ಸಿಎಂ ಬದಲಾವಣೆ ಮಾಡಿಸಿ ಗೆದ್ದೆ ಎಂದಿದ್ದ ಯತ್ನಾಳ್ ರವರಿಗೆ ಈಗ ಈ ಬೇಡಿಕೆಗಳೂ ಈಡೇರಲೇಬೇಕಂತೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಆಗ್ರಹ

in Kannada News/News 107 views

ವಿಜಯಪುರ: ಶೋಷಿತ ಸಮುದಾಯಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಅಧಿಕಾರವನ್ನು ಪ್ರಧಾನಿ ಮೋದಿ ಅವರು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಪಗಳನ್ನು ಹೇಳದೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಮಾತ್ರವಲ್ಲ ಮೀಸಲು ಬೇಡಿಕೆ ಇರುವ ಎಲ್ಲ ಸಮುದಾಯಗಳಿಗೆ ಮೀಸಲು ಬೇಡಿಕೆ ಈಡೇರಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಸೌಲಭ್ಯ ಕಲ್ಪಿಸುವ ಕುರಿತು ನಮ್ಮ ಸಮಾಜದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.  ಪಂಚಮಸಾಲಿ ಸಮಾಜ ಮಾತ್ರವಲ್ಲ ಅದಿಬಣಜಿಗ, ಕೂಡು ಒಕ್ಕಲಿಗ, ಕುರುಬ ಸಮಾಜ ಹಾಗೂ ವಾಲ್ಮೀಕಿ, ಮಡಿವಾಳ ಸಮಾಜಗಳ ಮೀಸಲು ಬೇಡಿಕೆ ಈಡೇರಿಕೆಗೆ ಬೆಂಬಲಿಸಿದ್ದೇವೆ ಎಂದರು.

ಪಂಚಮಸಾಲಿ ಮೀಸಲು ಹೋರಾಟದ ಕುರಿತು ಚರ್ಚಿಸಲು ಗುರುವಾರ ಹುಬ್ಬಳ್ಳಿ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಿದ್ದೇವೆ. ಮೀಸಲಾತಿ ನೀಡುವ ಅಧಿಕಾರವನ್ನು ಕೇಂದ್ರದ ಬದಲಾಗಿ ರಾಜ್ಯ ಸರ್ಕಾರಕ್ಕೆ ನೀಡಿ ಪ್ರಧಾನಿ ಮೋದಿ ಸರ್ಕಾರ ಕಾನೂನು ತಿದ್ದುಪಡಿ ನಿರ್ಧಾರ ಕೈಗೊಂಡಿದೆ. ಪ್ರಧಾನಿ ಮೋದಿ ಅವರು ಕಾಯ್ದೆಗೆ ತಿದ್ದುಪಡಿಗೆ ಕೈಗೊಂಡ ನಿರ್ಧಾರ ಐತಿಹಾಸಿಕವಾಗಿದೆ. ಪ್ರಧಾನಿ ಅವರು ಕೈಗೊಂಡ ಈ ನಿರ್ಧಾರ ಸ್ವಾಗತಿಸುವುದಾಗಿ ಯತ್ನಾಳ್ ಹೇಳಿದರು.

ಮೀಸಲಾತಿ ಸೌಲಭ್ಯ ಕಲ್ಪಿಸುವ ವಿಚಾರವಾಗಿ ನೆಪಗಳನ್ನು ಹೇಳದೆ ಸಿಎಂ ಬೊಮ್ಮಾಯಿ ಅವರು ನಿರ್ಧಾರ ಕೈಗೊಳ್ಳಬೇಕು. ಶೀಘ್ರವೇ ಪಂಚಮಸಾಲಿ ಸಮಾಜ ಮಾತ್ರವಲ್ಲ ಆದಿ ಬಣಜಿಗ, ಕೂಡು‌ಒಕ್ಕಲಿಗ ಸಮಾಜಗಳಿಗೆ 2 ಎ ಮೀಸಲಾತಿ ನೀಡಬೇಕು. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಹಾಗೂ ಎಸ್ಸಿ ಸಮಾಜದ ಮೀಸಲಾತಿಯನ್ನು ಶೇ.3 ರಿಂದ 7.5 ಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.

