ಯಾವುದೋ ಗುಂಗಿನಲ್ಲಿ ಒಂದೇ ಬಾರಿಗೆ ಎರಡೂ ಡೋಸ್ ವ್ಯಾಕ್ಸಿನ್ ಕೊಟ್ಟ ನರ್ಸ್: ಬಳಿಕ ಆಗಿದ್ದೇ ಅನಾಹುತ

in Helath-Arogya/Kannada News/News 1,375 views

ಲಖನೌ: ಕರೊನಾ ಲಸಿಕೆಯ ಎರಡು ಡೋಸ್‌ಗಳ ನಡುವೆ ಒಂದಿಷ್ಟು ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಬಗ್ಗೆ ಇದಾಗಲೇ ಆರೋಗ್ಯ ಇಲಾಖೆ ಪ್ರಕಟಣೆ ನೀಡುತ್ತಾ ಬಂದಿದೆ. ಆದರೆ ಇಲ್ಲೊಬ್ಬ ನರ್ಸ್‌ ಯಾವುದೋ ಮೂಡ್‌ನಲ್ಲಿ ಎರಡೂ ಡೋಸ್‌ ಒಟ್ಟಿಗೆ ಕೊಟ್ಟು ಬಿಟ್ಟು ಎಡವಟ್ಟು ಮಾಡಿದ್ದಾರೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂನಲ್ಲಿ. ಐದು ನಿಮಿಷಗಳ ಅಂತರದಲ್ಲೇ ಎರಡೂ ಡೋಸ್‌ಗಳನ್ನು ನೀಡಿದ್ದಾರೆ ನರ್ಸ್‌. ಲಸಿಕೆ ಹಾಕುವಾಗ ಮಾತುಕತೆಯಲ್ಲಿ ನಿರತರಾಗಿದ್ದ ನರ್ಸ್‌ನಿಂದ ಈ ಎಡವಟ್ಟು ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಲಸಿಕೆ ಹಾಕಿಸಿಕೊಂಡು ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ಮನೆಯವರು ಕಂಗಾಲಾಗಿದ್ದಾರೆ. ಆಗ ಅವರಿಗೆ ಎರಡು ಡೋಸ್‌ ನೀಡಿರುವುದು ತಿಳಿದಿದೆ. ಲಸಿಕೆ ಹಾಕಿಸಿಕೊಳ್ಳುವಾಗ ಎರಡು ಬಾರಿ ಹಾಕಿದ್ದರೂ ಇದು ಎರಡು ಬಾರಿಯ ಡೋಸ್‌ಗಳು ಎಂದು ನನಗೆ ತಿಳಿಯಲಿಲ್ಲ. ಹೀಗೆಯೇ ಲಸಿಕೆ ಹಾಕುವುದು ಎಂದುಕೊಂಡಿದ್ದೆ. ನಂತರ ಮನೆಯವರಲ್ಲಿ ವಿಷಯ ತಿಳಿಸಿದಾಗ ಎರಡೂ ಡೋಸ್‌ ಒಟ್ಟಿಗೇ ಕೊಟ್ಟಿರುವುದು ತಿಳಿದಿದೆ ಎಂದು ವ್ಯಕ್ತಿ ಹೇಳಿದ್ದಾರೆ.

ಕೂಡಲೇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಲಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಅಂಥ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಇದು ಕರ್ತವ್ಯಲೋಪ. ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು, ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಬ್ಬ ವ್ಯಕ್ತಿಗೆ ಎರಡು ಬೇರೆ ಬೇರೆ ವ್ಯಾಕ್ಸಿನ್ ನೀಡಿದರೆ ಏನಾಗುತ್ತೆ? ಇದರಿಂದ ಅಡ್ಡಪರಿಣಾಮಗಳಾಗುತ್ತಾ? ಕೇಂದ್ರ ಸರ್ಕಾರ ಕೊಟ್ಟ ಉತ್ತರವೇನು ಗೊತ್ತಾ?

ಉತ್ತರ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಬಹುತೇಕ ಮಂದಿಗೆ ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ನೀಡಿರುವ ವಿಚಾರ ಬಹಳ ವಿವಾದಕ್ಕೆ ಕಾರಣವಾಗಿತ್ತು.

