ಮೌಲಾನಾ ಹಾಗು ಆ ಮುಸಲ್ಮಾನರನ್ನ ಶೈತಾನ್ ಎಂದ ಮಮತಾ ಬ್ಯಾನರ್ಜಿ

in Uncategorized 293 views

ಎರಡನೆ ಹಂತದ ಮತದಾನಕ್ಕೂ ಮೊದಲು, ಹಿಂದೂ ವೋಟ್ ಬ್ಯಾಂಕ್‌ನ್ನ ಓಲೈಸಲು ಮಮತಾ ಮೊದಲು ಚಂಡಿಯನ್ನ ಓದಿದರು, ನಂತರ ತನ್ನ ಗೋತ್ರದ ಬಗ್ಗೆಯೂ ಹೇಳಿದರು ಆದರೆ ಈಗ ಮಮತಾ ಬ್ಯಾನರ್ಜಿಯವರ ವರ್ತನೆ ಸ್ವಲ್ಪ ಬದಲಾಗಿದೆ ಎಂದು ತೋರುತ್ತದೆ. ಮಮತಾ ಅವರ ಬಾಡಿ ಲಾಂಗ್ವೇಜ್ ಮತ್ತು ಹೇಳಿಕೆಗಳನ್ನು ನೋಡಿದಾಗ, ತನ್ನ ಹಿಂದೂ ಕಾರ್ಡ್ ವಿಫಲವಾಗಿದೆ ಎಂದು ತಿಳಿದ ಬಳಿಕ ಬಹುಶಃ ಮಮತಾ ಎರಡನೇ ಹಂತದ ಮತದಾನದ ನಂತರ ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ (ಮುಸ್ಲಿಂ ವೋಟ್ ಬ್ಯಾಂಕ್) ಗೆ ಮರಳಲೇಬೇಕಾಯಿತು.

Advertisement

ಮಮತಾ ಬ್ಯಾನರ್ಜಿ, AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರೊಂದಿಗೆ ಎರಡನೇ ಹಂತದ ಮತದಾನದ ನಂತರ ISF ಮುಖಂಡ ಅಬ್ಬಾಸ್ ಸಿದ್ದಿಕಿ ಮೇಲೆ ವಾಗ್ದಾಳಿ ನಡೆಸಿದರು. ರಾಯ್‌ಡೀಹ್ ನಲ್ಲಿ ಟಿಎಂಸಿ ಅಧ್ಯಕ್ಷೆ ಮುಸ್ಲಿಮರಿಗೆ ಮನವಿ ಮಾಡುತ್ತ, “ಬಿಜೆಪಿಯ ಹಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರೋ ‘ಸೈತಾನ’ನ ಮಾತನ್ನ ಕೇಳಬಾರದೆಂದು ನನ್ನ ಅಲ್ಪಸಂಖ್ಯಾತ ಸಹೋದರ ಸಹೋದರಿಯರಿಗೆ ಮನವಿ ಮಾಡುತ್ತೇನೆ!” ಎಂದಿದ್ದಾರೆ

ಅವರು ಮುಂದೆ ಮಾತನಾಡುತ್ತ, ಯಾವ ವ್ಯಕ್ತಿ ಹೈದರಾಬಾದಿನಿಂದ ಬಂದಿದ್ದಾನೋ ಹಾಗು ಫುರಫುರಾ ಶರೀಫ್‌ನ ಒಬ್ಬ ಆ ವ್ಯಕ್ತಿಗೆ ವೋಟ್ ನೀಡಬೇಡಿ ಎಂದಿದ್ದಾರೆ.‌ ಮಮತಾ ಬ್ಯಾನರ್ಜಿ ಈಗ ಮುಸಲ್ಮಾನರನ್ನ‌ ಒಗ್ಗೂಡುವಂತೆ ಹಾಗು ಟಿಎಂಸಿ ಪಕ್ಷಕ್ಕೇ ಮತ ಹಾಕುವಂತೆ ಮನವಿ ಮಾಡಿತ್ತಿದ್ದಾರೆ.

