ರಾಮಮಂದಿರ ನಿರ್ಮಾಣಕ್ಕೆ ಭಿಕ್ಷುಕರಿಂದ ಹರಿದುಬಂದ ದೇಣಿಗೆಯೆಷ್ಟು ಗೊತ್ತಾ? ಭಿಕ್ಷುಕರಿಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ

in Uncategorized 4,045 views

ಅಯೋಧ್ಯೆ:

Advertisement
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣ ಗಣನೆ ಆರಂಭವಾಗಿದೆ. ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ.

ಅವರಲ್ಲಿ ಕಾಶಿ ಮತ್ತು ಪ್ರಯಾಗ್‌ರಾಜ್‌ನ ಭಿಕ್ಷುಕರು ದೇವಾಲಯದ ನಿರ್ಮಾಣಕ್ಕೆ 4 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗ್‌ರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು. ಶ್ಲಾಘನೆಯ ಸಂಕೇತವಾಗಿ, ಮುಂಬರುವ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗುತ್ತದೆ.

ಕೆಲ ಸಮಯದ ಹಿಂದೆ ಟ್ರಸ್ಟ್‌ಗೆ ಮಾಸಿಕ 1 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ಬಂದಿದೆ. ರಾಮಮಂದಿರ ಟ್ರಸ್ಟ್ ತನ್ನ ನವದೆಹಲಿಯ ಬ್ಯಾಂಕ್ ಖಾತೆಯಲ್ಲಿ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ದೇಣಿಗೆಯನ್ನು ಸ್ವೀಕರಿಸಿದೆ. ಯುಎಇಯ ಭಕ್ತರೊಬ್ಬರು 11,000 ರೂ., ಆಸ್ಟ್ರೇಲಿಯಾದ ಇನ್ನೊಬ್ಬರು 21,000 ರೂ. ನೀಡಿದ್ದಾರೆ.

ದೇಶಾದ್ಯಂತ ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು ಗೊತ್ತಾ?

ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಪ್ರಕ್ರಿಕೆಯನ್ನು ಹಂಚುವ ಪ್ರಕ್ರಿಯೆಯನ್ನ 2022 ರ ಮಾರ್ಚ್‌ನ ಮೊದಲ ವಾರದಲ್ಲೇ ನಿಲ್ಲಿಸಲಾಗಿತ್ತು. ಟ್ರಸ್ಟ್ ಅಂದಾಜಿಸಿದಂತೆ 3000 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಇನ್ನು ಮೂವರು ವರ್ಷಗಳ ಕಾಲ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿತ್ತು.

ದೇಣಿಗೆ ಸಂಗ್ರಹ ಕಾರ್ಯ ನಿಲ್ಲಿಸಿದ್ದರೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಹಣ ನೀಡುತ್ತಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದರು.

ದೇಶಾದ್ಯಂತ 9 ಲಕ್ಷ ಸ್ವಯಂಸೇವಕರು ನಾಲ್ಕು ಲಕ್ಷ ಹಳ್ಳಿಗಳ 10 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಚಂಪತ್ ರೈ ಹೇಳಿದ್ದಾರೆ.

ಅಯೋಧ್ಯೆಯಲ್ಲಿ 70 ಎಕರೆಯಲ್ಲಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಮುಂದಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಜಮೀನನ್ನು ಖರೀದಿಸಿ 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಅದಕ್ಕಾಗಿ ಸ್ಥಳೀಯ ನಿವಾಸಿಗಳ ಜಮೀನನ್ನು ಖರೀದಿಸಲಾಗುತ್ತಿದೆ ಎಂದರು.

Advertisement
Share this on...