ಮೈದಾನದಲ್ಲಿ ಆಟಗಾರರ ದುರ್ವರ್ತನೆ ಕಂಡು ಅಂಪೈರ್ ಮಾಡಿಕೊಂಡಿದ್ದನ್ನ ಕಂಡು ದಂಗಾದ ಜಗತ್ತು

in Kannada News/News/ಕ್ರೀಡೆ 62 views

ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್​ಬಿಡ್ಲ್ಯೂ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಅಲ್​ ಹಸನ್ ಮೊದಲಿಗೆ ಸ್ಟಂಪ್‌ಗೆ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಮಳೆ ಕಾರಣ ಪಂದ್ಯವನ್ನು ಸ್ಥಗಿತಗೊಳಸಿಲು ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮತ್ತೊಮ್ಮೆ ಆಕ್ರೋಶಗೊಂಡು ಮೂರು ಸ್ಟಂಪ್‌ಗಳನ್ನು ಕಿತ್ತುಹಾಕಿ ಗೂಂಡಗಿರಿ ತೋರಿಸಿದ್ದರು. ಈ ದುರ್ವತನೆಗೆ ಶಿಕ್ಷೆಯಾಗಿ ಢಾಕಾ ಪ್ರೀಮಿಯರ್​ ಲೀಗ್​ನಲ್ಲಿ ಶಕೀಬ್ ಅನ್ನು ಮೂರು ಪಂದ್ಯಗಳಿಗೆ ನಿಷೇಧಿಸಲಾಗಿತ್ತು.

Advertisement

ಆದರೆ ಆ ಘಟನೆಯ ಬಳಿಕ ಅಂಪೈರ್​ ಒಬ್ಬರು ತಮ್ಮ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಾಂಗ್ಲಾ ಅಂಪೈರ್ ಮೊನೀರುಜ್ಜಾಮಾನ್, ಅಂದಿನ ಪಂದ್ಯದಲ್ಲಿ ನಾನು ಅಂಪೈರ್ ಆಗಿರಲಿಲ್ಲ. ಆದರೆ ಆ ಘಟನೆ ನೋಡಿ ಮನಸ್ಸಿಗೆ ತುಂಬಾ ಆಘಾತವವಾಗಿತ್ತು. ಹೀಗಾಗಿ ನಾನು ಇಂತಹ ಕೆಲಸದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವೆ ಎಂದಿದ್ದಾರೆ.

ಏಕೆಂದರೆ ನಮಗೂ ಸ್ವಾಭಿಮಾನವಿದ್ದು, ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅಂಪೈರ್​ಗಳಿಂದ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದರೆ ಆಟಗಾರರು ಅವರೊಂದಿಗೆ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ. ನಾವು ಕೇವಲ ಹಣ್ಣಕ್ಕಾಗಿ ಕೆಲಸ ಮಾಡುತ್ತೇವೆ ಎನ್ನುವುದು ತಪ್ಪು. ನಮಗೂ ಸ್ವಾಭಿಮಾನವಿದ್ದು,ಅದರೊಂದಿಗೆ ಬದುಕಲು ನಾನು ಬಯಸುತ್ತೇನೆ ಎಂದು ಮೊನೀರುಜ್ಜಾಮಾನ್ ತಿಳಿಸಿದ್ದಾರೆ.

ಈ ನಿರ್ಧಾರಕ್ಕೆ ಕಾರಣ ಶಕೀಬ್ ಅಲ್ ಹಸನ್ ಅವರ ಒಂದು ಘಟನೆ ಮಾತ್ರವಲ್ಲ. ಮತ್ತೊಂದು ಪಂದ್ಯದಲ್ಲಿ ನಾನು ಮೂರನೇ ಅಂಪೈರ್ ಆಗಿದ್ದೆ. ಅಂದು ಪಂದ್ಯವನ್ನು ಮರು ಪ್ರಾರಂಭಿಸಲು ಬಯಸಿದಾಗ ಮತ್ತೋರ್ವ ಆಟಗಾರ ಮಹಮ್ಮದುಲ್ಲಾ ನಿರಾಕರಿಸಿದ್ದರು. ಅಂದರೆ ಅಂಪೈರ್​ ತೀರ್ಮಾನಕ್ಕೆ ಬೆಲೆಯೇ ಇಲ್ಲದಂತಾಯಿತು. ಮಹಮ್ಮದುಲ್ಲಾ ಪ್ರಸ್ತುತ ಬಾಂಗ್ಲಾದೇಶ ಟಿ20 ತಂಡದ ನಾಯಕ. ಇಂತಹ ಆಟಗಾರರೇ ಅನುಚಿತವಾಗಿ ವರ್ತಿಸುವುದು ಎಷ್ಟು ಸರಿ ಎಂದು ಮುನೀರುಜ್ಜಾಮಾನ್ ಪ್ರಶ್ನಿಸಿದರು. ಒಟ್ಟಿನಲ್ಲಿ ಮೈದಾನದಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ತೋರಿದ ದುರ್ವತನೆಯಿಂದ ತಮ್ಮ ವೃತ್ತಿಗೆ ಗುಡ್​ ಬೈ ಹೇಳಿದ್ದಾರೆ ಮೊನೀರುಜ್ಜಾಮಾನ್.

Advertisement
Share this on...