ಛತ್ತೀಸ್ಗಢದಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 1100 ಕ್ರೈಸ್ತರು ಒಟ್ಟಿಗೆ ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿದ್ದಾರೆ. ಈ ಜನರು ಗುರುವಾರ ಮಹಾಸಮುಂದ್ ಜಿಲ್ಲೆಯ ಬಸ್ನಾದಲ್ಲಿ ಆಯೋಜಿಸಲಾದ ಶ್ರೀಮದ್ ಭಗವತ್ ಕಥಾದ ಮೂರನೇ ದಿನದಂದು ತಮ್ಮ ಮೂಲ ಧರ್ಮಕ್ಕೆ ಮರಳಿದರು. ಬಿಜೆಪಿ ನಾಯಕ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಗಂಗಾನದಿಯ ನೀರಿನಿಂದ ಎಲ್ಲರ ಪಾದ ತೊಳೆದು ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿಸಿದರು.
ವರದಿಯ ಪ್ರಕಾರ ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿದ ಜನರು ಮಾತನಾಡಿ ತಾವು ಆಸೆ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮ ತೊರೆದು ಕ್ರೈಸ್ತರಾಗಿದ್ದೆವು. ಈಗ ನಮ್ಮ ತಪ್ಪಿನ ಅರಿವಾದ ಬಳಿಕ ಹಿಂದೂ ಧರ್ಮಕ್ಕೆ ಮರಳಿದ್ದೇವೆ ಎಂದು ಹೇಳಿದ್ದಾರೆ. ಕಥಾವಾಚಕ ಪಂಡಿತ್ ಹಿಮಾಂಶು ಕೃಷ್ಣ ಮಹಾರಾಜ್ ಈ ಜನರಿಗೆ ಶಪಥ ಬೋಧಿಸಿದರು. ಸುಮಾರು 325 ಕುಟುಂಬಗಳ 1100 ಜನರು ಸನಾತನ ಧರ್ಮಕ್ಕೆ ಮರಳಿದ್ದಾರೆ ಎಂದು ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ತಿಳಿಸಿದ್ದಾರೆ.
ಗಮನಿಸುವ ಸಂಗತಿಯೆಂದರೆ, ಕೆಲ ತಿಂಗಳ ಹಿಂದೆ ಮಹಾಸಮುಂಡ್ನ ಕಟಾಂಗ್ಪಾಲಿ ಗ್ರಾಮದಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆ ಸಮಯದಲ್ಲಿ ವಿಶ್ವ ಕಲ್ಯಾಣ ಮಹಾಯಜ್ಞದ ಸಮಯದಲ್ಲಿ ಸುಮಾರು 1250 ಜನರು ಘರ್ವಾಪಸಿ ಮಾಡಿದ್ದರು. ಬಿಜೆಪಿಯ ಛತ್ತೀಸ್ಗಢದ ರಾಜ್ಯ ಸಚಿವ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಮತಾಂತರಗೊಂಡ ಜನರನ್ನು ಘರ್ವಾಪಸಿ ಮಾಡಿಸುವ ಅಭಿಯಾನವನ್ನು ಮುಂದುವರೆಸಿದ್ದಾರೆ. ಇದಕ್ಕೂ ಮೊದಲು ಕ್ರಿಸ್ಮಸ್ ದಿನದಂದು ಅವರು ಪಾತಲ್ಗಾಂವ್ನ ಕಿಲ್ಕಿಲಾದಲ್ಲಿ 50 ಕ್ರಿಶ್ಚಿಯನ್ ಕುಟುಂಬಗಳನ್ನು ತಮ್ಮ ಮೂಲ ಧರ್ಮಕ್ಕೆ ಕರೆತಂದಿದ್ದರು.
ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದ ದಿಲೀಪ್ ಸಿಂಗ್ ಜುದೇವ್ ಕೂಡ ಕ್ರಿಶ್ಚಿಯನ್ ಮಿಷನರಿಗಳ ಆಮಿಷದಿಂದ ಮತಾಂತರಗೊಂಡ ಬುಡಕಟ್ಟು ಸಮಾಜದ ಆ ಜನರ ಕಾಲು ತೊಳೆದು ಮೂಲ ಧರ್ಮಕ್ಕೆ ಮರಳುವಂತೆ ಮಾಡುತ್ತಿದ್ದರು. ದಿಲೀಪ್ ಸಿಂಗ್ ಜುದೇವ್ ಆಗಸ್ಟ್ 2013 ರಲ್ಲಿ ನಿಧನರಾಗಿದ್ದರು. ಅಂದಿನಿಂದ ಅವರ ಪುತ್ರ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಈ ಪವಿತ್ರ ಕಾರ್ಯವನ್ನ ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ಪ್ರಬಲ್ ಪ್ರತಾಪ್ ಜುದೇವ್, “ನನ್ನ ತಂದೆಯ ಮರಣದ ನಂತರ ನಾನು ಈ ಕೆಲಸವನ್ನು ಮುಂದುವರಿಸುತ್ತಿದ್ದೇನೆ. ಛತ್ತೀಸ್ಗಢ, ಜಾರ್ಖಂಡ್ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ನಾವು 10,000 ಕ್ಕೂ ಹೆಚ್ಚು ಜನರನ್ನು ಸನಾತನ ್ದ ಹಿಂದಿರುಗಿಸಿದ್ದೇವೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ನಮ್ಮ ಈ ಅಭಿಯಾನವು ಸುಮಾರು ಎರಡು ವರ್ಷಗಳ ಕಾಲ ಮಧ್ಯದಲ್ಲಿ ನಿಂತುಹೋಯಿತು. ಈಗ ಮತ್ತೆ ನಾವು ಅದನ್ನು ವೇಗಗೊಳಿಸುತ್ತಿದ್ದೇವೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮತಾಂತರದ ಷಡ್ಯಂತ್ರಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಅವರು ಹೇಳಿದ್ದಾರೆ.
ಕ್ರಿಸ್ಮಸ್ ದಿನದಂದೇ ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿದ್ದ 500 ಜನ
ಭಾರತದಲ್ಲಿ ಧಾರ್ಮಿಕ ಮತಾಂತರದ ಕಪ್ಪು ಬಲೆಯಿಂದ ಜನರನ್ನು ರಕ್ಷಿಸುವ ಸಲುವಾಗಿ, ಅನೇಕ ಘರ್ ವಾಪ್ಸಿ ಅಭಿಯಾನಗಳನ್ನು ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಅದೇ ಅನುಕ್ರಮದಲ್ಲಿ, ಇತ್ತೀಚೆಗೆ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಶಾಸ್ತ್ರಿ ಅವರು ದಮೋಹ್ನಲ್ಲಿ ನಡೆಯುತ್ತಿರುವ ರಾಮಕಥಾದಲ್ಲಿ ಭಾಗವಹಿಸಲು ಬಂದಿದ್ದ 300 ಜನರು ಡಿಸೆಂಬರ್ 25, 2022 ರಂದು ಸನಾತನ ಧರ್ಮಕ್ಕೆ ಹಿಂದಿರುಗಿದರು. ಅದೇ ಸಮಯದಲ್ಲಿ, ಅಖಿಲ ಭಾರತ ಘರ್ ವಾಪ್ಸಿಯ ಮುಖ್ಯಸ್ಥರಾದ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಛತ್ತೀಸ್ಗಢದ ಜಶ್ಪುರದಲ್ಲಿ ನಡೆದ ಬೃಹತ್ ಹಿಂದೂ ಸಮ್ಮೇಳನದಲ್ಲಿ 50 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ಮಿಷನರಿಗಳು ಸಂತ್ರಸ್ತರನ್ನ ಹೇಗೆ ಆಮಿಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಯಿತು ಎಂಬುದನ್ನು ತಿಳಿಸಿದರು.
300 ಜನರನ್ನು ಘರ್ವಾಪಸಿ ಮಾಡಿಸಿದ ಬಾಗೇಶ್ವರ್ ಧಾಮ್ ಸರ್ಕಾರ್
ಡಿಸೆಂಬರ್ 25 ರಂದು ದಮೋಹ್ನ ಕೃಷ್ಣಾ ಹೈಟ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಡಿತ್ ಧೀರೇಂದ್ರ ಶಾಸ್ತ್ರಿ 250-300 ಜನರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದೂ ಧರ್ಮವನ್ನು ಸ್ವೀಕರಿಸಲು ಯಾರಾದರೂ ನಿಮ್ಮನ್ನ ಬಲವಂತ ಮಾಡಿದರೇ? ಎಂದು ಅವರು ಮೊದಲು ಕೇಳಿದರು. ಇದನ್ನು ಅಲ್ಲಿದ್ದ ಜನ ಇಲ್ಲ ಎಂದು ಹೇಳುತ್ತ, ಏನೇ ಆಗಲಿ ನಾವು ಈಗ ನಮ್ಮ ಮೂಲ ಸನಾತನ ಧರ್ಮವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿ ಎಂದರು. ಧೀರೇಂದ್ರ ಶಾಸ್ತ್ರಿ ಅವರಿಗೆ ವಿವರಿಸಿದ ಅವರು, ನಮ್ಮ ಸಂತರು, ಪೂರ್ವಜರು ಸನಾತನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರೂ ಅನ್ಯ ಧರ್ಮಕ್ಕೆ ಮತಾಂತರವಾಗಲಿಲ್ಲ ಎಂದರು.
