ಸ್ಟಿರಾಯ್ಡ್ ಜೊತೆಗೆ ನಲ್ಲಿ ನೀರನ್ನ ಬಳಸುವುದರಿಂದ ಬ್ಲ್ಯಾಕ್ ಫಂಗಸ್ ಬರುತ್ತೆ ಎಂಬ ಆತಂಕಕಾರಿ ವಿಚಾರವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಐಸಿಯುಗಳನ್ನು ಬಳಸುವ ಉಪಕರಣಗಳನ್ನ ಇನ್ನೊಬ್ಬರಿಗೆ ಬಳಸುವಾಗ ಸ್ಯಾನಿಟೈಸರ್ ಮಾಡಬೇಕು ಎಂದೂ ಸಹ ಸಚಿವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಚಿಕಿತ್ಸೆಗೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ತಜ್ಞರು ಇದ್ದಾರೆ. 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರು. ಮುಂದುವರೆದ ಅವರು, ಔಷಧ ಕೊರತೆ ಇರುವುದು ಸತ್ಯ ಎಂದು ಒಪ್ಪಿಕೊಂಡರು. ರಾಜ್ಯದಲ್ಲಿ ಔಷಧ ಕೊರತೆ ಇರುವುದು ನಿಜ. ಆದರೆ ಈ ಬಗ್ಗೆ ಸಚಿವ ಸದನಾಂದ ಗೌಡ ಜೊತೆ ನಿಕಟ ಸಂಕರ್ಪದಲ್ಲಿದ್ದೇವೆ. ಅದರ ಉತ್ಪಾದನೆ ದಿನ ಆಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಬ್ಲ್ಯಾಕ್ ಫಂಗಸ್ನಿಂದ 100-300 ಜನ ಸಾವನ್ನಪ್ಪುತ್ತಿದ್ದರು. ಈಗ ನಮ್ಮ ರಾಜ್ಯದಲ್ಲಿ 300 ಕೇಸ್ಗಳು ಇವೆ. 1000 ವಯಲ್ಸ್ ಕಳಿಸಿಕೊಡುವ ನಿರೀಕ್ಷೆ ಇದೆ. ಎಷ್ಟು ವಯಲ್ಸ್ ಬೇಕು ಎನ್ನುವುದನ್ನು ರೋಗಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೇಂದ್ರದಿಂದ 1150 ವಯಲ್ಸ್ ಬಿಡುಗಡೆ ಮಾಡಿದ್ದಾರೆ. . ನಾವು 20 ಸಾವಿರಕ್ಕೆ ಮನವಿ ಮಾಡಿದ್ದೇವೆ ಎಂದರು.
ಬ್ಲ್ಯಾಕ್ ಫಂಗಸ್ ಹೇಗೆ ಬರುತ್ತೆ?
ಸ್ಟಿರಾಯ್ಡ್ ಜೊತೆಗೆ ನಲ್ಲಿ ನೀರನ್ನ ಬಳಸುವುದರಿಂದ ಬ್ಲ್ಯಾಕ್ ಫಂಗಸ್ ಬರುತ್ತೆ ಎಂಬ ಆತಂಕಕಾರಿ ವಿಚಾರವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಐಸಿಯುಗಳನ್ನು ಬಳಸುವ ಉಪಕರಣಗಳನ್ನ ಇನ್ನೊಬ್ಬರಿಗೆ ಬಳಸುವಾಗ ಸ್ಯಾನಿಟೈಸ್ ಮಾಡಬೇಕು ಎಂದೂ ಸಹ ಸಚಿವರು ಎಚ್ಚರಿಕೆ ನೀಡಿದ್ದಾರೆ. ಇನ್ನು, ಒಂದೇ ಮಾಸ್ಕ್ನ್ನು ಶುಚಿ ಮಾಡದೇ ಸುದೀರ್ಘ ಕಾಲ ಬಳಕೆ ಮಾಡಿದಾಗ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಎಷ್ಟು ಜನ ಜನ ಬ್ಲಾಕ್ ಫಂಗಸ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸಂಜೆ ಮಾಹಿತಿ ನೀಡುವುದಾಗಿ ಸುಧಾಕರ್ ಇದೇ ವೇಳೆ ತಿಳಿಸಿದರು.
ಸೋರ್ಸ್ ಕಂಟಾಮಿನೇಷನ್ ವರದಿ ಬಂದಿದೆ. ಸ್ಟಿರಾಯ್ಡ್, ಡಯಾಬಿಟಿಸ್ ಜೊತೆ ನಲ್ಲಿ ನೀರು ಬಳಸುವುದರಿಂದ, ಕ್ಯಾನಿಲಾದಿಂದ ಬ್ಲ್ಯಾಕ್ ಫಂಗಸ್ ಬರೋದಾಗಿ ವರದಿ ಬಂದಿದೆ. ಪೇಷೆಂಟ್ ಒಂದೇ ಮಾಸ್ಕ್ನ್ನು ದೀರ್ಘವಾಗಿ ಬಳಕೆ ಮಾಡಿದರೆ, ಆಕ್ಸಿಜನ್ ಸೋರ್ಸ್ ನಿಂದ ಬರುತ್ತಿದೆ ಎಂದು ಹೇಳಿದರು.
ಬ್ಲ್ಯಾಕ್ ಫಂಗಸ್ ಬರದಿರಲು ಏನೆಲ್ಲ ಮಾಡಬೇಕು?
ಕೊರೋನಾ ಆಸ್ಪತ್ರೆಯಲ್ಲಿ ಕಟ್ಟಡ ರಿನೋವೇಷನ್ ಆಗಬಾರದು.
ಕೋವಿಡ್ ವಾರ್ಡ್ಗೆ ಯಾರೂ ಸಹ ಹೋಗಬಾರದು.
ಯಾರನ್ನೂ ಕೂಡಾ ಕೋವಿಡ್ ವಾರ್ಡ್‌ನಲ್ಲಿ ಬಿಡಬಾರದು
ಪ್ರತಿ ಪಾಳಿಯಲ್ಲೂ ಫೋರ್ಸ್‌ನಲ್ಲಿ ಶುಭ್ರವಾಗಿ ಇಟ್ಟುಕೊಳ್ಳಬೇಕು
ಪೈಪಿಂಗ್‌ನಲ್ಲಿ ಸ್ಯಾನಿಟೈಸ್ ಮಾಡಿ ಬಳಕೆ ಮಾಡಬೇಕು
ಪೇಷೆಂಟ್ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳಬೇಕು
ಕೋವಿಡ್ ಗುಣಮುಖರಾದ ಮೇಲೆ ವಿಶೇಷವಾಗಿ ಫಿಸಿಷಿಯನ್ಸ್, ಇಎನ್‌ಟಿಯವರು ನೋಡಿಕೊಳ್ಳಬೇಕು
ಹುಬ್ಬಳಿಯ ಕಿಮ್ಸ್‌ನಲ್ಲಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರೂ ಗಮನಕ್ಕೆ ತಂದಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.