ಇದಲ್ಲದೇ ಮಡಿವಾಳ, ಹಡಪದ, ಗಂಗಾಮತಸ್ತ, ತಳವಾರ, ಕೋಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇದಕ್ಕಾಗಿ ಸಿಎಂ‌ ಬೊಮ್ಮಾಯಿ ಅವರು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಮೀಸಲು ಸೌಲಭ್ಯದ ಕುರಿತು ನಮ್ಮ ಹೋರಾಟಕ್ಕೆ ಯಾರಾದರೂ ಬರಲಿ ಬಿಡಲಿ, ನಮ್ಮ ಹೋರಾಟ ನಡೆದೇ ನಡೆಯುತ್ತದೆ. ಆಯಾ ಸಮುದಾಯದ ನಾಯಕರು, ಶಾಸಕರು ಬರದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಇದನನೂ ಓದಿ: ಈಗಲೂ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇದ್ದೇ ಇದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಸಚಿವ ಬಿಸಿ ಪಾಟೀಲ್

ಕೃಷಿ ಆಡಳಿತದಲ್ಲಿ ಬಿ.ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಅನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪ ಹಾಗೂ ಆಕ್ಷೇಪ ವ್ಯಕ್ತಪಡಿಸ್ತಾರೆ ಅಂತಾ ಬೊಮ್ಮಾಯಿಯವರ ಆಡಳಿತವನ್ನ ಬದಲಾವಣೆ ಮಾಡಿಕೊಳ್ಳೋಕೆ ಆಗೋದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಜಿಲ್ಲೆಯ ಹಿರೇಕೆರೂರ ತಾಲೂಕಿನ ಬಸರೀಹಳ್ಳಿ ಗ್ರಾಮದಲ್ಲಿನ ಹೆಲಿಪ್ಯಾಡ್‌ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಹದಿನೈದು ದಿನಗಳಾಗಿವೆ. ಬಸವರಾಜ ಬೊಮ್ಮಾಯಿ ಅವರು ಬಹಳ ಉತ್ತಮವಾದ ಆಡಳಿತವನ್ನ ಕೊಡ್ತಿದ್ದಾರೆ. ಹಗಲಿರುಳು ಶ್ರಮಿಸ್ತಿದ್ದಾರೆ. ಇಗಾಗಲೇ ಅನೇಕ ಜಿಲ್ಲೆಗಳ ಪ್ರವಾಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಉತ್ತಮವಾದ ಆಡಳಿತವನ್ನ ನಾವು ನಿರೀಕ್ಷೆ ಮಾಡಿದ್ದೇವೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವಾಯ್.ವಿಜಯೇಂದ್ರ ಅವರ ಬಗ್ಗೆ ಯತ್ನಾಳರ ಹೇಳಿಕೆ ವಯಕ್ತಿಕವಾದುದು. ಬಿಎಸ್‌ವೈ ಬಗ್ಗೆಯಾಗಲಿ, ವಿಜಯೇಂದ್ರ ಬಗ್ಗೆಯಾಗಲಿ ಪಕ್ಷದಲ್ಲಿ ಯಾವುದೇ ಅಸಮಾಧಾನ, ಅಸಹಕಾರ ಇಲ್ಲ. ಯಡಿಯೂರಪ್ಪನವರು ನಮ್ಮ ಪಕ್ಷದ ನಾಯಕರು. ವಿಜಯೇಂದ್ರ ಅವರು ಬಿಜೆಪಿಯ ರಾಜ್ಯದ ಉಪಾಧ್ಯಕ್ಷ ಆಗಿರುವರು ಹೀಗಾಗಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

