ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಅವರು ಮೈದಾನದಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಜೊತೆಗೆ ತಮ್ಮ ಐಷಾರಾಮಿ ಜೀವನಶೈಲಿಗಾಗಿಯೂ ಚರ್ಚೆಯಲ್ಲಿದ್ದಾರೆ. ಕ್ಯಾಪ್ಟನ್ ಕೊಹ್ಲಿ ಅವರು ತಮ್ಮ ಫಿಟ್‌ನೆಸ್‌ನ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ, ಇದಕ್ಕಾಗಿ ಅವರು ಜಿಮ್‌ನಲ್ಲಿ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ನಿಯಮಿತ ಸಮಯದಲ್ಲಿ ಊಟ ತಿಂಡಿ ಮಾಡುತ್ತಾರೆ.
ಕ್ಯಾಪ್ಟನ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಏಕೆಂದರೆ ಅವರು ತಮ್ಮ ಬ್ಯಾಟಿಂಗ್‌ನೊಂದಿಗೆ ಯಾವುದೇ ಪಂದ್ಯದ ದಿಕ್ಕನ್ನೇ ಬದಲಾಯಿಸುವಂತಹ ಬ್ಯಾಟ್ಸಮನ್ ಆಗಿದ್ದಾರೆ. ಆದರೆ ವಿರಾಟ್ ಕೊಹ್ಲಿಯ 1 ದಿನದ ಊಟಕ್ಕಾಗಿ ಎಷ್ಟು ಖರ್ಚು ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತೇ? ಬನ್ನಿ ಹಾಗಿದ್ದರೆ ನಾವು ನಿಮಗೆ ಇದರ ಬಗ್ಗೆ ತಿಳಿಸುತ್ತೇವೆ.
ಕ್ಯಾಪ್ಟನ್ ಕೊಹ್ಲಿ ಬೆಳಗಿನ ಉಪಾಹಾರಕ್ಕಾಗಿ ಆಮ್ಲೆಟ್ ಮತ್ತು ಫ್ರೂಟ್ ಜೂಸ್ ಕುಡಿಯುತ್ತಾರೆ. ಇದರ ಹೊರತಾಗಿ ಪಾಲಕ ಚೀಸ್ ಮತ್ತು ಫ್ರೂಟ್ ಸಲಾಡ್ ಜೊತೆಗೆ ತಾಜಾ ಹಣ್ಣಿನ ಜೂಸ್ ಕುಡಿಯಲು ಇಷ್ಟಪಡುತ್ತಾರೆ. ವಿರಾಟ್ ಕೊಹ್ಲಿಯ ಬ್ರೆಕ್‌ಫಾಸ್ಟ್‌ನ ಖರ್ಚು ಸುಮಾರು 14 ಸಾವಿರ ರೂಪಾಯಿಗಳೆಂದರೆ ನಿಮಗೆ ಅಚ್ಚರಿಯಾಗಬಹುದು.
ಮಧ್ಯಾಹ್ನದ ಊಟದ ಸಮಯದಲ್ಲಿ, ಕ್ಯಾಪ್ಟನ್ ಕೊಹ್ಲಿ ನಾನ್ ವೆಜ್ ತಿನ್ನಲು ಇಷ್ಟಪಡುತ್ತಾರೆ, ಅವರು ಗ್ರೀನ್ ಚಿಕನ್ ಮತ್ತು ಪಾಲಕದೊಂದಿಗೆ ಮೀನು ತಿನ್ನುತ್ತಾರೆ. ಮತ್ತು ಅವರ ಊಟದ ಖರ್ಚು ಸುಮಾರು 18 ಸಾವಿರ ರೂಪಾಯಿಗಳು.
ರಾತ್ರಿಯ ಊಟದ ಸಮಯದಲ್ಲಿ, ಕ್ಯಾಪ್ಟನ್ ಕೊಹ್ಲಿ ಎರಡು ರೊಟ್ಟಿ ಪಾಲಕ ತರಕಾರಿಗಳು ಮತ್ತು ಮೀನುಗಳನ್ನು ತಿನ್ನುತ್ತಾರೆ. ಇದಲ್ಲದೆ ಮೊಸರು ಮತ್ತು ಜೂಸ್ ನ್ನೂ ಸಹ ಅವರು ಇಷ್ಟಪಡುತ್ತಾರೆ ಮತ್ತು ಅವರ ರಾತ್ರಿ ಊಟದ ವೆಚ್ಚ ಸುಮಾರು 20 ಸಾವಿರ ರೂಪಾಯಿಗಳು.
ಇದನ್ನೂ ಓದಿ: ತೆರೆಯ ಮೇಲೆ ಬರಲಿದೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಕುರಿತಾದ ಚಿತ್ರ.! ದ್ರಾವಿಡ್ ಪಾತ್ರ ನಿರ್ವಹಿಸಲಿದ್ದಾರೆ ಈ ಖ್ಯಾತ ನಟ
ಇದು ಬಯೋಪಿಕ್‌ಗಳ ಕಾಲ. ಬಾಲಿವುಡ್‌ನಿಂದ ಆರಂಭವಾಗಿ ಹಲವು ಚಿತ್ರರಂಗಗಳಲ್ಲಿ ಸಾಧಕರ ಅಥವಾ ವಿವಾದಾತ್ಮಕ ವ್ಯಕ್ತಿಗಳ ಜೀವನ ಆಧರಿಸಿದ ಕತೆಯುಳ್ಳ ಸಿನಿಮಾಗಳನ್ನು ಮಾಡಲಾಗುತ್ತಿದೆ.
