ರಜೆಗೆ ಮನೆಗೆ ಮರಳಿದ್ದ ಯೋಧನ ಪ್ರಾಣವನ್ನೇ ತೆಗೆದ ರಾಜಕೀಯ ದುರುಳರು: ಎಲ್ಲೆಡೆ ಭಾರೀ ಆಕ್ರೋಶ

in Uncategorized 491 views

ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಾರತೀಯ ಸೇನೆಯ ಯೋಧನನ್ನು ಅಟ್ಟಾಡಿಸಿ ಹೊ ಡೆ ದು ಕೊಂ ದಿ ದ್ದಾರೆ. ವರದಿಗಳ ಪ್ರಕಾರ, ರಜೆಯ ಮೇಲೆ ಊರಿಗೆ ಮರಳಿದ್ದ ಯೋಧ ಪ್ರಭು ತಮ್ಮ ಮನೆಯಲ್ಲಿದ್ದಾಗ ಅವರ ಹಿರಿಯ ಸಹೋದರ ಪ್ರಭಾಕರನ್ ಅವರ ಜೊತೆ DMK ಕೌನ್ಸಿಲರ್ ಆರ್.ಕೆ. ಚಿನ್ನಸಾಮಿ ಜತೆ ವಾಗ್ವಾದ ನಡೆದಿದೆ. ಇದಾದ ನಂತರ ಚಿನ್ನಸಾಮಿ ಮತ್ತು ಆತನ 8 ಮಂದಿ ಸಹಚರರು ಪ್ರಭು ಮೇಲೆ ಹ ಲ್ಲೆ ನಡೆಸಿ ಅಮಾನುಷವಾಗಿ ಥ ಳಿ ಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃ ತ ಪಟ್ಟಿದ್ದಾರೆ. ಪೊಲೀಸರು ಇದುವರೆಗೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾದ DMK ಅಧಿಕಾರದಲ್ಲಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಮೌನ ವಹಿಸಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

Advertisement

ಕೃಷ್ಣಗಿರಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, 2023ರ ಫೆ.8ರಂದು ಮಧ್ಯಾಹ್ನ ಪ್ರಭು ಮತ್ತು ಪ್ರಭಾಕರನ್ ಸ್ಥಳೀಯ ಕೌನ್ಸಿಲರ್ ಚಿನ್ನಸಾಮಿ ಜತೆ ಜಗಳ ಮಾಡಿಕೊಂಡಿದ್ದರು. ನೀರಿನ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿವಾದ ಸ್ಥಳೀಯರ ಮಧ್ಯಸ್ಥಿಕೆಯಿಂದ ಬಗೆಹರಿದಿತ್ತು. ಅದೇ ದಿನ ಸಂಜೆ ಚಿನ್ನಸಾಮಿ 8 ಮಂದಿ ಸಹಚರರೊಂದಿಗೆ ಪ್ರಭು ಮತ್ತು ಪ್ರಭಾಕರನ್ ಅವರ ಮನೆಗೆ ಬಂದಿದ್ದರು. ಇಬ್ಬರೂ ಸಹೋದರರ ಮೇಲೆ ಹ ಲ್ಲೆ ನಡೆಸಿದ್ದಾರೆ. ಈ ದಾ ಳಿ ಯಲ್ಲಿ ಪ್ರಭು ಅವರ ತ ಲೆ ಗೆ ಪೆ ಟ್ಟಾ ಗಿದೆ. ಗಾಯಗೊಂಡ ಪ್ರಭು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮಂಗಳವಾರ (ಫೆಬ್ರವರಿ 14, 2023) ರಾತ್ರಿ ನಿ ಧ ನ ರಾಗಿದ್ದಾರೆ.

ಯೋಧನ ಸಾವಿನ ನಂತರ ಬಿಜೆಪಿ ಮತ್ತು AIADMKಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನ ಎತ್ತಿವೆ. DMK ಅಧಿಕಾರದಲ್ಲಿದ್ದಾಗಲೆಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಸೇ ನೆ ಯ ಸಿಬ್ಬಂದಿಯೂ ಸಾ ಯು ತ್ತಿ ದ್ದಾರೆ ಎಂಬ ಅಂಶದಿಂದ ಇದನ್ನು ಅಳೆಯಬಹುದು ಎಂದು AIADMK ವಕ್ತಾರ ಕೋವೈ ಸತ್ಯನ್ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೂಡ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ. “ಡಿಎಂಕೆ ಕಾರ್ಪೊರೇಟರ್‌ನಿಂದ ಯೋಧನ ಹ ತ್ಯೆ ಯ ಸುದ್ದಿ ಕೇಳಿ ಆಘಾತವಾಯಿತು. ಡಿಎಂಕೆ ಆಡಳಿತದಲ್ಲಿ ತಮ್ಮ ತಮ್ಮ ಹಳ್ಳಿಗಳಲ್ಲಿಯೂ ಸೈನಿಕರು ಸುರಕ್ಷಿತವಾಗಿಲ್ಲ. ದೇಶದ ಗಡಿ ಕಾಯುವ ಸೈನಿಕರ ಕುಟುಂಬಗಳಿಗೆ ಬೆದರಿಕೆ, ದಾ ಳಿ, ಹ‌ ತ್ಯೆ ಮಾಡುವ ಮಟ್ಟಕ್ಕೆ DMK ಹೋಗಿದೆ” ಎಂದು ಬರೆದುಕೊಂಡಿದ್ದಾರೆ.

ಯೋಧ ಪ್ರಭು ಸಾ ವಿ ನ ಬಳಿಕ ಕೌನ್ಸಿಲರ್ ಚಿನ್ನಸಾಮಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ದಾ ಳಿ ಕೋ‌ ರರಲ್ಲಿ ಅವರ ಮಗ ರಾಜಪಾಂಡಿ ಮತ್ತು ಗುರು ಸೂರ್ಯಮೂರ್ತಿ ಕೂಡ ಇದ್ದರು. ಈತನ ಹೊರತಾಗಿ ಇತರೆ ಆರೋಪಿಗಳು ಚಿನ್ನಸಾಮಿಯ ಸಂಬಂಧಿಕರು ಎನ್ನಲಾಗಿದೆ. ಸ್ಥಳೀಯ ಪೊಲೀಸರು ಕೊ ಲೆ ಪ್ರಕರಣ ದಾಖಲಿಸಿಕೊಂಡು ಚಿನ್ನಸಾಮಿ ಪುತ್ರ ರಾಜಪಾಂಡಿ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಚಿನ್ನಸಾಮಿ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

Advertisement
Share this on...