ಸಾಮೂಹಿಕವಾಗಿ ಕುರಾನ್‌ನ ಶಪಥ ಮಾಡಿದ ಕಾಂಗ್ರೆಸ್ ನಾಯಕರು: ಕಾರಣವೇನು? ಯಾಕೆ ಗೊತ್ತಾ?

in Kannada News/News/ರಾಜಕೀಯ 200 views

ಸದ್ಯ ಸೋಶಿಯಲ್ ಮೀಡಿಯಾಗಳಲ್ಲೆಲ್ಲಾ ಬಾಕಲಿವಾಲ್‌ ರವರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್ ಮೇಯರ್ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಶಾಸಕ ಸಂಜಯ್ ಶುಕ್ಲಾ ಕೂಡ ಕಾಣಿಸಿಕೊಂಡಿದ್ದಾರೆ ಮತ್ತು ಈ ವಿಡಿಯೋದಲ್ಲಿ ಕೌನ್ಸಿಲರ್ ಹುದ್ದೆಗೆ ಅಭ್ಯರ್ಥಿಗಳನ್ನ ಒಗ್ಗಟ್ಟು ಮಾಡಲು ಮುಸ್ಲಿಂ ಪ್ರದೇಶಗಳಲ್ಲಿ ಕುರಾನ್ ಪ್ರಮಾಣವಚನ ಸ್ವೀಕರಿಸಲಾಗುತ್ತಿದೆ. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದೀವ ಬಿಜೆಪಿ ಈ ಘಟನೆಯನ್ನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲ, ನಗರದ ಖಾಜಿ ಕೂಡ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ಭರ್ಜರಿಯಾದ ಪ್ರಚಾರ ನಡೆಸುತ್ತ ತಮ್ಮ ದಾಳಗಳನ್ಬ ಉರುಳಿಸುತ್ತಿವೆ. ನಗರ ಸರ್ಕಾರ ರಚಿಸಲು ಎರಡೂ ಪಕ್ಷಗಳು ತೀವ್ರ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ನಗರ ಅಧ್ಯಕ್ಷ ವಿನಯ್ ಬಾಕಲಿವಾಲ್ ತಮ್ಮ ಪಕ್ಷದ ಮೇಯರ್ ಅಭ್ಯರ್ಥಿ ಶಾಸಕ ಸಂಜಯ್ ಶುಕ್ಲಾ ಅವರೊಂದಿಗೆ ಮುಸ್ಲಿಂ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಹುದ್ದೆಗೆ ಸ್ಪರ್ಧಿಗಳನ್ನು ಒಂದುಗೂಡಿಸಲು ಕೌನ್ಸಿಲರ್‌ಗಳು ಕುರ್‌ಆನ್ ಮೇಲೆ ಪ್ರಮಾಣ ಮಾಡುತ್ತಿದ್ದಾರೆ. “ಯಾರಿಗೆ ಟಿಕೆಟ್ ಸಿಗದೆ ಬಂಡಾಯವೇಳುತ್ತಾರೋ ನಾವು ಅವರ ವಿರುದ್ಧ ಒಗ್ಗೂಡುತ್ತೇವೆ ಮತ್ತು ಕಾಂಗ್ರೆಸ್‌ನ ಶಕ್ತಿ ಹೆಚ್ಚಸಲು ಕೆಲಸ ಮಾಡುತ್ತೇವೆ” ಎಂದು ಶಪಥ ಮಾಡಲಾಗುತ್ತಿದೆ.

