“ರಾಮಮಂದಿರದಿಂದಾಗಿ ಮೋದಿಯ ಜನಪ್ರೀಯತೆಯ ಗ್ರಾಫ್ ಉತ್ತುಂಗದಲ್ಲಿದೆ, ಅದನ್ನ ಇಳಿಸಿ ಸೋಲಿಸಲೇಬೇಕು”: ಕಿಸಾನ್ ಆಂದೋಲನ್ ನಡೆಸುತ್ತಿರುವ ಫೇಕ್ ರೈತ

in Uncategorized 42 views

ನವದೆಹಲಿ: ಕೃಷಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆ ನಡುವೆ ಕೆಲವೊಂದು ಸಮಾಜ ಘಾತುಕ ಶಕ್ತಿಗಳು ಸೇರಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಜನಪ್ರಿಯತೆಯನ್ನು ಕೆಳಗಿಳಿಸಬೇಕು ಎಂದು ಪ್ರತಿಭಟನಾ ನಿರತ ರೈತನೊಬ್ಬ ನೀಡಿದ ಹೇಳಿಕೆ ಈ ಅನುಮಾನವನ್ನು ಹೆಚ್ಚಳಗೊಳಿಸಿದೆ.

Advertisement

ಕೃಷಿಗೆ ಸಂಬಂಧಿಸಿದ ಹೇಳಿಕೆ ನೀಡುವುದನ್ನು ಬಿಟ್ಟು ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ರಾಜಕೀಯ ಪ್ರೇರಿತ ವಾಗ್ದಾಳಿ ನಡೆಸಿದ್ದಾರೆ. “ಮೋದಿಯವರ ಜನಪ್ರಿಯತೆ ಉತ್ತುಂಗದಲ್ಲಿದೆ, ರಾಮಮಂದಿರದಿಂದಾಗಿ ಅವರ ಗ್ರಾಫ್ ಹೆಚ್ಚಾಗಿದೆ. ನಮಗೆ ಕಡಿಮೆ ಸಮಯವಿದೆ. ನಾವು ಮೋದಿಯ ಗ್ರಾಫ್ ಅನ್ನು ಕೆಳಗೆ ತರಬೇಕಾಗಿದೆ” ಎಂದು ದಲ್ಲೆವಾಲ್‌ ಹೇಳಿದ್ದಾರೆ.

ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌, “ಇಂತಹ ಕಾಮೆಂಟ್ ಮಾಡುವುದು ಸೂಕ್ತವಲ್ಲ. ಅವರು ಎಲ್ಲಿಂದಲೋ ಬೆಂಬಲ ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪಂಜಾಬ್ ಸರ್ಕಾರ ಅವರನ್ನು ತಡೆಯಬಹುದಿತ್ತು, ಆದರೆ ಅವರು ಮಾಡಲಿಲ್ಲ” ಎಂದಿದ್ದಾರೆ.

Advertisement
Share this on...