ಮೋಹನ್ ಭಾಗವತ್ ಅವರು ತಮ್ಮ ಹೇಳಿಕೆಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ಬಗ್ಗೆ ನಿರಂತರವಾಗಿ ಮಾತನಾಡಿದ್ದಾರೆ. ಈ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಹೊರಗಿನಿಂದ ಬಂದವರಲ್ಲ ಮತ್ತು ಮುಸ್ಲಿಮರ ಹಾಗು ಹಿಂದೂಗಳಿಗೂ ಇರುವ ಪೂರ್ವಜರು ಒಂದೇ ಎಂದು ಅವರು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ದೇಶದಲ್ಲಿ ಸೌಹಾರ್ದತೆ ಕಾಪಾಡುವಂತೆ ಎಲ್ಲ ಧರ್ಮದವರಿಗೂ ಭಾಗವತ್ ಹಲವು ಬಾರಿ ಮನವಿ ಮಾಡಿದ್ದಾರೆ. ಸಂಘದ ಪ್ರಮುಖರು ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ಇಂದು ದೆಹಲಿಯ ಮಸೀದಿಗೆ ತೆರಳಿ ಅಲ್ಲಿನ ಇಮಾಮ್‌ನ್ನ ಭೇಟಿ ಮಾಡಿದರು. ಇವರೊಂದಿಗೆ ಸಂಘದ ಮುಖಂಡ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಇಂದ್ರೇಶ್ ಕುಮಾರ್ ಕೂಡ ಇದ್ದರು. ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದ ಮಸೀದಿಯಲ್ಲಿ ಸರಸಂಘಚಾಲಕರು ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಮತ್ತು ಇತರ ಮುಸ್ಲಿಂ ಮುಖಂಡರನ್ನು ಭೇಟಿಯಾದರು ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ. ಮೋಹನ್ ಭಾಗವತ್ ಸಮಾಜದ ಎಲ್ಲ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಇದು ನಡೆಯುತ್ತಿರುವುದು ಸಾಮಾನ್ಯ ಸಂವಾದ ಪ್ರಕ್ರಿಯೆಯ ಭಾಗವಾಗಿದೆ ಎಂದು ಅಂಬೇಕರ್ ಹೇಳಿದರು.
दिल्ली: RSS प्रमुख मोहन भागवत ने कस्तूरबा गांधी मार्ग मस्जिद में मुख्य इमाम डॉ इमाम उमर अहमद इलियासी और अन्य मुस्लिम नेताओं से मुलाकात की। pic.twitter.com/cnGHrCnfJe
— ANI_HindiNews (@AHindinews) September 22, 2022
ಎರಡು ದಿನಗಳ ಹಿಂದೆ ಮೋಹನ್ ಭಾಗವತ್ ಅವರು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದ್ದರು. ಅವರಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್‌ವೈ ಖುರೇಷಿ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಮೀರುದ್ದೀನ್ ಶಾ ಕೂಡ ಇದ್ದರು. ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಎಲ್ಲರೂ ಕುಳಿತು ಚರ್ಚಿಸಿದರು. ಕೋಮು ಸೌಹಾರ್ದತೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಈ ಸಭೆಯಲ್ಲಿ ಒಮ್ಮತ ಮೂಡಿತು. ಸಭೆಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಸ್ಲಿಂ ಬುದ್ಧಿಜೀವಿಗಳನ್ನು ಎಚ್ಚರಿಕೆಯಿಂದ ಆಲಿಸಿದರು ಮತ್ತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಮೋಹನ್ ಭಾಗವತ್ ಅವರು ತಮ್ಮ ಹೇಳಿಕೆಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ಬಗ್ಗೆ ನಿರಂತರವಾಗಿ ಮಾತನಾಡಿದ್ದಾರೆ. ಈ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಹೊರಗಿನಿಂದ ಬಂದವರಲ್ಲ ಮತ್ತು ಮುಸ್ಲಿಮರ ಹಾಗು ಹಿಂದೂಗಳಿಗೂ ಇರುವ ಪೂರ್ವಜರು ಒಂದೇ ಎಂದು ಅವರು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ದೇಶದಲ್ಲಿ ಸೌಹಾರ್ದತೆ ಕಾಪಾಡುವಂತೆ ಎಲ್ಲ ಧರ್ಮದವರಿಗೂ ಭಾಗವತ್ ಹಲವು ಬಾರಿ ಮನವಿ ಮಾಡಿದ್ದಾರೆ. ಸಂಘದ ಪ್ರಮುಖರು ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈಗ ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿ ನಂತರ ಮಸೀದಿಗೆ ಭೇಟಿ ನೀಡಿ ಇಮಾಮ್ ಮತ್ತು ಇತರ ನಾಯಕರನ್ನು ಭೇಟಿ ಮಾಡುವುದು ಮುಂದಿನ ದಿನಗಳಲ್ಲಿ ದೇಶದಲ್ಲಿ ಶಾಂತಿ ಸ್ಥಾಪಿಸುವ ದಿಕ್ಕಿನಲ್ಲಿ ಮೈಲಿಗಲ್ಲು ಆಗಬಹುದು. ಆರೆಸ್ಸೆಸ್ ಮತ್ತು ಇತರ ಹಿಂದೂ ಸಂಘಟನೆಗಳಿಂದಾಗಿ ದೇಶದ ಕೋಮು ಸೌಹಾರ್ದತೆ ಹದಗೆಡುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಈ ಆರೋಪಗಳನ್ನು ಸಂಘ ಮೊದಲಿನಿಂದಲೂ ಅಲ್ಲಗಳೆಯುತ್ತಲೇ ಬಂದಿದೆ.
