ರಾತ್ರಿ ವೇಳೆ ಬರುತ್ತಿದ್ದ ಈ ಹೆಣ್ಣಿನಿಂದಾಗಿ ರೇಲ್ವೇ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್ ಗಳೆಲ್ಲಾ ಏನಾದ್ರು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 133 views

ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದು ಅದೆಷ್ಟೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ರು ಸಹ ಈಗಿನ ಕಾಲದಲ್ಲಿಯೂ ಒಂದಷ್ಟು ಗೊಡ್ಡು ನಂಬಿಕೆಗಳಿಂದ ಆಚೆ ಬರದೇ ಅದರ ಸುತ್ತ ಸುತ್ತುತ್ತಿರುವ ಒಂದಷ್ಟು ವರ್ಗದ ಜನ ಇನ್ನು ಇದ್ದಾರೆ. ಎಸ್ ಇವತ್ತು ನಾವು ನಿಮಗೆ ಹೇಳ್ತಾಯಿರುವ ಈ ಸತ್ಯದ ಕಥೆಯೂ ಅಷ್ಟೆ, ಓದಿದ್ರೆ ವಿಚಿತ್ರ ಅನಿಸಬಹುದು ಆದರೆ ಇದು ನೈಜ ಕಥೆ. ಅಂದಹಾಗೇ ಈ ಘಟನೆ ನಡೆದಿರೋದು, ಪಶ್ಚಿಮ ಬಂಗಾಳದ ಝಾಲ್ಟಾ ಎಂಬ ನಗರದಲ್ಲಿ. ಝಾಲ್ಟಾ ಎಂಬುವ ನಗರದಲ್ಲಿರುವ ಬೇಗೂನ್ ಗೋಡಾಪುರ ರೈಲ್ವೆ ಜಂಕ್ಷನ್‌ನಲ್ಲಿ ನಡೆದ ವಿಚಿತ್ರ ಸತ್ಯ ಕಥೆಯಿದು.

Advertisement

ಆ ಕಾಲದಲ್ಲಿ ಝಾಲ್ಟಾ ಜಿಲ್ಲೆಯ ಜನರಿಗೆ ಹತ್ತಿರದ ಒಂದು ರೈಲ್ವೆ ಸ್ಟೇಷನ್ ಇರಲಿಲ್ಲ. ಸ್ಟೇಷನ್‌ಗೆ ಹೋಗಬೇಕು ಅಂದ್ರೆ ಇಪ್ಪತ್ತು ಕಿಲೋಮೀಟರ್‌ವೆರೆಗೂ ನಡೆದುಕೊಂಡು ಹೋಗಬೇಕಿದ್ದ ಪರಿಸ್ಥಿತಿಯಿತ್ತು.

ಹಾಗಾಗಿ ಜನ ಸರ್ಕಾರಕ್ಕೆ ದುಂಬಾಲು ಬಿದ್ದು, ಒಂದು ಸ್ಟೇಷನ್‌ನ್ನು ಮಾಡಿಸಿಕೊಂಡು. 1962ರಲ್ಲಿ ಈಬೇಗೂನ್ ಗೋಡಾಪುರ ರೈಲ್ವೆ ಸ್ಟೇಷನ್ ಆರಂಭವಾಯ್ತು. ಆದರೆ ದು’ರಂ’ತ ಅಂದರೆ ಕೇವಲ ನಾಲ್ಕೆ ನಾಲ್ಕು ವರ್ಷಗಳಲ್ಲಿ ಈ ಸ್ಟೇಷನ್ ಮುಚ್ಚಲ್ಪಟ್ಟಿತ್ತು. ಅಷ್ಟಕ್ಕೂ ಈ ಸ್ಟೇಷನ್ ಕ್ಲೋಸ್ ಆಗಿದ್ದು ಯಾಕೆ ಗೊತ್ತಾ.. ಮೋಹನ್ ಎನ್ನುವ ಸ್ಟೇಷನ್ ಮಾಸ್ಟರ್ ಒಬ್ಬರು ಈ ರೈಲ್ವೆ ಸ್ಟೇಷನ್‌ಗೆ ವರ್ಗಾವಣೆಯಾದ್ರು. ಆತ ಸರ್ಕಾರಿ ಕಚೇರಿಯಲ್ಲಿಯೇ ವಾಸವಾಗಿದ್ದ, ರಾತ್ರಿಯ ಸುಮಾರಿಗೆ ರೈಲು ಹೋದ ಬಳಿಕ ಯುವತಿಯೊಬ್ಬಳು ಓಡುತ್ತಿರುವುದನ್ನು ಕಾಣುತ್ತಾನೆ, ಆ ದಿನ ಯಾರಿಗೋ ರೈಲು ತಪ್ಪಿಹೋಗಿರಬೇಕು ಅಂತ ಭಾವಿಸಿ ಸುಮ್ಮನಾಗುತ್ತಾನೆ, ಮರುದಿನ ಅದೇ ಹೊತ್ತಿಗೆ ಮತ್ತೆ ಒಬ್ಬಳು ಯುವತಿ ಓಡುತ್ತಿರೋದನ್ನು ಮೋಹನ್ ಗಮನಿಸುತ್ತಾರೆ. ಆಗಲೂ ಸಹ ಅಷ್ಟೆನೂ ಗಮನ ಹರಿಸದೇ ನಿರ್ಲಕ್ಷಿಸುತ್ತಾರೆ..

