ಲಾಲ್ ಸಿಂಗ್ ಚಡ್ಡಾ ಬೆಂಬಲಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಜನ, “ಬೇಕಿದ್ರೆ ನನ್ನ ಚಿತ್ರ LIGER ನೋಡಿ ಇಲ್ಲಾಂದ್ರೆ ನೋಡಬೇಡಿ, ಯಾರ್ ಫೋರ್ಸ್ ಮಾಡ್ತಿದಾರೆ?” ಎಂದು ಧಿಮಾಕಿನಿಂದ ಮಾತನಾಡಿದ ವಿಜಯ್ ದೇವರಕೊಂಡ, ಮಗನೇ ನಿನ್ನ ಸರದಿಯೂ ಬಂತು ಎಂದ ಜನ

in Uncategorized 258 views

ಬಾಲಿವುಡ್‌ನ ಬಣ್ಣ ಬಣ್ಣದ ಲೋಕದಲ್ಲಿ ಮಿಂಚಲು ಸಿದ್ಧರಾಗಿದ್ದ ದಕ್ಷಿಣದ ಖ್ಯಾತ ನಾಯಕ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರ ‘LIGER’ ಮೇಲೂ ಬಾಯ್‌ಕಾಟ್‌ನ ಕತ್ತಿ ತೂಗಲಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೇವರಕೊಂಡ ಈ ಬಾಯ್‌ಕಾಟ್ ಟ್ರೆಂಡ್ ಕುರಿತು ಹೇಳಿಕೆ ನೀಡಿದ್ದರು, ನಂತರ ಜನರು ಅವರ ವಿರುದ್ಧ ಅಸಮಾಧಾನಗೊಂಡಿದ್ದರು ಮತ್ತು ಅವರ ಚಿತ್ರವನ್ನು ಬಾಯ್‌ಕಾಟ್ ಮಾಡಲು ಸೋಶಿಯಲ್ ಮೀಡಿಯಾಗಳಲ್ಲಿ #BoycottLiger ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು ಕರಣ್ ಜೋಹರ್ ಅವರ ಪ್ರೊಡಕ್ಷನ್ ಹೆಸರೂ LIGER ನೊಂದಿಗೆ ತಳುಕು ಹಾಕಿಕೊಂಡಿರುವುದೂ LIGER ಬಾಯ್‌ಕಾಟ್ ಗೆ ಕಾರಣವಾಗಿತ್ತು. ಆದರೆ ದೇವರಕೊಂಡ ಪದೇ ಪದೇ ಹೇಳಿಕೆ ನೀಡುತ್ತಿರುವುದು ಪ್ರೇಕ್ಷಕರನ್ನು ಅವರ ವಿರುದ್ಧ ನಿಲ್ಲುವಂತೆ ಮಾಡಿದೆ. ಈತ ದುರಹಂಕಾರಿ ಎಂದು ಕರೆದಿರುವ ಜನರು ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

Advertisement

ನಾವು ಇವುಗಳಿಗೆಲ್ಲಾ (ಬಾಯ್‌ಕಾಟ್) ಬೆಲೆ ಕೊಡೋ ಅವಶ್ಯಕತೆಯಿಲ್ಲ: ವಿಜಯ್ ದೇವರಕೊಂಡ

ವಾಸ್ತವವಾಗಿ, LIGER ಬಿಡುಗಡೆಗೂ ಮೊದಲು, ವಿಜಯ್ ದೇವರಕೊಂಡ ಅವರ ಸಣ್ಣ ಕ್ಲಿಪ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ, ಇದರಲ್ಲಿ ಅವರು ಅನನ್ಯ ಪಾಂಡೆ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಕೂಲ್ ಆಗಿ, “ನಾವು ಈ ಜನರಿಗೆ ಸ್ವಲ್ಪ ಹೆಚ್ಚೇ ಮಹತ್ವ ಕೊಡ್ತಿದ್ದೀವಿ ಅನ್ಸತ್ತೆ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಏನಿದೆ? ನಾವು ಚಿತ್ರವನ್ನು ಮಾಡುತ್ತೇವೆ. ನೋಡಬಯಸುವವರು ನೋಡುತ್ತಾರೆ. ನೋಡಲು ಇಷ್ಟವಿಲ್ಲದವರು ಟಿವಿಯಲ್ಲಿ ಅಥವಾ ಫೋನ್‌ನಲ್ಲಿ ನೋಡುತ್ತಾರೆ. ಇದಕ್ಕೆ ನಾವೇನ್ ಮಾಡೋಕ್ ಆಗತ್ತೆ” ಎಂದು ಹೇಳುತ್ತಿದ್ದಾರೆ.

