ಪಾಟ್ನಾ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಸಂದೀಪ್ ಕುಮಾರ್ ಅವರು ವಿಚಾರಣೆಯ ಸಮಯದಲ್ಲಿ ಒಂದು ಮಾತನ್ನ ಕೇಳಿದ್ದು ಈ ಕಾರಣ ಅವರ ವೀಡಿಯೊ ಇದೀಗ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊ ನವೆಂಬರ್ 23, 2022 ರಂದು ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಲೈವ್-ಸ್ಟ್ರೀಮ್ ಆಗಿದೆ ಎಂದು ಹೇಳಲಾಗುತ್ತದೆ.
ವಿಚಾರಣೆಯ ವಿಡಿಯೋ ಬಿಹಾರ ಸರ್ಕಾರದ ಜಿಲ್ಲಾ ಭೂಸ್ವಾಧೀನ ಅಧಿಕಾರಿ ಅರವಿಂದ್ ಕುಮಾರ್ ಭಾರತಿ ಅವರ ಪ್ರಕರಣಕ್ಕೆ ಸಂಬಂಧಿಸಿದೆ. ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರವಾಗಿ 23-24 ಲಕ್ಷ ರೂಪಾಯಿ ಮಂಜೂರು ಮಾಡಿರುವುದು ತಪ್ಪು ಎಂಬ ಆರೋಪ ಅವರ ಮೇಲಿದೆ. ವಿಭಜನಾ ಮೊಕದ್ದಮೆಯ (Partition suit) ವಿಚಾರಣೆಯ ಸಂದರ್ಭದಲ್ಲಿ ಕಕ್ಷಿದಾರರೊಬ್ಬರಿಗೆ ಭೂಸ್ವಾಧೀನ ಪರಿಹಾರವನ್ನು ಹೇಗೆ ಬಿಡುಗಡೆ ಮಾಡಿದರು ಎಂಬುದನ್ನು ವಿವರಿಸಲು ನ್ಯಾಯಾಲಯವು ತನ್ನ ಮುಂದೆ ಹಾಜರಾಗುವಂತೆ ಕೇಳಿತ್ತು. ವಿಚಾರಣೆಯ ಸಮಯದಲ್ಲಿ, ಅಧಿಕಾರಿಯನ್ನು ಈಗಾಗಲೇ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಕಕ್ಷಿದಾರರಿಗೆ ತಮ್ಮ ಅಫಿಡವಿಟ್ ಸಲ್ಲಿಸಲು ಸಮಯ ನೀಡಿದ ನಂತರ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಅಧಿಕಾರಿಯನ್ನು, “ಭಾರತೀಜಿ, ರಿಸರ್ವೇಶನ್ ಆಧಾರದ ಮೇಲೆ ಬಂದಿದ್ದೀರೋ ಹೇಗೋ?” ಎಂದು ಕೇಳಿದರು.
ಅಧಿಕಾರಿ ಅರವಿಂದ್ ಕುಮಾರ್ ಭಾರತಿ ಅವರು ‘ಹೌದು’ ಎಂದು ಉತ್ತರಿಸಿದರು, ಮೀಸಲಾತಿಯ ಮೇಲೆ ಕೆಲಸ ಪಡೆದಿರುವ ಸತ್ಯವನ್ನು ಒಪ್ಪಿಕೊಂಡರು. ಅಧಿಕಾರಿ ನ್ಯಾಯಾಲಯದ ಕೊಠಡಿಯಿಂದ ಹೊರಬಂದ ನಂತರ, ನ್ಯಾಯಾಲಯದ ಕೊಠಡಿಯಲ್ಲಿದ್ದ ಕೆಲವು ವಕೀಲರು ನಗಲು ಪ್ರಾರಂಭಿಸಿದರು. ಈ ವೇಳೆ ವಕೀಲರೊಬ್ಬರು ಅಬ್ ತೋ ಹುಜೂರ್ ಸಮ್ಜಿಯೇಗಾ ಬಾತ್ ಎಂದು ಟೀಕಿಸಿದರು. ಈ ಬಗ್ಗೆ ಮತ್ತೊಬ್ಬ ವಕೀಲರು ಇದು ಎರಡು ಉದ್ಯೋಗಗಳಿಗೆ ಸಮಾನವಾಗಿರುತ್ತದೆ ಎಂದು ಟೀಕಿಸಿದರು. ಈ ಕುರಿತು ನ್ಯಾಯಮೂರ್ತಿ ಸಂದೀಪ್ ಕುಮಾರ್, “ಇಲ್ಲ, ಇಲ್ಲ, ಇದೆಲ್ಲವೂ… ಈ ಜನರಿಗೆ ಏನೂ ಆಗುವುದಿಲ್ಲ… ಈತ ಇಲ್ಲಿಯವರೆಗೂ ದುಡಿದ ಹಣವನ್ನೆಲ್ಲಾ ಖರ್ಚು ಮಾಡಿರಬಹುದು” ಎಂದು ಹೇಳಿದರು.
ನ್ಯಾಯಮೂರ್ತಿ ಕುಮಾರ್ ಅವರ ಈ ಹೇಳಿಕೆಯ ನಂತರ, ಹಾಜರಿದ್ದ ವಕೀಲರು ನಗಲು ಪ್ರಾರಂಭಿಸಿದರು. ಸುಮಾರು 1.47.28 ರಿಂದ ಪಾಟ್ನಾ ಹೈಕೋರ್ಟ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಸಂಪೂರ್ಣ ಸಂಭಾಷಣೆಯನ್ನು ನೋಡಬಹುದು. ವೀಡಿಯೊ ವೈರಲ್ ಆದ ನಂತರ, ಒಂದು ವಿಭಾಗವು ನ್ಯಾಯಮೂರ್ತಿ ಕುಮಾರ್ ಅವರನ್ನು ಟೀಕಿಸುತ್ತಿದೆ. ಕೆಲವು ದಿನಗಳ ಹಿಂದೆ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ, ಮಹಿಳೆಯ ಮನೆಯ ಮೇಲೆ ಬುಲ್ಡೋಜರ್ ಕ್ರಮಕ್ಕಾಗಿ ನ್ಯಾಯಮೂರ್ತಿ ಸಂದೀಪ್ ಕುಮಾರ್ ಬಿಹಾರ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು.