‘ರೈತರಿಗೆ 10 ಮಿಲಿಯನ್ ಡಾಲರ್ & ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿ ಕೊಡ್ತೀನಿ, ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕಾಗಿ ಆಂದೋಲನ ಶುರು ಮಾಡಿ”: SJF

in Kannada News/News 445 views

ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಕಿಸಾನ್ ಆಂದೋಲನದ ನಡುವೆ, ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆ ಮತ್ತು ಅವರ ನೀಚ ಅಜೆಂಡಾವನ್ನು ಮುಂದುವರೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕುಖ್ಯಾತ ಇಸ್ಲಾಮಿಸ್ಟ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪ್ರತಿಭಟನಾಕಾರರನ್ನು ಬೆಂಬಲಿಸಲು ಮುಂದೆ ಬಂದಿದೆ. PFI ಇಸ್ಲಾಮಿಕ್ ಉ ಗ್ರ ಗಾಮಿಗಳ ಜೊತೆಗಿನ ಸಂಪರ್ಕಕ್ಕೆ ಹೆಸರುವಾಸಿಯಾಗಿದೆ.

ಖಾಲಿಸ್ತಾನಿ ಗುಂಪು ಸಿಖ್ ಫಾರ್ ಜಸ್ಟಿಸ್ (SFJ) ಕೂಡ ಪ್ರತಿಭಟನೆಗೆ ಬೆಂಬಲ ಘೋಷಿಸಿದೆ. ಯೂಟ್ಯೂಬ್ ಮತ್ತು ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಖಾಲಿಸ್ತಾನಿ ಚಳವಳಿಯಲ್ಲಿ ಸೇರಲು ಜನರನ್ನು ಒತ್ತಾಯಿಸುವ ಜಾಹೀರಾತುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.

Advertisement

ಖಲಿಸ್ತಾನಿ ಆಂದೋಲನ್ ಸೇರಲು $10 ಮಿಲಿಯನ್ ಆಫರ್

ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಷ್ಟ ಅನುಭವಿಸಿದ (ಪ್ರಾಣ ಹಾನಿ ಅಥವ ಇನ್ನಿತರೆ ತೊಂದರೆಗೊಳಗಾದ) ರೈತರಿಗೆ 10 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುತ್ತೇನೆ ಎಂದು SFJ ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನು ಘೋಷಿಸಿದ್ದಾನೆ. ಇತ್ತೀಚೆಗೆ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಪನ್ನು ರೈತರಿಗೆ ನಷ್ಟದ ವಿವರಗಳನ್ನು ಕಳುಹಿಸುವಂತೆ ಕೇಳಿದ್ದಾನೆ, ಇದರಿಂದ ಅವರ ಸಂಸ್ಥೆಯು ಆ ನಷ್ಟದ ಮೊತ್ತವನ್ನು ಸರಿದೂಗಿಸಬಹುದು ಎಂದಿದ್ದಾನೆ.

ಇದಕ್ಕೆ ಪ್ರತಿಯಾಗಿ ಪನ್ನು ಖಲಿಸ್ತಾನ್ ಆಂದೋಲನ್‌ಗೆ ಸೇರುವಂತೆ ಕೇಳಿಕೊಂಡಿದ್ದಾನೆ. ‘ಜನಮತಸಂಗ್ರಹ’ಕ್ಕಾಗಿ ವೋಟ್ ಗಳನ್ನ ಖರೀದಿಸಲು ಯತ್ನಿಸುತ್ತಿದ್ದಾನೆ. ಈತನ ಸಂಘಟನೆಯು ಪಂಜಾಬ್ ಅನ್ನು ಭಾರತದಿಂದ ಪ್ರತ್ಯೇಕಿಸಿ ಸಿಖ್ಖರಿಗಾಗಿ ಖಲಿಸ್ತಾನ್ ರಾಷ್ಟ್ರವನ್ನು ರಚಿಸುವುದಾಗಿ ಘೋಷಿಸಿದೆ. ಖಲಿಸ್ತಾನಿ ಪಡೆಗಳಿಗೆ ಪಾಕಿಸ್ತಾನದ ಸಂಪೂರ್ಣ ಬೆಂಬಲ ಸಿಗುತ್ತಿದೆ.

