ರಾಖಿ ಸಾವಂತ್ ಜೊತೆ ನಿಕಾಹ್ ಮುರಿದುಕೊಂಡಿದ್ದ #ಆದಿಲ್ ಗೆ ಬಂತು ಸಲ್ಮಾನ್ ಖಾನ್ ಫೋನ್: ಕೈ ಮುಗಿದು ಕಣ್ಣೀರಿಟ್ಟ ಆದಿಲ್, ಅಷ್ಟಕ್ಕೂ ಫೋನ್‌ನಲ್ಲಿ ಸಲ್ಮಾನ್ ಹೇಳಿದ್ದೇನು ನೋಡಿ

in Uncategorized 5,731 views

ಆದಿಲ್ ಖಾನ್ ದುರಾನಿ ರಾಖಿ ಸಾವಂತ್ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿದ್ದಾನೆ. ಸಲ್ಮಾನ್ ಖಾನ್ ಅವರಿಂದ ಕರೆ ಬಂದ ನಂತರ ಇದು ಸಂಭವಿಸಿದೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಆದಿಲ್ ಕೂಡ ಸಲ್ಮಾನ್ ಖಾನ್ ರಿಂದ ಬಂದ ಫೋನ್ ನ್ನ ರೀಸಿವ್ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದಾನೆ. ಇದಕ್ಕೂ ಮೊದಲು, ರಾಖಿ ಸಾವಂತ್ ಆರೋಪಗಳನ್ನ ತಿರಸ್ಕರಿಸಿದ ಆದಿಲ್, ಅವಳೊಂದಿಗೆ ನಿಕಾಹ್ ಮಾಡಿಕೊಳ್ಳಲು ನಿರಾಕರಿಸಿದ್ದ‌.

Advertisement

ಇದೀಗ ರಾಖಿ ಸಾವಂತ್ ಹಾಗೂ ಆದಿಲ್‌ನ ವಿಡಿಯೋ ಹೊರಬಿದ್ದಿದೆ. ಈ ವೇಳೆ ಪಾಪರಾಜಿ ಜೊತೆ ಮಾತನಾಡಿರುವ ರಾಖಿ, ಸಲ್ಮಾನ್ ಖಾನ್ ಆದಿಲ್ ನನ್ನ ತುಂಬಾ ಪ್ರೀತಿಸುತ್ತಾರೆ. ಆದಿಲ್ ಸಲ್ಮಾನ್ ಭಾಯಿಯನ್ನೂ ಭೇಟಿಯಾಗಿದ್ದಾನೆ. ಖಂಡಿತವಾಗಿಯೂ ಅವನು ತನ್ನ ಭಾಯಿಜಾನ್ (ಸಲ್ಮಾನ್ ಖಾನ್) ಕರೆಯನ್ನು ಸ್ವೀಕರಿಸಿದ್ದಾನೆ. ಭಾಯ್ ಇದ್ದರೆ ಆತ ತನ್ನ ಸಹೋದರಿಯನ್ನು ಆದಿಲ್ ಮದುವೆಯಾಗಲು ನಿರಾಕರಿಸಬಹುದೇ? ಭಾಯ್ ಫೋನ್ ಬಂದ್ರೆ ಮಾತ್ರ ಏನಾದರೂ ಆಗಲು ಸಾಧ್ಯ ತಾನೆ. ಸಲ್ಮಾನ್ ಭಾಯ್ ಅವರಿಂದ ಕರೆ ಬಂದಿತ್ತೋ ಇಲ್ವೊ ಆದಿಲ್‌ನ ಕೇಳಿ. ಅವರು ನನ್ನ ಭಾಯ್.

