ಟೊಕಿಯೋ: ಸಾಮಾನ್ಯವಾಗಿ ಇಂದು ಕೆಜಿ ದ್ರಾಕ್ಷಿ 40 ರಿಂದ 50 ರೂ.ಗೆ ಸಿಗುತ್ತೆ. ದುಬಾರಿ ದಿನಗಳಲ್ಲಿ 100 ರೂ. ವರೆಗೂ ಏರಿಕೆ ಆಗಿರುತ್ತದೆ. ಆದ್ರೆ ಜಪಾನಿನಲ್ಲಿ ಬೆಳೆಯುವ ವಿಶೇಷ ಕೆಂಪು ದ್ರಾಕ್ಷಿಯ ಒಂದು ಗೊಂಚಲಿಗೆ ಅಲ್ಲಿಯ ಜನ 7.5 ಲಕ್ಷ ರೂ. ನೀಡಿ ಖರೀದಿಸುತ್ತಾರೆ. ಬೆಲೆ ಹೆಚ್ಚಾಗಿರುವದರಿಂದ ಇದನ್ನು ಶ್ರೀಮಂತರ ದ್ರಾಕ್ಷಿ ಎಂದು ಕರೆಯಲಾಗುತ್ತದೆ. ಒಂದು ಗೊಂಚಲಿನಲ್ಲಿ 24 ದ್ರಾಕ್ಷಿಗಳು ಇರುತ್ತವೆ.
ಈ ದ್ರಾಕ್ಷಿ ಹೆಸರು ರೂಬಿ ರೋಮನ್. ಚೀನಾ ಮತ್ತು ರಷ್ಯಾಗಳಲ್ಲಿ ಈ ದ್ರಾಕ್ಷಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ದ್ರಾಕ್ಷಿ ರಸಪೂರಿತವಾಗಿದ್ದು, ಒಂದು ಬೈಟ್ ನಲ್ಲಿ ನಿಮ್ಮ ಬಾಯಿ ಸಂಪೂರ್ಣವಾಗಿ ಸಿಹಿ ರಸದಿಂದ ಕೂಡಿರುತ್ತದೆ. ಜಪಾನ್ ಗಳಲ್ಲಿ ರೂಬಿ ರೋಮನ್ ದ್ರಾಕ್ಷಿಗಳನ್ನು ಬೆಳೆಯಲಾಗುತ್ತದೆ. ಶುಭ ಸಮಾರಂಭಗಳಲ್ಲಿ ಆಪ್ತರಿಗೆ ಉಡುಗೊರೆಯಾಗಿ ನೀಡಲು ಈ ದ್ರಾಕ್ಷಿಯ ಬಳಕೆಯಾಗಿತ್ತದೆ.
1995ರಲ್ಲಿ ಈ ಹೊಸ ಜಾತಿಯ ದ್ರಾಕ್ಷಿಯನ್ನು ಜಪಾನಿನ ಇಶಿಕಿವಾದಲ್ಲಿ ಮೊದಲ ಬಾರಿಗೆ ಬೆಳೆಯಲಾಯ್ತು. ಹೊಸ ತಳಿಯ ಸೃಷ್ಟಿಗಾಗಿ ಪ್ರಿಫ್ರಕ್ಚೂರಲ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್ ರೈತರಿಗೆ ಮನವಿ ಮಾಡಿತ್ತು. ಸುಮಾರು 400 ತಳಿಯ ಮಾದರಿಯಲ್ಲಿ ಒಂದು ವರ್ಷ ಸಂಶೋಧನೆ ಮಾಡಲಾಗಿತ್ತು. 400 ತಳಿಯಲ್ಲಿ ಕೇವಲ 4 ಮಾದರಿಯ ಸಸಿಗಳಲ್ಲಿ ದ್ರಾಕ್ಷಿ ಹಣ್ಣುಗಳು ಬಂದಿದ್ದವು. ಈ ನಾಲ್ಕರಲ್ಲಿ ಒಂದು ತಳಿಯ ದ್ರಾಕ್ಷಿ ಹಣ್ಣು ರುಚಿಯಾಗಿತ್ತು.
ರೂಬಿ ರೋಮನ್, ಕೆಂಪು ದ್ರಾಕ್ಷಿ, ಶ್ರೀಮಂತರ ದ್ರಾಕ್ಷಿ ಮತ್ತು ಇಶಿಕಿವಾದ ದಾಸ್ತಾನು ಅಂತ ಭಿನ್ನ ಭಿನ್ನ ಹೆಸರುಗಳಿಂದಲೂ ಕರೆಯಲಾಗುತ್ತದೆ. ಒಂದು ದ್ರಾಕ್ಷಿ ಸುಮಾರು 20 ಗ್ರಾಂ ತೂಕವನ್ನು ಹೊಂದಿದ್ದು, ಒಂದು ಗೊಂಚಲಿನಲ್ಲಿ 24 ಹಣ್ಣುಗಳಿರುತ್ತವೆ.