ಬಾಲಿವುಡ್‌ನಲ್ಲಿಯಂತೂ ಬಯೋಪಿಕ್ ಸಿನಿಮಾಗಳನ್ನು ಪೈಪೋಟಿಯ ಮೇಲೆ ತೆರೆಗೆ ತರಲಾಗುತ್ತಿದೆ. ಅದರಲ್ಲಿಯೂ ಕ್ರೀಡಾಪಟುಗಳ ಜೀವನ ಆಧರಿಸಿದ ಸಿನಿಮಾಗಳು ಬಾಲಿವುಡ್ಡಿಗರ ಫೇವರೇಟ್.
ಮಿಲ್ಕಾ ಸಿಂಗ್ ಜೀವನ ಆಧರಿಸಿದ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ಹಲವರು ಕ್ರೀಡಾಪಟುಗಳ ಜೀವನದ ಮೇಲೆ ಸಿನಿಮಾ ತೆರೆಗೆ ಬರಲು ಆರಂಭವಾಯಿತು. ಬಾಕ್ಸರ್ ಮೇರಿಕೋಮ್, ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕ್ರಿಕೆಟಿಗ ಅಜರುದ್ಧೀನ್, ಹಾಕಿ ಆಟಗಾರ ಸಂದೀಪ್ ಸಿಂಗ್ ಹೀಗೆ ಹಲವು ಆಟಗಾರರ ಜೀವನ ಆಧರಿಸಿದ ಸಿನಿಮಾಗಳು ತೆರೆಗೆ ಬಂದಿವೆ. ಈಗಲೂ ಬರುತ್ತಿವೆ. ಇದೀಗ ಭಾರತ ಕ್ರಿಕೆಟ್‌ನ ಹೆಮ್ಮೆಯ ಆಟಗಾರ ರಾಹುಲ್ ದ್ರಾವಿಡ್ ಜೀವನ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಒಪ್ಪಿಗೆ ಸೂಚಿಸಿದ್ದಾರೆ ದ್ರಾವಿಡ್?
ಕ್ರಿಕೆಟಗನಾಗಿ ಮಿಂಚಿ ಈಗ ಕೋಚ್ ಆಗಿ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ತಯಾರು ಮಾಡುತ್ತಿರುವ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುತ್ತಿದ್ದು, ದ್ರಾವಿಡ್‌ಗೆ ಕತೆಯನ್ನು ಹೇಳಲಾಗಿದ್ದು, ತಮ್ಮ ಜೀವನ ಕತೆಯನ್ನು ಸಿನಿಮಾ ಮಾಡಲು ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಚಿತ್ರಕತೆ ರಚಿಸಿರುವ ತೆಲುಗು ನಿರ್ದೇಶಕ
ತೆಲುಗಿನ ನಿರ್ಮಾಣ ಸಂಸ್ಥೆಯೊಂದು ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದೆ ಬಂದಿದ್ದು, ತೆಲುಗಿನ ಪ್ರತಿಭಾವಂತ ನಿರ್ದೇಶಕ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿನಿಮಾವು ಹಿಂದಿ, ತೆಲುಗು ಸೇರಿ ಇತರ ಭಾಷೆಗಳಲ್ಲಿಯೂ ನಿರ್ಮಾಣಗೊಳ್ಳಲಿದೆ ಹಾಗೂ ಬಿಡುಗಡೆಗೊಳ್ಳಲಿದೆ.
ದ್ರಾವಿಡ್ ಪಾತ್ರದಲ್ಲಿ ನಟ ಸಿದ್ಧಾರ್ಥ್
ಸಿನಿಮಾದಲ್ಲಿ ರಾಹುಲ್ ದ್ರಾವಿಡ್ ಪಾತ್ರವನ್ನು ನಟ ಸಿದ್ಧಾರ್ಥ್ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಿದ್ಧಾರ್ಥ್ ಕತೆಯನ್ನು ಈಗಾಗಲೇ ಒಪ್ಪಿದ್ದು, ಸಿನಿಮಾಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ದ್ರಾವಿಡ್ ಜೀವನ ಸಿನಿಮಾ ಆಗುವುದು ಒಳ್ಳೆಯದೇ
ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುವುದು ಉತ್ತಮ ಬೆಳವಣಿಗೆ ಎನಿಸುತ್ತದೆ. ದ್ರಾವಿಡ್ ಅವರ ಶ್ರಮ, ತಾಳ್ಮೆ, ದೇಶಪ್ರೇಮ, ಕ್ರಿಕೆಟ್ ಪ್ರೇಮ, ತಂತ್ರ, ಹಲವು ಇನ್ನಿಂಗ್ಸ್‌ಗಳು, ಆಟಕ್ಕೆ ತಯಾರಾಗುತ್ತಿದ್ದ ರೀತಿ ಇವುಗಳೆಲ್ಲವೂ ಯುವಕರಿಗೆ ತಿಳಿಸಿದಂತಾಗುತ್ತದೆ. ದ್ರಾವಿಡ್‌ಗೆ ಭಾರತ ತಂಡದ ನಾಯಕ ಸ್ಥಾನ ಸಿಕ್ಕಿದ್ದು ಮತ್ತು ತಪ್ಪಿ ಹೋಗಿದ್ದು ಹೀಗೆ ಹಲವು ವಿಷಯಗಳು ಸಹ ಹೊರಬಂದಂತಾಗುತ್ತದೆ.