ಶ್ರೀರಾಮನ ವಂಶಜರು ಈಗಲೂ ಭಾರತದಲ್ಲಿದ್ದರೆ, ಕುಶನ 307 ನೆ ಸಂತತಿ ಇದು, ಸಾಕ್ಷಿ ಬಿಡುಗಡೆ ಮಾಡಿದ ಕುಟುಂಬ

in Kannada News/News/ಕನ್ನಡ ಮಾಹಿತಿ 30,570 views

ಭರ್ಜರಿಯಾದ ಲೈಫ್‌ಸ್ಟೈಲ್‌ನಿಂದಲೇ ಫೇಮಸ್ ಫಿಗರ್ ಆಗಿರುವ ಪದ್ಮನಾಭ್ ಸಿಂಗ್ ರವರ ರಾಜಸ್ಥಾನದ ಜೈಪುರ್ ನಿವಾಸ ಮಹಲ್‌ನಲ್ಲಿ ತಮ್ಮ ಸ್ವಂತ ಭವ್ಯವಾದ ಅಪಾರ್ಟ್ಮೆಂಟ್ ಇದೆ. ಈ ಅಪಾರ್ಟ್ಮೆಂಟ್ ನಲ್ಲಿ ಇಂದು ಬೆಡ್‌ರೂಮ್, ಸೈಟ್ ಬಾತ್‌ರೂಮ್, ಡ್ರೆಸಿಂಗ್ ರೂಮ್, ಪ್ರೈವೆಟ್ ಡೈನಿಂಗ್ ರೂಮ್, ಪ್ರೈವೆಟ್ ಕಿಚನ್, ಹಲವು ರೂಮ್‌ಗಳು ಹಾಗು ಸ್ವಮ್ಮಿಂಗ್ ಪೂಲ್ ಕೂಡ ಇದೆ.

Advertisement

ಇವರ ವಯಸ್ಸು ಈಗ ಕೇವಲ 22 ವರ್ಷ. 22 ವರ್ಷದ ಈ ಚಿಕ್ಕ ವಯಸ್ಸಲ್ಲೇ ಇವರ ಬಳಿಯಿದೆ 20 ಸಾವಿರ ಕೋಟಿಯ ಸಂಪತ್ತು. ನೀವು ಯೋಚಿಸಲು ಸಾಧ್ಯವಿಲ್ಲ ಅಷ್ಟು ಸಂಪತ್ತನ್ನು ಇವರು ತಮ್ಮ 22 ವರ್ಷಗಳಲ್ಲೇ ಹೊಂದಿದ್ದಾರೆ.  ಬರೀ ಇದೇ ಅಷ್ಟೇ ಅಲ್ಲ ಇವರು ತಮ್ಮನ್ನ ತಾವು ಭಗವಾನ್ ಶ್ರೀರಾಮನ ವಂಶಜರೆಂದು ಹೇಳಿಕೊಳ್ಳುತ್ತಾರೆ.

2011 ರಲ್ಲಿ ಈ ರಾಜಮನೆತನದ ಒಟ್ಟು ಸಂಪತ್ತು 621.8 ಮಿಲಿಯನ್ ಅಂದರೆ 44 ಅರಬ್‌ನಷ್ಟು ಇತ್ತು, ಈಗ ಅದು ಹೆಚ್ಚಾಗಿ 48 ಅರಬ್‌ನಷ್ಟು ಹೆಚ್ಚಾಗಿದೆ. ಹೌದು ನಾವು ನಿಮಗೆ ಈಗ ಹೇಳುತ್ತಿರೋದು ಪದ್ಮನಾಭ್ ಸಿಂಗ್ ರವರ ಸ್ಟೋರಿ. ಇವರು ಜೈಪುರ್ ರಾಜಮನೆತನದವರಾಗಿದ್ದಾರೆ. ಇವರು ಒಬ್ಬ ಮಾಡೆಲ್ ಆಗಿದ್ದು ಪೋಲೋ ಆಟಗಾರ ಹಾಗು ಟ್ರಾವೆಲರ್ ಕೂಡ ಹೌದು. ದೇಶ ವಿದೇಶಗಳನ್ನ ಸುತ್ತೋದು ಇವರ ಹವ್ಯಾಸವಾಗಿದೆ. ಅತಿ ಹೆಚ್ಚು ಹಣವನ್ನ ಇವರು ಟ್ರಾವೆಲಿಂಗ್‌ಗಾಗಿಯೇ ಖರ್ಚು ಮಾಡುತ್ತಾರೆ.