ಮುಸ್ಲಿಂ ಬಾಹುಳ್ಯ ಕ್ಷೇತ್ರವಾದ ಚಂದ್ರನಗರ ಪ್ರದೇಶದಿಂದ ಕೂಡ ಅಂತಹ ಒಂದು ವಿಡಿಯೋ ವೈರಲ್ ಆಗಿದೆ, ಇದರಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ವಿನಯ್ ಬಕಾಲಿವಾಲ್ ಅವರು ಕುರಾನ್ ಪ್ರಮಾಣವಚನ ಸ್ವೀಕರಿಸುವಾಗ ಐದು ಕೌನ್ಸಿಲರ್ ಕೂಡ ಶಪಥ ಮಾಡಿದ್ದಾರೆ. ಆ ಐವರಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ, ಉಳಿದವರು ಅವರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಮೇಯರ್ ಟಿಕೆಟ್‌ಗಾಗಿ ಸ್ಪರ್ಧಿಯಾಗಿರುವ ಕಾಂಗ್ರೆಸ್ ಶಾಸಕ ಸಂಜಯ್ ಶುಕ್ಲಾ ಅವರೊಂದಿಗೆ ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಕುರಾನ್ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಈ ಸುದ್ದಿಯನ್ನ ಕಾಂಗ್ರೆಸ್ ತಳ್ಳಿಹಾಕಿದೆ. ಖುರಾನ್ ಅನ್ನು ಕೈಯಲ್ಲಿ ಹಿಡಿದು ಯಾವುದೇ ಪ್ರಮಾಣ ಮಾಡಿಲ್ಲ, ಆದರೆ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಎಲ್ಲಾ ಕಾಂಗ್ರೆಸ್ಸಿಗರು ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಇದನ್ನೇ ಬಳಸಿಕೊಂಡು ಬಿಜೆಪಿ ದುಷ್ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮೀನುಲ್ ಖಾನ್ ಸೂರಿ ಹೇಳಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಬಿಜೆಪಿ ಇದನ್ನು ತುಷ್ಟೀಕರಣದ ರಾಜಕಾರಣ. ಕಾಂಗ್ರೆಸ್ ಅನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಉಮೇಶ್ ಶರ್ಮಾ ಹೇಳಿದ್ದಾರೆ. ನಗರ ಅಧ್ಯಕ್ಷರು ಕುರಾನ್ ಮೇಲೆ ಪ್ರಮಾಣ ಮಾಡುತ್ತಿರುವ ರೀತಿ, ಈಗ ಕಾಂಗ್ರೆಸ್ ಗೆ ಮುಸ್ಲಿಂ ಸಮಾಜದ ಜನರ ಮೇಲೆ ವಿಶ್ವಾಸವಿಲ್ಲ ಎಂದು ತೋರುತ್ತದೆ. ಜವಾಬ್ದಾರಿಯುತ ಕಾಂಗ್ರೆಸ್ ನಾಯಕರು ಕುರಾನ್ ಮೇಲೆ ಪ್ರಮಾಣ ಮಾಡಿ ಅವಮಾನಿಸುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಸಮಾಜವನ್ನು ವಿಭಜಿಸಲು ಕೆಲಸ ಮಾಡುತ್ತಿದೆ ಮತ್ತು ಈ ವೀಡಿಯೊ ಪಕ್ಷದ ನೈಜ ಮುಖವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ.

ವಿಡಿಯೋ ವೈರಲ್ ಆದ ನಂತರ ನಗರದ ಖಾಜಿ ಸೈಯದ್ ಇಶ್ರತ್ ಅಲಿ ಕೂಡ ಪ್ರತಿಕ್ರಿಯಿಸಿದ್ದಾರೆ. ಧರ್ಮವನ್ನು ರಾಜಕೀಯದಿಂದ ದೂರವಿಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹಕ್ಕುಗಳನ್ನು ಹೊಂದಿದ್ದಾನೆ. ಅವರು ರಾಜಕೀಯವಾಗಿ ಇಷ್ಟಪಟ್ಟವರನ್ನು ಆರಿಸಿಕೊಳ್ಳಬೇಕು. ಇದನ್ನು ರಾಜಕೀಯದಲ್ಲಿ ಬಳಸುವುದು ಸರಿಯಲ್ಲ. ಕುರಾನ್ ಮೂಲಕ ಪ್ರತಿಜ್ಞೆ ಮಾಡುವುದು ತಪ್ಪು.  ನಿಮ್ಮ ಪರವಾಗಿ ಯಾವುದೇ ಪ್ರಮಾಣವಚನ ಸ್ವೀಕರಿಸಿ, ಆದರೆ ಧರ್ಮ ಆಧಾರಿತ ಪ್ರಮಾಣವಚನ ಸ್ವೀಕರಿಸುವುದು ತಪ್ಪು ಎಂದಿದ್ದಾರೆ.

Advertisement
Share this on...