ಸಿಎಂ ಯೋಗಿ ಆದಿತ್ಯನಾಥ್ ಎಲ್ಲೇ ಚುನಾವಣೆ ನಿಂತರೂ ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆಂದು‌‌ ಚುನಾವಣಾ ಅಖಾಡಕ್ಕಿಳಿದ ಮಾಜಿ ಐಎಎಸ್ ಅಧಿಕಾರಿ

in Kannada News/News 135 views

ಲಖನೌ: ಸೇವಾ ಅವಧಿ ಮುಗಿಯುವ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಆದೇಶಿಸಲ್ಪಟ್ಟ ಉತ್ತರ ಪ್ರದೇಶದ ಮಾಜಿ ಐಪಿಎಸ್​ ಅಧಿಕಾರಿ ಅಮಿತಾಭ್​ ಠಾಕೂರ್​ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಸ್ಪರ್ಧೆಗಿಳಿಯಲು ಮುಂದಾಗಿದ್ದಾರೆ.

ಅಮಿತಾಭ್ ಠಾಕೂರ್​ ಅವರ ಪತ್ನಿ ನೂತನ್​ ಠಾಕೂರ್​ ಇಂದು ಲಖನೌನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಆದಿತ್ಯನಾಥ್​ ಅವರು ಮುಖ್ಯಮಂತ್ರಿಯಾಗಿ ಹಲವು ತಪ್ಪು ಮತ್ತು ಭೇದಭಾವದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರು ನಿಲ್ಲುವ ಕ್ಷೇತ್ರದಲ್ಲೇ ಅಮಿತಾಭ್​ ಚುನಾವಣೆ ಎದುರಿಸಲಿದ್ದಾರೆ” ಎಂದಿದ್ದಾರೆ. “ಅಮಿತಾಭ್​​ಗೆ ಇದು ಸಿದ್ಧಾಂತಗಳ ಹೋರಾಟವಾಗಲಿದೆ” ಎಂದು ಹೇಳಿದ್ದಾರೆ.

ಕಳೆದ ಮಾರ್ಚ್​​ 23 ರಂದು ಕೇಂದ್ರ ಗೃಹ ಸಚಿವಾಲಯದ ನಿರ್ಧಾರದ ಮೇರೆಗೆ “ಸಾರ್ವಜನಿಕ ಹಿತಾಸಕ್ತಿಯಿಂದ” ಅಮಿತಾಭ್​ ಠಾಕೂರ್​ಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. 2028 ರವರೆಗೆ ಸೇವಾ ಅವಧಿ ಹೊಂದಿದ್ದ ಅವರು “ಉಳಿದ ಸೇವಾ ಅವಧಿಯಲ್ಲಿ ಮುಂದುವರಿಸಲು ಯೋಗ್ಯರಾಗಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿತ್ತು ಎನ್ನಲಾಗಿದೆ.

2015 ರಲ್ಲಿ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್​ ಯಾದವ್​ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ಅಮಿತಾಭ್​ ಠಾಕೂರ್​​ರನ್ನು ಸಸ್ಪೆಂಡ್​ ಮಾಡಲಾಗಿತ್ತು. ಅವರ ವಿರುದ್ಧ ವಿಜಿಲೆನ್ಸ್​ ತನಿಖೆ ಕೂಡ ಆದೇಶಿಸಲಾಗಿತ್ತು. ಆದರೆ 2016 ರ ಏಪ್ರಿಲ್​​ನಲ್ಲಿ ಅವರ ಅಮಾನತು ಆದೇಶಕ್ಕೆ ಸಿಎಟಿ ತಡೆ ನೀಡಿದ್ದು, ಸೇವೆಯನ್ನು ಮುಂದುವರಿಸಲಾಗಿತ್ತು. 2017 ರಲ್ಲಿ ಅಮಿತಾಭ್ ಠಾಕೂರ್​ ಉತ್ತರಪ್ರದೇಶದಿಂದ ಹೊರಕ್ಕೆ ವರ್ಗಾವಣೆ ಕೇಳಿದ್ದರು. ಇದೀಗ ಮಾರ್ಚ್​ನಲ್ಲಿ ಅವರಿಗೆ ಅವಧಿಗೆ ಮುಂಚಿತವಾಗಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದ ಗೃಹಸಚಿವ ಅಮಿತ್ ಶಾಹ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಡಳಿತದ ವೈಖರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಬಗ್ಗೆ ಹಾಗು ಬಿಜೆಪಿ ಪಕ್ಷದ ಬಗ್ಗೆ ಮಾತನಾಡಿದ ಅಮಿತ್ ಶಾ, ಬಿಜೆಪಿ ಸರ್ಕಾರ ಜಾತಿ ಆಧಾರದಲ್ಲಿ ಕೆಲಸ ಮಾಡುವುದಿಲ್ಲ. ಅತ್ಯಂತ ಬಡವರ ಅಭಿವೃದ್ಧಿಗೆ ಹಾಗೂ ಕಾನೂನು ಸುವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅಮಿತ್ ಶಾ, ಕಾನೂನು ಸುವ್ಯವಸ್ಥೆಯಲ್ಲಿ ರಾಜ್ಯವನ್ನು ಅಗ್ರ ಶ್ರೇಣಿಗೆ ಕೊಂಡೊಯ್ದಿರುವುದನ್ನು ಹಾಡಿ ಹೊಗಳಿದ್ದಾರೆ. ಬಿಜೆಪಿ ಸರ್ಕಾರ ಜಾತಿ, ಕುಟುಂಬದ ಆಧಾರದಲ್ಲಿ ಅಥವಾ ತಮ್ಮ ಆಪ್ತರಿಗಾಗಿ ಕೆಲಸ ಮಾಡುವುದಿಲ್ಲ. ಅತ್ಯಂತ ಬಡವರ ಅಭಿವೃದ್ಧಿಗೆ ಹಾಗೂ ಕಾನೂನು ಸುವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಕೆಲಸ ಮಾಡಲಿದೆ.

2019 ಕ್ಕಿಂತಲೂ ಆರು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಸಂಚರಿಸಿದ್ದೇನೆ. ಆದ್ದರಿಂದ ಈ ಹಿಂದಿನ ಉತ್ತರ ಪ್ರದೇಶದ ಬಗ್ಗೆ ಚೆನ್ನಾಗಿ ಅರಿವಿದೆ. ಯೋಗಿ ಆದಿತ್ಯನಾಥ್ ಹಾಗೂ ಅವರ ತಂಡ ಉತ್ತರ ಪ್ರದೇಶವನ್ನು ಕಾನೂನು ಸುವ್ಯವಸ್ಥೆಯಲ್ಲಿ ಅಗ್ರ ಶ್ರೇಣಿಗೆ ಕೊಂಡೊಯ್ದಿದ್ದಾರೆ ಎಂದು 2021 ರಲ್ಲಿ ಹೆಮ್ಮೆಯಿಂದ ಹೇಳಬಹುದು ಎಂದು ಹೇಳಿದ್ದಾರೆ.

Advertisement
Share this on...