ರಾಖಿಯ ಮಾತಿಗೆ ಹೌದು ಎಂದು ತಲೆಯಾಡಿಸಿದ ಆದಿಲ್ ಖಾನ್ ದುರಾನಿ, “ಸಲ್ಮಾನ್ ಖಾನ್ ಅವರ ಫೋನ್ ಬಂದಿತ್ತು. ಏನೇ ಆಗಲಿ ಸ್ವೀಕರಿಸಿ ಎಂದು ಹೇಳಿದರು. ನೀವು ಸ್ವೀಕರಿಸಲು ಬಯಸಿದರೆ ಹಾಗೆ ಮಾಡಿ, ಇಲ್ಲದಿದ್ದರೆ ನಿರಾಕರಿಸಿ. ಆದರೆ ಸತ್ಯವನ್ನು ಒಪ್ಪಿಕೊಳ್ಳಿ ಮತ್ತು ಅದನ್ನು ಎದುರಿಸಿ ಎಂದರು” ಎಂದಿದ್ದಾನೆ.

ಈ ಬಗ್ಗೆ ಪಾಪರಾಜಿ ಆದಿಲ್‌ಗೆ ಯಾರಿಂದಲಾದರೂ ಒತ್ತಡವಿದೆಯೇ ಎಂದು ಕೇಳಿದರು. ಆಗ ರಾಖಿ, “ಬೇರೆಯವರ ಪ್ರೆಶರ್ ಬಂತು ಅಂತ ಒಪ್ಪಿಕೊಂಡಿದೀಯ, ಸ್ವಲ್ಪ ಹೆಂಡತಿಯ ಪ್ರೆಶರ್ ಕೂಡ ಒಪ್ಪಿಕೊಳ್ಳೋ” ಎಂದು ಉತ್ತರಿಸಿದ್ದಾರೆ.

ಅದೇ ಸಮಯದಲ್ಲಿ, ಮತ್ತೊಂದು ವೀಡಿಯೊದಲ್ಲಿ, ರಾಖಿ ಮತ್ತು ಆದಿಲ್ ಮದುವೆಯನ್ನು ಒಪ್ಪಿಕೊಳ್ಳುತ್ತಾರೆ. ರಾಖಿ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿರುವುದಾಗಿ ಆದಿಲ್ ಹೇಳಿದ್ದಾನೆ. ಇದರೊಂದಿಗೆ ಆದಿಲ್ ಕೂಡ ಕೈಮುಗಿದು ರಾಖಿಗೆ ಕ್ಷಮೆ ಯಾಚಿಸಿದ್ದಾನೆ. ಆದರೆ, ರಾಖಿ, “ಸಲ್ಮಾನ್ ಖಾನ್ ನನ್ನ ಜೀವನವನ್ನ ಮತ್ತೆ ಸರಿ ಮಾಡಿದರು. ಆದಿಲ್, ನನ್ನ ಪತಿ ಒಪ್ಪಿದ್ದಾರೆ. ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳು. ನನ್ನ ಕಡೆಯಿಂದ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾಳೆ.

ಇದಕ್ಕೂ ಮುನ್ನ ‘ಜೂಮ್’ ಎಂಬ ಎಂಟರ್ಟೈನ್ಮೆಂಟ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ರಾಖಿ ಸಾವಂತ್, “ನೋಡಿ, ನಾನು ಅದರ ಬಗ್ಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಆದಿಲ್ ನನ್ನನ್ನು ಒಪ್ಪಿಕೊಳ್ಳದಿದ್ದರೆ ಲವ್ ಜಿಹಾದ್ ನಡೆಯುವುದು ಖಚಿತ. ಅವನು ನನ್ನನ್ನು ಒಪ್ಪಿಕೊಂಡರೆ ಪ್ರೇಮ ವಿವಾಹವಾಗುತ್ತದೆ. ನಿಕಾಹ್ ಆಗುತ್ತೆ” ಎಂದಿದ್ದಳು.

ಇಂಟರ್‌ವ್ಯೂ ನಲ್ಲಿ ರಾಖಿ ಸಾವಂತ್ ಏನಂದಿದ್ದಳು?

ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬುಧವಾರ (ಜನವರಿ 11, 2023), ರಾಖಿ ಸಾವಂತ್ ಮತ್ತು ಆಕೆಯ ಬಾಯ್ ಫ್ರೆಂಡ್ ಆದಿಲ್ ಖಾನ್ ದುರಾನಿ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಆದಿಲ್ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯ ಫೋಟೋವನ್ನು ವೈರಲ್ ಮಾಡಿದ್ದೇನೆ ಎಂದು ರಾಖಿ ನಂತರ ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಖಿ ಹರಾಂ ಮಾಡದೆ ಹಲಾಲ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದಿಲ್ ಏಕೆ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ವೀಡಿಯೋದಲ್ಲಿ ಆದಿಲ್ ತನ್ನನ್ನು ಮದುವೆಯಾಗಲು ನಿರಾಕರಿಸಿದ ಬಗ್ಗೆ ಕೇಳಿದಾಗ, ರಾಖಿ ಸಾವಂತ್ ಮಾತನಾಡುತ್ತ, “ಅವನೇನು ಹುಚ್ಚನೇ?. ಮದುವೆಯ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇನೆ. ಮೌಲಾನಾ ನಿಕಾಹ್ ಮಾಡಿಸಿದ್ದ, ಆ ಪುರಾವೆಗಳನ್ನು ಸಹ ನೀಡಿದ್ದೇನೆ. ಇದಕ್ಕಿಂತ ಇನ್ನೇನು ಪುರಾವೆ ಕೊಡಲಿ. ಎಲ್ಲವನ್ನೂ ಬಿಟ್ಟು ಅವನನ್ನು ನಂಬಿ ಮದುವೆಯಾದೆ. ಮದುವೆಯ ಬಗ್ಗೆ ಒಂದು ವರ್ಷ ಸುಮ್ಮನಿರಲು ಆದಿಲ್ ನನ್ನನ್ನು ಕೇಳಿದನು. ನಾನು ಏಳು ತಿಂಗಳ ಕಾಲ ಮೌನವಾಗಿದ್ದೆ, ಆದರೆ ನಾನು ಬಿಗ್ ಬಾಸ್‌ನಿಂದ ಹೊರಬಂದ ನಂತರ ನನ್ನ ಸಹನೆಗೆ ಮೀರಿದ ಘಟನೆ ನಡೆದಿದೆ. ಅದಕ್ಕೇ ಫೋಟೋ ವೈರಲ್ ಮಾಡಿದ್ದೇನೆ. ನನಗೆ ತುಂಬಾ ಭಯವಾಯಿತು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ, ಆ ತರಹ ನಡೆಯುವುದು ನನಗೆ ಇಷ್ಟವಿರಲಿಲ್ಲ” ಎಂದಿದ್ದಾರೆ.

ರಾಖಿ ಸಾವಂತ್ ಮುಂದೆ ಮಾತನಾಡುತ್ತ, “ಆದಿಲ್ ನನ್ನನ್ನು ಪ್ರೀತಿಸುತ್ತಾನೆ ಆದರೆ ಅವನ ಫ್ಯಾಮಿಲಿಯಿಂದ ಆತನಿಗೆ ಅದೇನು ಒತ್ತಡ ಬರುತ್ತಿದೆಯೋ ಗೊತ್ತಿಲ್ಲ. ಆದರೆ ಇದರಲ್ಲಿ ನನ್ನ ತಪ್ಪೇನು? ನಾನು ನನ್ನ ಹೆಸರನ್ನು ಬದಲಾಯಿಸಿಕೊಂಡೆ. ನಾನು ಹರಾಂ ಮಾಡದೆ ಹಲಾಲ್ ಮಾಡಿದೆ. ಎಲ್ಲರೂ ಹರಾಮ್ ಮಾಡುತ್ತಾರೆ. ಯಾರು ಹರಾಮ್ ಮಾಡುತ್ತಾರೋ ಎಲ್ಲರನ್ನೂ ಬಿಟ್ಟು ಹೋಗಬಹುದೇ? ಆದರೆ ಹಲಾಲ್ ಮಾಡಿದರೆ ಅವರು ತಪ್ಪಿತಸ್ಥರೆ, ಪಾಪಿಗಳೇ? ನನ್ನ ಮನೆಯಲ್ಲಿ ಮದುವೆ ನಡೆದಿದ್ದು, ಭಾರತೀಯ ಕಾನೂನಿನ ಪ್ರಕಾರವೇ ಮದುವೆ ನಡೆದಿದೆ. ಬಿಎಂಸಿ ಅಧಿಕಾರಿಯೇ ಬಂದು ಪೇಪರ್‌ಗೆ ಸಹಿ ಹಾಕಿದರು” ಎಂದರು.

