ವಿಜ್ಞಾನಿಗಳ ಪ್ರಕಾರ ದಿನಂಪ್ರತಿ ನೀವು ಮಾಡುವ ಈ ಕೆಲಸಗಳಿಂದಲೇ ಬೇಗನೇ ಮುಪ್ಪಾಗುತ್ತಿದ್ದೀರ: ಎಚ್ಚರ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 343 views

Quick Age: ನಿಮ್ಮ ಆಕಾರ ಮತ್ತು ನಿಮ್ಮ ಅಂಗಾಂಗ ವ್ಯವಸ್ಥೆಗೆ ಅವಧಿಗೆ ಮೀರಿ ವಯಸ್ಸಾಗುತ್ತಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ದೇಹಕ್ಕೆ ಅವಧಿಗೆ ಮೀರಿ ವಯಸ್ಸಾಗುವಂತೆ ಮಾಡುವ 5 ಕೆಟ್ಟ ಅಭ್ಯಾಸಗಳು ಇಲ್ಲಿವೆ.

Advertisement

ನೇಚರ್ ಕಮ್ಯೂನಿಕೇಷನ್ಸ್ ಜರ್ನ​​​ಲ್​​ನಲ್ಲಿ ಈ ವಾರ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಮನುಷ್ಯನ ಜೀವಿತಾವಧಿಯ ಮಿತಿಯು 120 ರಿಂದ 150 ವರ್ಷ ವಯಸ್ಸಿನವರೆಗೆ ಇರುತ್ತದೆ ಎಂದಿದೆ. ಆದರೆ ನಾವು ಈ ಸಾಂಕ್ರಾಮಿಕದ ಸಮಯದಲ್ಲಿ ರೂಢಿಸಿಕೊಂಡ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಜೀವನದ ಎಷ್ಟೋ ವರ್ಷಗಳನ್ನು ನುಂಗಿ ಹಾಕಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ನಿಮ್ಮ ಆಕಾರ ಮತ್ತು ನಿಮ್ಮ ಅಂಗಾಂಗ ವ್ಯವಸ್ಥೆಗೆ ಅವಧಿಗೆ ಮೀರಿ ವಯಸ್ಸಾಗುತ್ತಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ದೇಹಕ್ಕೆ ಅವಧಿಗೆ ಮೀರಿ ವಯಸ್ಸಾಗುವಂತೆ ಮಾಡುವ 5 ಕೆಟ್ಟ ಅಭ್ಯಾಸಗಳು ಇಲ್ಲಿವೆ. ಅದನ್ನು ಗುರುತಿಸಿ ಅದರಿಂದ ಹಿಂದೆ ಸರಿಯಿರಿ. ನೀವು ಆರೋಗ್ಯವಾಗಿದ್ದು ನಿಮ್ಮವರನ್ನು ಆರೋಗ್ಯವಾಗಿಡಿ.

1. ಅತಿಯಾದ ಸಕ್ಕರೆ ಸೇವನೆ

ಹೆಚ್ಚು ಸಕ್ಕರೆಯುಕ್ತ ಆಹರ ಸೇವನೆಯಿಂದ ನಿಮ್ಮ ತ್ವಚೆಗೆ ಬೇಗ ವಯಸ್ಸಾದಂತೆ ಕಾಣುತ್ತದೆ. ಕ್ಲಿನಿಕಲ್ ಡರ್ಮಟಾಲಜಿ ಜರ್ನಲ್​ ಪ್ರಕಾರ ಅತಿಯಾದ ಸಕ್ಕರೆ ಸೇವನೆ ತ್ವಚೆಯಲ್ಲಿನ ಕೊಲೆಜಿನ್ ಮತ್ತು ಎಲಾಸ್ಟಿನ್​​ಗಳನ್ನು ಹಾಳುಗೆಡವುತ್ತವೆ. ಅಲ್ಲದೇ ತಾರುಣ್ಯ ಪೂರ್ಣತೆಯನ್ನು ಮರೆಸಿ ಅದನ್ನು ರಿಪೇರಿ ಮಾಡಿಕೊಳ್ಳುವ ಶಕ್ತಿಯನ್ನು ಸಹ ಕಸಿದುಕೊಳ್ಳುತ್ತದೆ.

ಏನು ಮಾಡಬೇಕು?

ಸಕ್ಕರೆ ಸೇವನೆ ನಿಯಂತ್ರಣದಲ್ಲಿರಲಿ. ಸಕ್ಕರೆಯುಕ್ತ ಸಂಸ್ಕರಿಸಿದ ಪಾನೀಯ ಮತ್ತು ಆಹಾರವನ್ನು ತ್ಯಜಿಸಿ. ನೀವು ಖರೀದಿಸುವ ಉತ್ಪನ್ನಗಳಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ನೋಡಲು ನ್ಯೂಟ್ರಿಷನ್ ಫ್ಯಾಕ್ಟ್​​ ಲೇಬಲ್‌ಗಳನ್ನು ಪರಿಶೀಲಿಸಿ.