ಆದರೆ ಮರುದಿನ ಸೇಮ್ ಟೈಮಿಂಗ್ಸ್ ಸೇಮ್ ಪ್ಲೇಸ್‌ನಲ್ಲಿ ಮತ್ತೆ ಯುವತಿ ರೈಲಿನೊಂದಿಗೆ ಸರಿ ಸಮನಾಗಿ ಓಡುತ್ತಿರುವುದನ್ನು ಕಂಡು ನಿಬ್ಬೆರಗಾಗುತ್ತಾನೆ, ಆಗ ತನಗಾದ ಅನುಭವವನ್ನು ಊರಿನವರೊಂದಿಗೆ ಮೋಹನ್ ಹಂಚಿಕೊಂಡರೂ ಜನ ಅಷ್ಟಾಗಿ ನಂಬುವುದಿಲ್ಲ, ಇನ್ನು ಈ ವಿಚಾರವನ್ನು ಅಲ್ಲಿಗೆ ನಿಲ್ಲಿಸದ ಮೋಹನ್ ಮಾರನೇ ದಿನ ರಾತ್ರಿ ಸ್ಟೇಷನ್ ಬಳಿ ಹೋಗಿ ಆ ಹುಡುಗಿ ಬರುವ ಹೊತ್ತಿಗೆ ಕಾಯುತ್ತಿರುತ್ತಾನೆ, ತಪ್ಪದೇ ಆ ಹುಡುಗಿ ಆ ದಿನ ಹಾಜರಾಗ್ತಾಳೆ ಆದರೆ ಆ ದಿನ ರೈಲಿಗಿಂತ ವೇಗವಾಗಿ ಹುಡುಗಿ ಓಡುತ್ತಾಳೆ, ಅದನ್ನು ಕಂಡ ಮೋಹನ್ ಯಾರೋ ಅಥ್ಲೆಟ್ ಇರಬಹುದು ಅಂತ ಊಹಿಸುತ್ತಾನೆ, ಈ ಘ’ಟ’ನೆ ನಡೆದ ಕೆಲದಿನಗಳ ಬಳಿಕ ಮೋಹನ್ ಸಾ’ವ’ನ್ನಪ್ಪುತ್ತಾನೆ, ಮೋಹನ್ ಜಾಗಕ್ಕೆ ಬೇರೆ ಬೇರೆ ಸ್ಟೇಷನ್ ಮಾಸ್ಟರ್‌ಗಳು ಬಂದ್ರು.

ಪ್ರತಿಯೊಬ್ಬರು ಇದೇ ರೀತಿ ಅನುಭವವಾಗಿರೋದನ್ನು ಹಂಚಿಕೊಳ್ತಾರೆ, ಇದರಿಂದ ಭ’ಯ’ಗೊಂಡು ಜನರು ಸಹ ಪುಂಖಾನುಪುಂಕವಾಗಿ ಆ ರಾತ್ರಿ ಕಾಣುವ ಯುವತಿಯ ಬಗ್ಗೆ ಮಾತನಾಡಲು ತೊಡಗಿಕೊಳ್ತಾರೆ. ವರ್ಗಾವಣೆಯಾಗ್ತಾನೆಯಿದ್ರು. ಯಾವ ಊರಿನ ಜನರು ತಮಗೆ ರೈಲ್ವೆ ಸ್ಟೆಷನ್ ಬೇಕು ಅಂತ ಸರ್ಕಾರಕ್ಕೆ ಒ’ತ್ತಡ ಹಾಕಿ ಪಟ್ಟು ಹಿಡಿದು ಕುಳಿತು ಸ್ಟೇಷನ್ ಮಾಡಿಸಿಕೊಂಡ್ರೋ ಅದೇ ಊರಿನ ಜನ ಸ್ಟೇಷನ್‌ನ್ನು ಕ್ಲೋಸ್ ಮಾಡುವಂತೆ ಒತ್ತಾಯಿಸುತ್ತಾರೆ. ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯಲ್ಲಿಯೂ ಭೂ’ತ’ದ ಕಾ’ಟದ ಬಗ್ಗೆ ಉಲ್ಲೇಖಿಸ್ತಾರೆ, ದು’ರಂ’ತ ಅಂದ್ರೆ ಸರ್ಕಾರವೂ ಸಹ ಜನರು ಉಲ್ಲೇಖಿಸಿದ ವಿಷಯಗಳ ಆಧಾರವಾಗಿಟ್ಟುಕೊಂಡು ರೈಲ್ವೆ ಸ್ಟೇಷನ್‌ನ್ನು ಕ್ಲೋಸ್ ಮಾಡಿತ್ತು.

