“ಶ್ರೀರಾಮ ಹಿಂದುಗಳಿಗಷ್ಟೇ ಸೇರಿದವನಲ್ಲ….ರಾಮಮಂದಿರ ಕಟ್ಟೋಕೆ ಶ್ರಮಿಸಿದವರಿಗೆಲ್ಲಾ…..”: ರಾಮಮಂದಿರದ ಬಗ್ಗೆ ಉಲ್ಟಾ ಹೊಡೆದ ಫಾರುಕ್ ಅಬ್ದುಲ್ಲಾ

in Uncategorized 4,277 views

ಜಮ್ಮು-ಕಾಶ್ಮೀರ: ಅಯೋಧ್ಯೆ ರಾಮ ಮಂದಿರವು (Ayodhya Ram Mandir) ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುತ್ತಿದೆ. ಈ ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

Advertisement

ಅಯೋಧ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಕಠಿಣ ಪರಿಶ್ರಮದಿಂದ ಇಂದು ರಾಮಮಂದಿರವು (Ayodhya Ram Temple) ತಲೆ ಎತ್ತಿ ನಿಂತಿದೆ. ಭಗವಾನ್ ರಾಮನು ಹಿಂದೂಗಳಿಗೆ ಮಾತ್ರ ಸೇರಿದವರಲ್ಲ, ಅವರು ಪ್ರಪಂಚದ ಎಲ್ಲರಿಗೂ ಸೇರಿದವರು ಎಂದು ಹೇಳಲು ಇಚ್ಛಿಸುತ್ತೇನೆ. ಪುಸ್ತಕಗಳಲ್ಲಿಯೂ ಇದನ್ನೇ ಬರೆಯಲಾಗಿದೆ ಎಂದು ಹೇಳಿದರು.

ಭಗವಾನ್‌ ರಾಮ ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ಮಾತನಾಡಿದ್ದಾರೆ. ಅವರು ಯಾವತ್ತೂ ಭಾಷೆ ಹಾಗೂ ಧರ್ಮದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಪ್ರೀತಿ ಹಾಗೂ ಒಗ್ಗಟ್ಟಿನಿಂದ ಬಾಳಬೇಕು ಎಂದು ಇಡೀ ಜಗತ್ತಿಗೆ ಸಾರಿದವರಾಗಿದ್ದಾರೆ ಎಂದು ಫಾರೂಕ್‌ ಅಬ್ದುಲ್ಲಾ ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಹೀಗಾಗಿ ಅವರು ಜಗತ್ತಿಗೆ ಸಾರಿದ್ದ ಆ ಸಹೋದರತ್ವದ ಸಂದೇಶವನ್ನು ಕಾಪಾಡಿಕೊಂಡು ಅದರಂತೆ ಬದುಕುವಂತೆ ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಗೆ ಎಡಪಕ್ಷಗಳ ಟೀಕೆಗೆ ತಿರುಗೇಟು ಕೊಟ್ಟ ಪೇಜಾವರ ಶ್ರೀಗಳು

‘ರಾಮ ಎಲ್ಲ ಭಾರತೀಯರಿಗೆ ಸೇರಿದವನು. ಯಾರಿಗೆ ಬರಬೇಕು ಅಂತಾ ಅಪೇಕ್ಷೆ ಇದೆ ಅವರು ಎಲ್ಲರೂ ಬರಬಹುದು. ಅಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು’ ಎಡಪಕ್ಷಗಳ ಟೀಕೆಗೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.

‘ರಾಮ ಎಲ್ಲ ಭಾರತೀಯರಿಗೆ ಸೇರಿದವನು. ಯಾರಿಗೆ ಬರಬೇಕು ಅಂತಾ ಅಪೇಕ್ಷೆ ಇದೆ ಅವರು ಎಲ್ಲರೂ ಬರಬಹುದು. ಅಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು’ ಎಡಪಕ್ಷಗಳ ಟೀಕೆಗೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು ನೀಡಿದರು.

ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ, ಎಡ ಪಕ್ಷಗಳಿಗೆ ಆಹ್ವಾನ ನೀಡದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕರೆದಿಲ್ಲ ಅಂತಾ ಆದ್ರೆ ಕರೆದಿಲ್ಲ ಎನ್ನೋದೇ ದೊಡ್ಡ ಆಕ್ಷೇಪ. ಕರೆದ ಮೇಲೆ ನಾವು ತಿರಸ್ಕರಿಸುತ್ತೇವೆ ಎನ್ನೋದೇ ದೊಡ್ಡ ಹೆಗ್ಗಳಿಕೆ. ತಿರಸ್ಕಾರ ಮಾಡೋದು ಅವರಿಗೆ ಬಿಟ್ಟದ್ದು, ಅದು ವ್ಯಕ್ತಿಗತವಾದ ವಿಚಾರ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ, ರಾಜಕೀಯ ಟೀಕೆಗಳಿಗೆ ಉತ್ತರ ಕೊಡೋದಿಲ್ಲ ಎಂದರು.

ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡುವಲ್ಲಿ ತಾರತಮ್ಯ ನಡೆಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅಲ್ಲಿರುವ ಸ್ಥಳಾವಕಾಶ ಅಲ್ಪವಾದದ್ದು, ಅಬ್ಬಬ್ಬಾ ಅಂದ್ರೆ ಏಳೆಂಟು ಸಾವಿರ ಜನ ಸೇರಬಹುದು. ಲೋಕದಲ್ಲಿ ಮಹಾತ್ಮರು ಗೌರವಾನಿತ್ವರು ತುಂಬಾ ಮಂದಿ ಇದ್ದಾರೆ. ಯಾರನ್ನು ಕರೆದರೂ ಆಕ್ಷೇಪ ಇರುವಂತಹದ್ದೇ. ಪರಿಸ್ಥಿತಿ ಅವಕಾಶವನ್ನು ಗಮನಿಸಿಕೊಂಡು ಸಮಾಧಾನಪಡಬೇಕು. ಪ್ರಾತಿನಿಧ್ಯವನ್ನು ಆಧರಿಸಿ ಆಹ್ವಾನವನ್ನು ನೀಡಿದ್ದೇವೆ. ಆಹ್ವಾನ ನೀಡದಿರುವ ಬಗ್ಗೆ ಮಂದಿರ, ಟ್ರಸ್ಟ್, ವ್ಯಕ್ತಿಗೆ ಸ್ವಾರ್ಥ, ಲಾಭ ಯಾವುದೂ ಇಲ್ಲ. ಇದು ಮನುಷ್ಯ ಸಹಜವಾದ ಪ್ರಕ್ರಿಯೆ, ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರೂ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಾಂತರಾಗಬೇಕು ಎಂದು ತಿಳಿಸಿದರು.

ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು ಮಾಡಿದ ವಿಚಾರ ಸಂಬಂಧ ಮಾತನಾಡಿದ ಸ್ವಾಮೀಜಿ, ಒಬ್ಬರ ಕಡೆಯಿಂದ ಏನೂ ತಪ್ಪು ಆಗದಿದ್ದರೂ ತಪ್ಪು ಎಂದು ಭಾರೀ ಪ್ರತಿಭಟನೆ ಮಾಡ್ತಾರೆ. ಇನ್ನೊಂದು ಕಡೆಯಿಂದ ಏನು ತಪ್ಪು ಆದರೂ ಕಣ್ಮುಚ್ಚಿ, ಬಾಯಿಮಚ್ಚಿ ಕೂಡ್ತಾರೆ. ಇಂತಹ ನಡೆ ಸರಿಯಲ್ಲ. ಅವರ ಹೇಳಿಕೆ ವ್ಯಕ್ತಿಗತವಾಗಿರೋದು. ನಾನು ಆ ಬಗ್ಗೆ ಯಾವುದೇ ಅಭಿಪ್ರಾಯ ಕೊಡೋದು ಸರಿಯಲ್ಲ ಎನ್ನುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದರು.

Advertisement
Share this on...