಹೆಣ್ಣುಮಕ್ಕಳ ತಾಯಿ. ಮದುವೆಯ ನಂತರ, ಈ ವ್ಯಕ್ತಿಯು ಕೆಲಸ ಹುಡುಕಿಕೊಂಡು ಜೂನ್ 2020 ರಲ್ಲಿ ತನ್ನ ಕುಟುಂಬದೊಂದಿಗೆ ಪುಣೆಗೆ ಬಂದನು. ಕುಂಬಾರಗಲ್ಲಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು. ಗಂಡ ಹೆಂಡತಿ ಕೂಲಿ ಮಾಡಿ ಮಕ್ಕಳನ್ನು ಸಾಕತೊಡಗಿದರು. ಒಂದೂವರೆ ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ನಂತರ ಅದೇ ಮನೆಯಲ್ಲಿ ವಾಸವಿರುವ ಆಸಿಫ್ ಶೇಖ್ ದಲಿತ ಯುವಕನ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.

ಆಸಿಫ್ ತನ್ನ ಪತ್ನಿಯ ಮೇಲೆ ಕಣ್ಣಿಟ್ಟಿದ್ದಾನೆ ಎಂದು ನೊಂದ ದಲಿತ ಯುವಕ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹಿಂದುವನ್ನು ಮದುವೆಯಾಗಿದ್ದಕ್ಕೆ ಆಕೆಯನ್ನು ಬೆದರಿಸುತ್ತಿದ್ದನು. ಹಾಗೆ ಮಾಡದಂತೆ ಆಸಿಫ್‌ನನ್ನ ದಲಿತ ಯುವಕ ತಡೆದಾಗ ಹಿಂದೂ ಕಾಫಿರ್ ಎಂದು ನಿಂದಿಸಿದ್ದಾನೆ. ಇಸ್ಲಾಂಗೆ ಮತಾಂತರವಾಗಲು ಒತ್ತಡ ಹೇರಿದ. ಮತಾಂತರವಾಗದಿದ್ದರೆ ಕೊ-ಲೆ ಮಾಡುವುದಾಗಿ ಆಸಿಫ್ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತ ದಲಿತ ಯುವಕನ ಪ್ರಕಾರ, ಆಸಿಫ್ ತನಗೆ ಮುಸ್ಲಿಂ ಆಗುವ ಅಥವಾ ತನ್ನ ಹೆಂಡತಿಯನ್ನು ಬಿಟ್ಟು ಬಿಡಬೇಕು ಎಂಬ 2 ಆಪ್ಷನ್ ಗಳನ್ನು ಮುಂದಿಟ್ಟನು.

ಕೆಲವು ದಿನಗಳ ನಂತರ ಆಸಿಫ್ ಹಾಜಿ ಸಾಹಬ್ ಎಂದು ಕರೆಯಲ್ಪಡುವ ಕುಮೇಲ್ ಖುರೇಷಿಯ ಜೊತೆ ಸೇರಿಕೊಂಡನು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರೂ ಅಕ್ಟೋಬರ್ 3, 2022 ರಂದು ಮನೆಗೆ ನುಗ್ಗಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದೀಯಾ? ಎಂದು ಚಿತ್ರಹಿಂಸೆ ನೀಡಿದ್ದರು. ಕುಮೈಲ್ ಖುರೇಷಿ ದೌಂಡ್‌ನ ಕಬ್ರಿಸ್ತಾನ್ ಪ್ರದೇಶದಲ್ಲಿ ಕಚೇರಿಯನ್ನು ಹೊಂದಿದ್ದಾನೆ. ಇಲ್ಲಿ ದಲಿತ ಯುವಕನ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕರೆತಂದು ಥಳಿಸಿದ್ದಾರೆ. 3 ಗಂಟೆಗಳ ಕಾಲ ಹೊಡೆದ ನಂತರ, ಕುಮೇಲ್ ದಲಿತ ಯುವಕನ ಮದುವೆಯನ್ನು ಮುರಿಯುವುದಾಗಿ ಬೆದರಿಕೆ ಹಾಕಿದ ನಂತರ ಹೊರಟುಹೋದನು.