ಈ ರಾಜಮನೆತನ ಹೇಳುವ ಪ್ರಕಾರ ಜೈಪುರ್‌ನ ಹಿಂದಿನ ಮಹಾರಾಜ ಭವಾನಿ ಸಿಂಗ್ ಭಗವಾನ್ ರಾಮನ ಮಗ ಕುಶನ 309 ನೆಯ ವಂಶಜರಾಗಿದ್ದರಂತೆ. ಈ ರಾಜಮನೆತನದವರೇ ಆಗಿರುವ ಪದ್ಮಿನಿ ದೇವಿಯವರೇ ಈ ವಿಷಯವನ್ನ ಇಂಟರ್‌ವ್ಯೂವ್ ಒಂದರಲ್ಲಿ ತಿಳಿಸಿದ್ದರು. ಇದರ ಹೊರತಾಗಿ ಈ ರಾಜಮನೆತನವು ತಮ್ಮ ಅಧೀಕೃತ ಸೈಟ್‌ನಲ್ಲಿ ಈ ವಿಷಯದ ಬಗ್ಗೆ ಕೂಡ ಬರೆದುಕೊಂಡಿದೆ.

ಜೈಪುರ್‌ನ ಈ ರಾಜಮನೆತದಲ್ಲಿ ರಾಜಕುಮಾರ ಪದ್ಮನಾಭ್ ಸಿಂಗ್ ವಯಸ್ಸಿಗೆ ಬರುತ್ತಿದ್ದಂತೆಯೇ ಅವರನ್ನ ಮಹಾರಾಜನ ಪಟ್ಟವನ್ನ ಅಲಂಕರಿಸುವಂತೆ ಮಾಡಲಾಯಿತು.  ಈ ಸಂದರ್ಭದಲ್ಲಿ ಮಹಾರಾಜರ ದರ್ಬಾರಿನಲ್ಲಿ 700 ಸರ್ದಾರರು, ಠಾನೇದಾದರು ಹಾಗು ಜಮೀನ್ದಾರರೂ ಭಾಗವಹಿಸಿದ್ದರು.

ರಾಜದರ್ಬಾರದ ಈ ಮಹೋನ್ನತ ಕ್ಷಣಕ್ಕಾಗಿ ಹಾಗು ರಾಜಕುಮಾರರ ಪಟ್ಟಾಭಿಷೇಕವನ್ನ ಅದ್ಧೂರಿಯಾಗಿ ಸಿಟಿ ಪ್ಯಾಲೆಸ್‌ನಲ್ಲಿ ಮಾಡಲಾಗಿತ್ತು. ಮಹಾರಾಜಾ ಪದ್ಮನಾಭ್ ಸಿಂಗ್ ಇದುವರೆಗಿನ ಅತಿ ಚಿಕ್ಕ ವಯಸ್ಸಿನ ರಾಜರಲ್ಲಿ ಒಬ್ಬರಾಗಿದ್ದಾರೆ. 18 ವರ್ಷ ಪೂರ್ಣಗೊಳ್ಳುತ್ತಲೇ ಇವರನ್ನ ರಾಜಕುಮಾರನಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಈ ರಾಜಮನೆತನ ಹೇಳುವ ಪ್ರಕಾರ ಇವರಿಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ಗದ್ದುಗೆಯ ಮೇಲೆ ಕೂರಿಸಿರುವ ಉದ್ದೇಶವೇನೆಂದರೆ ತಮ್ಮ ಪರಂಪರೆಯನ್ನ ಮುಂದುವರೆಸಿಕೊಂಡು ಹೋಗಲು ಹಾಗು ಮುಂಬರುವ ಪೀಳಿಗೆಗೂ ನಮ್ನ ಸಂಸ್ಕೃತಿಯನ್ನ ಪಸರಿಸಲಿ ಎಂಬ ಕಾರಣಕ್ಕೆ ಎಂದು ಹೇಳುತ್ತಾರೆ.

