ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆ್ಯಕ್ಷನ್ ಮೂಡಲ್ಲಿದ್ದಾರೆ. ರಾಜ್ಯದಲ್ಲಿ ಮದರಸಾಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಸಿಎಂ ಶರ್ಮಾ ಘೋಷಿಸಿದ್ದಾರೆ. ಮದರಸಾಗಳಲ್ಲಿ ಸಾಮಾನ್ಯ ಶಿಕ್ಷಣ ನೀಡಲು ಬಯಸುವುದಾಗಿ ಹಾಗು ಅದಕ್ಕಾಗಿಯೇ ಅವುಗಳನ್ನು ನೋಂದಾಯಿಸಲಾಗುವುದು ಸಿಎಂ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಶರ್ಮಾ, “ನಾವು ಮೊದಲ ಹಂತದಲ್ಲಿ ರಾಜ್ಯದಲ್ಲಿ ಮದರಸಾಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸುತ್ತೇವೆ. ಮದರಸಾಗಳಲ್ಲಿ ಸಾಮಾನ್ಯ ಶಿಕ್ಷಣವನ್ನು ನೀಡಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಅವರು (ಮುಸ್ಲಿಮರು) ಸಹ ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದಾರೆ” ಎಂದಿದ್ದಾರೆ.
ರಾಜ್ಯದ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ್ ಅವರು ಜನವರಿ 17, 2023 ರಂದು ರಾಜ್ಯದಲ್ಲಿ ಮದರಸಾಗಳನ್ನು ಸುಧಾರಿಸಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ಅವರು ಮಾತನಾಡಿ, “ಮದರಸಾಗಳಲ್ಲಿ ಮತ್ತಷ್ಟು ಸುಧಾರಣೆಗಳು, ನಿಯಮಗಳ ರಚನೆ ಮತ್ತು ಮಂಡಳಿಗಳ ರಚನೆಯ ಬಗ್ಗೆಯೂ ಚರ್ಚೆ ನಡೆಯಿತು. ನಾವು ಚಿಕ್ಕ ಮದರಸಾಗಳನ್ನು ದೊಡ್ಡ ಮದರಸಾಗಳಲ್ಲಿ ವಿಲೀನಗೊಳಿಸುವ ಬಗ್ಗೆಯೂ ಮಾತನಾಡಿದ್ದೇವೆ. ಸುಮಾರು 100 ಸಣ್ಣ ಮದರಸಾಗಳನ್ನು ದೊಡ್ಡ ಮದರಸಾಗಳೊಂದಿಗೆ ವಿಲೀನಗೊಳಿಸಲಾಗಿದೆ” ಎಂದರು.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾತನಾಡುತ್, “ರಾಜ್ಯದ ಮದರಸಾಗಳಲ್ಲಿ ಕಲಿಸಲು ಹೊರ ರಾಜ್ಯಗಳಿಂದ ಬಂದಿರುವ ಮೌಲಾನಾಗಳನ್ನು ಕಾಲಕಾಲಕ್ಕೆ ಹತ್ತಿರದ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಬಹುದು” ಎಂದು ಹೇಳಿದ್ದರು. ಅಸ್ಸಾಂನಲ್ಲಿ ಸುಮಾರು 3000 ನೋಂದಾಯಿತ ಮತ್ತು ನೋಂದಣಿಯಾಗದ ಮದರಸಾಗಳಿವೆ ಎಂದು ಅವರು ಹೇಳಿದ್ದರು.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ರಾಜ್ಯದಲ್ಲಿನ ಅಕ್ರಮ ಮದರಸಾಗಳು ಮತ್ತು ಮೌಲಾನಾಗಳ ಬಗ್ಗೆ ಅಸ್ಸಾಂ ಸರ್ಕಾರವು ಕಟ್ಟುನಿಟ್ಟಾಗಿದೆ ಮತ್ತು ಅವರ ವಿರುದ್ಧ ನಿರಂತರವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ಸಿಎಂ ಶರ್ಮಾ ಅವರ ಹಲವು ನಿರ್ಧಾರಗಳಿಗೆ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆಯೂ ಹಲವು ಮದರಸಾಗಳು ಅಸ್ಸಾಂನಲ್ಲಿ ನೆಲಸಮವಾಗಿವೆ.
AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮತ್ತು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಬಗ್ಗೆ ಅಸ್ಸಾಂನ ಸರ್ಮಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆಗ ಮದರಸಾಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆದರೆ ನೆಲಸಮ ಮಾಡುವುದಾಗಿ ಸಿಎಂ ಶರ್ಮಾ ಹೇಳಿದ್ದರು.