ಇದನ್ನೂ ಓದಿ:
ಗೊತ್ತಿಲ್ಲದೆಯೇ ರೈತನೊಬ್ಬ ತನ್ನ ಹೊಲದಲ್ಲಿ ಬೆಳೆದ ಜಗತ್ತಿನ ಅತಿ ದುಬಾರಿ ಹಣ್ಣು: ಈ ಹಣ್ಣುಗಳ ರಕ್ಷಣೆಗಾಗಿ ಹೊಲದಲ್ಲಿ ಇರಿಸಬೇಕಾಯಿತು ಟೈಟ್ ಸೆಕ್ಯೂರಿಟಿ
ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರನಲ್ಲಿ ಮಾವಿನ ತೋಟದ ರಕ್ಷಣೆಗಾಗಿ ರೈತನೋರ್ವ, ಮೂರು ಜನ ಗಾರ್ಡ್ ನೇಮಿಸಿದ್ದಾರೆ. ಜೊತೆಗೆ ವಿಶೇಷ ತಳಿಯ 9 ನಾಯಿಗಳನ್ನು ಸಹ ಸಾಕಿದ್ದಾರೆ. 2.5 ಲಕ್ಷ ರೂ.ಗೆ ಒಂದು ಕೆಜಿಯಂತೆ ಈ ಮಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತದೆ. ಈ ಹಿನ್ನೆಲೆ ಮಾವಿನ ತೋಟದ ರಕ್ಷಣೆಗಾಗಿ ರೈತ ಈ ಎಲ್ಲ ಮುಂಜಾಗ್ರತೆ ತೆಗೆದುಕೊಂಡಿದ್ದಾರೆ.
ಸಂಕಲ್ಪ್ ವಿಶೇಷ ಮಾವು ಬೆಳೆದ ರೈತ. ಈ ಮಾವಿನ ಹಣ್ಣುಗಳನ್ನು ಟಾಯಿಯೋ ನೋ ಟಮೈಂಗೋ ಮತ್ತು ಎಗ್ ಆಫ್ ಸನ್ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಈ ಮಾವಿನ ಬಗ್ಗೆ ವಿಶೇಷ ಚರ್ಚೆಗಳು ನಡೆದಿದ್ದವು. ಹಾಗಾಗಿ ಈ ಬಾರಿ ಮಾವುಗಳ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿರೋದಾಗಿ ಸಂಕಲ್ಪ್ ಹೇಳಿದ್ದಾರೆ.
ಈ ಮಾವು ಪೂರ್ಣ ಹಣ್ಣು ಆದ್ಮೇಲೆ ತಿಳಿ ಕೆಂಪು ಮಿಶ್ರಿತ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಒಂದು ಮಾವು ಸುಮಾರು 900 ಗ್ರಾಂ ತೂಕ ಬರುತ್ತೆ. ಇದರಲ್ಲಿ ನಾರಿನಾಂಶ ಇರಲ್ಲ, ತುಂಬಾನೇ ರುಚಿಯಾಗಿರುತ್ತೆ. ಜಪಾನಿನಲ್ಲಿ ವಿಶೇಷ ಮತ್ತು ಸಂರಕ್ಷಿತ ವಾತಾವರಣದಲ್ಲಿ ಈ ಮಾವು ಬೆಳೆಯುತ್ತಾರೆ. ಆದ್ರೆ ಸಂಕಲ್ಪ್ ತಮ್ಮ ಬಂಜರು ಭೂಮಿಯಲ್ಲಿ ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ.
2017ರಲ್ಲಿ ಜಪಾನ್ ಈ ಮಾವುಗಳನ್ನ 3600 ಡಾಲರ್ ನೀಡಿ ಖರೀದಿಸಿತ್ತು. ಒಟ್ಟು ನಾಲ್ಕು ಎಕರೆಯಲ್ಲಿ ಮಾವಿನ ಸಸಿ ನಡೆಲಾಗಿತ್ತು. ಆದ್ರೆ ಕೆಲವು ಸಸಿ ಮಟ್ಟದಲ್ಲಿಯೇ ನಾಶವಾದವು. ಸದ್ಯ 14 ಹೈಬ್ರಿಡ್ ಮತ್ತು 6 ವಿದೇಶಿ ತಳಿಯ ಮಾವು ನಮ್ಮತೋಟದಲ್ಲಿವೆ ಎಂದು ಸಂಕಲ್ಪ್ ಹೇಳುತ್ತಾರೆ.