ಸುಪ್ರೀಂಕೋರ್ಟ್ ಜಡ್ಜ್‌ನಿಂದ ನೂಪೂರ್ ಶರ್ಮಾ ಬಗ್ಗೆ ಪುಂಖಾನುಪುಂಖ ಮೌಖಿಕ ಟೀಕೆಗಳು, ಆದರೆ ಆದೇಶದಲ್ಲಿ ಬರೆದದ್ದು ಮಾತ್ರ ‘ಏನೂ ಇಲ್ಲ’… ಜಡ್ಜ್ ವಿರುದ್ಧ CJI ಬಳಿ ದಾಖಲಾಯ್ತು ಅರ್ಜಿ (ದೂರು)

in Uncategorized 438 views

ದೇಶಾದ್ಯಂತ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸಿ ದೆಹಲಿಗೆ ವರ್ಗಾಯಿಸುವಂತೆ ಕೋರಿ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಮನವಿಗೆ ಸುಪ್ರೀಂ ಕೋರ್ಟ್ ಕಟುವಾದ ಟೀಕೆ ಮಾಡಿದೆ. ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರ ಕ್ರೂ-ರ ಹ-ತ್ಯೆ ಸೇರಿದಂತೆ ದೇಶಾದ್ಯಂತ ಇಸ್ಲಾಮಿಸ್ಟ್‌ಗಳು ನಡೆಸಿದ ಹಿಂಸಾಚಾರಕ್ಕೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೂಪೂರ್ ಶರ್ಮಾರನ್ನೇ ದೂಷಿಸಿದ್ದರು. ಇದೀಗ ಈ ಹೇಳಿಕೆ ವಿರುದ್ಧ ಮುಖ್ಯ ನ್ಯಾಯಮೂರ್ತಿಗಳ (Chief Justice of India) ಮುಂದೆ ಅರ್ಜಿ ಸಲ್ಲಿಸಲಾಗಿದೆ.

ಆದರೆ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ಹೇಳಿಕೆಯನ್ನು ಮೌಖಿಕವಾಗಿ ಮಾಡಿದ್ದಾರೆ ಮತ್ತು ಅದನ್ನು ತಮ್ಮ ಔಪಚಾರಿಕ ಲಿಖಿತ ಆದೇಶದಲ್ಲಿ ಬರೆದಿಲ್ಲ. ಅದೇನೇ ಇದ್ದರೂ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠವು ವಿಚಾರಣೆಯನ್ನು ಆಲಿಸಿದಾಗ, ಹಿಂಸಾಚಾರಕ್ಕೆ ನೂಪುರ್ ಶರ್ಮಾ ಅವರನ್ನೇ ಸಂಪೂರ್ಣವಾಗಿ ದೂರಿದೆ.

“ಇಡೀ ದೇಶದಲ್ಲಿ ಭಾವನೆಗಳನ್ನು ಕೆರಳಿಸಿದ ರೀತಿ… ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಈ ಮಹಿಳೆಯೇ ಮಾತ್ರ ಕಾರಣ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು. ಪ್ರವಾದಿ ಮೊಹಮ್ಮದ್ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಯಾವುದೇ ಹಕ್ಕಿಲ್ಲ ಮತ್ತು ಸಾಮಾನ್ಯ ನಾಗರಿಕರಿಗೆ ಲಭ್ಯವಿರುವ ನ್ಯಾಯಾಂಗ ಅಧಿಕಾರವನ್ನು ನೂಪೂರ್ ಶರ್ಮಾ ಕಳೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts

Watch and Subscribe to the Channel to get such amazing facts

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ತನ್ನ ಆದೇಶದಲ್ಲಿ ನೂಪುರ್ ಶರ್ಮಾ ಅವರು ಕಾನೂನಿನಡಿಯಲ್ಲಿ ಲಭ್ಯವಿರುವ ಪರ್ಯಾಯ ಪರಿಹಾರಗಳನ್ನು ಪಡೆಯುವ ಸ್ವಾತಂತ್ರ್ಯದ ಅಡಿಯಲ್ಲಿ ತನ್ನ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದೆ. ಪ್ರವಾದಿ ಮೊಹಮ್ಮದ್ ಅವರ ಕುರಿತಾದ ಹೇಳಿಕೆಗಾಗಿ ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟಗೂಡಿಸಿ ಅವುಗಳನ್ನ ದೆಹಲಿಗೆ ವರ್ಗಾಯಿಸಲು ನೂಪುರ್ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ನೂಪುರ್ ಶರ್ಮಾ ವಿರುದ್ಧ ಅವರ ಮೌಖಿಕ ಟೀಕೆಗಳನ್ನು ಹಿಂಪಡೆಯಲು ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ನಿರ್ದೇಶನ ನೀಡಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಅರ್ಜಿ ಸಲ್ಲಿಸಲಾಗಿದೆ. ಗೋ ಮಹಾಸಭಾದ ನಾಯಕ ಅಜಯ್ ಗೌತಮ್ ಅವರು ತಮ್ಮ ಅರ್ಜಿಯಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಮಾಡಿದ ಟೀಕೆಗಳನ್ನು ಅನಗತ್ಯವೆಂದು ಘೋಷಿಸಲು ಕೋರಿದ್ದಾರೆ.

ಅದೇ ಸಮಯದಲ್ಲಿ, ಲೇಖಕ ಮಿನ್ಹಾಜ್ ಮರ್ಚೆಂಟ್ ಟ್ವೀಟ್ ಮಾಡುತ್ತ, “ಈ ಭಯಾನಕ ಕಾಮೆಂಟ್ಗಳನ್ನು ಮಾಡಿರುವ ನ್ಯಾಯಮೂರ್ತಿ ಕಾಂತ್ ವಿರುದ್ಧ ಶಿಸ್ತು ಕ್ರಮ‌ಕೈಗೊಳ್ಳಬೇಕು. ಸಿಜೆಐಗೆ ಮನವಿ ಸಲ್ಲಿಸಿರುವುದು ಒಳ್ಳೆಯದು, 1) ಈ ಕೇಸನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಲು ಮತ್ತು 2) ನ್ಯಾಯಮೂರ್ತಿ ಕಾಂತ್ ಅವರು ತಮ್ಮ ಅವಲೋಕನಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ” ಎಂದು ಬರೆದಿದ್ದಾರೆ

 

Advertisement
Share this on...