ಅಮೆರಿಕ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, “ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ತ್ವಚೆಯ ಅಕಾಲಿಕ ಮುಪ್ಪನ್ನು ತಡೆಯಲು ಸಹಾಯ ಮಾಡುತ್ತದೆ.”

2. ರಾತ್ರಿಯ ಹೊತ್ತು ಸರಿಯಾಗಿ ನಿದ್ರೆ ಮಾಡದಿರುವುದು

ರಾತ್ರಿಯ ನಿದ್ದೆ ನಿಮ್ಮ ದೇಹವನ್ನು ರಿಪೇರಿ ಮಾಡಲು ಇರುವ ಪ್ರಕೃತಿದತ್ತ ಚಿಕಿತ್ಸೆ. ಮೆದುಳಿನಿಂದ ತ್ವಚೆಯ ತನಕ ಎಲ್ಲವನ್ನು ಸಮತೋಲನಗೊಳಿಸಿ ಮತ್ತೊಮ್ಮೆ ಉತ್ಸಾಹ ತುಂಬುತ್ತದೆ.

ಕ್ಲಿನಿಕಲ್ ಮತ್ತು ಪ್ರಾಯೋಗಿಕ ಚರ್ಮರೋಗ ಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉತ್ತಮ ಗುಣಮಟ್ಟದ ನಿದ್ರೆಯನ್ನು ಹೊಂದಿದ ಮಹಿಳೆಯರು ನಿದ್ದೆ ರಹಿತ ಮಹಿಳೆಯರಿಗಿಂತ ಶೇಕಡಾ 30 ರಷ್ಟು ಹೆಚ್ಚು ತ್ವಚೆಯ ಆರೋಗ್ಯದ ಸುಧಾರಣೆಯನ್ನು ಗಮನಿಸಿದ್ದಾರೆ. ಅಲ್ಲದೇ ಅವರ ತ್ವಚೆಗೆ ಬಹುಬೇಗ ವಯಸ್ಸಾಗುವ ಪ್ರಕ್ರಿಯೆ ದೂರವಾಗಿರುವುದು ಕಂಡು ಬಂದಿದೆ.

ಸಾಕಷ್ಟು ನಿದ್ರೆ ಹೃದ್ರೋಗ, ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಹಲವಾರು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಗುಣಮಟ್ಟದ ನಿದ್ರೆಯ ಮಾನದಂಡಗಳೇನು?

ನ್ಯಾಷನಲ್ ಸ್ಲೀಪ್ ಫೌಂಡೇಶನ್ ಸೇರಿದಂತೆ ತಜ್ಞರು ಹೇಳುವ ಪ್ರಕಾರ ಪ್ರತಿದಿನ ರಾತ್ರಿ 7 ರಿಂದ 9 ಗಂಟೆಗಳವರೆಗೆ ಯಾವುದೇ ಅಡೆ ತಡೆಯಿಲ್ಲದೇ ಸುಖವಾಗಿ ನಿದ್ರಿಸುವುದಾಗಿದೆ.ಒಂದು ವೇಳೆ ನಿಮಗೆ ಸಮಯಕ್ಕೆ ಸರಿಯಾದ ನಿದ್ದೆ ಬಾರದಿದ್ದರೆ, ಬಹಳ ತ್ರಾಸದಾಯಕ ನಿದಿರೆ ಅನುಭವಿಸುತ್ತಿದ್ದರೆ ವೈದ್ಯರನ್ನು ಒಮ್ಮೆ ಭೇಟಿ ಮಾಡಿ. ಆರೋಗ್ಯಪೂರ್ಣ ನಿದ್ದೆ, ತಾಜಾತನದ ದಿನದ ಆರಂಭಕ್ಕೆ ಕಾರಣವಾಗುತ್ತದೆ.