ವೀಡಿಯೊದಲ್ಲಿ, ಪನ್ನು, “ಸಿಖ್ಸ್ ಫಾರ್ ಜಸ್ಟಿಸ್ (SFJ) ಪಂಜಾಬ್ ಮತ್ತು ಹರಿಯಾಣದ ರೈತರಿಗೆ $10 ಮಿಲಿಯನ್ ಘೋಷಿಸಿದೆ. ದೆಹಲಿಗೆ ತೆರಳುವಾಗ ಗಾಯಗೊಂಡ ಅಥವಾ ಯಾವುದೇ ಹಾನಿಗೊಳಗಾದವರಿಗೆ ಈ ಮೊತ್ತವನ್ನು ನೀಡಲಾಗುತ್ತದೆ” ಎಂದಿದ್ದಾನೆ. ನವೆಂಬರ್ 30 ರಂದು ಸಿಖ್ ಸಮುದಾಯವು ಮೊದಲ ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನು ಆಚರಿಸುವ ದಿನದಂದು ಸಿಖ್ಖರಿಗೆ ನ್ಯಾಯಕ್ಕಾಗಿ ಕರೆ ನೀಡುವಂತೆ ರೈತರಿಗೆ ಕರೆ ನೀಡಿದ್ದಾನೆ.

ಈತ ಮುಂದೆ ಮಾತನಾಡುತ್ತ, “ನವೆಂಬರ್ 30 ರಂದು, ಪಂಜಾಬ್ ಜನಾಭಿಪ್ರಾಯ ಸಂಗ್ರಹಕ್ಕಾಗಿ ನಿಮ್ಮ ಮತವನ್ನು ನೋಂದಾಯಿಸಿ. ಇದು ಹಿಂದ್ ಮತ್ತು ಪಂಜಾಬ್ ನಡುವಿನ ಯುದ್ಧ. ಖಲಿಸ್ತಾನ್ ಒಂದೇ ನಮಗಿರುವ ಏಕೈಕ ದಾರಿ. ಈ ಕಪ್ಪು ಕಾನೂನುಗಳು ನಿಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿವೆ. ಪಂಜಾಬ್ ಸ್ವತಂತ್ರವಾಗುವ ದಿನ ಬಂದಿದೆ, ಪಂಜಾಬ್‌ನಲ್ಲಿ ಯಾವುದೇ ರೈತರ ಭೂಮಿಯನ್ನು ಯಾರೂ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದಿದ್ದಾನೆ.

ಪಾಕಿಸ್ತಾನ ಪ್ರಾಯೋಜಿತ SFJ ಖಲಿಸ್ತಾನವನ್ನು ಬೆಂಬಲಿಸುವ ಪಂಜಾಬ್ ಮತ್ತು ಹರಿಯಾಣದ ರೈತರಿಗೆ $1 ಮಿಲಿಯನ್ ಆರ್ಥಿಕ ನೆರವು ನೀಡುವುದಾಗಿ ಈ ಹಿಂದೆಯೂ ಘೋಷಿಸಿರುವುದು ಗಮನಾರ್ಹವಾಗಿದೆ. ಸೆಪ್ಟೆಂಬರ್ 23 ರಂದು ಪ್ರಕಟವಾದ ಮಾಧ್ಯಮ ವರದಿಗಳ ಪ್ರಕಾರ, ಸಾಲಗಾರ ರೈತರ ನಡುವೆ $1 ಮಿಲಿಯನ್ ಘೋಷಿಸುವ ಮೂಲಕ SFJ ರೈತರ ಪ್ರತಿಭಟನೆಯ ಲಾಭವನ್ನು ಪಡೆಯಲು ಪ್ರಯತ್ನಿಸಿತ್ತು.

