“ಸಂವಿಧಾನ ಉಳಿಸಬೇಕಂದ್ರೆ ಈ ಮೋದಿಯನ್ನ ಹ#ತ್ಯೆ ಮಾಡಲೇಬೇಕು, ತಯಾರಾಗಿರಿ…”: ಮಾಜಿ ಕಾಂಗ್ರೆಸ್ ಸಚಿವ

in Uncategorized 432 views

ಕಾಂಗ್ರೆಸ್‌ನ ಮಾಜಿ ಸಚಿವ ರಾಜಾ ಪಟೇರಿಯಾ ಅವರ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದೆ. ಇದರಲ್ಲಿ ಅವರು ‘ಪ್ರಧಾನಿ ಮೋದಿಯನ್ನು ಕೊ-ಲ್ಲು-ವ’ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಲೇ, ರಾಜಾ ಪಟೇರಿಯಾ ತನ್ನ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಸುದ್ದಿ ಸಂಸ್ಥೆಗಳ ಜೊತೆಗೆ ಮಾತನಾಡದ ಅವರು ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಬೇಕು ಎಂದು ಹೇಳಿದೆ. ಅಷ್ಟೇ ಅಲ್ಲ, ಫ್ಲೋ ನಲ್ಲಿ ಬಾಯಿಂದ ಆ ಶಬ್ದ ಹೊರಬಂತು ಎಂದರು. ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ರಾಜಾ ಪಟೇರಿಯಾ ಅವರ ಈ ವೀಡಿಯೊದಲ್ಲಿ, ಅವರು ಕೆಲವು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. “ಈ ಮೋದಿ ಚುನಾವಣೆಯನ್ನೇ ಬಂದ್ ಮಾಡಿಸಿ ಬಿಡುತ್ತಾನೆ, ಮೋದಿಯಿಂದ ಧರ್ಮ, ಜಾತಿ, ಭಾಷೆ, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಜೀವಕ್ಕೆ ಅಪಾಯವಿದೆ, ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಕೊ-ಲ್ಲ-ಲು ಸಿದ್ಧರಾಗಿರಿ” ಎಂದು ಅವರು ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ವಿಡಿಯೋ ವೈರಲ್ ಆಗಿ ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದಾಗ ಅವರು, “ಕೊ-ಲ್ಲು-ವುದು ಎಂದರೆ ಸೋಲಿಸುವುದು ಅನ್ನೋ ಅರ್ಥದಲ್ಲಿತ್ತು” ಎಂದು ಹೇಳುತ್ತಾರೆ.

ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಅರ್ಥದಲ್ಲಿ ಹೇಳಿದ್ದೆ – ರಾಜಾ ಪಟೇರಿಯಾ

ವಿಡಿಯೋ ವೈರಲ್ ಆದ ನಂತರ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಅರ್ಥದಲ್ಲಿ ಹಾಗೆ ಹೇಳಿದ್ದೇನೆ ಹೊರತು ಕೊ-ಲ್ಲು-ವ ಬಗ್ಗೆ ಅಲ್ಲ ಎಂದು ರಾಜಾ ಪಟೇರಿಯಾ ಆಜ್ ತಕ್‌ಗೆ ತಿಳಿಸಿದ್ದಾರೆ. ಅವರು ಮುಂದೆ ಮಾತನಾಡುತ್ತ, “ಇದು ಫ್ಲೋ ನಲ್ಲಿ ಆಗಿದೆ. ಆದರೆ ಈ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ವಿಡಿಯೋದ ಕೇವಲ ಈ ಭಾಗವನ್ನು ಮಾತ್ರ ಕಟ್ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ನಾನು ಹಾಗೆ ಹೇಳಲಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಮಂಡಿಸಲಾಗಿದೆ” ಎಂದು ರಾಜಾ ಹೇಳಿದ್ದಾರೆ.

