ಲಾಂಚ್ ಆಯ್ತು ಇ-ರುಪೀ, ಇಂಟರ್ನೆಟ್ ಇಲ್ಲದೆಯೂ ಹಣ ಟ್ರಾನ್ಸಫರ್ ಮಾಡಬಹುದು: ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

in Kannada News/News/ಕನ್ನಡ ಮಾಹಿತಿ 481 views

ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

Advertisement

ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್ನೆಟ್ ಸಂಪರ್ಕ ಇಲ್ಲದೇ ಹಣವನ್ನು ಕಳುಹಿಸಬಹುದಾದ ಸೇವೆಗೆ ಮೋದಿ ಚಾಲನೆ ನೀಡಿದರು.

ಏನಿದು ಇ-ರುಪೀ?

ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದು ನಗದು ರಹಿತವಾಗಿ, ಇಂಟರ್ನೆಟ್ ಸಂಪರ್ಕವಿಲ್ಲದೆ, ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಆಧಾರಿತ ಇ-ವೋಚರ್‍ನ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ.

ಯಾರು ಇ-ರುಪೀ ಫಲಾನುಭವಿಗಳಿರುತ್ತಾರೋ ಅವರ ಮೊಬೈಲ್‍ಗೆ ಸಂದೇಶದ ಮೂಲಕ ಕಳುಹಿಸಬಹುದು. ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಬಳಸದೇ ಇ-ರುಪೀ ಸಂದೇಶದ ಮೂಲಕ ವೋಚರ್ ಬಳಸಬಹುದಾಗಿದೆ.

ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ಬದಲಾವಣೆಗಳು ನಡೆಯುತ್ತಿವೆ. ಇದರೊಂದಿಗೆ ಇದೀಗ ಡಿಜಿಟಲ್ ಕ್ಷೇತ್ರಕ್ಕೆ ಇ-ರುಪೀ ಕಾಲಿಡುತ್ತಿದೆ.

ನಗದು ರಹಿತ, ಸಂಪರ್ಕವಿಲ್ಲದ ವಿಧಾನ

ಈ ಒಂದು ಬಾರಿಯ ಪಾವತಿ ಕಾರ್ಯವಿಧಾನವಾಗಿದ್ದು ಬಳಕೆದಾರರು ಸೇವಾ ಪೂರೈಕೆದಾರರಲ್ಲಿ ವೋಚರ್ ಅನ್ನು ಪಡೆದುಕೊಳ್ಳಲು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ (Digital Payments) ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಗತ್ಯವಿಲ್ಲ.

ಇ-ರುಪಿ (e-RUPI) ಎಂದರೆ, ವಾಸ್ತವವಾಗಿ ಇದು ನಗದುರಹಿತ (Cashless) ಮತ್ತು ಸಂಪರ್ಕವಿಲ್ಲದ ವಿಧಾನವಾಗಿದೆ. ಇದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ.

ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ

ಪೂರ್ವಪಾವತಿಯಾಗಿರುವುದರಿಂದ, ಇದು ಯಾವುದೇ ಮಧ್ಯವರ್ತಿಯನ್ನು ಒಳಗೊಳ್ಳದೆ ಸಮಯಕ್ಕೆ ಸೇವಾ ಪೂರೈಕೆದಾರರಿಗೆ ಪಾವತಿಸುತ್ತದೆ. ಸೇವೆಗಳ ಸೋ ರಿ ಕೆ-ನಿ ರೋ ಧ ಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇದು ಕ್ರಾಂ ತಿ ಕಾ ರಿ ಹೆಜ್ಜೆಯಾಗಿದೆ.

ಇ-ರುಪಿ (e-RUPI) ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಸೇವೆಗಳ ಪ್ರಾಯೋಜಕರನ್ನು ಅಂತರ್ಸಂಪರ್ಕಿಸುತ್ತದೆ ಮತ್ತು ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡುವುದನ್ನು ಖಾತ್ರಿಪಡಿಸುತ್ತದೆ.

ಆನ್‌ಲೈನ್ ಪಾವತಿ ಹೆಚ್ಚು ಸುರಕ್ಷಿತ

ವೇದಿಕೆಯನ್ನು ರಾಷ್ಟ್ರೀಯ ಪಾವತಿಗಳ ನಿಗಮವು (NPCI) ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಡಿಜಿಟಲ್ ಪಾವತಿ ಪರಿಹಾರ e-RUPI ಆರಂಭಿಸುವ ಮುಖ್ಯ ಉದ್ದೇಶವೆಂದರೆ ಆನ್‌ಲೈನ್ ಪಾವತಿಯನ್ನು ಹೆಚ್ಚು ಸುಲಭ ಮತ್ತು ಸುರಕ್ಷಿತವಾಗಿಸುವುದು. ರಿಡೀಮ್​ ಮಾಡುವುದಕ್ಕೆ ಕಾರ್ಡ್ ಅಥವಾ ವೋಚರ್​ನ ಹಾರ್ಡ್​ ಕಾಪಿ ಬೇಕಾಗಲ್ಲ. ಸಂದೇಶದ ಮೂಲಕ ಪಡೆಯುವ ಕ್ಯೂಆರ್ ಕೋಡ್ ಸಾಕು.

ಇ-ರುಪಿ ಎಲ್ಲೆಲ್ಲಿ ಬಳಸಬಹುದು?

ಇ-ರುಪಿ (e-RUPI) ವೇದಿಕೆಯನ್ನು ಅನೇಕ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಬಳಸಬಹುದು. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ರಸಗೊಬ್ಬರ ಸಹಾಯಧನ, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔ ಷ ಧ ಗಳು ಮತ್ತು ರೋ ಗ ನಿ ರೋ ಧ ಕ ಗಳಂತಹ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ಒದಗಿಸಲು ಬಳಸಬಹುದು. ಖಾಸಗಿ ವಲಯವೂ ಸಹ ಈ ಡಿಜಿಟಲ್ ವೋಚರ್‌ಗಳನ್ನು ತಮ್ಮ ಉದ್ಯೋಗಿಗಳ ಕಲ್ಯಾಣ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿ ಬಳಸಬಹುದು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಎಂಟು ಬ್ಯಾಂಕ್​​ಗಳಲ್ಲಿ ಈಗಾಗಲೇ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ, ಆಕ್ಸಿಸ್, ಪಂಜಾಬ್​ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳಲ್ಲಿ ಲಭ್ಯ ಇದೆ.

Advertisement
Share this on...