ಸುಮಾರು ನಲವತ್ತು ವರ್ಷಗಳ ಕಾಲ ಆಸ್ಟೇಷನ್‌ನತ್ತ ಜನರು ಸುಳಿಯಲೇಯಿಲ್ಲ. ಮೈಲಿಗಟ್ಟಲೇ ದೂರದಲ್ಲಿಯೇ ಇಳಿದುಕೊಂಡು ತಮ್ಮ ತಮ್ಮ ಊರಿಗೆ ಹೋಗುತ್ತಿದ್ದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತದ ಚುಕ್ಕಾಣಿ ಹಿಡಿದಾಗ ಈ ರೈಲ್ವೆ ಸ್ಟೇಷನ್‌ನ ಕಥೆಯನ್ನು ಗಂ’ಭೀರವಾಗಿ ಪರಿಗಣಿಸಿ 2009ರಲ್ಲಿ ದೀದಿ ಮತ್ತೆ ಈ ಜಂಕ್ಷನ್‌ಗೆ ಮರುಚಾಲನೆ ಕೊಟ್ಟರು. ಈ ಸ್ಟೇಷನ್ ಚಾಲನೆಯಾದ್ರು ಸಹ ಜನ ಮಾತ್ರ ಈ ದಿಕ್ಕಿನತ್ತು ಸುಳಿಯಲೇಯಿಲ್ಲ, ಅಲ್ಲೋಬ್ಬರು ಇಲ್ಲೊಬ್ಬರು ಜನ ಸ್ಟೇಷನ್ ಹತ್ರ ಕಾಣಸಿಕ್ಕರು ನಾಮ್ ಕೇ ವಾಸ್ಥೆ ಈ ಸ್ಟೇಷನ್ ಮರುಚಾಲನೆ ಪಡೆದುಕೊಂಡಿದ್ದು ಸುಳ್ಳಲ್ಲ. ಇನ್ನು ರೈಲ್ವೇ ಸ್ಟೇಷನ್‌ನ ಕಥೆ ಎಲ್ಲಡೆ ಸುದ್ದಿಯಾಗ್ತಿದ್ದಂತೆ.. ಇಲ್ಲಿ ದೆ’ವ್ವ ಇರೋದು ನಿಜನಾ ಅನ್ನೊ ವದಂತಿಯ ಸತ್ಯಾಸತ್ಯತೆ ಪರಿಶೀಲನೆ ಮಾಡೋದಕ್ಕೆ ಕೋಲ್ಕತ್ತದ ಒಂದು ಪ್ಯಾರಾ ನಾರ್ಮಲ್ ಸೊಸೈಟಿಯ ಟೀಂ ಒಂದು ಭೇಟಿ ಕೊಟ್ಟಿತ್ತು.

ಈ ಟಿಮ್ ರಾತ್ರಿ ಅದೇ ಸ್ಟೆಷನ್‌ನಲ್ಲಿ ಕಳೆದಾಗ ಒಂದಿಷ್ಟು ಜನ ಬೆಡ್‌ಶೀಟ್ ಹಾಕಿಕೊಂಡು ಓಡಿಹೋದ ಅನುಭವವಾಯಿತಂತೆ, ಅದು ಅಲ್ಲಿಯ ಸ್ಥಳೀಯ ಕಿ’ಡಿಗೇ’ಡಿಗಳು ತಮ್ಮನ್ನು ಬೆದರಿಸಲು ಆರೀತಿ ಮಾಡಿದ್ದಾರೆ ಅಂತ ಟೀಂ ಅಭಿಪ್ರಾಯಪಟ್ಟಿದೆ.ಇಲ್ಲಿ ಯಾವುದೇ ರೀತಿಯ ಬೂ’ತ ಪಿ’ಶಾಚಿಗಳಿಲ್ಲ ಅಂತ ಟೀಂ ವರದಿ ನೀಡಿದೆ. ಆದರೂ ಸ್ನೇಹಿತರೇ ಈ ನವಯುಗದಲ್ಲಿಯೂ ಸಹ ಜನರು ತಮ್ಮ ಮುಗ್ಧ ಭಾವಗಳನ್ನು ಮೌಢ್ಯದ ಲೇಪನದಲ್ಲಿ ಸಿಲುಕಿಸಿಕೊಂಡು, ಒದ್ದಾಡುವುದನ್ನು ನೋಡಿದ್ರೆ ನಿಜಕ್ಕೂ ಅಳುವುದೋ ನಗುವುದೋ ಅರ್ಥವಾಗುವುದಿಲ್ಲ. ಇನ್ನು ಮುಂದೆಯಾದರೂ ಅಂತೆ ಕಂತೆಗಳಿಗೆ ಕಿವಿಗೊಡದೇ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಿಷಯವನ್ನು ನಂಬುವಂತಾಗಬೇಕು..

 

Advertisement
Share this on...