ಪದ್ಮನಾಭ್ ಸಿಂಗ್ ಜೈಪುರ್‌ನ ಹಿಂದಿನ ಮಹಾರಾಜಾ ಬ್ರಿಗೇಡಿಯರ್ ಸಿಂಗ್ ರವರ ಮಗಳು ದಿಯಾ ಕುಮಾರಿ ಯವರ ಪುತ್ರರಾಗಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಬಳಿಕ ಅಯೋಧ್ಯೆ ಏನಾಯ್ತು? ಲವ-ಕುಶ ಏನಾದರು?

ರಾಮಚಂದ್ರ ವಿಷ್ಣುವಿನ ಅವತಾರವಾಗಿದ್ದು, ಅವರನ್ನ ಮೊದಲು ರಾಮ ಬಳಿಕ ಶ್ರೀ ರಾಮಚಂದ್ರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ರಾಮಾಯಣದಲ್ಲಿನ ವಿವರಣೆಯ ಪ್ರಕಾರ, ಚಕ್ರವರ್ತಿ ರಾಜ ದಶರಥನ ಹೆಂಡತಿಗೆ ಮಕ್ಕಳಾಗಿರಲಿಲ್ಲ, ಶೃಂಗಿ ಋಷಿ ಪ್ರಸಾದದ ಸ್ವರೂಪದಲ್ಲಿ ಕೊಟ್ಟ ಖೀರ್ (ಪಾಯಸ) ಅನ್ನು ತಿಂದ ಬಳಿಕ ದಶರಥನ ಪತ್ನಿಗೆ ಪುತ್ರ ಪ್ರಾಪ್ತಿಯಾಗುತ್ತದೆ. ಬಳಿಕ ನಡೆದ ವೃತ್ತಾಂತಗಳೆಲ್ಲಾ ತಮಗೆ ಗೊತ್ತಿದ್ದಿದ್ದೇ.

ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ ಭಗವಾನ್ ಶ್ರೀರಾಮನ ಅಂತ್ಯದ ಬಳಿಕ ಅಯೋಧ್ಯೆಯ ರಾಜ ಯಾರಾದ, ಅಯೋಧ್ಯೆಯ ಕಥೆ ಏನಾಯ್ತು?  ಎಂಬುದಾಗಿದೆ. ಬನ್ನಿ ಈ ಬಗೆಗಿನ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡುತ್ತೇವೆ. ಭಗವಾನ್ ರಾಮನ ನಂತರ ಅವರ ಹಿರಿಯ ಮಗ ಕುಶ ಅಯೋಧ್ಯೆಯ ರಾಜನಾದ. ಲವ ರಾಮನ ಹಿರಿಯ ಮಗ ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಕುಶ್ ಭಗವಾನ್ ರಾಮನಿಗೆ ಮೊದಲು ಜನಿಸಿದ್ದನು ಮತ್ತು ವಾಲ್ಮೀಕಿ ಮಹರ್ಷಿಗಳು ಸೀತಾಮಾತೆಯ ಸಂಭಾಷಣೆಯಲ್ಲಿ ಉಲ್ಲೇಖಿಸಿದಂತೆ ಕಿರಿಯ ಮಗನಾಗಿರುವ ಹೊರತಾಗಿಯೂ ಅವಳಿ ಜವಳಿ ಮಕ್ಕಳಲ್ಲಿ ಲವ ಸ್ಪುರದ್ರೂಪಿ, ಸುಂದರವಾದ ಮಗು ಎಂಬ ಕಾರಣಕ್ಕೆ ಅವನ ಹೆಸರನ್ನ ಮೊದಲು ನಾಮಕರಣ ಮಾಡಲಾಯಿತು ಎಂದು ಹೇಳುತ್ತಾರೆ.