ಸಂತ್ರಸ್ತ‌ ದಲಿತ ಯವಕನ ಪ್ರಕಾರ, ಹಾಜಿ ಸಾಹಿಬ್ ತನ್ನ ಹೆಂಡತಿಯನ್ನು ಕಾಫಿರ್‌ನನ್ನ ಮದುವೆಯಾಗಿದ್ದಕ್ಕೆ ಧಮಕಿ ಹಾಕಿದ್ದಾನೆ. ಇದರೊಂದಿಗೆ ಆಕೆಯನ್ನು ಮುಸಲ್ಮಾನನ ಜೊತೆ ಮದುವೆ ಮಾಡಿಸುವ ಬಗ್ಗೆಯೂ ಮಾತನಾಡಿದ್ದಾನೆ. ಹಾಗೆ ಮಾಡದಿದ್ದರೆ ಕೊ-ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಸಂತ್ರಸ್ತನ ಪತ್ನಿಯೂ ಈ ಆರೋಪಗಳನ್ನು ಒಪ್ಪಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಮಹಿಳೆ ತನ್ನ ಪತಿಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಡ ಹೇರಿದ್ದಾರೆ. ಆದರೆ ಪತಿಯನ್ನು ಮತಾಂತರ ಮಾಡುವ ಸನ್ನಿವೇಶ ಬಂದರೆ ತಾನೂ ಹಿಂದೂ ಆಗುತ್ತೇನೆ ಎಂದು ಹೇಳಿದ್ದಾಳೆ.

ದೂರಿನ ಪ್ರಕಾರ, ಅಕ್ಟೋಬರ್ 14, 2022 ರಂದು, ಆಸಿಫ್ ಮತ್ತು ಕುಮೈಲ್ ಮುಸ್ಲಿಂ ವೈದ್ಯರೊಂದಿಗೆ ಸಂತ್ರಸ್ತೆಯ ಮನೆಗೆ ಪ್ರವೇಶಿಸಿದರು. ಅವನ ಹೆಂಡತಿ ಮತ್ತು ಮಕ್ಕಳನ್ನು ಹೊರಹಾಕಲಾಯಿತು. ಇದಾದ ನಂತರ ಆಸಿಫ್ ಶೇಖ್ ದಲಿತ ಯುವಕನ ಕೈಯನ್ನು ಹಿಡಿದುಕೊಂಡನು ಮತ್ತು ಹಾಜಿ ಸಾಹಬ್ ಯುವಕನ ಬಟ್ಟೆಗಳನ್ನು ಬಿಚ್ಚಿದನು. ಮುಸ್ಲಿಂ ವೈದ್ಯರ ಸುನ್ನತ್ ಮಾಡಿದನು. ಈ ಸಮಯದಲ್ಲಿ, ಹಾಜಿ ಕೆಲವು ಇಸ್ಲಾಮಿಕ್ ಸಾಲುಗಳನ್ನು ಸಹ ಓದಿದನು. ಇದಕ್ಕೆ ಒಪ್ಪದೆ ದಲಿತ ಯುವಕ ಸಾಕಷ್ಟು ಬಾರಿ ಮನವಿ ಮಾಡಿದರು ಆದರೆ ಆರೋಪಿಗಳು “ನೀನು ಇಸ್ಲಾಂ ಅನ್ನು ಹೇಗೆ ಸ್ವೀಕರಿಸುವುದಿಲ್ಲ ನೋಡೇ ಬಿಡೋಣ” ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತ ಯುವಕ ಹೇಳಿದ್ದಾರೆ.

ಸುನ್ನತಿ ಮಾಡಿಸಿ ಆರೋಪಿಗಳು ದಲಿತ ಯುವಕನ ಆಧಾರ್ ಹಾಗೂ ಪಡಿತರ ಚೀಟಿ ಕಿತ್ತು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುನ್ನತಿಯ ಸಂಪೂರ್ಣ ಪ್ರಕ್ರಿಯೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಪೊಲೀಸರು ಕುಮೈಲ್ ಖುರೇಷಿ, ಆಸಿಫ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 295-ಎ, 298, 452, 324, 323, 504, 506 ಮತ್ತು 34 ಅಡಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

Advertisement
Share this on...