3. ಅತಿಯಾದ ಕುಡಿತ

ನಿರಂತರವಾಗಿ ನೀವು ಆಲ್ಕೋಹಾಲ್​ಗೆ ಅಂಟಿಕೊಂಡಿದ್ದರೆ ನಿಮ್ಮ ವಯಸ್ಸಿಗಿಂತಲೂ ದೊಡ್ಡವರಂತೆ ಕಾಣುವಿರಿ. ಆಲ್ಕೋಹಾಲ್ ತ್ವಚೆಯಲ್ಲಿ ತೇವಾಂಶ ಹೀರಿಕೊಳ್ಳುತ್ತದೆ. ಇದರಿಂದ ಮುಖ ಊದಿಕೊಂಡಂತೆ ಕಾಣಬಹುದು. ಅಲ್ಲದೇ ಇದು ಹೃದಯದ ಸಮಸ್ಯೆಯನ್ನೂ ತರಬಹುದು. ಪಿತ್ತಜನಕಾಂಗದ ಕಾರ್ಯವೈಖರಿ ಕುಂಠಿತವಾಗಬಹುದು. ಆಲ್ಕೋಹಾಲ್​ನಲ್ಲಿರುವ ಕೊಬ್ಬು ಮತ್ತು ಸಂಸ್ಕರಿತ ಕಾರ್ಬ್​​ಗಳು ಕ್ಯಾನ್ಸರ್​​​ನಂತಹ ಅಪಾಯಕ್ಕೆ ಒಡ್ಡಬಹುದು.ಆದ್ದರಿಂದ ತಜ್ಞರು ಪುರುಷರಿಗೆ ದಿನಕ್ಕೆ ಎರಡು ಡ್ರಿಂಕ್​​ಗಿಂತ ಹೆಚ್ಚಿನದನ್ನು ಮತ್ತು ಮಹಿಳೆಯರಿಗೆ ಒಂದು ಡ್ರಿಂಕ್​​ಗಿಂತ ಹೆಚ್ಚಿನ ಆಲ್ಕೊಹಾಲ್​​ ಅನ್ನು ಶಿಫಾರಸು ಮಾಡುವುದಿಲ್ಲ.

4. ಸರಿಯಾಗಿ ವ್ಯಾಯಾಮ ಮಾಡದಿರುವುದು

ಹೃದಯ, ಮೆದುಳು ಮತ್ತು ರೋಗನಿರೋಧಕ ಶಕ್ತಿಯ ಆರೋಗ್ಯಕ್ಕೆ ಜೊತೆಗೆ ಅವಧಿಗೆ ಮೀರಿ ವಯಸ್ಸಾಗುವುದನ್ನು ತಡೆಯಲು ಪ್ರತಿದಿನ ನಿಯಮಿತ ವ್ಯಾಯಾಮದ ಅಗತ್ಯವಿದೆ. ರಕ್ತಪರಿಚಲನೆ ಸುಧಾರಣೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಗೆ ವ್ಯಾಯಾಮ ಬೇಕು ಎಂದು ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಹೇಳುತ್ತದೆ.ತಾರುಣ್ಯ ಪೂರ್ಣ ತ್ವಚೆ, ಹೃದಯದ ಆರೋಗ್ಯಕ್ಕೆ ದಿನಕ್ಕೆ 30 ನಿಮಿಷಗಳ ವ್ಯಾಯಾಮ ಬೇಕು ಎನ್ನುತ್ತದೆ ಅಮೆರಿಕದ ಹಾರ್ಟ್ ಅಸೋಸಿಯೇಷನ್. ನಿಮ್ಮ ಯೌವ್ವನ ಉಳಿಸಿಕೊಳ್ಳಲು ಇದೇ ಬೆಸ್ಟ್​​ ದಾರಿ.

5. ಧೂಮಪಾನ ನಿಯಂತ್ರಿಸಬೇಕು

ಸಿಗರೇಟ್​ನಲ್ಲಿರುವ ನೂರಾರು ಜೀವಾಣುಗಳು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಕಾರಣವಾಗುತ್ತವೆ. ತ್ವಚೆಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಸರಬರಾಜನ್ನು ತಡೆಯುತ್ತದೆ. ಸುಕ್ಕು, ಮುಖಕ್ಕೆ ಗಡಸುತನ ತರುತ್ತದೆ ಎಂದು ಎಎಡಿ ಹೇಳುತ್ತದೆ. ರಕ್ತನಾಳಗಳು, ಹೃದಯ, ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತವೆ. ಜಮಾದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಿಗರೆಟ್ ಸೇದುವವರು ಸಿಗರೇಟ್​ ಸೇದದವರಿಗಿಂತ ಮೂರು ಪಟ್ಟು ಹೆಚ್ಚು ಸುಕ್ಕುಗಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.

ಅಲ್ಲದೇ ಇದು ಕ್ಯಾನ್ಸರ್​ಗೂ ಕಾರಣವಾಗಬಹುದು. ಆದ್ದರಿಂದ ಧೂಮಪಾನ ನಿಯಂತ್ರಿಸಿ ನಿಮ್ಮ ವಯಸ್ಸನ್ನು ಅಂದಗಾಣಿಸಿಕೊಳ್ಳಿ.

Advertisement
Share this on...