सनातन धर्म से विमुख हुए लोगो की घर-वापसी…
पूज्य सरकार के श्रीराम कथा दमोह के मंच पर आज एक अकल्पनीय कार्य हुआ…क़रीब २५० लोग जो विदेशी ताकत के साज़िश के तहत धर्मपरिवर्तन कर चुके थे उनकी घर वापसी पूज्य सरकार के सदप्रयास से हुआ…सनातन की अलख जागृति में ये सार्थक पहल है… pic.twitter.com/HG5fzYzDVK— Bageshwar Dham Sarkar (Official) (@bageshwardham) December 25, 2022
ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಯಾವ ದುರಾಸೆಯಿಂದ ಹಿಂದೂ ಧರ್ಮದಿಂದ ನಿಮ್ಮನ್ನ ಮತಾಂತರಗೊಳಿಸಲಾಗಿತ್ತು? ಎಂದು ಪ್ರಶ್ನಿಸಿದರು. ಈ ಕುರಿತು ಯುವಕ ಜಿತೇಂದ್ರ ಮಾತನಾಡಿ, ‘ನಿಮ್ಮ ಮಗುವಿನ ಕಾಲಿಗೆ ಚಿಕಿತ್ಸೆ ಕೊಡಿಸಲಾಗುವುದು’ ಎಂದು ತಂದೆಗೆ ಹೇಳಿದ್ದರು. ಆದರೆ, ಔಷಧಕ್ಕೆ ಒಂದು ರೂಪಾಯಿ ಕೂಡ ಖರ್ಚಾಗಿಲ್ಲ. ಇದಕ್ಕೆ ವಿರುದ್ಧವಾಗಿ, ಮನೆಯಲ್ಲಿ ಯಾರಾದರೂ ಸತ್ತರೂ ಕೂಡ ಅವರು ಭಾನುವಾರ ಚರ್ಚ್ಗೆ ಬರಬೇಕು ಎಂದು ಅವರಿಗೆ ತಿಳಿಸಲಾಗಿತ್ತು ಎಂದರು.
ಆ ಜನರ ಮುಂದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿತ್ತು, ಅದನ್ನ ನಮಗೆ ಸಹಿಸೋಕೆ ಆಗುತ್ತಿರಲಿಲ್ಲ. ಆದರೆ ಎಲ್ಲಿಂದಲೂ ಬೆಂಬಲ ಸಿಗದ ಕಾರಣ ಏನೂ ಮಾಡಲಾಗಲಿಲ್ಲ ಎಂದು ಜಿತೇಂದ್ರ ಹೇಳಿದರು. ಅದೇ ರೀತಿ ಕಾರಿನ ಕಂತು ಕಟ್ಟುವ ಹೆಸರಲ್ಲಿ 1 ಲಕ್ಷದ 32 ಸಾವಿರ ರೂಪಾಯಿ ನೀಡಿ ಚಿಕಿತ್ಸೆಗೆ 60 ಸಾವಿರ ನೀಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಯುವಕನೊಬ್ಬ ಹೇಳಿದ್ದಾನೆ.
