ಸಿಎಎ ಬಳಿಕ ಈ ಕಾನೂನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡ ಕೇಂದ್ರ ಹಾಗು ಯೋಗಿ ಸರ್ಕಾರ

in Kannada News/News 468 views

ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಿತ್ತರವಾದ ಸುದ್ದಿಯ ಪ್ರಕಾರ ಕೇಂದ್ರದ ಮೋದಿ ಸರ್ಕಾರ ಹಾಗು ಉತ್ತರಪ್ರದೇಶದ ಯೋಗಿ ಸರ್ಕಾರ ಪೌರತ್ವ ತಿದ್ದುಪಡಿ ಕಾನೂನಿನ ಬಳಿಕ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿವೆ. ಸದ್ಯ ದೇಶಾದ್ಯಂತ ಸಿಎಎ ವಿ’ರುದ್ಧ ಪ್ರತಿಭಟನೆಗಳು, ಹಿಂ’ಸಾಚಾರ ನಡೆಯುತ್ತಿವೆ. ಈ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತಂದದ್ದೇ ಆದಲ್ಲಿ ಸಿಎಎ ಪ್ರತಿಭಟನೆಯ ಜೊತೆ ಜನಸಂಖ್ಯಾ ನಿಯಂತ್ರಣ ಕಾನೂನಿಗೆ ಸಂಬಂಧಿಸಿದ ಪ್ರತಿಭಟನೆಯ ಕಾವೂ ಹೆಚ್ಚಾಗಲಿದೆ.

Advertisement

ಭಾರತದಲ್ಲಿನ ಒಂದು ಕೋಮಿನ ಜನ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನ ಹೆರುತ್ತದೆ‌. ಆದರೆ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ದೇಶದ ಜನರಿಗೆ ಉತ್ತಮ ಶಿಕ್ಷಣ, ಆಹಾರ, ಉದ್ಯೋಗ ಹಾಗು ಉತ್ತಮ ಜೀವನ ರೂಪಿಸಲು ಜನಸಂಖ್ಯಾ ನಿಯಂತ್ರಣ ಕಾನೂನು ಅತ್ಯಗತ್ಯ ಎಂಬರ್ಥದಲ್ಲಿ ಈ ಹಿಂದೆ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಮಾತನಾಡಿದ್ದಾರೆ.

ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ರವರು ಈ ಕುರಿತು ಮಾತನಾಡುತ್ತ ಸಿಎಎ ಬಳಿಕ ಕೇಂದ್ರ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ಪರಾಮರ್ಶೆ ನಡೆಸುತ್ತಿದೆ ಎಂದಿದ್ದಾರೆ. ಈ ಬಗ್ಗೆ ತಾನು ಖುದ್ದಾಗಿ ಪ್ರಧಾನಮಂತ್ರಿಯವರ ಜೊತೆ ಮಾತನಾಡಿದ್ದಾಗಿಯೂ ಅವರು ತಿಳಿಸಿದ್ದಾರೆ. ಅವರು ಮಾತನಾಡುತ್ತ ಈ ವಿಷಯದ ಕುರಿತಾಗಿ ಸ್ವಯಂ ಪ್ರಧಾ‌ನಿ ಮೋದಿಯವರು ಚಿಂತನೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಅತ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರವೂ ಜನಸಂಖ್ಯಾ ನಿಯಂತ್ರಣ ಕಾನೂನಿಗಾಗಿ‌ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳ ಲಾಭ ರದ್ದುಪಡಿಸುವುದರ ಬಗ್ಗೆ ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದಂತೆ ನಿರ್ಬಂಧ ಹೇರಲು ಮುಂದಾಗಿದೆ‌.

ಸುದ್ದಿ ಮೂಲಗಳ ಪ್ರಕಾರ ಉತ್ತರಪ್ರದೇಶದ ಆರೋಗ್ಯ ಸಚಿವ ಜಯಪ್ರತಾಪ್ ಸಿಂಗ್ ರವರು ಮಾತನಾಡುತ್ತ ವಿವಿಧ ರಾಜ್ಯಗಳ ಜನಸಂಖ್ಯಾ ನೀತಿಯ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಯಾವ ಕ್ರಮ ಕೈಗೊಂಡರೆ ಉತ್ತಮವೆಂದಯ ಆ ಅಧ್ಯಯನದ ವರದಿ ಬಂದ ಬಳಿಕ ಅದನ್ನ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.‌ ಇಲ್ಲಿ ಗಮನಿಸುವ ಅಂಶವೆಂದರೆ ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶವಾಗಿದ್ದು ಈ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆಯಿದೆ.‌

ಮೂಲಗಳ ಪ್ರಕಾರ ಉತ್ತರಪ್ರದೇಶ ಸರ್ಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುದೆ. ಮೊದಲನೆಯದು, ಎರಡಕ್ಕಿಂತ ಹೆಚ್ಚಯ ಮಕ್ಕಳು ಹೊಂದಿರುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳನ್ನ ಹಿಂಪಡೆಯುವುದು ಹಾಗು ಎರಡನೆಯದು, ರಾಜ್ಯದ ಯಾವುದೇ ಚುನಾವಣೆಗಳಲ್ಲೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದಿರುವ ವ್ಯಕ್ತಿ ಸ್ಪರ್ಧಿಸದಂತೆ ನಿರ್ಬಂಧಿಸುವುದಾಗಿದೆ. ಉತ್ತರಪ್ರದೇಶದ ಒಟ್ಟು ಜನಸಂಖ್ಯೆ 22 ಕೋಟಿಯಷ್ಟಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019 ರ ಆಗಷ್ಟ್ 15 ರಂದು ತಮ್ಮ ಭಾಷಣದಲ್ಲಿ ಜಬಸಂಖ್ಯಾ ಸ್ಪೋಟದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಮಾತನಾಡಿದ್ದರು. ಅವರು ಮಾತನಾಡುತ್ತ ಯಾವ ಸಮಾಜದ ಒಂದು ಪುಟ್ಟ ಭಾಗವನ್ನ ಕುಟುಂಬವನ್ನು ಪುಟ್ಟದಾಗಿರಿಸುತ್ತೋ ಅವರು ನಿಜಕ್ಕೂ ಶ್ಲಾಘನೆಗೆ ಅರ್ಹರು, ಅದು ನಿಜವಾದ ದೇಶಭಕ್ತಿ ಎಂದಿದ್ದರು.‌

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಕೂಡ 2019 ರ ಫೆಬ್ರವರಿಯಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ತಮ್ಮ ಚಿಂತೆಯನ್ನ ವ್ಯಕ್ತಪಡಿಸಿದ್ದರು, ಅವರು ಮಾತನಾಡುತ್ತ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದರು.

Advertisement
Share this on...