ಕೋವಿಡ್​ ವಿರುದ್ಧ ಹೋರಾಟದ ವಿರುದ್ಧ ಸದ್ಯ ದೇಶದಲ್ಲಿ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಅವು ಒಂದು ಕೋವಿಶೀಲ್ಡ್​ ಮತ್ತೊಂದು ಕೋವಾಕ್ಸಿನ್​. ಎರಡು ಡೋಸ್​ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ.

ಈ ನಡುವೆ ಬಹುತೇಕರಿಗೆ ಇರುವ ಅನುಮಾನ ಎಂದರೆ ಮೊದಲ ಡೋಸ್​ನಲ್ಲಿ ಒಂದು ಲಸಿಕೆ ಮತ್ತೊಂದು ಡೋಸ್​ನಲ್ಲಿ ಬೇರೆ ಕಂಪನಿಯ ಲಸಿಕೆ ಪಡೆಯಬಹುದೇ ಎಂಬುದು.

ಲಸಿಕೆ ಕೊರತೆ ಇರುವ ಹಿನ್ನಲೆ ಅನೇಕರು ಕೂಡ ಈ ರೀತಿ ಎರಡು ವಿಭಿನ್ನ ಲಸಿಕೆ ಪ್ರಯೋಗ ನಡೆಸುವ ಕುರಿತು ಚಿಂತನೆ ನಡೆಸಿದ್ದರು. ಈ ಮೂಲಕ ವೈರಸ್​ ವಿರುದ್ಧ ಹೋರಾಡಲು ಇವು ಸಹಕರಿಯಾಗುತ್ತವೆಯೇ ಎಂಬ ಕುರಿತು ಚರ್ಚೆ ನಡೆದಿದ್ದವು. ಈ ಕುರಿತು ಅಧ್ಯಯನ ನಡೆಸಿದ ತಂಡ, ಈ ರೀತಿ ವಿಭಿನ್ನ ಲಸಿಕೆ ಪಡೆದರೆ ರೋಗಿಗಳ ಮೇಲೆ ಇದು ಅಡ್ಡ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ವ್ಯತಿರಿಕ್ತ ಪರಿಣಾಮ

ಎರಡು ಪ್ರತ್ಯೇಕ ಕೋವಿಡ್ ಲಸಿಕೆಯ ಡೋಸ್‌ಗಳನ್ನು ಪಡೆದಾಗ ಯಾವುದೇ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಈ ದೃಢವಾದ ಅಭಿಪ್ರಾಯಕ್ಕೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆ ಅಗತ್ಯವಾಗಿದೆ, ಅಸ್ತಿತ್ವದಲ್ಲಿರುವ ಪ್ರೋಟೋಕಾಲ್ ಪ್ರಕಾರ ಒಬ್ಬ ವ್ಯಕ್ತಿಗೆ ನೀಡಲಾಗುವ ಎರಡೂ ಡೋಸ್ ಗಳು ಒಂದೇ ಲಸಿಕೆಯಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶದ ಸಿದ್ದಾರ್ಥ ನಗರ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಶೀಲ್ಡ್ ಮೊದಲ ಡೋಸ್ ಪಡೆದಿದ್ದ 20 ಗ್ರಾಮಸ್ಥರಿಗೆ ಕೋವಾಕ್ಸಿನ್ ಎರಡನೇ ಡೋಸ್ ನೀಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ರೀತಿಯ ಸ್ಪಷ್ಟನೆ ನೀಡಿದೆ.

ಆತಂಕಕ್ಕೆ ಕಾರಣವಾಗಬಾರದು

ಉತ್ತರ ಪ್ರದೇಶ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಅಂತಹ ಘಟನೆ ಸಂಭವಿಸಿದ್ದರೆ, ಇದು ವ್ಯಕ್ತಿಯ ಆತಂಕಕ್ಕೆ ಕಾರಣವಾಗಬಾರದು, ಆದರೆ ಅದೇ ಲಸಿಕೆಯ ಎರಡನೇ ಡೋಸ್ ನೀಡುವಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಿದರು.