शानदार, ज़बरदस्त, ज़िंदाबाद।
क्रिसमस के दिन बागेश्वर धाम सरकार के पंडित धीरेंद्र शास्त्री जी द्वारा 250 ईसाई परिवारों की हिन्दू धर्म मे वापसी। 💪🚩 pic.twitter.com/xuWDLZ3Abi
— Sandhya Yadav (@Sandhyayadav_1) December 26, 2022
ದಮೋಹ್ನಂತೆಯೇ, ಜಶ್ಪುರದಲ್ಲಿಯೂ, ಅಖಿಲ ಭಾರತ ಘರ್ ವಾಪ್ಸಿ ಮುಖ್ಯಸ್ಥ ಸೂರ್ಯ ಪ್ರಬಲ್ ಪ್ರತಾಪ್ ಸಿಂಗ್ ಜೂದೇವ್ ಅವರು ಪತ್ಥಲಗಾಂವ್ನ ಕಿಲ್ಕಿಲಾ ಶಿವ ದೇವಾಲಯದಲ್ಲಿ ಬೃಹತ್ ಹಿಂದೂ ಸಮಾವೇಶವನ್ನು ಆಯೋಜಿಸಿದ್ದರು. ಸ್ವಾಮಿ ಶ್ರದ್ಧಾನಂದ ಸರಸ್ವತಿಯವರ 96 ನೇ ಬಲಿದಾನ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಅಲ್ಲಿ ಅನೇಕ ಸಂತರು ಆಗಮಿಸಿ ವಿಶ್ವ ಕಲ್ಯಾಣ ಮಹಾಯಜ್ಞವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ, ಮೊದಲ ಬಾರಿಗೆ ಜೂದೇವ್ ಶಿವನನ್ನು ಆರಾಧಿಸಿದರು. ಬಳಿಕ ಜೈ ಶ್ರೀರಾಮ್ ಘೋಷಣೆ ಕೂಗಿ 50 ಹಿಂದೂ ಕುಟುಂಬಗಳ ನೂರಾರು ಜನರನ್ನು ಹಿಂದೂ ಧರ್ಮಕ್ಕೆ ಘರ್ವಾಪಸಿ ಮಾಡಿಸಲಾಯಿತು.
ಸ್ವಾಮಿ ಶ್ರದ್ಧಾನಂದರು ಇಲ್ಲದಿದ್ದಲ್ಲಿ ಭಾರತದಾದ್ಯಂತ ಮತಾಂತರ ನಡೆಯುತ್ತಿತ್ತು ಎಂದ ಅವರು, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹಿಂದೂಗಳನ್ನು ಒಗ್ಗೂಡಿಸಲು ಸದಾ ಶ್ರಮಿಸಿದರು. ನನ್ನ ತಂದೆ ದಿವಂಗತ ದಿಲೀಪ್ ಸಿಂಗ್ ಜುದೇವ್ ಅವರು ಶುರು ಮಾಡಿದ್ದ ಈ ಘರ್ವಾಪಸಿ ಕಾರ್ಯಕ್ರಮವನ್ನು ನಾನು ಮುನ್ನಡೆಸುತ್ತಿದ್ದೇನೆ, ಇದರಲ್ಲಿ ನನಗೆ ಬೆಂಬಲ ನೀಡಿದ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಹಿಂದುತ್ವವು ಯಾವುದೇ ಜಾತಿಯ ಸಂಕೇತವಲ್ಲ, ಅದು ರಾಷ್ಟ್ರೀಯತೆಯ ಸಂಕೇತವಾಗಿದೆ, ಹಿಂದೂಗಳು ಕಡಿಮೆಯಾಗಿದ್ದಾರೆ, ದೇಶ ವಿಭಜನೆಯಾಗಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಜುದೇವ್ ಹೇಳಿದರು. ಅದಕ್ಕಾಗಿಯೇ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಹಿಂದೂವನ್ನು ಉಳಿಸುವುದು ದೊಡ್ಡ ಕೆಲಸ ಏಕೆಂದರೆ ಹಿಂದೂ ಮಾತ್ರ ದೇವಾಲಯವನ್ನು ನಿರ್ಮಿಸುತ್ತಾನೆ ಎಂದರು. ಕೊನೆಗೆ, ‘ಈ ಹೇಯ ಮತಾಂತರ ಕೃತ್ಯವನ್ನು ನಿಲ್ಲಿಸಿ ಎಂದು ವಿರೋಧಿಗಳಿಗೆ ಸವಾಲು ಹಾಕುತ್ತೇನೆ, ಇಲ್ಲದಿದ್ದರೆ ಇದರ ದೂರಗಾಮಿ ಪರಿಣಾಮಗಳು ಸಾಕಷ್ಟಿರುತ್ತವೆ’ ಎಂದು ಎಚ್ಚರಿಸಿದರು.