ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ವಿದಿಶಾದಲ್ಲಿ ಬುಧವಾರ ಮಾತನಾಡಿದ ದಿಗ್ವಿಜಯ್ ಸಿಂಗ್, ಬಿಜೆಪಿಯವರು ಶ್ರೀರಾಮನ ಘೋಷಣೆಗಳನ್ನು ಹೇಗೆ ಎತ್ತುತ್ತಾರೆಂದರೆ ಸೀತಾ ಜೀ ಹೆಸರನ್ನೇ ಬಿಟ್ಟುಬಿಡುತ್ತಾರೆ. ನಾಯಕರೇಕೆ ಜೈ ಸಿಯಾರಾಮ್ ಹೇಳುವುದಿಲ್ಲ? ಸೀತೆ ಇಲ್ಲದೆ ಶ್ರೀರಾಮ ಅಪೂರ್ಣ. ಅವರು (ಬಿಜೆಪಿ) ರಾಮನ ಹೆಸರಿನಲ್ಲಿ ಬಿಸಿನೆಸ್ ಮಾಡುತ್ತಾರೆ ಎಂದು ಹೇಳಿದ್ದಾರೆ. ದಿಗ್ವಿಜಯ್ ಅವರ ಈ ಹೇಳಿಕೆ ಮುನ್ನೆಲೆಗೆ ಬಂದ ತಕ್ಷಣ ಯೂಸರ್ ಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ ಹಾಕಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಕೇಸರಿ ಬಟ್ಟೆ ಧರಿಸಿರುವವರ ವಿರುದ್ಧವೂ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
#WATCH ये (BJP) श्री राम का नारा भी ऐसे लगाते हैं कि सीता जी का नाम छोड़ देते हैं..जय सिया राम क्यों नहीं बोलते नालायकों? भगवान राम सीता के बिना अधुरे हैं। ये (BJP) केवल राम नाम का व्यापार करते हैं: मध्यप्रदेश के पूर्व मुख्यमंत्री और कांग्रेस सांसद दिग्विजय सिंह, विदिशा pic.twitter.com/cL1yaYJrXh
Advertisement— ANI_HindiNews (@AHindinews) August 17, 2022
ಇಂದು ಕೇಸರಿ ಬಟ್ಟೆ ಧರಿಸಿದವರು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ದಿಗ್ವಿಜಯ್ ಸಿಂಗ್ ವಿವಾದಕ್ಕೆ ಸಿಲುಕಿದ್ದರು. “ದೇವಸ್ಥಾನಗಳಲ್ಲಿ ಅತ್ಯಾಚಾರ ನಡೆಯುತ್ತಿದೆ. ಇದು ನಮ್ಮ ಧರ್ಮವೇ? ಸನಾತನ ಧರ್ಮವನ್ನು ಅವಮಾನಿಸಿದವರನ್ನು ದೇವರು ಕೂಡ ಕ್ಷಮಿಸುವುದಿಲ್ಲ” ಎಂದು 2019 ರಲ್ಲಿ ಹೇಳಿದ್ದರು. ಈ ಹಿಂದೆ 2018ರಲ್ಲೂ, ಚುನಾವಣೆ ಬಂದಾಗ ರಾಮನ ಮಂದಿರ ನಿರ್ಮಾಣದ ವಿಚಾರ ಮುನ್ನೆಲೆಗೆ ಬರುವುದು ವಿಚಿತ್ರ ಎಂದು ಹೇಳಿದ್ದರು. ಭಗವಾನ್ ರಾಮನ ಮಂದಿರವನ್ನು ನಿರ್ಮಿಸುವುದರಲ್ಲಿ ಯಾರಿಗೂ ಯಾವುದೇ ವಿರೋಧವಿಲ್ಲ, ನಮಗೆಲ್ಲರಿಗೂ ಅದು ಬೇಕು, ಆದರೆ ಯಾವುದೇ ವಿವಾದಿತ ಸ್ಥಳದಲ್ಲಿ ರಾಮನ ಮಂದಿರವನ್ನು ನಿರ್ಮಿಸಬೇಕೆಂದು ಭಗವಾನ್ ರಾಮನು ಬಯಸುವುದಿಲ್ಲ. ಈ ಎರಡೂ ಹೇಳಿಕೆಗಳಿಗೆ ದಿಗ್ವಿಜಯ್ ಜನರಿಂದ ಸಾಕಷ್ಟು ವಿರೋಧ ಎದುರಿಸಬೇಕಾಗಿತ್ತು.
