ವಿಡಿಯೋ: ನರೇಂದ್ರ ಮೋದಿ ಒಳ್ಳೆಯ ಪ್ರಧಾನಿ ಎಂದಿದ್ದಕ್ಕೆ ಈ ಕಾಂಗ್ರೆಸ್ ಶಾಸಕ ಆ ಮಹಿಳೆಯನ್ನ….

in Kannada News/News/ರಾಜಕೀಯ 258 views

ರಾಜಸ್ಥಾನದ ಬೇಗೂಂ ಕಾಂ’ಗ್ರೆಸ್ ಶಾಸಕ ರಾಜೇಂದ್ರ ಬಿಧುರಿ ಇದೀಗ ಸುದ್ದಿಯಲ್ಲಿದ್ದಾರೆ. ಪಡಿತರ ವಿತರಣೆಯ ಸಮಯದಲ್ಲಿ ಶಾಸಕ ಮುಖ್ಯಮಂತ್ರಿ ಅಶೋಕ್ ಗಹ್ಲೋಟ್ ಉತ್ತಮ ನಾಯಕರೋ ಅಥವಾ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕರೋ ಎಂದು ಮಹಿಳೆಯೊಬ್ಬರಿಗೆ ಪ್ರಶ್ನೆ ಕೇಳಿದ. ಇದಕ್ಕುತ್ತರಿಸಿದ ಮಹಿಳೆ, ‘ಮೋದಿಜೀ’ ಎಂದು ಹೇಳಿದಳು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂ’ಗ್ರೆಸ್ ಶಾಸಕ “ನೀನು ಮನೆಗೆ ಹೋಗಿ ದೀಪಗಳನ್ನು ಬೆಳಗಿಸು ನಿನಗೆ ಪಡಿತರವನ್ನು ಕೊಡಲ್ಲ” ಎಂದಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಶಾಸಕನ ಈ ವರ್ತನೆಗೆ ಭಾರೀ ಟೀ’ಕೆಗಳು ವ್ಯಕ್ತವಾಗುತ್ತಿವೆ.

Advertisement

ಬಿ’ಜೆಪಿ ವಕ್ತಾರ ಸಂಬಿತ್ ಪಾತ್ರಾ ಸಮೇತ ಹಲವಾರು ನಾಯಕರು ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಶೇರ್ ಮಾಡಿ ಆ’ಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಿತ್ ಪಾತ್ರಾ ರವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂ’ಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂ’ಧಿಯವರಿಗೆ ಟ್ವೀಟ್ ಮಾಡಿ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ, ಇಂತಹ ಕಠಿಣ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರೂ ಸಹಾಯಕ್ಕಾಗಿ ಮುಂದೆಬರುತ್ತಿದ್ದಾರೆ‌. ಆದರೆ ಕಾಂ’ಗ್ರೆಸ್ ನಾಯಕ ಮಾತ್ರ ಇದರಲ್ಲೂ ತನ್ನ ರಾಜಕೀಯ ಮಾಡುತ್ತಿದ್ದಾರೆ. ಬಡವರಿಗೆ ಊಟ ನೀಡುವುದರಲ್ಲೀ ಭೇದಭಾವ ಮಾಡುತ್ತಿದ್ದಾರೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ‌.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಈ ವಿಡಿಯೋ ಟ್ವೀಟ್ ಮಾಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ ಉತ್ತರ ಕೇಳಿದ್ದಾರೆ‌. ಕಳೆದ ಕೆಲ ದಿನಗಳ ಹಿಂದೆ ಒಬ್ಬ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರು ಲಾಕ್‌ಡೌನ್ ಉಲ್ಲಂಘಿಸಿದ್ದ ಆರೋಪಿಯ ಕಾರ್ ಸೀಸ್ ಮಾಡಿದಾಗ ಆ ಮಹಿಳಾ ಅಧಿಕಾರಿಯನ್ನೇ ರಾಜಸ್ಥಾನದಲ್ಲಿ ವರ್ಗಾವಣೆ ಮಾಡಲಾಗಿತ್ತು.

ಮಹಿಳೆಗೆ ದಿನಸಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ, “ವಿಡಿಯೋವನ್ನ ಅರ್ಧಂಬರ್ದ ಹಾಕಿ ಅದನ್ನ ತಿರುಚಲಾಗಿದೆ. ಆ ಸಂದರ್ಭದಲ್ಲಿ 90% ಜನ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ರವರೇ ಉತ್ತಮ ಮುಖ್ಯಮಂತ್ರಿ ಎಂದು ಹೇಳಿದ್ದರು.‌ ಆದರೆ ಇಬ್ಬರು ಮಹಿಳೆಯರು ಪಡಿತರ ಪಡೆಯೋಕೆ ಬಂದ ಸಂದರ್ಭದಲ್ಲಿ ಬಿ’ಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಲಾರಂಭಿಸಿ ಅಲ್ಲಿನ ವಾತಾವರಣ ಹ’ದಗೆಡಿ’ಸೋಕೆ ಮುಂದಾದರು. ಆಗ ನಾನು ಬಿ’ಜೆಪಿ ಕಾರ್ಯಕರ್ತರಿಗೆ ಹೋಗಿ ಚಪ್ಪಾಳೆ ಬಾರಿಸಿ ಎಂದಿದ್ದೆ ಹೊರತು ಪಡಿತರ ಕೊಡಲ್ಲ ಹೋಗಿ ಅಂತ ಹೇಳಿಲ್ಲ ಹಾಗು ಪಡಿತರ ಕೊಟ್ಟ ಮಹಿಳೆಗೆ ಅದನ್ನ ವಾಪಸ್ ಕೊಟ್ಟು ಹೋಗು ಅಂತಲೂ ಹೇಳಿಲ್ಲ” ಎಂದಿದ್ದಾರೆ.

Advertisement
Share this on...