ಇದು ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಲ್ಲ – ಗೃಹಸಚಿವ ನರೋತ್ತಮ್ ಮಿಶ್ರಾ

ಕಾಂಗ್ರೆಸ್‌ನ ಮಾಜಿ ಸಚಿವ ರಾಜಾ ಪಟೇರಿಯಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, “ನಾನು ಪಟೇರಿಯಾ ಅವರ ಹೇಳಿಕೆಗಳನ್ನು ಕೇಳಿದ್ದೇನೆ, ಇದು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಇಟಲಿ ಕಾಂಗ್ರೆಸ್ ಮತ್ತು ಇಟಲಿ ಮುಸೊಲಿನಿಯ ಮನಸ್ಥಿತಿಯನ್ನು ಹೊಂದಿದೆ. ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯಲ್ಲಿ ಸ್ವರಾ ಭಾಸ್ಕರ್, ಕನ್ಹಯ್ಯಾ ಕುಮಾರ್, ಸುಶಾಂತ್ ಹೆಜ್ಜೆ ಹಾಕುತ್ತಿದ್ದಾರೆ”. ರಾಜಾ ಪಟೇರಿಯಾ ಹೇಳಿಕೆಯ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಎಸ್‌ಪಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ರಾಜಾ ಪಟೇರಿಯಾ ವಿರುದ್ಧ ಪ್ರಕರಣ ದಾಖಲಿಸಲು ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ. ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ರಾಜಾ ಪಟೇರಿಯಾ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಇದೇ ವೇಳೆ ಶಿವರಾಜ್ ಸರ್ಕಾರದಲ್ಲಿ ಸಚಿವರಾಗಿದ್ದ ಮಹೇಂದ್ರ ಸಿಂಗ್ ಸಿಸೋದಿಯಾ ಅವರು ಕಾಂಗ್ರೆಸ್ ನಾಯಕನ ಬಂಧನಕ್ಕೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರ ವೀಡಿಯೊ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಪ್ರಧಾನಿ ಮೋದಿಯನ್ನು ಕೊ-ಲ್ಲು-ವ ಬಗ್ಗೆ ಮಾತನಾಡುತ್ತಿದ್ದಾರೆ.

ಮತ್ತೊಂದೆಡೆ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು ಪ್ರಧಾನಿ ಮೋದಿಯನ್ನು ಕೊ-ಲ್ಲು-ವ ಬಗ್ಗೆ ರಾಜಾ ಪಾಟ್ರಿಯಾ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಪೂನಾವಾಲಾ, ರಾಹುಲ್ ಗಾಂಧಿಗೆ ನಿಜವಾಗಿಯೂ ಪ್ರೇಮ ರಾಜಕಾರಣ ಬೇಕಾದರೆ ಇತ್ತೀಚೆಗೆ ಅವರ ನಾಯಕ ಪ್ರಧಾನಿ ಮೋದಿಯನ್ನು ರಾವಣ ಎಂದು ಕರೆದಿದ್ದರು ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕ ಶೇಖ್ ಹುಸೇನ್ ಕೂಡ ಪ್ರಧಾನಿ ಮೋದಿಗೆ ಪ್ರಾಣ ಬೆದರಿಕೆ ಹಾಕಿದ್ದರು. ಅದರ ಬಗ್ಗೆಯೂ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಈ ನಾಯಕನ ವಿರುದ್ಧವೂ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ರಮ ಕೈಗೊಳ್ಳುವುದಿಲ್ಲ. ಯಾಕೆಂದರೆ ಬೆದರಿಕೆ ಹಾಕುವ ನಾಯಕನಿಗೆ ಕಾಂಗ್ರೆಸ್ ನಲ್ಲಿ ದೊಡ್ಡ ಸ್ಥಾನಮಾನ ನೀಡಲಾಗುತ್ತದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಮೇ ರಾಜಾ ಪಟೇರಿಯಾ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಎಂದು ಪೂನಾವಾಲಾ ಪ್ರಶ್ನಿಸಿದರು.

ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಕೂಡ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ವಿಡಿಯೋ ಶೇರ್ ಮಾಡಿದ್ದು, ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತ, “ಹೈಕಮಾಂಡ್ ಒಪ್ಪಿಗೆ ಇಲ್ಲದೇ ಹಿರಿಯ ನಾಯಕರೊಬ್ಬರು ಇಷ್ಟು ದೊಡ್ಡ ಹೇಳಿಕೆ ನೀಡಲು ಸಾಧ್ಯವೇ?. ಈ ಹಿಂದೆಯೂ ಕಾಂಗ್ರೆಸ್ ನಾಯಕರು ಪಾಕಿಸ್ತಾನಕ್ಕೆ ಹೋಗಿ ಮೋದಿಜೀಯನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನದ ಸಹಾಯ ಕೇಳಿದ್ದರು” ಎಂದಿದ್ದಾರೆ.

Advertisement