ರಾಮಮಂದಿರಕ್ಕಾಗಿ ಬಲಿದಾನ ನೀಡಿದ ಕೊಠಾರಿ ಬಂಧುಗಳಿಗೆ 31 ವರ್ಷಗಳ ಬಳಿಕ ನ್ಯಾಯ ಒದಗಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

in Kannada News/News 260 views

1992 ರ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಆಂದೋಲನ ಹಾಗು 1989 ರಲ್ಲಿ ರಾಮಮಂದಿರದ ಆಂದೋಲನದಲ್ಲಿ ಬ-ಲಿ-ದಾನಗೈದ ಕೊಠಾರಿ ಬಂಧುಗಳನ್ನ ಯಾರು ತಾನೇ ಮರೆಯಲು ಸಾಧ್ಯ? ಆ ಇಬ್ಬರು ಸಹೋದರರು, ರಾಮ್ ಹಾಗು ಶರದ್ ಇಬ್ಬರೂ ದೇಶದ ಹಿಂದುಗಳ ಹೃದಯದಲ್ಲಿದ್ದಾರೆ. ರಾಮಮಂದಿರದ ಬಗ್ಗೆ ಯಾವಾಗ ಏನೇ ಚರ್ಚೆಯಾದರೂ ಕೊಠಾರಿ ಬಂಧುಗಳ ಹೆಸರನ್ನ ಮಾತ್ರ ನೆನೆಯಲಾಗುತ್ತದೆ. ಬರೋಬ್ಬರಿ 31 ವರ್ಷಗಳ ಬಳಿಕ ಕೊಠಾರಿ ಬಂಧುಗಳಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನ್ಯಾಯ ಒದಗಿಸುವ ದಿಟ್ಟ ಹೆಜ್ಜೆಯೊಂದನ್ನ ಇಟ್ಟಿದ್ದಾರೆ.

Advertisement

ಹೌದು ಯೋಗಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಕೇಶವ್ ಪ್ರಸಾದ್ ಮೌರ್ಯ ರವರು ಮಹತ್ವದ ಘೋಷಣೆಯೊಂದನ್ನ ಮಾಡುತ್ತ ಕೊಠಾರಿ ಬಂಧುಗಳ ಹೆಸರಿನಲ್ಲಿ ಅಯೋಧ್ಯೆಯೊಳಗೆ ಒಂದು ರಸ್ತೆ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ. ಪಶ್ಚಿ‌ಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಅನೇಕ ರ‌್ಯಾಲಿಗಳಲ್ಲಿ ಬಿಜೆಪಿ ನಾಯಕರು ಬಂಗಾಳಿಗರಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಬ-ಲಿ-ದಾನಗೈದ ಕೊಠಾರಿ ಬಂಧುಗಳ ಬ-ಲಿ-ದಾನವನ್ನ ನೆನಪಿಸಿದ್ದರು.

ಮತ್ತೊಂದೆಡೆ ರಾಜ್ಯದಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೊಠಾರಿ ಬಂಧುಗಳ ಕುಟುಂಬವನ್ನೂ ಆಹ್ವಾನಿಸಲಾಗಿತ್ತು. ಕೊಠಾರಿ ಬಂಧುಗಳ ಸಹೋದರಿ ಪೂರ್ಣಿಮಾ ಕೊಠಾರಿ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಮತ್ತು ವೇದಿಕೆಯ ಮೇಲೆ ತನ್ನ ಸಹೋದರರನ್ನ ನೆನೆದು ಕಣ್ಣೀರಿಟ್ಟಿದ್ದರು.

