ಸಿಎಂ ಯೋಗಿ ಆದಿತ್ಯನಾಥರು ಸನ್ಯಾಸತ್ವ ಸ್ವೀಕರಿಸದಾಗ ಅವರ ತಂದೆ ಆ ವಸ್ತು ಕೊಡುವಂತೆ ಕೇಳಿದ್ದರು: ಏನದು ಗೊತ್ತಾ?

in Kannada News/News/Story 280 views

ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮದೇ ಆದ ಕಟ್ಟು ನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅಂತಹ ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಮಾತ್ರ ಸ್ವಲ್ಪ ವಿಭಿನ್ನ ಹಾಗೂ ಕಠೋರ ಆದೇಶಗಳನ್ನು ನಾವು ಕಾಣಬಹುದು. ಹೌದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಜೀ ಈಗಾಗಲೆ ಕೊರೊನಾ ಹಬ್ಬಿಸುವವರಿಗೆ NIA ತಂಡದ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದಾರೆ.

Advertisement

ಉತ್ತರಪ್ರದೇಶದಲ್ಲಿ ಕರೋನಾದದ ಏಕಾಏಕಿ ಉಂಟಾದ ಬಿಕ್ಕಟ್ಟಿನ ಮಧ್ಯೆ, ಲಾಕ್ ಡೌನ್ ಜಾರಿಗೆ ಬಂದಾಗಿನಿಂದ ಯೋಗಿ ಸರ್ಕಾರ ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಕರೋನಾ ಯುದ್ಧದಲ್ಲಿ ಉತ್ತರ ಪ್ರದೇಶ ತೆಗೆದುಕೊಂಡ ಹಾಟ್‌ಸ್ಪಾಟ್‌ಗಳ ತಂತ್ರವನ್ನು ಇತರ ರಾಜ್ಯಗಳಿಗೆ ದೊಡ್ಡ ಮಾದರಿಯಾಗಿದೆ ಎನ್ನಬಹುದು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ದಿವಂಗತ ಆನಂದ್ ಸಿಂಗ್ ಬಿಷ್ಟ್ ಉತ್ತರಾಖಂಡದ ಪಂಚೂರು ಗ್ರಾಮದ ನಿವಾಸಿಯಾಗಿದ್ದರು. ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ನಿವೃತ್ತಿಯಾದ ನಂತರ ಮನೆಯಲ್ಲಿಯೇ ಇದ್ದರು. ಅವರು ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದರು, ಪಂಚೂರು ಗ್ರಾಮದಲ್ಲಿ ವಾಸಿಸುವ ಕೋಟ್‌ದ್ವಾರದ ಶಿಕ್ಷಕ ಮಾತನಾಡುತ್ತ ಸಿಎಂ ಯೋಗಿ ಆದಿತ್ಯನಾಥರ ಗ್ರಾಮದ ಸುತ್ತಮುತ್ತ 40-50 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಾಲೇಜು ಇರಲಿಲ್ಲ, ಇದರಲ್ಲಿ ಹುಡುಗಿಯರಿಗೆ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು ಎಂದು ಯೋಗಿ ಆದಿತ್ಯನಾಥ್‌ರ ತಂದೆಯ ಕನಸಾಗಿತ್ತು.

ಆ ಊರಿನಲ್ಲಿ ಯೋಗಿ ಆದಿತ್ಯನಾಥರ ತಂದೆ ಕಾಲೇಜು ಸ್ಥಾಪಿಸಲು ಕೇಳಿದ್ದರು. ಅವರ ಈ ಸಲಹೆಯನ್ನು ಸ್ವೀಕರಿಸಿ 2005 ರಲ್ಲಿ ಪಂಚೂರು ಗ್ರಾಮದಲ್ಲಿ ಮಹಾಯೋಗಿ ಗುರು ಗೋರಖನಾಥ್ ಪದವಿ ಕಾಲೇಜನ್ನ ಸಂಸದರಾಗಿದ್ದ ಯೋಗಿ ಆದಿತ್ಯನಾಥರು ಸ್ಥಾಪಿಸಿದರು. ಆ ಕಾಲೇಜಿನ ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಯೋಗಿ ಆದಿತ್ಯನಾಥರು ತಮ್ಮ ತಂದೆಗೆ ನೀಡಿದ್ದರು.

ತಾಂತ್ರಿಕ ಶಿಕ್ಷಣ ನೀಡಲು ಬಯಸಿದ್ದರು

ಉತ್ತಮ ಶಿಕ್ಷಣದ ದೀಕ್ಷೆಯಿಂದಾಗಿ, ಮಕ್ಕಳು ದೂರ ದೂರದಿಂದ ಶಿಕ್ಷಣಕ್ಕಾಗಿ ಅಲ್ಲಿಗೆ ಬರುತ್ತಾರೆ. ಸಿಎಂ ಯೋಗಿಯ ತಂದೆ ಶಿಕ್ಷಣದ ಪ್ರತಿಯೊಂದು ಸೌಲಭ್ಯವೂ ಗ್ರಾಮದಲ್ಲಿಯೇ ಸಿಗಬೇಕು ಎಂದು ಬಯಸಿದ್ದರು, ಅವರ ಸಂಪೂರ್ಣ ಪ್ರಯತ್ನ ಮಕ್ಕಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವುದಾಗಿತ್ತು. ಆದರೆ ಆನಂದ್ ಸಿಂಗ್ ಬಿಷ್ಟ್ ರವರು ಭಾನುವಾರ ಬೆಳಿಗ್ಗೆ ದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದರು. ಅವರ ಸಾವಿನ ಸುದ್ದಿ ಬಂದ ಕೂಡಲೇ ಆ ಪ್ರದೇಶದಲ್ಲಿ ಶೋಕತಪ್ತ ವಾತಾವರಣ ಸೃಷ್ಟಿಯಾಗಿದೆ.

ತಮ್ಮ ತಂದೆಯವರ ಅಂತ್ಯಕ್ರಿಯೆಗೂ ಹೋಗಲಾರದಂತಾದ ಯೋಗಿಜೀ:

ದೇಶದಲ್ಲಿ ಕೊರೋನಾ ಹಾವಳಿ ಮಿತಿಮೀರಿದ್ದು ದೇಶದ ಅತಿ ದೊಡ್ಡ ಅಂದರೆ 26 ಕೋಟಿ ಜನಸಂಖ್ಯೆಯಿರುವ ರಾಜ್ಯದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥರು ಲಾಕ್‌ಡೌನ್ ಇರುವ ಕಾರಣ ಹಾಗು ಕೊರೋನಾ ‌ಸ್ಥಿತಿಯನ್ನ ನಿಭಾಯಿಸಲು ತಮ್ಮ ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗಲು ಸಾಧ್ಯವಾಗಲಿಲ್ಲ. ‌ಒಂದು ರಾಜ್ಯದ ಮುಖ್ಯಮಂತ್ರಿಯಾದವನು ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಬಹುದಿತ್ತು‌ ಆದರೆ ರಾಜ್ಯದ ಮುಖ್ಯಮಂತ್ರಿಯಾಗಿರುವ ತಾನೇ ನಿಯಮಗಳನ್ನ ಉಲ್ಲಂಘಿಸಿದರೆ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆಯೆಂದು ಯೋಗಿ ಆದಿತ್ಯನಾಥರು ಲಾಕ್‌ಡೌನ್ ಮುಗಿದ ಬಳಿಕ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ.

Advertisement
Share this on...