Ajeeb baat hai jab chunaav aata hai Bhagwan Ram ke mandir nirmaan ki baat saamne aati hai. Bhagwan Ram ka mandir bane ismein kisi ko aitraaz nahi hai, hum sab chahte hain, lekin Bhagwan Ram bhi nahi chahenge ki kisi vivadaspad sthal par Ram ka mandir bane: Digvijaya Singh (14.11) pic.twitter.com/nhnFoxJ6X9
— ANI (@ANI) November 14, 2018
ಒಂದು ಕಾಲದಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ರಾಹುಲ್ ಗಾಂಧಿಯವರ ರಾಜಕೀಯ ಗುರು ಎಂದು ಪರಿಗಣಿಸಲಾಗಿತ್ತು. ರಾಹುಲ್ ಗಾಂಧಿಯವರೊಂದಿಗೆ ದಿಗ್ವಿಜಯ್ ಸಿಂಗ್ ನೆರಳಿನಂತೆ ಇರುತ್ತಿದ್ದರು. ಈಗಂತೂ ಗಾಂಧಿ ಕುಟುಂಬದ ವಿಶೇಷ ಜನರಲ್ಲಿ ದಿಗ್ವಿಜಯ್ ಸಿಂಗ್ ಹೆಸರು ಕೇಳಿಬರುತ್ತಿದೆ ಆದರೆ ಇದೀಗ ರಾಹುಲ್ ಗುರು ಎಂಬ ಟ್ಯಾಗ್ ಮಾತ್ರ ಇಲ್ಲ. ಅಷ್ಟೇ. ದಿಗ್ವಿಜಯ್ ಸಿಂಗ್ ಅವರ ಇತ್ತೀಚಿನ ಹೇಳಿಕೆಗೆ ಯೂಸರ್ ಗಳು ಹೇಗೆ ಛೀಮಾರಿ ಹಾಕಿದ್ದಾರೆ ನೀವೇ ನೋಡಿ.
If you have read Sanskrit and Hindu scriptures properly, you would have known that “Shree Ram” means Sita-Ram. Shree used here is not as a title for lord Rama but for goddess Sita. How can you understand this, when you have questioned even the existence of lord Rama.
— Uday Kant Choudhary 🇮🇳 (@UKChoudhary25) August 17, 2022
ऐसी भाषा क्या दूसरे धर्म के लिए बोल सकते है @digvijaya_28 जी? ये भाषा आपत्तिजनक है, इनको माफी मांगनी चाहिए। @drnarottammisra पुलिस को अपना काम करना चाहिए।
— A.K. Jha (@infoankit71) August 17, 2022
श्रीराम का अर्थ मंदिर में रोड़े अटकने वाले क्या जाने। सत्य बोलो गत्त है पर पता चलेगा।
— ajay (@21ajayindia2022) August 17, 2022
Kyunki Raakshas sirf Ram naam se darte hai
— RockStar ModiYogi🪷 (@StarModiYogi) August 17, 2022
ಜೀನ್ಸ್ ಹಾಕೋ ಯುವತಿಯರಲ್ಲ 40 ವರ್ಷ ದಾಟಿರೋ ಮಹಿಳೆಯರು ಮೋದಿಯನ್ನ ಇಷ್ಟಪಡ್ತಾರೆ ಎಂದಿದ್ದ ದಿಗ್ವಿಜಯ್ ಸಿಂಗ್
40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿದ್ದಾರೆ ಎಂದ ಅವರು, ಜೀನ್ಸ್ನ್ನ ಧರಿಸುವ ಹುಡುಗಿಯರು ಅವರಿಂದ ಪ್ರಭಾವಿತರಾಗುವುದಿಲ್ಲ ಎಂದಿದ್ದಾರೆ.
ವಾಸ್ತವವಾಗಿ, ಶನಿವಾರ (ಡಿಸೆಂಬರ್ 25) ಕಾಂಗ್ರೆಸ್ನ ಜನಜಾಗರಣ್ ಅಭಿಯಾನದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, “ಜೀನ್ಸ್ ಧರಿಸುವ ಮತ್ತು ಮೊಬೈಲ್ ಬಳಸುವ ಹುಡುಗಿಯರು ಪ್ರಧಾನಿ ಮೋದಿಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು. 40-50 ವರ್ಷ ವಯಸ್ಸಿನ ಮಹಿಳೆಯರನ್ನೇ ಪ್ರಧಾನಿ ಮೋದಿ ಪ್ರಭಾವಿತರಾಗುವಂತೆ ಮಾಡುತ್ತಾರೆ, ಆ ಮಹಿಳೆಯರೇ ಪ್ರಧಾನಿ ಮೋದಿಯವರೆಡೆಗೆ ಪ್ರಭಾವಿತರಾಗುತ್ತಾರೆ ಹೊರತು ಜೀನ್ಸ್ ತೊಡುವ, ಮೊಬೈಲ್ ಬಳಸುವ ಯುವತಿಯರಲ್ಲ” ಎಂದಿದ್ದಾರೆ. ವಾಸ್ತವವಾಗಿ, ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ‘ಮೈ ಲಡಕಿ ಹೂಂ, ಲಡ್ ಸಕತಿ ಹೂಂ (ನಾನು ಹುಡುಗಿ, ಹೋರಾಡಬಲ್ಲೆ)’ ಥೀಮ್ ಹಾಡಿನ ಬಗ್ಗೆ ಮಾತನಾಡುತ್ತಿದ್ದರು.
