ಮೂರು ರಾಜ್ಯಗಳಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ಸನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದೇನು ಗೊತ್ತಾ?

in Uncategorized 227 views

ಪಂಚ ರಾಜ್ಯ ಚುನಾವಣೆಯಲ್ಲಿ ಭಾನುವಾರದ ನಾಲ್ಕು ರಾಜ್ಯಗಳ ವಿಧಾನಸಭೆಯ ಚುನಾವಣೆಯ ಫಲಿತಾಂಶ ಬಂದಿದೆ. ಇವುಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಹೀನಾಯ ಸೊಲು ಕಂಡಿದೆ. ಅದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಪನೌತಿ ಕೌನ್‌ ಎನ್ನುವ ಟ್ರೆಂಡಿಗ್‌ ಆರಂಭವಾಗಿದೆ. ಅದರರ್ಥ ‘ಪನೌತಿ ಯಾರು?’ ಅನ್ನೋದಾಗಿದೆ.

Advertisement

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡದೆ. ಇದರ ಬೆನ್ನಲ್ಲಿಯೇ ಬಿಜೆಪಿ ನಾಯಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್‌ ನಾಯಕರನ್ನು ಲೇವಡಿ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್‌ ಕನೇರಿಯಾ, ಕೂಡ ಕಾಂಗ್ರೆಸ್‌ ಪಕ್ಷದ ಸೋಲಿಗೆ ಟಾಂಟ್‌ ನೀಡಿದಿದ್ದಾರೆ. ಯಾರೊಬ್ಬರ ಹೆಸರನ್ನು, ಯಾವ ಪಕ್ಷದ ಹೆಸರನ್ನೂ ತೆಗೆದುಕೊಳ್ಳದ ಡ್ಯಾನಿಶ್‌ ಕನೇರಿಯಾ, ತಮ್ಮ ಎಕ್ಸ್ ವೇದಿಕೆಯಲ್ಲಿ ‘ಪನೌತಿ ಕೌನ್‌..?’ ಎಂದು ಪ್ರಶ್ನೆ ಮಾಡಿ ಟ್ವೀಟ್‌ ಮಾಡಿದ್ದಾರೆ. ಇದರ ಅರ್ಥ, ‘ಪನೌತಿ ಯಾರು?’ ಅನ್ನೋದಾಗಿದೆ. ಒಂದೆಡೆ ನಾಲ್ಕೂ ರಾಜ್ಯಗಳ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿ ಫಲಿತಾಂಶ ಹೊರಬಿದ್ದಿದ್ದು ಇನ್ನೊಂದೆಡೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ಪೈಕಿ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಸ್ವತಃ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಪಕ್ಷ ಇಲ್ಲಿ ಕೆಟ್ಟ ನಿವರ್ಹಣೆ ನೀಡಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಬಿಜೆಪಿ ನಾಯಕರು ಪನೌತಿ ಯಾರು ಎಂದು ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರನ್ನು ಪನೌತಿ (ಅಪಶಕುನ) ಎಂದು ಕರೆದಿದ್ದರು. ಈ ಕುರಿತಾಗಿ ಬಿಜೆಪಿ ಕೂಡ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕೊನೆಗೆ ಚುನಾವಣಾ ಆಯೋಗ ಕೂಡ ರಾಹುಲ್‌ ಗಾಂಧಿಗೆ ಈ ವಿಚಾರವಾಗಿ ನೋಟಿಸ್‌ ಜಾರಿ ಮಾಡಿತ್ತು. ಚುನಾವಣಾ ಸಮಾವೇಶದ ವೇಳೆ, ವಿಶ್ವಕಪ್‌ ಫೈನಲ್‌ ವೇಳೆ ಟೀಮ್‌ ಇಂಡಿಯಾ ಗೆಲುವಿನ ಹಾದಿಯಲ್ಲಿತ್ತು. ಆದರೆ, ಪನೌತಿ ಅಲ್ಲಿಗೆ ಹೋದ ಕಾರಣ ನಮ್ಮ ಹುಡುಗರು ಸೋಲು ಕಾಣುವಂತಾಯಿತು. ಅದಾದ ಬಳಿಕ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಕೂಡ ಪ್ರಧಾನಿ ಮೋದಿ ಅವರನ್ನು ಪನೌತಿ ಎಂದು ಕರೆದು ಟ್ವೀಟ್‌ ಮಾಡಿದ್ದರು.

ಇಂದು ಮತ ಎಣಿಕೆ ಆರಂಭವಾಗಿ ಬಿಜೆಪಿ ಗೆಲುವಿನ ಸೂಚನೆ ಸಿಗುತ್ತಿದ್ದಂತೆ, ಬಿಜೆಪಿಯ ಸಾಕಷ್ಟು ಬೆಂಬಲಿಗರು, ಈಗ ಹೇಳಿ ಪನೌತಿ ಯಾರು ಅಂತಾ ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚಿನವರು ರಾಹುಲ್‌ ಗಾಂಧಿ ಎಂದು ಉತ್ತರ ನೀಡಿದ್ದಾರೆ.

ಪ್ರಸ್ತುತ ನಾಲ್ಕು ರಾಜ್ಯಗಳ ಪೈಕಿ 230 ವಿಧಾನಸಭಾ ಕ್ಷೇತ್ರದ ಮಧ್ಯಪ್ರದೇಶದಲ್ಲಿ 163 ಸೀಟ್‌ಗಳ ಮುನ್ನಡೆಯೊಂದಿಗೆ ಬಿಜೆಪಿ ಸರಳವಾಗಿ ಅಧಿಕಾರ ಹಿಡಿದಿದ್ದರೆ. 199 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಬಿಜೆಪಿ 115 ಸೀಟ್‌ಗಳಲ್ಲಿ ಗೆಲುವು ಕಂಡಿದೆ. ಇನ್ನು ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 54 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿದಿದೆ.

Advertisement
Share this on...