#BoycottLiger ಟ್ರೆಂಡ್ ಮಾಡಿದ ಜನ

ವಿಜಯ್ ದೇವರಕೊಂಡ ಅಬರ ಈ ಮಾತನ್ನ ಕೇಳಿದ ನಂತರ, ಜನರು – ಈಗ ನೀವು ಬಾಯ್‌ಕಾಟ್‌ನ ಪವರ್ ಏನು ಅನ್ನೋದನ್ನ ನೋಡುತ್ತೀರಿ ಎಂದಿದ್ದಾರೆ. ಯೂಸರ್ ಗಳು ಬಳಕೆದಾರರು ವಿಜಯ್ ದೇವರಕೊಂಡಗೆ, “ಅಣ್ಣ ನೀವು ಒಳ್ಳೆಯ ನಟ ಆದರೆ ನೀವು ಈ ರೀತಿ ಬಾಲಿವುಡ್‌ಗೆ ಹತ್ತಿರವಾಗುವುದರಿಂದ ನಿಮ್ಮನ್ನು ನೀವು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೀರಿ. ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅವರನ್ನು ಅನುಸರಿಸಿ” ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಪತ್ತಾರ್ ಎಂಬುವವರು ಕಮೆಂಟ್ ಮಾಡುತ್ತ, “ನೀನು ಈ ಪ್ರಶ್ನೆಗೆ ಉತ್ತರಿಸೋದ್ರಿಂದ ಬಚಾವ್ ಆಗಬಹುದಿತ್ತು (ಉತ್ತರ ಕೊಡದೇ ಇದ್ರೂ ನಡೀತಿತ್ತು). ಆದರೆ ಈಗ ಸಂಕಷ್ಟಕ್ಕೆ ಸಿಲುಕಿದೆ” ಎಂದಿದ್ದಾರೆ.

ಸ್ಯಾಮ್ ಕುಮಾರ್ ಎಂಬುವವರು, “ಬಾಲಿವುಡ್ ಬಾಯ್‌ಕಾಟ್ ಆಗ್ತಿದೆ ಭಾಯ್, ನಿನಗೆ ಹಿಟ್ ಆಗಬೇಕಿದ್ರೆ ಎಲ್ಲಿಗೆ ಬೇಕಾದರೂ ಹೋಗು, ಬೇಕಂದ್ರೆ ಬಿಹಾರ್‌ಗಾದರೂ ಹೋಗು ಆದರೆ ಬಾಲಿವುಡ್ ಗೆ ಮಾತ್ರ ಹೋಗಬೇಡ” ಎಂದಿದ್ದಾರೆ.

ಬಾಯ್‌ಕಾಟ್ ಟ್ರೆಂಡ್ ನ ಬಳಿಕ ಮಾತನಾಡುತ್ತ ‘ಹೆದರಬೇಡಿ’ ಎಂದಿದ್ದ ವಿಜಯ್ ದೇವರಕೊಂಡ

ಸೋಷಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ LIGER ಟ್ರೆಂಡ್ ಪ್ರಾರಂಭವಾದ ನಂತರ, ವಿಜಯ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೇಳಿಕೆಯನ್ನು ನೀಡಿದರು. ಕರಣ್ ಜೋಹರ್ ಅವರನ್ನು ವಿನಂತಿಸುವ ಮೂಲಕ ನಾರ್ಥ್ ಆಡಿಯನ್ಸ್ ವರೆಗೂ ತಮ್ಮ ಚಿತ್ರವನ್ನು ಹೇಗೆ ರೆಡಿ ಮಾಡಿದ್ದೇವೆ ಎಂದು ಹೇಳಿದರು.