ಶಾಸಕ ಆನಂದ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಿಲ್ಲ. ಅವರೊಂದಿಗೆ ನಾನು ನಿನ್ನೆ, ಮೊನ್ನೆ ಮಾತನಾಡಿದ್ದೇನೆ. ಸ್ವಲ್ಪ ಅಸಮಾಧಾನ ಇತ್ತು, ಎಲ್ಲವೂ ಸರಿಯಾಗುತ್ತೆ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಧರಣಿ ಮಾಡಿದ ವಿಚಾರವಾಗಿ ಮನಾತನಾಡಿದ ಕೃಷಿ ಸಚಿವ ಪಾಟೀಲರು. ಮನೆಗೆ ಸೊಸೆ ಬಂದ್ಮೇಲೆ ಹದಿನೈದು ದಿನಗಳು ಅಥವಾ ಒಂದು ತಿಂಗಳಾದ್ರೂ ಗೊತ್ತು ಮಾಡಿಕೊಳ್ಳಬೇಕು. ಅವರ ನಡೆ, ನುಡಿ ಹೇಗಿದೆ ಅಂತಾ ನೋಡಬೇಕು. ಏನೂ ಗೊತ್ತಿಲ್ಲದೆ ಸಡನ್ ಆಗಿ ಹೋಗಿ ಧರಣಿ ಮಾಡೋದು ಸರಿಯಲ್ಲ ಎನ್ನುವ ಮೂಲಕ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಇನ್ನು ಹದಿನೈದು ದಿನಗಳು ಕಳೆದಿವೆ ಎನ್ನುವುದನ್ನು ಪರೋಕ್ಷವಾಗಿ ಟಾಂಗ್ ನೀಡಿದರು.

ಹೀಗೆ ಧರಣಿ ಮಾಡುವುದು ಪಕ್ಷದ ತತ್ವ ಸಿದ್ದಾಂತಗಳಿಗೂ ವಿರೋಧ ಆಗುತ್ತದೆ. ಪಕ್ಷದಲ್ಲಿದ್ದು ಮಾಡೋದು ಸರಿಯಲ್ಲ. ನೇರವಾಗಿ ಹೋಗಿ ಸಿಎಂ ಅವರನ್ನು ಕೇಳೋ ಅಧಿಕಾರವಿದೆ. ಅವರು ಶಾಸಕರಿದ್ದಾರೆ, ಹೋಗಿ ಕೇಳಲಿ. ಅದು ಬಿಟ್ಟು ಧರಣಿ ಮಾಡಿದ ತಕ್ಷಣ ಎಲ್ಲವೂ ಸರಿ ಹೋಗುತ್ತೆ ಅನ್ನೋದು ತಪ್ಪು ಎಂದು ಹೇಳಿದರು.

ಡಿ.ಕೆ.ಶಿವಕುಮಾರ ಅವರು ನೆಹರು ಫ್ಯಾಮಿಲಿ ಹೊಗಳಿದ್ರೆ ಕೆಪಿಸಿಸಿ ಅಧ್ಯಕ್ಷರಾಗಿ ಇರ್ತಾರೆ. ಇಲ್ಲದಿದ್ರೆ ಅವರನ್ನ ಕಿತ್ತು ಬಿಸಾಕ್ತಾರೆ. ಅದಕ್ಕೆ ಡಿ.ಕೆ.ಶಿವಕುಮಾರ ಅವರು ಅವರನ್ನ ಹೊಗಳಿಕೊಂಡು ಹೋಗ್ತಿದ್ದಾರೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ತ್ಯಾಗದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ತರೋ ಸಂದರ್ಭದಲ್ಲಿ ಯಾವುದೇ ಪಕ್ಷ, ಪಂಗಡಗಳು, ರಾಜಕೀಯ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಇಂಗ್ಲೀಷರ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಅಂತಾ ಹೋರಾಟ ಮಾಡಿದ್ದಾರೆ. ಅದರಲ್ಲಿ ನೆಹರು ದೊಡ್ಡವರಾದರು, ಪ್ರಧಾನ ಮಂತ್ರಿಗಳಾದರಷ್ಟೆ ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಬಸವರಾಜ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಇದ್ದರು.

Advertisement
Share this on...