ಈ ಕುರಿತು ವರದಿ ಪ್ರಕಟಿಸಿರುವ ಬ್ಲೂಮ್​ಬರ್ಗ್​​, ಅಸ್ಟ್ರಾಜೆನೆಕಾ ಮೊದಲ ಡೋಸ್​ ಪಡೆದು ನಾಲ್ಕು ವಾರಗಳ ಬಳಿಕ ಫೈಜರ್​​ ಲಸಿಕೆ ಪಡೆದರೆ ಇವು ಅಡ್ಡಪರಿಣಾಮ ಬೀರಲಿದೆ. ಆದರೆ, ಇದು ತೀವ್ರ ಸ್ವರೂಪದ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಆಕ್ಸಫರ್ಡ್​ ವಿಶ್ವವಿದ್ಯಾಲಯ ಸಂಶೋಧಕರು ತಿಳಿಸಿದ್ದಾರೆ.

ಫ್ರಾನ್ಸ್​ನಲ್ಲಿ ಆಸ್ಟ್ರಾ ಲಸಿಕೆಯನ್ನು ನಿರ್ಬಂಧಿಸುವ ಮೊದಲೇ ಹಿರಿಯ ನಾಗರೀಕರಿಗೆ ಈ ಲಸಿಕೆಯನ್ನು ನೀಡಲಾಗಿತ್ತು. ಬಳಿಕ ಎರಡನೇ ಡೋಸ್​ನಲ್ಲಿ ಫೈಜರ್​ ಲಸಿಕೆಯನ್ನು ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕ್ಸ್​ಫರ್ಡ್​ ಪೀಡಿಯಾಟ್ರಿಕ್ಸ್​ ಮತ್ತು ವಾಕ್ಸಿನಾಲಜಿ ಪ್ರೋ ಮ್ಯಾಥ್ಯೂ ಸ್ನಾಪ್​, ಇದೊಂದು ಆಸಕ್ತಿಕಾರಕ ಸಂಶೋಧನೆ ಅಂಶವಾಗಿದ್ದು, ಇದು ನಾವು ನಿರೀಕ್ಷಿಸದ ವಿಷಯವಾಗಿದೆ ಎಂದಿದ್ದಾರೆ.

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿರಲಿ ಅಥವಾ ಇಲ್ಲದಿರಲಿ ಈ ಕುರಿತು ನಾವು ಶೀಘ್ರದಲ್ಲಿ ಉತ್ತರ ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

ಈ ನಡುವೆ ಮೂರನೇ ಹಂತದ 18-44 ವರ್ಷದವರಿಗೆ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಈ ಕಾರ್ಯ ಆರಂಭದಲ್ಲಿಯೇ ಸಾಕಷ್ಟು ಗೊಂದಲ ಮೂಡಿಸಿದೆ. ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕೆ ಕಾರ್ಯ ಸ್ಥಗಿತಗೊಂಡಿದೆ.

ಈಗಾಗಲೇ ಎರಡು ಹಂತದ ಲಸಿಕೆ ವಿತರಣೆ ಕಾರ್ಯ ದೇಶದಲ್ಲಿ ಯಶಸ್ವಿಯಾಗಿ ನಡೆದಿದ್ದು, ಮೂರನೇ ಹಂತದ ಲಸಿಕೆ ವಿತರಣೆ ಕಾರ್ಯ ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಮೂರನೇ ಹಂತದ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಮೇ. 1 ರಿಂದ ಚಾಲನೆ ನೀಡಿದೆಯಾದರೂ ಹಲವು ರಾಜ್ಯಗಳಲ್ಲಿ ಅಗತ್ಯ ಲಸಿಕೆಯೇ ಇಲ್ಲ.

ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಲಸಿಕೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಎರಡನೇ ಹಂತದ ಲಸಿಕೆ ಅಂದರೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್​ ನೀಡಲಾಗಿದ್ದು, ಎರಡನೇ ಡೋಸ್​ಗೆ ಲಸಿಕೆ ಕೊರತೆ ಕಂಡು ಬಂದಿದೆ.

Advertisement
Share this on...