ಭಗವಾನ್ ರಾಮನು ತನ್ನ ಮಕ್ಕಳು ಸೇರಿದಂತೆ ಯಾರಿಗೂ ಅಯೋಧ್ಯೆಯ ರಾಜ್ಯವನ್ನು ನೀಡಲಿಲ್ಲ. ಶ್ರೀರಾಮ ಇತರ ರಾಜ್ಯಗಳನ್ನು ತನ್ನ ಅಡಿಯಲ್ಲಿ ಎಂಟು ರಾಜ್ಯಗಳಾಗಿ ವಿಂಗಡಿಸಿದನು ಮತ್ತು ರಘುಕುಲದ 6 ರಾಜಕುಮಾರರಿಗೆ ಹಸ್ತಾಂತರಿಸಿದನು, ಆ ಆರು ರಾಜಕುಮಾರರಲ್ಲಿ ಲವ್ ಕುಶ್ ಕೂಡ ಇದ್ದರು.

ಕುಶ ತನ್ನ ತಂದೆ ರಾಮ ಅಥವಾ ತನ್ನ ಪೂರ್ವಜರಿಗಿಂತ ಭಿನ್ನವಾಗಿ, ಅವನು ನಾಗ ಜನಾಂಗದವರೊಂದಿಗೆ ಕದನಕ್ಕಿಳಿಯುತ್ತುದ್ದ, ಆದ್ದರಿಂದ ಆತನನ್ನ ಬುದ್ಧಿವಂತ ರಾಜನೆಂದು ಪರಿಗಣಿಸಲಾಗಲಿಲ್ಲ.

ಯುದ್ಧದಲ್ಲಿ ಸೋಲನ್ನು ಅನುಭವಿಸದ ರಘುವಂಶಿ ಖ್ಯಾತಿಯು ಅವನೊಂದಿಗೆ ಕೊನೆಗೊಂಡಿತು. ಅವನು ತನ್ನ ಜೀವನವನ್ನು ದುರ್ಜಯ ಎಂಬ ಹೆಸರಿನ ರಾಕ್ಷಸನೆದುರು ಕಳೆದುಕೊಂಡನು. ಕುಶ್ ಮರಣದ ನಂತರ, ಅವರ ಮಗ ಅತಿತಿ ಸಿಂಹಾಸನದ ಉತ್ತರಾಧಿಕಾರಿಯಾದನು.

ರಾಮನು ತನ್ನ ಅವತಾರ ಸಮಾಪ್ತಿಗೊಳಿಸಿದ ಬಳಿಕ, ಧರ್ಮಗ್ರಂಥಗಳಲ್ಲಿ ಉಲ್ಲೇಖವಾದ ಮಾತುಗಳ ಪ್ರಕಾರ, ಶ್ರೀರಾಮನು ಈ ಭೂಮಿ ಅಸ್ತಿತ್ವದಲ್ಲಿ ಇರುವವರೆಗೂ ಆಂಜನೇಯ ಚಿರಂಜೀವಿ ಯಾಗಿರುವಂತೆ ವಾಗ್ದಾನ ಮಾಡಿದ ಮತ್ತು ರಾಮಾಯಣವನ್ನು ಪಠಿಸಲಾಯಿತು.  ಇಂದಿಗೂ ಸಹ ಆಂಜನೇಯ ಆ ಭರವಸೆಯನ್ನು ಈಡೇರಿಸುತ್ತಾನೆ ಎನ್ನಲಾಗಿದೆ. ಆಂಜನೇಯ ಮಹಾಭಾರತದಲ್ಲಿ ಅನೇಕ ಬಾರಿ ಕಾಣಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಕಲಿಯುಗದಲ್ಲೂ ಅನೇಕ ಬಾರಿ ಹನುಮ ಅನೇಕ ಸಂತರಿಗೆ ಹಾಗು ಈಗಲೂ 41 ವರ್ಷಗಳಿಗೊಮ್ಮೆ ಶ್ರೀಲಂಕಾದ ಬುಡಕಟ್ಟು ಜನರಿಗೆ ದರ್ಶನ ನೀಡುತ್ತಾನೆ ಎಂದು ಹೇಳಲಾಗುತ್ತದೆ.

Advertisement
Share this on...