ಸಂಘದ ಮುಖ್ಯಸ್ಥರನ್ನು ಭೇಟಿ ಮಾಡಿದ ಬೆನ್ನಲ್ಲೇ ಮುಸ್ಲಿಂ ನಾಯಕರ ವಿರುದ್ಧ ಕೆಂಡಕಾರಿದ ಓವೈಸಿ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ಕೆಲ ಸಮಯದಲ್ಲೇ ಹಲವು ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದಾರೆ. ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೀಗ ಮುಸ್ಲಿಂ ಮುಖಂಡರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರನ್ನ ಭೇಟಿಯಾಗಿದ್ದಕ್ಕೆ ಗರಂ ಆಗಿದ್ದಾರೆ. ಇವರೆಲ್ಲರೂ ನೆಲದ ವಾಸ್ತವತೆಯ ಬಗ್ಗೆ ಏನೂ ತಿಳಿದಿಲ್ಲದ ಗಣ್ಯ ವ್ಯಕ್ತಿಗಳು ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು ಐವರು ಪ್ರಮುಖ ಮುಸ್ಲಿಂ ನಾಯಕರು ಭಾಗವತ್ ಅವರನ್ನು ಭೇಟಿ ಮಾಡಿದ್ದರು ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥರು ಈ ಮುಖಂಡರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ತಿಂಗಳು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದವರಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ (ಆರ್) ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೆರ್ವಾನಿ ಸೇರಿದ್ದಾರೆ. ಇವರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಓವೈಸಿ, “ಈ ಜನರು ಹೋಗಿ ಅವರನ್ನು (ಭಾಗವತ್) ಭೇಟಿ ಮಾಡಿದ್ದಾರೆ. ಆರ್‌ಎಸ್‌ಎಸ್‌ನ ಸಿದ್ಧಾಂತ ಜಗತ್ತಿಗೇ ತಿಳಿದಿದೆ ಮತ್ತು ನೀವು ಅವರನ್ನು ಭೇಟಿ ಮಾಡುತ್ತೀರ. ಮುಸ್ಲಿಂ ಸಮುದಾಯದ ಈ ಗಣ್ಯರು ಏನೇ ಮಾಡಿದರೂ ಸತ್ಯ. ಆದರೆ, ನಾವು ರಾಜಕೀಯವಾಗಿ ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡರೆ ನಮ್ಮನ್ನು ಖಳನಾಯಕನ ಹಾಗೆ ತೋರಿಸಲಾಗುತ್ತದೆ” ಎಂದಿದ್ದಾರೆ.