ಉತ್ತರಪ್ರದೇಶ, ಉತ್ತರಾಖಂಡ್ ನಲ್ಲೂ ಮದರಸಾಗಳ ವಿರುದ್ಧ ಕ್ರಮ
ಉತ್ತರ ಪ್ರದೇಶ, ಅಸ್ಸಾಂ ಮಾದರಿಯಲ್ಲಿ ಉತ್ತರಾಖಂಡದಲ್ಲೂ ಮದರಸಾಗಳ ಸಮೀಕ್ಷೆ (Survey) ನಡೆಸಲಾಗುವುದು. ಮದರಸಾಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮದರಸಾಗಳ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿದ್ದು, ಈಗ ಅವುಗಳ ಮೇಲೆ ತೀವ್ರ ನಿಗಾ ವಹಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದರು.
ಉತ್ತರಾಖಂಡದ ಮುಖ್ಯಮಂತ್ರಿ ಕಳೆದ ಸೆಪ್ಟೆಂಬರ್ 13, 2022 ರಂದು ಸಚಿವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡದ ಮದರಸಾಗಳ ಚಟುವಟಿಕೆಗಳು ಮತ್ತು ಕೆಲಸಗಳ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ ಎಂದು ಹೇಳಿದ್ದರು. ಈ ಎಲ್ಲಾ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಇದಕ್ಕಾಗಿ ಎಲ್ಲಾ ಮದರಸಾಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದರು. ಮದರಸಾಗಳ ಸಮೀಕ್ಷೆ ಅನಿವಾರ್ಯವಾಗಿದ್ದು, ಇದಕ್ಕಾಗಿ ತನಿಖಾ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.
ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 12, 2022 ರಂದು ರಾಜ್ಯ ಸರ್ಕಾರವು ಉತ್ತರ ಪ್ರದೇಶದ ಮಾದರಿಯಲ್ಲಿ ಮದರಸಾಗಳ ಸಮೀಕ್ಷೆಯನ್ನು ನಡೆಸಬೇಕು ಎಂದು ವಕ್ಫ್ ಮಂಡಳಿಯ ನೂತನ ಅಧ್ಯಕ್ಷ ಶಮ್ಸ್ ಹೇಳಿದಾಗ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಈ ಹೇಳಿಕೆ ಬಂದಿತ್ತು.
ಶಮ್ಸ್ ಮಾತನಾಡುತ್ತ, “ಯುಪಿ ಸರ್ಕಾರದ ಮಾದರಿಯನ್ನ ಅನುಸರಿಸುತ್ತ ನಾವು ಉತ್ತರಾಖಂಡದಲ್ಲಿ ನಡೆಯುತ್ತಿರುವ ಮದರಸಾಗಳ ಸಮೀಕ್ಷೆಯನ್ನು ನಡೆಸುತ್ತೇವೆ. ಇದು UMB ಅಥವಾ ವಕ್ಫ್ ಬೋರ್ಡ್‌ಗೆ ಸಂಯೋಜಿತವಾಗಿರುವ ಮದರಸಾಗಳನ್ನು ಒಳಗೊಂಡಿರುತ್ತದೆ. ಎರಡೂ ಸರ್ಕಾರಿ ಸಂಸ್ಥೆಗಳಲ್ಲಿ ನೋಂದಾಯಿಸದವರನ್ನು ಇದರಲ್ಲಿ ಸೇರಿಸಲಾಗುತ್ತದೆ” ಎಂದಿದ್ದರು.
उत्तराखण्ड में मदरसों के कामकाज, गतिविधियों को लेकर लगातार शिकायतें आ रही हैं, इन शिकायतों को राज्य सरकार द्वारा गंभीरता से लिया जा रहा है, जिसके दृष्टिगत प्रदेश के सभी मदरसों का सर्वे किया जाएगा। pic.twitter.com/519sKt23ad
— Pushkar Singh Dhami (@pushkardhami) September 13, 2022
“ಏನೇ ಆಗಲಿ ಉತ್ತರಾಖಂಡದಲ್ಲಿ ಯಾವುದೇ ನೋಂದಣಿಯಾಗದ ಮದರಸಾಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಸಿಎಂ ಜತೆ ಮಾತನಾಡಿದ್ದೇನೆ. ಸಮೀಕ್ಷೆಯ ಔಪಚಾರಿಕ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅವರಿಗೆ ಕಳುಹಿಸಲಾಗುವುದು. ರಾಜ್ಯದಲ್ಲಿನ ಮಸೀದಿ, ಮದರಸಾಗಳಲ್ಲಿ ಯಾವುದೇ ಅಕ್ರಮ ನಡೆದರೆ ತಡೆಯಲು ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗುವುದು” ಎಂದೂ ಅವರು ಹೇಳಿದ್ದರು.