“ಒಂದು ಕಡೆ ನನ್ನ ತಾಯಿಗೆ ಬ್ರೇನ್ ಕ್ಯಾನ್ಸರ್ ಇದೆ ಮತ್ತು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಇನ್ನೊಂದು ಕಡೆ ಆದಿಲ್ ನನ್ನ ಜೊತೆ ಮದುವೆಯನ್ನು ನಿರಾಕರಿಸುತ್ತಿದ್ದಾನೆ” ಎಂದಿದ್ದಾರೆ. ರಾಖಿ ಪ್ರಕಾರ, ಆದಿಲ್‌ನ ಆಜ್ಞೆಯ ಮೇರೆಗೆ ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದಂತೆ. ಆದರೆ ಈಗ ಮದುವೆಯಾಗಲು ಆತ ನಿರಾಕರಿಸುತ್ತಿದ್ದಾರೆ. ಕಾಲ್ ಮಾಡಿದ ಆದಿಲ್ ಈ ಬಗ್ಗೆ ಏನನ್ನೂ ಮಾತನಾಡಲು ನಿರಾಕರಿಸುತ್ತಿದ್ದಾನೆ ಎಂದು ರಾಖಿ ಹೇಳಿದ್ದಾರೆ.

ಇದಕ್ಕೂ ಮೊದಲು ಬುಧವಾರ (ಜನವರಿ 11, 2023), ಬಾಲಿವುಡ್ ಛಾಯಾಗ್ರಾಹಕ ‘ವೈರಲ್ ಭಯಾನಿ’ ರಾಖಿ ಸಾವಂತ್ ಮತ್ತು ಆದಿಲ್ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು ಮತ್ತು ಅವರಿಬ್ಬರ ಮದುವೆಗೆ ಶುಭಾಶಯಗಳನ್ನು ತಿಳಿಸಿದ್ದರು. ಇದರೊಂದಿಗೆ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಟೈಟಲ್ ನಲ್ಲಿ ಬರೆದುಕೊಂಡಿದ್ದರು. ಆದರೆ, ಬುಧವಾರದಂದು ಈ ಫೋಟೋಗಳನ್ನು ರಾಖಿ ಸಾವಂತ್ ರವರೆಗೆ ವೈರಲ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಕಾಣಿಸುತ್ತಿದೆ, ಇದರಲ್ಲಿ ಇಬ್ಬರ ಮದುವೆಯ ದಿನಾಂಕ ಜುಲೈ 2, 2022 ಎಂಬುದನ್ನ ಕಾಣಬಹುದು. ಅಷ್ಟೇ ಅಲ್ಲ ಈ ಮ್ಯಾರೇಜ್ ಸರ್ಟಿಫಿಕೇಟ್ ನಲ್ಲಿ ರಾಖಿ ಸಾವಂತ್ ಹೆಸರು ‘ಫಾತಿಮಾ’ ಎಂದು ಬರೆಯಲಾಗಿದೆ.

Advertisement
Share this on...