ಲಾಲ್ ಸಿಂಗ್ ಚಡ್ಡಾ ಸಪೋರ್ಟ್ ಮಾಡಿದ್ದ ಹೃತಿಕ್ ರೋಷನ್ ನಿಂದ ಈಗ ಹಿಂದೂ ಧರ್ಮ ಹಾಗು ಜ್ಯೋತಿರ್ಲಿಂಗಕ್ಕೆ ಅಪಮಾನ: ಹೃತಿಕ್ ವಿರುದ್ಧ ತಿರುಗಿಬಿದ್ದ ಹಿಂದುಗಳು

in Uncategorized 146 views

ನವದೆಹಲಿ: ಉಜ್ಜಯಿನಿ ಮಹಾಕಾಲೇಶ್ವರ ದೇಗುಲದ ಹೆಸರಿನಲ್ಲಿ ಹೃತಿಕ್ ರೋಷನ್ ಅವರ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದ ಹುಟ್ಟು ಹಾಕಿದೆ, ಅದರಲ್ಲಿ ಹೃತಿಕ್ ರೋಷನ್ ನನಗೆ ಹಸಿವಾಗಿದೆ ಎಂದು ಹೇಳುತ್ತ, ಮಹಾಕಾಲ್ ನಿಂದ ಥಾಲಿ ಆರ್ಡರ್ ಮಾಡಿದ್ದೇನೆ ಎಂದು ಹೇಳುತ್ತಾರೆ. ಉಜ್ಜಯಿನಿ ಮಹಾಕಾಲ್ ದೇವಸ್ಥಾನದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೃತಿಕ್ ರೋಷನ್ ಅವರ ಜಾಹೀರಾತಿನ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ಚಲನಚಿತ್ರ ನಟ ಹೃತಿಕ್ ರೋಷನ್ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ Zomato ದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ನನಗೆ ಥಾಲಿ ಬೇಕಾದರೆ ಉಜ್ಜಯಿನಿಯ ಮಹಾಕಾಲ್‌ನಿಂದ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಂದ ನಂತರ ಹೃತಿಕ್ ರೋಷನ್ ಅವರ ಈ ಜಾಹೀರಾತಿನ ವಿರುದ್ಧ ಮಹಾಕಾಲ್ ದೇವಸ್ಥಾನದ ಅರ್ಚಕರು ತಿರುಗಿಬಿದ್ದಿದ್ದಾರೆ. ಮಹಾಕಾಲ್ ದೇವಸ್ಥಾನದಿಂದ ಇಂತಹ ಯಾವುದೇ ಥಾಲಿಯನ್ನ ಇಡೀ ದೇಶಕ್ಕೆ ಬಿಡಿ ಉಜ್ಜಯಿನಿಯಲ್ಲೂ ಡೆಲಿವರಿ ಮಾಡಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ. ಹಾಗೂ ದೇವಸ್ಥಾನದ ಮುಂಭಾಗದ ಜಾಗದಲ್ಲಿ ಭಕ್ತರಿಗೆ ಮಾತ್ರ ನಿಶುಲ್ಕವಾಗಿ ಪ್ರಸಾರ ನೀಡಲಾಗುತ್ತಿದ್ದು, ಈ ಜಾಹೀರಾತಿನಿಂದ ಭಕ್ತರು ಗೊಂದಲಕ್ಕೀಡಾಗುತ್ತಿದ್ದಾರೆ ಎಂದಿದ್ದಾರೆ.

Advertisement

ಹೃತಿಕ್ ರೋಷನ್ ಮತ್ತು Zomato ಕಂಪನಿ ಕ್ಷಮೆಯಾಚಿಸಬೇಕು ಎಂದು ಅರ್ಚಕರು ಒತ್ತಾಯಿಸಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಉಜ್ಜಯಿನಿ ಮಹಾಕಾಲ್ ದೇವಸ್ಥಾನದ ಅರ್ಚಕರು, ಭಕ್ತರು ಹಾಗೂ ಆಡಳಿತ ಸಿಬ್ಬಂದಿಯಲ್ಲಿ ಸಂಚಲನ ಮೂಡಿದೆ. ಪಾಂಡೆ ಪೂಜಾರಿ ಸೇರಿದಂತೆ ಉಜ್ಜಯಿನಿ ಮಹಾಕಾಲ್ ದೇವಸ್ಥಾನದ ಆಡಳಿತ ಮಂಡಳಿಯು ಹೃತಿಕ್ ರೋಷನ್ ಅವರ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, Zomato ಕಂಪನಿಗೆ ನೋಟಿಸ್ ಕಳುಹಿಸುವ ಬಗ್ಗೆ ಮಾತನಾಡುತ್ತಿದೆ, ಜೊತೆಗೆ ಹೃತಿಕ್ ರೋಷನ್ ಅವರ ಕ್ಷಮೆಯಾಚಿಸುವ ಬಗ್ಗೆಯೂ ಮಾತನಾಡುತ್ತಿದೆ. ಫುಡ್ ಡೆಲಿವರಿ ಕಂಪನಿ Zomato ಸೋಶಿಯಲ್ ಮೀಡಿಯಾಗಳಲ್ಲಿ ನಟ ಹೃತಿಕ್ ರೋಷನ್ ಅವರ ಜಾಹೀರಾತನ್ನು ನಡೆಸುತ್ತಿದೆ. ಜಾಹೀರಾತಿನಲ್ಲಿ, ಹೃತಿಕ್ ರೋಷನ್ ನನಗೆ ಥಾಲಿ ಬೇಕಾದರೆ, ಉಜ್ಜಯಿನಿ ಮಹಾಕಾಲ್‌ನಿಂದ ಪಡೆದುಕೊಂಡೆ ಎಂದು ಹೇಳುತ್ತಿರುವುದು ಕಂಡುಬಂದಿದೆ.