ಇವರು ತಮ್ಮನ್ನ ತಾವು ಜ್ಞಾನಿಗಳು ಅಂತಂದುಕೊಂಡಿದ್ದಾರೆ – ಓವೈಸಿ
ಓವೈಸಿ ಇಲ್ಲಿಗೇ ನಿಲ್ಲಲಿಲ್ಲ. ಅವರು ಮುಂದೆ ಮಾತನಾಡುತ್ತ, “ತಾವು ಬಹಳ ತಿಳುವಳಿಕೆಯುಳ್ಳವರು ಮತ್ತು ನೆಲದ ವಾಸ್ತವತೆಯ ಬಗ್ಗೆ ತಿಳಿದಿಲ್ಲ ಎಂದು ಭಾವಿಸುವ ಈ ಗಣ್ಯರು, ಈ ಜನರು ಆರಾಮವಾಗಿ ಬದುಕುತ್ತಿದ್ದಾರೆ ಮತ್ತು ಅವರು ಹೋಗಿ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾಗುತ್ತಾರೆ. ಇದು ಅವರ ಪ್ರಜಾಸತ್ತಾತ್ಮಕ ಹಕ್ಕು, ನಾನು ಅದನ್ನು ಪ್ರಶ್ನಿಸುವುದಿಲ್ಲ ಆದರೆ ನಮ್ಮನ್ನು ಪ್ರಶ್ನಿಸುವ ಹಕ್ಕೂ ಅವರಿಗೆ ಇಲ್ಲ” ಎಂದರು.
ದೆಹಲಿಯ ಮಸ್ಜಿದ್‌ನ ಮುಖ್ಯ ಇಮಾಮ್‌ನ್ನ ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ
ಪ್ರಬುದ್ಧ ವರ್ಗದ ಮುಸ್ಲಿಂ ನಾಯಕರ ಮೇಲೆ ಓವೈಸಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾಗಲೇ, ಗುರುವಾರ, ಆರ್‌ಎಸ್‌ಎಸ್ ಮುಖ್ಯಸ್ಥರು ದೆಹಲಿಯ ಹೃದಯಭಾಗದಲ್ಲಿರುವ ಮಸೀದಿಯನ್ನು ತಲುಪಿ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಅವರನ್ನು ಭೇಟಿಯಾದರು. ಸುಮಾರು ಒಂದು ಗಂಟೆ ಕಾಲ ಸಭೆ ನಡೆದಿದ್ದು, ‘ಮುಚ್ಚಿದ ಕೋಣೆಯಲ್ಲಿ ನಡೆದ ಸಭೆ’ ಎಂದು ಬಣ್ಣಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು ಈ ರೀತಿಯಾಗಿ ಮುಸ್ಲಿಂ ನಾಯಕರನ್ನು ಭೇಟಿ ಮಾಡುತ್ತಿರುವುದು ಅವರ ಸಂಘಟನೆಯ ಬದಲಾದ ತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
‘ಪರಸ್ಪರ ಸಹಕಾರ ಮತ್ತು ಸಾಮರಸ್ಯದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ’
ಇದಕ್ಕೂ ಮುನ್ನ ಕಳೆದ ತಿಂಗಳು ಸಂಘದ ಮುಖ್ಯಸ್ಥರನ್ನು ಭೇಟಿಯಾದ ಬಗ್ಗೆ, ಮಾಜಿ ಸಿಇಸಿ ಖುರೇಷಿ ಅವರು ಮಾತನಾಡುತ್ತ ದೇಶದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ಖುರೇಷಿ ಪ್ರಕಾರ, ಸಂಘದ ಮುಖ್ಯಸ್ಥರು ಅವರ ಜೊತೆ ಮಾತನಾಡುತ್ತ, “ನಾನು ಅಸಂಗತ ವಾತಾವರಣದಿಂದ ಸಂತೋಷವಾಗಿಲ್ಲ. ಇದು ಸಂಪೂರ್ಣವಾಗಿ ತಪ್ಪು. ಸಹಕಾರ ಮತ್ತು ಸಾಮರಸ್ಯದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ” ಎಂದಿದ್ದರಂತ. ಖುರೇಷಿ ಪ್ರಕಾರ, ಸಂಭಾಷಣೆಯ ಸಮಯದಲ್ಲಿ, ಭಾಗವತ್ ಅವರು ತಮ್ಮ ಮುಂದೆ ಕೆಲವು ಪ್ರಮುಖ ವಿಷಯಗಳನ್ನು ಇಟ್ಟುಕೊಂಡಿದ್ದರು, ಅದರ ಬಗ್ಗೆ ಅವರು ಚಿಂತಿತರಾಗಿದ್ದಾರೆ. ಇದರಲ್ಲಿ ಹಿಂದೂಗಳಿಗೆ ಹಾನಿ ಮಾಡುವ ಗೋಹತ್ಯೆಯೂ ಸೇರಿದೆ. ಎರಡನೆಯದಾಗಿ, ‘ಕಾಫಿರ್’ ಎಂಬ ಪದವೂ ಇದೆ.