“ಯಾವುದೇ ರೈತರು, ಧರ್ಮವನ್ನು ಲೆಕ್ಕಿಸದೆ, ಅಕ್ಟೋಬರ್ 1 ಮತ್ತು 8 ರ ನಡುವೆ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೆ 25 ಮತಗಳನ್ನು ನೋಂದಾಯಿಸಬಹುದು. ಪ್ರತಿಯಾಗಿ, ಅವರು ತಮ್ಮ ಸಾಲವನ್ನು ಮರುಪಾವತಿಸಲು 5000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ” ಎಂದು SFJ ಹೇಳಿತ್ತ‌. ಈ ಮಾಹಿತಿಯು ಗುಪ್ತಚರ ಸಂಸ್ಥೆಗಳು ಸ್ವೀಕರಿಸಿದ ಒಳಹರಿವುಗಳನ್ನು ಆಧರಿಸಿದೆ. ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಮಸೂದೆಗಳು ರೈತರ ಭೂಮಿಯನ್ನು ಕಿತ್ತುಕೊಳ್ಳುವ ವಸಾಹತುಶಾಹಿ ಅಜೆಂಡಾ ಎಂದು ಬಣ್ಣಿಸಿದ ಎಸ್‌ಎಫ್‌ಜೆ ಜನರಲ್ ಕೌನ್ಸೆಲ್ ಗುರುಪತ್‌ವಂತ್ ಸಿಂಗ್ ಪನ್ನು ಮೋದಿ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟಲು ಪ್ರಯತ್ನಿಸಿದ್ದನು. ಪಂಜಾಬ್ ಮತ್ತು ಹರಿಯಾಣದ ರೈತರನ್ನು ಅಸಹಾಯಕಗೊಳಿಸಲು ಮೋದಿ ಸರ್ಕಾರ ಬಯಸುತ್ತಿದೆ ಎಂದು ಆತ ಹೇಳಿದ್ದನು. SFJ ಇದರಲ್ಲಿ ಹರಿಯಾಣದ ರೈತರನ್ನೂ ಸೇರಿಸಿಕೊಂಡಿತು, ಏಕೆಂದರೆ ಅದು ಹರಿಯಾಣವನ್ನೂ ಖಲಿಸ್ತಾನದ ಭಾಗವೆಂದು ಪರಿಗಣಿಸುತ್ತಾರೆ.

SFJ ನ ಡೋರ್ ಟು ಡೋರ್ ಕ್ಯಾಂಪೇನ್, ಸಿಖ್ಖರು ಖಲಿಸ್ತಾನ್ ಚಳವಳಿಯ ಭಾಗವಾಗಲು ಪ್ರಚೋದನೆ

ಇದೆ ವರ್ಷದ ಸೆಪ್ಟೆಂಬರ್‌ ತಿಂಗಳನಲ್ಲಿ, SFJ ಡೋರ್ ಟು ಡೋರ್ ಕ್ಯಾಂಪೇನ್ ಘೋಷಿಸಿತ್ತು, ಅದರಲ್ಲಿ ತನ್ನ ಪ್ರತ್ಯೇಕತಾವಾದಿ ಕಾರ್ಯಸೂಚಿ ‘ರೆಫರೆಂಡಮ್ 2020’ (ರೆಫರೆಂಡಮ್ 2010) ಅನ್ನು ಬೆಂಬಲಿಸುವವರನ್ನು ನೋಂದಾಯಿಸುತ್ತಿತ್ತು. ಈ ಪ್ರಕಟಣೆಯ ನಂತರ, ಗುಪ್ತಚರ ಮತ್ತು ಭ ಯೋತ್ಪಾ ದನಾ ವಿರೋಧಿ ಏಜೆನ್ಸಿಗಳು ರಾಜ್ಯದ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದವು. ಆದರೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರವು ಅಂತಹ ಗಂಭೀರ ವಿಷಯದ ಬಗ್ಗೆ ಸ್ವಲ್ಪವೂ ಸಕ್ರಿಯವಾಗಲಿಲ್ಲ.

SFJ ನ YouTube ಜಾಹೀರಾತುಗಳಲ್ಲಿ ಪ್ರಶ್ನೆಗಳು

ಯೂಟ್ಯೂಬ್‌ನಲ್ಲಿ ಜಾಹೀರಾತಿನಂತೆ ಪ್ಲೇ ಆಗುತ್ತಿರುವ ವೀಡಿಯೊವನ್ನು ನೆಟಿಜನ್‌ಗಳು ಗಮನಿಸಿದ್ದಾರೆ ಮತ್ತು ಅದು ಗೂಗಲ್ ಜಾಹೀರಾತುದಾರರ ನೀತಿಗಳಿಗೆ ವಿರುದ್ಧವಾಗಿದೆ ಎಂದು ಕಂಡುಕೊಂಡರು. Google ನ ನೀತಿಯ ಪ್ರಕಾರ, “ನಾಗರಿಕ ತುರ್ತು ಪರಿಸ್ಥಿತಿ, ನೈಸರ್ಗಿಕ ವಿಕೋಪಗಳು, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ, ಭ ಯೋತ್ಪಾ ದನೆ ಮತ್ತು ಸಂಬಂಧಿತ ಚಟುವಟಿಕೆಗಳು, ಸಂಘರ್ಷ ಅಥವಾ ಹಿಂ ಸಾ ಚಾರ ಇತ್ಯಾದಿಗಳಂತಹ ಸಂಭಾವ್ಯ ಮಹತ್ವದ ಸಾಮಾಜಿಕ, ಸಾಂಸ್ಕೃತಿಕ ಅಥವಾ ರಾಜಕೀಯ ಪ್ರಭಾವವನ್ನು ಹೊಂದಿರುವ ಸೂಕ್ಷ್ಮ ಘಟನೆಯನ್ನು ಪ್ರಚಾರ ಮಾಡುವ ಜಾಹೀರಾತುಗಳು” ಅವುಗಳನ್ನು ಅನುಮತಿಸಲಾಗುವುದಿಲ್ಲ.