Zomato ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಬಂದ ನಂತರ ಇದೀಗ ಮಹಾಕಾಲ್ ದೇವಸ್ಥಾನದ ಮಹೇಶ್ ಪೂಜಾರಿ ಕಂಪನಿಯು ಈ ತಪ್ಪು ಪ್ರಚಾರ ಮಾಡಿದೆ ಆದರೆ ಮಹಾಕಾಲ್ ದೇವಸ್ಥಾನದಿಂದ ಎಲ್ಲಿಯೂ ಥಳಿಯನ್ನ ತಲುಪಿಸುವುದಿಲ್ಲ. ಹೃತಿಕ್ ರೋಷನ್ ಮತ್ತು ಜೊಮಾಟೊ ಕಂಪನಿ ಕ್ಷಮೆಯಾಚಿಸಬೇಕು. ಉಜ್ಜಯಿನಿಯಲ್ಲಿ ಯಾವುದೇ ಫುಡ್ ಡೆಲಿವರಿ ಇಲ್ಲ, ಬದಲಾಗಿ ಇಲ್ಲಿ ಅನ್ನಸಂತರ್ಪಣ ನಡೆಯುತ್ತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ ಹೃತಿಕ್ ಹಾಗು Zomato ವಿರುದ್ಧ ತಿರುಗಿಬಿದ್ದಿದ್ದಾರೆ.

ಉಜ್ಜಯಿನಿ ಮಹಾಕಾಲ್ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಿತ್ಯ ಸಾವಿರಾರು ಭಕ್ತರು ಅನ್ನಸಂತರ್ಪಣೆಯನ್ನು ತೆಗೆದುಕೊಳ್ಳುತ್ತಾರೆ. ಹಾಗೂ ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಉಚಿತವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ಭಕ್ತರು ಬೆಳಿಗ್ಗೆ 11 ರಿಂದ 2 ರವರೆಗೆ ಮತ್ತು ಸಂಜೆ 5 ರಿಂದ 8 ರವರೆಗೆ ಧಾನ್ಯದ ಪ್ರದೇಶದಲ್ಲಿ ಕುಳಿತು ಅನ್ನದಾನವನ್ನು ತೆಗೆದುಕೊಳ್ಳಬಹುದು. ಆದರೆ ಯಾವ ಭಕ್ತರ ಮನೆಗೂ ಪ್ರಸಾದದ ತಟ್ಟೆಯನ್ನು ಆರ್ಡರ್ ಮಾಡಿ ಆಹಾರವನ್ನು ತಲುಪಿಸಲ್ಲ. ದೇಶದ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಡೆಲಿವರಿ ಮಾಡುವ ಕಂಪನಿಯು ಮಹಾಕಾಲ್ ಹೆಸರಿನಲ್ಲಿ ಥಾಲಿಯ ಹೆಸರಿನಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಅರ್ಚಕರ ಸಂಘ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಉಜ್ಜಯಿನಿ ಮಹಾಕಾಲದ ಅರ್ಚಕರಾದ ಮಹೇಶ್ ಪೂಜಾರಿ ಎಚ್ಚರಿಸಿದ್ದಾರೆ‌.

Zomato ಕಂಪನಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಕಂಪನಿ ಕ್ಷಮೆ ಕೇಳದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮಹಾಕಲ್ ದೇವಸ್ಥಾನದ ಅಧ್ಯಕ್ಷರು ಹೇಳಿದರು. ಉಜ್ಜಯಿನಿ ಮಹಾಕಾಲ್ ಮಂದಿರ ಸಮಿತಿಯ ಅಧ್ಯಕ್ಷ, ಕಲೆಕ್ಟರ್ ಆಶಿಶ್ ಸಿಂಗ್ ಕೂಡ ಜಾಹೀರಾತಿನಲ್ಲಿ ಸತ್ಯಾಂಶ ರಹಿತ ಮತ್ತು ತಪ್ಪು ದಾರಿಗೆಳೆಯುವಂತಿದೆ. ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Advertisement
Share this on...