ಅತ್ತ ಎರಡನೆಯ ಹಂತದ ಮತದಾನದ ಬಳಿಕ ಮಮತಾ ಬ್ಯಾನರ್ಜಿಗೆ ತನ್ನ ಮೃದು ಹಿಂದುತ್ವದ ಅವತಾರದಿಂದ ನಷ್ಟವಾಗಿದೆ ಅಂತ ಅರ್ಥವಾಗಿದೆ.‌ ಅವರ ಸಾಫ್ಟ್ ಹಿಂದುತ್ವದ ಮುಖದಿಂದಾಗಿ ತನ್ನ ಪಾರಂಪರಿಕ ವೋಟ್ ಬ್ಯಾಂಕ್ (ಮುಸ್ಲಿಂ ವೋಟ್ ಬ್ಯಾಂಕ್) ನಲ್ಲೂ ನಷ್ಟವಾಗುತ್ತಿದೆ ಎಂಬುದು ಈಗ ಅರ್ಥವಾದಂತಿದೆ. ಮಮತಾ ಬ್ಯಾನರ್ಜಿ ಮೂಲಗಳ ಪ್ರಕಾರ ಅಸದುದ್ದಿನ್ ಓವೈಸಿ ಹಾಗು ಅಬ್ಬಾಸ್ ಸಿದ್ದಿಕಿ ಮಮತಾ ಬ್ಯಾನರ್ಜಿಯ ಹೇಳಿಕೆಗಳ ಸಹಾಯದಿಂದ ಮುಸ್ಲಿಂ ವೋಟ್ ಬ್ಯಾಂಕ್ ನಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.‌ ಮಮತಾ ಬ್ಯಾನರ್ಜಿಯ ಸಾಫ್ಟ್ ಹಿಂದುತ್ವದ ಹೇಳಿಕೆಗಳನ್ನ ಬಳಸಿಕೊಂಡು ಅವರು (ಓವೈಸಿ ಹಾಗು ಸಿದ್ದಿಕಿ) ಮುಸ್ಲಿಮರನ್ನ ಮಮತಾ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಹೊರತಾಗಿ ಹಿಂದೂ ಮತಗಳೂ ಕೂಡ ಮಮತಾ ಬ್ಯಾನರ್ಜಿಯ ಹೇಳಿಕೆಗಳನ್ನ ನಂಬುತ್ತಿಲ್ಲ. ಇದೇ ಕಾರಣದಿಂದಾಗಿ ಮಮತಾ ಕೊನೆಗೂ ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ನ್ನ ವಾಪಸ್ ತನ್ನತ್ತ ಸೆಳೆಯಲು ಓವೈಸಿ ಹಾಗು ಸಿದ್ದಿಕಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇವರಿಬ್ಬರನ್ನೂ ಬಿಜೆಪಿ ಏಜೆಂಟುಗಳಂತ ಕರೆಯುತ್ತ ಮುಸಲ್ಮಾನರು ಒಗ್ಗಟ್ಟಾಗಿ ಟಿಎಂಸಿ ಪಕ್ಷಕ್ಕೇ ಮತ ಹಾಕಬೇಕೆಂದು ಮಮತಾ ಬ್ಯಾನರ್ಜಿ ಮುಸಲ್ಮಾನರಿಗೆ ಮನವಿ ಮಾಡುತ್ತಿದ್ದಾರೆ.

ಮಮತಾ ವಿರುದ್ಧ ಗರಂ ಆದ EC

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಮತದಾನದ ಸಂದರ್ಭದಲ್ಲಿ ಉಂಟಾದ ಎಲ್ಲಾ ಅವಾಂತರಗಳ ಆರೋಪಗಳನ್ನು ಚುನಾವಣಾ ಆಯೋಗ ಸಾರಾಸಗಟಾಗಿ ನಿರಾಕರಿಸಿದೆ. ಮಮತಾ ಅವರ ಕೈಬರಹದ ದೂರನ್ನು ‘ವಾಸ್ತವಿಕವಾಗಿ ತಪ್ಪು’ ಮತ್ತು ‘ಸತ್ಯಕ್ಕೆ ದೂರ’ ಎಂದು ಹೇಳಿರುವ ಆಯೋಗವು ಮಾದರಿ ನೀತಿ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಯೋಚಿಸುತ್ತಿದೆ ಎಂದು ಹೇಳಿದೆ. ಮುಖ್ಯಮಂತ್ರಿ ತನ್ನ ದೂರಿನಲ್ಲಿ ಬೋಯಲ್ ಮಕ್ತಾಬ್ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ನಿಜವಾದ ಮತದಾರರಿಗೆ ಬೂತ್ ಪ್ರವೇಶಿಸಲು ಅವಕಾಶವಿರಲಿಲ್ಲ, ಆದರೆ ಬೂತ್ ಅನ್ನು ಕ್ಯಾಪ್ಚರ್ ಮಾಡಲಾಗಿತ್ತು ಮತ್ತು ಇದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಉಪಸ್ಥಿತಿಯಲ್ಲಿ ಮಾಡಲಾಯಿತು ಎಂದು ಆರೋಪಿಸಿದ್ದರು. ಸ್ಥಳೀಯ ಮತದಾರರು ಈ ಮಾಹಿತಿಯನ್ನು ಮಮತಾ ಅವರಿಗೆ ದೂರವಾಣಿ ಮೂಲಕ ನೀಡಿದಾಗ, ಮುಖ್ಯಮಂತ್ರಿ ಕಾರಿನಲ್ಲಿ ಅಲ್ಲಿಗೆ ಬಂದು ಬೂತ್‌ನ ಹೊರಗೆ ಅವಳ ವ್ಹೀಲ್ ಚೇರ್ ನಲ್ಲಿ ಕುಳಿತು ಒಂದು ಕಾಗದವನ್ನು ತೆಗೆದುಕೊಂಡು ಪೆನ್ನಿನಿಂದ ದೂರು ಬರೆದು ಆಯೋಗಕ್ಕೆ ಕಳುಹಿಸಿದ್ದರು. ನಂತರ ಬಿಎಸ್ಎಫ್ ಜವಾನರು ಅವರನ್ನು ಅಲ್ಲಿಂದ ವಾಪಸ್ ಕಳಿಸಿದ್ದರು.

ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಬಿಎಸ್‌ಎಫ್ ಸಿಬ್ಬಂದಿಗಳ ವಿರುದ್ಧದ ಆರೋಪಗಳು ‘ಸತ್ಯಕ್ಕೆ ದೂರವಾಗಿವೆ’ ಎಂದು ಚುನಾವಣಾ ಆಯೋಗ ಹೇಳಿದೆ. ಬೆಳಿಗ್ಗೆ 5.30 ಕ್ಕೆ ನಂದಿಗ್ರಾಮದ ಬೋಯಲ್ ಮತದಾನ ಕೇಂದ್ರದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು ಮತ್ತು ಏಪ್ರಿಲ್ 1 ರಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಮಾಕ್ ಡ್ರಿಲ್ ಸಮಯದಲ್ಲಿ ಬಿಜೆಪಿ, ಸಿಪಿಐ (ಎಂ) ಮತ್ತು ಪಕ್ಷೇತರ ಅಭ್ಯರ್ಥಿಯ ಪೋಲಿಂಗ್ ಏಜೆಂಟ್ ಗಳು ಬೋಯಲ್ ಮತದಾನ ಕೇಂದ್ರದೊಳಗೆ ಉಪಸ್ಥಿತರಿದ್ದರು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ತೃಣಮೂಲ ಕಾಂಗ್ರೆಸ್ ನ ಪೋಲಿಂಗ್ ಏಜೆಂಟ್ ಮಾತ್ರ ಅಲ್ಲಿ ಕಾಣಲೇ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಆಯೋಗವು ತನ್ನ ಪತ್ರದಲ್ಲಿ, “ಮತದಾನದ ಏಜೆಂಟ್ ಆಗಿ ಕೆಲಸ ಮಾಡಲು ಯಾವುದೇ ಇಷ್ಟವಿಲ್ಲದವರನ್ನು ECI ಒತ್ತಾಯಿಸಲು ಸಾಧ್ಯವಿಲ್ಲ” ಎಂದಿದೆ. ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಅವರು ಹಾಗು ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಪ್ರತಿಕ್ರಿಯೆ ಪಕ್ಷಪಾತ ಮತ್ತು ಆಯೋಗವು ‘ಪಕ್ಷಪಾತದ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಪದೇ ಆರೋಪಿಸುತ್ತಿದೆ.

“ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಎಂದು ಆಯೋಗವು ಹೇಗೆ ನಿರಾಕರಿಸಬಹುದು, ಆದರೆ ಇದರ ಹೊರತಾಗಿಯೂ, ಬಿಜೆಪಿ ಬೆಂಬಲಿಗರು ಬೋಯಲ್‌ನಲ್ಲಿನ ಮತದಾನ ಕೇಂದ್ರಕ್ಕೆ ಬಹಳ ಹತ್ತಿರ ಜಮಾಯಿಸಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಆ ನಿರ್ದಿಷ್ಟ ದಿನ ಏನಾಯಿತು ಎಂದು ಬಂಗಾಳದ ಜನರು ನೋಡಿದ್ದಾರೆ” ಎಂದು ಕುನಾಲ್ ಘೋಷ್ ಹೇಳಿದ್ದಾರೆ

Advertisement
Share this on...