“ಮೂರ್ತಿ ಪೂಜೆ ವಿರೋಧಿಸುವ ಜಿಹಾದಿಗಳಿಗೆ ಇಲ್ಲಿಲ್ಲ ಅವಕಾಶ”: ದೇವಸ್ಥಾನದ ಹೊರಗೆ ಹಾಕಲಾಗಿದ್ದ ಮುಸಲ್ಮಾನರ ಅಂಗಡಿಗಳ ತೆರವು, ಕಂಗಾಲಾದ ಮುಸ್ಲಿಂ ವ್ಯಾಪಾರಿಗಳು

in Uncategorized 140 views

ದಕ್ಷಿಣ ಕನ್ನಡ ಜಿಲ್ಲೆಯ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳನ್ನು ತೆರವುಗೊಳೊಸಿರುವ ಪ್ರಕರಣ ನಡೆದಿದೆ. ಈ ಕುರಿತು ಜಾತ್ರೆಯ ಆರಂಭಕ್ಕೂ ಮುನ್ನವೇ ವಿಶ್ವ ಹಿಂದೂ ಪರಿಷತ್ ಬಹಿಷ್ಕಾರ ಅಭಿಯಾನದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ ಹಿಂದೂಯೇತರ ವ್ಯಾಪಾರಿಗಳು ಅಂಗಡಿಗಳನ್ನು ಸ್ಥಾಪಿಸುವುದನ್ನು ನಿಷೇಧಿಸಿ ಎಂಬ ಸಂದೇಶಗಳು ಪ್ರದೇಶದ ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದವು. ಇದೆಲ್ಲದರ ನಡುವೆಯೂ ಜಾತ್ರೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಅಂಗಡಿ ಇಟ್ಟಿದ್ದ, ಅದನ್ನ ಈಗ ತೆರವುಗೊಳಿಸಲಾಗಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಜನವರಿ 14 ರಿಂದ ಜನವರಿ 22 ರವರೆಗೆ ವಿಟ್ಲ ಪಟ್ಟಣದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯನ್ನು ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಹಿಂದೂ ಸಂಘಟನೆಗಳು ಅದರಲ್ಲೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಮುಸ್ಲಿಂ ಅಂಗಡಿಯವರು ಜಾತ್ರೆಯ ವೇಳೆ ಅಂಗಡಿ ಮುಂಗಟ್ಟುಗಳನ್ನು ಹಾಕದಂತೆ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಬಿಡುಗಡೆ ಮಾಡಲಾದ ಪೋಸ್ಟರ್‌ನಲ್ಲಿ, ಹಿಂದೂ ಹಬ್ಬಗಳು ಮತ್ತು ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಸ್ಥಾಪಿಸದಂತೆ ಹೇಳಲಾಗಿತ್ತು. 2022ರ ನವೆಂಬರ್‌ನಲ್ಲಿ ನಡೆದ ಕುಕ್ಕರ್ ಸ್ಫೋಟವನ್ನು ಉಲ್ಲೇಖಿಸಿ ಪೋಸ್ಟರ್‌ನಲ್ಲಿ ಉಗ್ರರ ಟಾರ್ಗೆಟ್ ಕದ್ರಿ ಮಂಜುನಾಥ ದೇವಸ್ಥಾನ ಎಂದು ಬರೆಯಲಾಗಿತ್ತು.

ಅಷ್ಟೇ ಅಲ್ಲದೆ ಪೋಸ್ಟರ್ ನಲ್ಲಿ ಮೂರ್ತಿ ಪೂಜೆಯನ್ನು ವಿರೋಧಿಸುವವರು ಪೂಜಾಸ್ಥಳದ ಬಳಿ ಜಾತ್ರೆ ವೇಳೆ ವ್ಯಾಪಾರ ಮಾಡುವಂತಿಲ್ಲ. ಹಿಂದೂ ಧರ್ಮದ ಸಂಪ್ರದಾಯಗಳನ್ನು ಅನುಸರಿಸುವ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಬರೆಯಲಾಗಿತ್ತು. ಆದರೆ, ಪೊಲೀಸರು ಈ ಪೋಸ್ಟರ್‌ಗಳನ್ನು ತೆಗೆದಿದ್ದು, ಪೋಸ್ಟರ್‌ನಲ್ಲಿ ಬರೆದಿದ್ದನ್ನು ದೇವಸ್ಥಾನದ ಆಡಳಿತ ಮಂಡಳಿ ತಿರಸ್ಕರಿಸಿತ್ತು.

ಇನ್ನೊಂದು ವರದಿಯ ಪ್ರಕಾರ, ಜಾತ್ರೆಗೂ ಮುನ್ನ ಹಿಂದೂ ಸಂಘಟನೆಗಳಿಂದ ವಾಟ್ಸಾಪ್ ಸಂದೇಶ ಕೂಡ ಬಂದಿದ್ದು, ಮುಸ್ಲಿಮರು ಜಾತ್ರೆಯಲ್ಲಿ ಅಂಗಡಿ ಮುಂಗಟ್ಟು ಹಾಕಬೇಡಿ ಎಂದು ಹೇಳಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜಾತ್ರೆಯಲ್ಲಿ ಅಂಗಡಿಗಳಿಗೆ ಟೆಂಡರ್ ಕರೆದ ಗಣೇಶ್ ಶೆಣೈ, ವಾಟ್ಸ್ಯಾಪ್ ನಲ್ಲಿ ಈ ರೀತಿಯ ಮೆಸೇಜ್ ಗಳು ವೈರಲ್ ಆದ ನಂತರ ಇಬ್ಬರು ಮುಸ್ಲಿಂ ವ್ಯಾಪಾರಿಗಳ ಮುಂಗಡ ಹಣವನ್ನು ಹಿಂದಿರುಗಿಸಿದ್ದರು. ವರದಿಗಳ ಪ್ರಕಾರ, ವಿಟ್ಲ ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಅಂಗಡಿಯನ್ನು ಹಾಕಿದ್ದರು, ಈಗ ಅದನ್ನು ತೆರವು ಮಾಡಲಾಯಿತು.

ಜಾತ್ರೆಯಲ್ಲಿ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಹಾಕಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಹಿಂದೂಗಳು ಹಾಗೂ ಮುಸ್ಲಿಮರ ಅಂಗಡಿಗಳನ್ನು ಹಾಕಲಾಗುತ್ತಿತ್ತು. ಕರ್ನಾಟಕ ಹಿಜಾಬ್ ವಿವಾದ ಮತ್ತು ದೇಶಾದ್ಯಂತ ನಡೆಯುತ್ತಿರುವ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಸಂಘಟನೆಗಳು ಬಹಿಷ್ಕಾರ ಅಭಿಯಾನವನ್ನು ಆರಂಭಿಸಿವೆ. ಇದರ ಪರಿಣಾಮ ಮುಸ್ಲಿಂ ವ್ಯಾಪಾರಿಗಳನ್ನು ಹಿಂದೂ ಜಾತ್ರೆಗಳಲ್ಲಿ ವ್ಯಾಪಾರ ಮಾಡದಂತೆ ನಿಷೇಧ ಹೇರಲಾಗುತ್ತಿದೆ.

Advertisement
Share this on...