ಬಾಯ್‌ಕಾಟ್ ಟ್ರೆಂಡ್ ಬಗ್ಗೆ ಮಾತನಾಡುತ್ತ, 

“ಆ ಜನರ (ಬಾಯ್‌ಕಾಟ್ ಮಾಡುವವರ) ಸಮಸ್ಯೆ ಏನು ಮತ್ತು ಅವರಿಗೆ ಏನು ಬೇಕು ಎಂದು ನನಗೆ ತಿಳಿದಿಲ್ಲ. ನಾವು ನಮ್ಮ ಕಡೆಯಿಂದ ಸರಿಯಾಗಿದ್ದೇವೆ. ನಾನು ಹುಟ್ಟಿದ್ದು ಹೈದರಾಬಾದ್‌ನಲ್ಲಿ. ಚಾರ್ಮೆ ಹುಟ್ಟಿದ್ದು ಪಂಜಾಬ್ ನಲ್ಲಿ. ಪುರಿ ಸರ್ ಹುಟ್ಟಿದ್ದು ನರಸೀಪಟ್ಟಣದಲ್ಲಿ. ಹಾಗಾದರೆ ನಾವು ಕೆಲಸ ಮಾಡಬಾರದೇ? ಈ ಸಿನಿಮಾ ಮಾಡಲು ಮೂರು ವರ್ಷ ಕಷ್ಟಪಟ್ಟಿದ್ದೇವೆ. ನಾವು ನಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬಾರದೇ? ನಾವು ಮನೆಯಲ್ಲಿ ಕುಳಿತುಕೊಳ್ಳೋಣವೇ? ಪ್ರೇಕ್ಷಕರು ನಮ್ಮ ಮೇಲೆ ತೋರುತ್ತಿರುವ ಪ್ರೀತಿಯನ್ನು ನೀವೆಲ್ಲರೂ ನೋಡುತ್ತಿದ್ದೀರಿ. ಆ ಪ್ರೇಕ್ಷಕರಿಗಾಗಿ ಸಿನಿಮಾ ಮಾಡುತ್ತಿದ್ದೇನೆ. ನನಗೆ ಅವರು ಬೇಕು. ನಮ್ಮಲ್ಲಿ ಈ ಜನರು ಇಲ್ಲದ ತನಕ, ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ” ಎಂದಿದ್ದಾರೆ.

ಅವರು ಮುಂದೆ ಮಾತನಾಡುತ್ತ, “ಯಾವಾಗ ನಾವು ಸರಿ ಇದ್ದೇವೋ ಮತ್ತು ನಮ್ಮ ಧರ್ಮವನ್ನು ಅನುಸರಿಸುತ್ತೇವೆಯೋ ಆಗ ಬೇರೆಯವರ ಮಾತನ್ನು ಕೇಳುವ ಅಗತ್ಯವಿಲ್ಲ, ಏನೇ ಬರಲಿ, ಹೋರಾಡಬೇಕು. ನನಗೆ ಭಯವಿಲ್ಲ. ನಮ್ಮ ಹೃದಯದಿಂದ ನಾವು ಇದನ್ನು ಮಾಡಿದ್ದೇವೆ ಎಂದು ನಾನು ಹೃದಯದಿಂದ ಹೇಳುತ್ತೇನೆ. ನಾವೆಲ್ಲರೂ ಈ ದೇಶಕ್ಕೆ ಸೇರಿದವರು ಮತ್ತು ನಮ್ಮ ಜನರಿಗೆ ನಾವು ಎಷ್ಟು ಮಾಡಿದ್ದೇವೆ ಎಂದು ತಿಳಿದಿದೆ. ಕಂಪ್ಯೂಟರ್ ಮುಂದೆ ಕೂತು ಸುಮ್ಮನೆ ಟ್ವೀಟ್ ಮಾಡುವವರು ನಾವಲ್ಲ. ಏನಾದರೂ ಸಂಭವಿಸಿದಾಗ ನಾವು ಮೊದಲು ಬರುತ್ತೇವೆ” ಎಂದರು.

ವಿಜಯ್ ತಮ್ಮ ಮುಂಬರುವ ಚಿತ್ರ ಸೂಪರ್ ಹಿಟ್ ಆಗುವುದು ಗ್ಯಾರಂಟಿ ಎಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡುತ್ತ, “ಚಿತ್ರವು ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂದು ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ. ನೀವು ನನಗೆ ಒಂದು ಕೆಲಸ ಮಾಡಬೇಕು, ನೀವು ಆಗಸ್ಟ್ 25 ರಂದು ಗುಂಟೂರಿನಲ್ಲಿ ಸ್ಫೋಟವನ್ನು ಸೃಷ್ಟಿಸಬೇಕು. ಆಗಸ್ಟ್ 25 ರಂದು ಧೂಮ್ ಮಾಡುತ್ತೇವೆ” ಎಂದಿದ್ದಾರೆ.

Advertisement
Share this on...