ಇದರ ಹೊರತಾಗಿ, ಅಪಾಯಕಾರಿ ಅಥವಾ ನಿಂದನೀಯ ವಿಷಯದ ಅಡಿಯಲ್ಲಿ, YouTube ಸೇರಿದಂತೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ “ಭ ಯೋತ್ಪಾ ದಕ ಗುಂಪುಗಳಿಂದ ಅಥವಾ ಅದಕ್ಕೆ ಬೆಂಬಲವಾಗಿ ರಚಿಸಲಾದ ವಿಷಯ” ಅನ್ನು ಜಾಹೀರಾತುಗಳಾಗಿ ಅನುಮತಿಸಲಾಗುವುದಿಲ್ಲ ಎಂದು Google ಸ್ಪಷ್ಟವಾಗಿ ಹೇಳುತ್ತದೆ. ಸಿಖ್ಸ್ ಫಾರ್ ಜಸ್ಟಿಸ್ ಯುಎಪಿಎ, 1967 ರ ಅಡಿಯಲ್ಲಿ ಕಾನೂನುಬಾಹಿರ ಸಂಸ್ಥೆಯಾಗಿದೆ. 2019 ರಲ್ಲಿ, SFJ ಅನ್ನು ದೇಶ ವಿರೋಧಿ ಚಟುವಟಿಕೆಗಳಿಗಾಗಿ ಗೃಹ ಸಚಿವಾಲಯವು ನಿಷೇಧಿಸಿತ್ತು. ಈ ವರ್ಷ ಜುಲೈನಲ್ಲಿ, ಭಾರತ ಸರ್ಕಾರವು ಸಂಸ್ಥೆಗೆ ಲಿಂಕ್ ಮಾಡಿದ 40 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ.

ಆದಾಗ್ಯೂ, ಈ ಸಂದರ್ಭದಲ್ಲಿ ನೀತಿಗಳನ್ನು ಜಾರಿಗೊಳಿಸದಿರಲು YouTube ನಿರ್ಧರಿಸಿದೆ ಎಂದು ತೋರುತ್ತದೆ. YouTube ನ ನೀತಿಗಳು ಅರಾಜಕತೆ ಹರಡಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಸತತವಾಗಿ ಗಮನಿಸಲಾಗಿದೆ.

ಇತ್ತೀಚಿಗೆ ಜಾರಿಗೆ ತಂದಿರುವ ಕಾನೂನು ರೈತರ ಭೂಮಿಯನ್ನು ಕಸಿದುಕೊಳ್ಳುತ್ತದೆ ಎಂದು ಉ ಗ್ರ ರು ವದಂತಿ ಹಬ್ಬಿಸುತ್ತಿದ್ದಾರೆ. ಖಲಿಸ್ತಾನಿ ಪರ ನಟ ಕಮ್ ರಾಜಕಾರಣಿ ದೀಪ್ ಸಿಧು ಕೂಡ ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡಿದ್ದನು. ವಾಸ್ತವವಾಗಿ, ಕಾನೂನುಗಳು ರೈತರನ್ನು ಖಾಸಗಿ ಕಂಪನಿಗಳು ಅಥವಾ ವ್ಯಾಪಾರಿಗಳಿಂದ ಅನ್ಯಾಯದ ವಿರುದ್ಧ ಹಲವಾರು ರೀತಿಯಲ್ಲಿ ರಕ್ಷಿಸುತ್ತವೆ. ವರದಿಗಳ ಪ್ರಕಾರ, ಕೆಲವು ರೈತರು ಈಗಾಗಲೇ ಹೊಸ ಕಾನೂನುಗಳಿಂದ ಪ್ರಯೋಜನ ಪಡೆದಿದ್ದಾರೆ, ಏಕೆಂದರೆ ಇದು ವ್ಯಾಪಾರಿಗಳಿಂದ ವಿಳಂಬವಾದ ಪಾವತಿಗಳನ್ನು ತೆರವುಗೊಳಿಸಲು ಸಹಾಯ ಮಾಡಿದೆ.

Advertisement
Share this on...