ಮೊಟ್ಟಮೊದಲ ಬಾರಿಗೆ ಸಿಕ್ಕಿತು 3000 ವರ್ಷಗಳಷ್ಟು ಪುರಾತನವಾದ ಮಾತನಾಡುವ ಮಮ್ಮಿ, CT Scan ನಲ್ಲಿ ಮಮ್ಮಿ ಬಾಯಿಂದ ಬಂದ ಮಾತೇನು ನೋಡಿ

in Kannada News/News/ಕನ್ನಡ ಮಾಹಿತಿ 255 views

ಮಮ್ಮಿಯನ್ನು ಈಜಿಪ್ಟಿನ ನಾಗರಿಕತೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಯಾರಾದರೂ ಸತ್ತಾಗ ಅವರ ಶ-ವ-ವನ್ನ ಬಿಳಿ ಬಟ್ಟೆಗಳಲ್ಲಿ ಸುತ್ತಿ ಅದನ್ನ ಪೆಟ್ಟಿಗೆಯೊಳಗೆ ಮುಚ್ಚಿಬಿಡಲಾಗುತ್ತಿತ್ತು. ಕಾರಣ ಇದರಿಂದ ಆ ಶ-ವ-ಗಳು ಸುರಕ್ಷಿತವಾಗಿರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು.

Advertisement

ಈಜಿಪ್ಟ್‌ನ ವಿಜ್ಞಾನಿಗಳಿಗೆ ಅನೇಕ ಮಮ್ಮಿಗಳು ಸಿಕ್ಕಿವೆ, ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅದೇ ರೀತಿಯಾಗಿ ಸಿಕ್ಕ 3000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಮ್ಮಿಯನ್ನ ಇಂಗ್ಲೆಂಡಿನ ಲೀಡ್ಸ್ ಸಿಟಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಈ ಮಮ್ಮಿಯ ಹೆಸರು ನೀಸಿಯಾಮುನ್ ಎಂಬುದಾಗಿದೆ.

ತಜ್ಞರು ಹೇಳುವ ಪ್ರಕಾರ ಈ ಮಮ್ಮಿ ಈಜಿಪ್ತಿನ ರಾಜ ಫ್ಯಾರೀ ರಾಮಸೆಸ್-11 ಆಡಳಿತದ ಸಮಯದ ಪೂಜಾರಿ ಹಾಗು ಪತ್ರಕರ್ತನ ರೀತಿಯಲ್ಲಿ ಕೆಲಸ ಮಾಡುತ್ತಿದ್ದ‌. ಇತಿಹಾಸಕಾರರ ಪ್ರಕಾರ ನೀಸಿಯಾಮುನ್ ತನ್ನ ರಾಜನಿಗೆ ಸಂದೇಶಗಳನ್ನೂ ತರುತ್ತಿದ್ದ ಹಾಗು ತನ್ನ ರಾಜನಿಗಾಗಿ ಹಾಡುಗಳನ್ನೂ ಹಾಡುತ್ತಿದ್ದ. ಆತನ ಮಮ್ಮಿಯ ಮೇಲೆ ಈ ಎಲ್ಲ ಮಾಹಿತಿಗಳೂ ದೊರೆತಿವೆ.

ಈ ಮಮ್ಮಿಯಿಂದ ಹೊರಬರುತ್ತಿದ್ದ ವಿಚಿತ್ರ ಶಬ್ದಗಳು

ನೀಸಿಯಾಮುನ್‌ನ ಮಮ್ಮಿಯನ್ನು ಲೀಡ್ಸ್ ಸಿಟಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ ಮತ್ತು ಈ ಮಮ್ಮಿಯಿಂದ ಧ್ವನಿ ಕೇಳಿಸುತ್ತದೆ.  ವಿಜ್ಞಾನಿಗಳ ಪ್ರಕಾರ, ಮಮ್ಮಿ ಬಳಿ ಯಾರಾದರೂ ಹಾದುಹೋದಾಗಲೆಲ್ಲಾ ಒಂದು ಧ್ವನಿ ಕೇಳಿಸುತ್ತದೆ. ಅದರ ನಂತರ ವಿಜ್ಞಾನಿಗಳು ಈ ಧ್ವನಿಯನ್ನು ರೆಕಾರ್ಡ್ ಮಾಡಲು ಯೋಚಿಸಿದರು. ಅದರ ಧ್ವನಿಯನ್ನು ದಾಖಲಿಸಲು, ವಿಜ್ಞಾನಿಗಳು ಮೊದಲು ನೀಸಿಯಾಮುನ್‌ನ ಗಂಟಲಿನ ಸಿಟಿ ಸ್ಕ್ಯಾನ್ ಮಾಡಿದರು. ನಂತರ 3D ಪ್ರಿಂಟರ್ ನಿಂದ ಅದರ ಧ್ವನಿ ಪೆಟ್ಟಿಗೆಯ ನಾಳವನ್ನ ಸೃಷ್ಟಿಸಲಾಯಿತು. ಈ ಶಬ್ದವು ನ-ರ-ಳು-ವಿಕೆಯ ಧ್ವನಿಯಂತಿತ್ತು. ಅಷ್ಟೇ ಅಲ್ಲ, ವಿಜ್ಞಾನಿಗಳು ಈ ಧ್ವನಿಯನ್ನ ಕೂಡ ರೆಕಾರ್ಡ್ ಮಾಡಿದ್ದಾರೆ.

ಮಮ್ಮಿಯ ಧ್ವನಿಗೆ ಸಂಬಂಧಿಸಿದಂತೆ, ವಿಜ್ಞಾನಿ ಡೇವಿಡ್ ಹೊವಾರ್ಡ್ ಹೇಳುವ ಪ್ರಕಾರ, “ನಾವು ವೋಕಲ್ ಕೋರ್ಡ್ ಮಾಡಲು ಮಮ್ಮಿಯ ಸಿಟಿ ಸ್ಕ್ಯಾನ್ ಮಾಡಿದ್ದೇವು. ಅದರಲ್ಲಿ ಅವನ ನಾ-ಲಿ-ಗೆಯ ಕೆಲವು ಭಾಗ ಕಾಣೆಯಾಗಿದೆ ಎಂದು ತಿಳಿದುಬಂತು. ಈ ಕಾರಣಕ್ಕಾಗಿ ನಮ್ಮ ಮಾಡೆಲ್ ಕೂಡ ಅದೇ ರೀತಿ ತಯಾರಿಸಲಾಯಿತು” ಎಂದು ಹೇಳುತ್ತಾರೆ. ಡೇವಿಡ್ ಹೊವಾರ್ಡ್ ಅವರ ಪ್ರಕಾರ, “ಮಮ್ಮಿಯ ನಾ-ಲಿ-ಗೆಯ ಭಾಗ ಏಕೆ ಕಾಣೆಯಾಗಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ಮಮ್ಮಿ 3 ಸಾವಿರ ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀಸಿಯಾಮುನ್ ಅವರ ನಾ-ಲಿ-ಗೆಯ ಕೆಲವು ಭಾಗವು ಕೊ-ಳೆ-ತು ಹೋಗಿರಬಹುದು ಎಂಬ ಭ-ಯ-ವಿ-ದೆ. ಈ ಕಾರಣದಿಂದಾಗಿ, ಅಂತಹ ಶಬ್ದವು ಅದರಿಂದ ಹೊರಬರುತ್ತಿರಬಹುದು” ಎಂದು ಹೇಳುತ್ತಾರೆ.

ಈ ಕಾರಣಕ್ಕಾಗಿ ಗಂಟಲಿನ 3D ಮಾಡೆಲ್ ತಯಾರಿಸಲಾಗಿತ್ತು

ಡೇವಿಡ್ ಹೊವಾರ್ಡ್ ಪ್ರಕಾರ, ಯಾವಾಗ ಗಾಳಿ ಮಮ್ಮಿ ಬಳಿ ಸುಳಿಯುತ್ತಿತ್ತೋ ಆಗ ಮಮ್ಮಿ ಬಾಯಿಂದ ಒಂದು ಶಬ್ದ ಹೊರಬರುತ್ತಿತ್ತು. ಆದ್ದರಿಂದ ಮಮ್ಮಿಯ ಗಂಟಲಿನ 3ಡಿ ಮಾದರಿಯನ್ನು ಏಕೆ ಮಾಡಬಾರದು ಮತ್ತು ಧ್ವನಿ ರೆಕಾರ್ಡ್ ಮಾಡಬಾರದೆಂದು ನಾವು ಯೋಚಿಸಿದೆವು. ನಮಗೆ ಅದೇ ರೀತಿಯ ಧ್ವನಿ ಕೇಳಲು ಸಿಕ್ಕಿತು. ನೀಸಿಯಾಮುನ್ ಶಬ್ದವನ್ನು ಕೇಳಿದಾಗ ಅವನು ನ-ರ-ಳು-ತ್ತಿದ್ದಾನೆ ಅನ್ನುವಂತೆ ಭಾಸವಾಗುತ್ತದೆ

ನೀವು ಕೂಡ ಈ ಮಮ್ಮಿಯ ಧ್ವನಿಯನ್ನು ಕೇಳಲು ಬಯಸಿದರೆ, ಕೆಳಗಿರುವ ಟ್ವೀಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.  ನೀವು ಕೂಡ ಮಮ್ಮಿಯ ಧ್ವನಿಯನ್ನ ಕೇಳಬಹುದಾಗಿದೆ.

 

Advertisement
Share this on...