ಅವರು ಮಾತನಾಡುತ್ತ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನೂ ಅರ್ಪಿಸಿದರು.‌ ಅಷ್ಟೇ ಅಲ್ಲದೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕೂಡ ಬಂಗಾಳದ ಜನತೆಗೆ ಕೊಠಾರಿ ಬಂಧುಗಳ ಬ-ಲಿ-ದಾನವನ್ನ ನೆನಪು ಮಾಡಿಸಿದರು‌. ಅವರು ಮಾತನಾಡುತ್ತ ಅಯೋಧ್ಯೆಯಲ್ಲಿ ಕೊಠಾರಿ ಸಹೋದರರ ಹೆಸರಲ್ಲಿ ಈಗಲೂ ಒಂದು ಸ್ಮಾರಕವಿದೆ ಎಂದು ತಿಳಿಸಿದರು. ಅವರು ಮುಂದೆ ಮಾತನಾಡುತ್ತ ಕೊಠಾರಿ ಬಂಧುಗಳ ರೂಪದಲ್ಲಿ ರಾಮಮಂದಿರದ ಕನಸನ್ನ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈಡೇರಿಸುತ್ತಿದ್ದಾರೆ ಎಂದರು. ರಾಮ ಹಾಗು ಶರದ್ ಕೊಠಾರಿ ಭಗವಾ ಧ್ವಜ ಹಿಡಿದು ವಿ-ವಾ-ದಿ-ತ ಬಾಬ್ರಿ ಕಟ್ಟಡದ ಮೇಲೆ ಏರಿದ್ದರು, ಆಗ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರವಿತ್ತು. ಆಗ ಮುಲಾಯಂ ಸಿಂಗ್ ಆದೇಶದ ಮೇರೆಗೆ ಪೋ-ಲಿಸ-ರು ರಾಮಭಕ್ತರ ಮೇ-ಲೆ ಮನಬಂದಂತೆ ಫೈ-ರಿಂ-ಗ್ ಮಾಡಿದ್ದರು, ಇದರಲ್ಲಿ ಕೊಠಾರಿ ಸಹೋದರರೂ ಮೃ-ತ-ಪ-ಟ್ಟಿ-ದ್ದ-ರು.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಇದುವರೆಗೆ 2500 ಕೋಟಿ ಹಣ ಸಂಗ್ರಹವಾಗಿದ್ದರೆ ಅಲ್ಲಿ ನಿರ್ಮಿಸಲಾಗುವ ಮಸೀದಿಗೆ ಹರಿದುಬಂದಿದ್ದುವ ಕೇವಲ 20 ಲಕ್ಷ

ಅಯೋಧ್ಯೆಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಉತ್ತರಪ್ರದೇಶ ಸರ್ಕಾರದ ವತಿಯಿಂದ ಧನ್ನಿಪುರದ ಕೇಂದ್ರ ಸುನ್ನಿ ವಕ್ಫ್ ಮಂಡಳಿಗೆ ನೀಡಲಾದ ಐದು ಎಕರೆ ಜಮೀನಿನಲ್ಲಿ ನಿರ್ಮಿಸಲಿರುವ ಮಸೀದಿಯಿಂದ ಅನ್ಸಾರಿ ಅಂತರ ಕಾಯ್ದುಕೊಂಡಿದ್ದರು. ನಿರ್ಮಿಸಬೇಕಾದ ಮಸೀದಿಯ ಡಿಸೈನ್‌ನ್ನ ಅನ್ಸಾರಿ ನಿರಾಕರಿಸಿದ್ದಾರೆ.  ಮಸೀದಿಯ ಉದ್ದೇಶಿತ ವಿನ್ಯಾಸವು ವಿದೇಶಿ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ, ಇದನ್ನು ಭಾರತೀಯ ವಾಸ್ತುಶಿಲ್ಪದ ಪ್ರಕಾರ ಮಾಡಬೇಕು ಎಂದು ಅವರು ಹೇಳಿದರು. ಅನ್ಸಾರಿ ಮಾತನಾಡುತ್ತ, ಮಸೀದಿ ಪ್ರದರ್ಶನಕ್ಕಾಗಿ ಅಲ್ಲ ಮತ್ತು ಅದು ಸರಳವಾಗಿರಬೇಕು ಎಂದು ಹೇಳಿದರು. ಟ್ರಸ್ಟ್ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವರು ನಿರಾಶೆಗೊಂಡಿದ್ದಾರೆ. ಈ ಪ್ರಕರಣವನ್ನು 70 ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಡಿದ್ದರೂ ಯಾವುದೇ ಮುಖಂಡನಾಗಲಿ ಅಥವ ಮುಸ್ಲಿಂ ಪಕ್ಷವಾಗಲಿ ತನ್ನನ್ನಾಗಲಿ ತನ್ನ ಸಲಹೆಯನ್ನಾಗಲಿ ಕೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಅಯೋಧ್ಯೆಯ ಧನ್ನಿಪುರದಲ್ಲಿ ಉದ್ದೇಶಿತ ಮಸೀದಿಯ ಹೆಸರನ್ನ ‘ಬಾಬರ್’ ಹೆಸರಿನಿಂದ ಇಡಬಾರದು ಯಾಕಂದ್ಏ ಬಾಬರ್ ಭಾರತದ ಮುಸಲ್ಮಾನರ ಮಸೀಹಾ ಅಲ್ಲ ಹಾಗಾಗಿ ಆ ಹೆಸರನ್ನ ಮಸೀದಿಗೆ ಇಡಬಾರದು ಎಂದು ಅನ್ಸಾರಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಉದ್ದೇಶಿತ ಮಸೀದಿ ನಿರ್ಮಾಣಕ್ಕಾಗಿ ಇದುವರೆಗೆ ಸಂಗ್ರಹವಾದ ದೇಣಿಗೆಯ ಬಗ್ಗೆಯೂ ಅನ್ಸಾರಿ ಪ್ರಶ್ನಿಸಿದ್ದು, “ಸುಪ್ರೀಂಕೋರ್ಟ್ ನಿಂದ ತೀರ್ಪು ಬಂದು 16 ತಿಂಗಳುಗಳು ಕಳೆದರೂ ಇದುವರೆಗೆ ಕೇವಲ 20 ಲಕ್ಷ ದೇಣಿಗೆ ಸಂಗ್ರಹವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ (ಐಐಸಿಎಫ್) ಮಸೀದಿ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಐಐಸಿಎಫ್ ಅಧ್ಯಕ್ಷರ ಕಾರ್ಯ ಶೈಲಿ ಉತ್ತಮವಾಗಿಲ್ಲ ಮತ್ತು ಟ್ರಸ್ಟ್ ಖಾಸಗಿ ಕಂಪನಿಯಾಗಿ ಮಾರ್ಪಟ್ಟಿದೆ. ಜನರು ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಮಾಡಲು ಉತ್ಸುಕರಾಗದಿರಲು ಇದೂ ಪ್ರಮುಖ ಕಾರಣವಾಗಿದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದರು.