ಈ ವೇಳೆ ಅವರು ಬಜರಂಗದಳದ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಬಜರಂಗದಳದ ಕಾರ್ಯಕರ್ತರನ್ನು ಗೂಂಡಾಗಳು ಎಂದು ಟೀಕಿಸಿದ ಅವರು, “ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಗರಿಷ್ಠ ಸಂಖ್ಯೆಯಲ್ಲಿರೋ ಗೂಂಡಾಗಳಲ್ಲಿ ಭಜರಂಗದಳದವರೇ ಇದ್ದಾರೆ. ಅವರಿಗೆ ಪೊಲೀಸರ ಬೆಂಬಲವೂ ಇದೆ” ಎಂದು ಆರೋಪಿಸಿದರು.
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದೂ ಧರ್ಮ ಮತ್ತು ಹಿಂದುತ್ವ ಎರಡೂ ಬೇರೆ ಬೇರೆ ಎಂದು ಹೇಳಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಗೋಮಾಂಸ ತಿನ್ನುವುದರಲ್ಲಿ ತಪ್ಪೇನಿಲ್ಲ ಎಂದು ಸಾವರ್ಕರ್ ಹೇಳಿದ್ದರು. ಭಾರತವನ್ನು ವೈವಿಧ್ಯತೆಯ ದೇಶ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ, ದೇಶದಲ್ಲಿ ಗೋಮಾಂಸ ತಿನ್ನುವ ಅನೇಕ ಹಿಂದೂಗಳಿದ್ದಾರೆ ಎಂದು ಹೇಳಿದರು. ಇದೇ ವೇಳೆ ಗೋಮಾಂಸ ತಿನ್ನಬಾರದು ಎಂದು ಎಲ್ಲಿ ಬರೆಯಲಾಗಿದೆ ಎಂದು ಪ್ರಶ್ನಿಸಿದರು.
ದಿಗ್ವಿಜಯ್ ಸಿಂಗ್ ಮಹಿಳೆಯರಿಗೆ ಸಂಬಂಧಿಸಿದಂತೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಈ ರೀತಿ ಮಾತನಾಡಿದ್ದು, ಈ ಬಗ್ಗೆ ಭಾರೀ ವಿವಾದ ಉಂಟಾಗಿತ್ತು. 2013ರಲ್ಲಿ ಮಂದಸೌರ್ ರ್ಯಾಲಿಯಲ್ಲಿ ಆಗಿನ ಸಂಸದೆ ಮೀನಾಕ್ಷಿ ನಟರಾಜನ್ ಬಗ್ಗೆ ಮಾತನಾಡಿದ್ದ ಅವರು, “ನಾನು ರಾಜಕೀಯದ ಹಳೆಯ ಖಿಲಾಡಿ ಆಗಿದ್ದೇನೆ, ಮೀನಾಕ್ಷಿ ಜೀ ಅವರ ಕೆಲಸ ನೋಡಿ 100 ಟಕಾ ಟಂಚ್ ಮಾಲ್ ಅಂತ ಹೇಳಬಹುದು” ಎಂದಿದ್ದರು.
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಎಲ್ಲೆಡೆ ಭಾರೀ ಕೋಲಾಹಲ ಎದ್ದಿತ್ತು. ಆಗ ಸ್ಪಷ್ಟನೆ ನೀಡಿದ ಅವರು, ‘‘ನಾನೇನೂ ತಪ್ಪಾಗಿ ಹೇಳಿಲ್ಲ. ನಾನು ಅವರಿಗೆ 100 ಟಕಾ ಚಿನ್ನದ ಮಾಲ್ ಎಂದು ಹೇಳಿದೆ. ಅವರನ್ನು ಹೊಗಳಿ ಹೀಗೆ ಹೇಳಿದ್ದೆ” ಎಂದಿದ್ದರು.
ಅದೇ ರೀತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಕಮಲ್ ನಾಥ್ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದಾಬ್ರಾ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್ ಅವರು ಮಾಜಿ ಸಚಿವೆ ಇಮರ್ತಿ ದೇವಿ ಅವರ ಬಗ್ಗೆ ಒಂದು ಐಟಂ ಎಂದು ಹೇಳಿದ್ದರು. ಆಗ ಬಿಜೆಪಿ ಈ ವಿಚಾರವಾಗಿ ಕಮಲ್ ನಾಥ್ ವಿರುದ್ಧ ವಾಗ್ದಾಳಿ ನಡೆಸಿತ್ತು. ವಿವಾದ ಉಲ್ಬಣಗೊಂಡ ನಂತರ ಕಮಲ್ ನಾಥ್ ಕ್ಷಮೆ ಯಾಚಿಸಿ ವಿಷಾದ ವ್ಯಕ್ತಪಡಿಸಿದ್ದರು.