ಈ ಪ್ರಾಜೆಕ್ಟ್ ನ್ನ ಉತ್ತರಪ್ರದೇಶ ಸುನ್ನಿ ವಕ್ಫ್ ಬೋರ್ಡ್  ಪ್ರಾರಂಭಿಸಿತು. ಮಸೀದಿ ಸಂಕೀರ್ಣದಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ವಸ್ತುಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಕೇಂದ್ರ, ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಸಂಶೋಧನಾ ಕೇಂದ್ರ, ಮತ್ತು ಪಬ್ಲಿಕೇಷನ್ ಹೌಸ್ ಸೇರಿವೆ.

ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಸಂಗ್ರಹವಾಗಿತ್ತು ಬರೋಬ್ಬರಿ 2500 ಕೋಟಿ ರೂ

ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಪ್ರಕ್ರಿಕೆಯನ್ನು ಮಾರ್ಚ್ ತಿಂಗಳ ಮೊದಲ ವಾರದಲ್ಲೇ ನಿಲ್ಲಿಸಲಾಗಿತ್ತು. ಟ್ರಸ್ಟ್ ಅಂದಾಜಿಸಿದಂತೆ 2,500 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಇನ್ನು ಮೂವರು ವರ್ಷಗಳ ಕಾಲ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ದೇಣಿಗೆ ಸಂಗ್ರಹ ಕಾರ್ಯ ನಿಲ್ಲಿಸಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಹಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ 9 ಲಕ್ಷ ಸ್ವಯಂಸೇವಕರು ನಾಲ್ಕು ಲಕ್ಷ ಹಳ್ಳಿಗಳ 10 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಚಂಪತ್ ರೈ ಹೇಳಿದ್ದಾರೆ.

ಅಯೋಧ್ಯೆಯಲ್ಲಿ 70 ಎಕರೆಯಲ್ಲಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಮುಂದಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಜಮೀನನ್ನು ಖರೀದಿಸಿ 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಅದಕ್ಕಾಗಿ ಸ್ಥಳೀಯ ನಿವಾಸಿಗಳ ಜಮೀನನ್ನು ಖರೀದಿಸಲಾಗುತ್ತಿದೆ ಎಂದರು.

Advertisement
Share this on...