ಸುಪ್ರೀಂಕೋರ್ಟ್ ನೀಡಿದ 5 ಎಕರೆಯ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಗೆ ಮೆಕ್ಕಾದಿಂದ ಕಲ್ಲನ್ನ (ಪವಿತ್ರ) ತರಿಸಿದ ಮಸ್ಜಿದ್ ಕಮಿಟಿ

in Uncategorized 25,301 views

ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಿಂದ ಪವಿತ್ರ ಇಟ್ಟಿಗೆಯನ್ನು ತರಲಾಗಿದೆ.
ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಮುಸ್ಲಿಮರಿಗೆ ಪರಿಹಾರವಾಗಿ ನೀಡಿದ ಅಯೋಧ್ಯೆಯ ಭೂಮಿಯಲ್ಲಿ ಹೊಸ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಲ್ಲಿ ಪವಿತ್ರಗೊಳಿಸಲ್ಪಟ್ಟಿರುವ ಇಟ್ಟಿಗೆಯನ್ನು ಬಳಸಲಾಗುತ್ತದೆ.

Advertisement

ಈ ಪವಿತ್ರ ಇಟ್ಟಿಗೆಯನ್ನು ಕಪ್ಪು ಮಣ್ಣಿನಿಂದ ಮಾಡಿದ್ದು, ಅದನ್ನು ಚಿನ್ನದಲ್ಲಿ ಕೆತ್ತಿ ಪವಿತ್ರ ಕುರಾನ್‌ನ ಕೆಲವು ಉಪದೇಶಗಳನ್ನು ಹೊಂದಿದೆ ಎಂದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ (ಐಐಸಿಎಫ್) ಪಾದಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಇಟ್ಟಿಗೆಯನ್ನು ಮಾರ್ಚ್ 12 ರಂದು ರಂಜಾನ್ ಈದ್ ನಂತರ ಅಯೋಧ್ಯೆಯ ಮಸೀದಿ ಸ್ಥಳವಿರುವ ಧನ್ನಿಪುರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಐಐಸಿಎಫ್ ಸದಸ್ಯ ಮತ್ತು ಮಸೀದಿ ಅಭಿವೃದ್ಧಿ ಸಮಿತಿಯ ಮುಖ್ಯ ಸ್ಥಹಾಜಿ ಅರಾಫತ್ ಶೇಕ್ ಮಾತನಾಡಿ, ಮಹಾರಾಷ್ಟ್ರದಿಂದ ಇಟ್ಟಿಗೆಯನ್ನು ಮೆಕ್ಕಾಗೆ ತೆಗೆದುಕೊಂಡು ಹೋಗಿ ಅಲ್ಲಿನ ಪವಿತ್ರ ನೀರಿನಿಂದ ಪ್ರೋಕ್ಷಣೆ ಮಾಡಿದ್ದೇನೆ. ಅದನ್ನು ಮದೀನಾ ಶರೀಫ್ ದರ್ಗಾಗೆ ತೆಗೆದುಕೊಂಡು ಹೋಗಿ ಅಲ್ಲಿನ ಪವಿತ್ರ ನೀರಿನಿಂದ ಪ್ರೋಕ್ಷಣೆ ಮಾಡಿ ಪ್ರಾಥನೆ ಸಲ್ಲಿಸಿ ಫೆ.2 ರಂದು ಪವಿತ್ರ ಇಟ್ಟಿಗೆಯನ್ನು ಮಹಾರಾಷ್ಟ್ರಕ್ಕೆ ತರಲಾಗಿದೆ ಎಂದಿದ್ದಾರೆ.

ಜೊತೆಗೆ ಮುಂದಿನ ದಿನಗಳಲ್ಲಿ ಅಜ್ಮೇರ್ ಶರೀಫ್ ದರ್ಗಾದಲ್ಲಿ ಇಟ್ಟಿಗೆಗೆ ಪ್ರಾಥನೆ ಸಲ್ಲಿಸಲಾಗುವುದು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ಅಯೋಧ್ಯೆಗೆ ತರಲಾಗುವುದು. ಇಟ್ಟಿಗೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಅಡಿಪಾಯಕ್ಕೆ ಬಳಸಲಾಗುವುದು. ಏಪ್ರಿಲ್‌ನಲ್ಲಿ ಮಸೀದಿ ಕಾರ್ಯ ಆರಂಭಗಲಿದೆ ಎಂದು ಅರಾಫತ್ ಶೇಕ್ ಹೇಳಿದ್ದಾರೆ.

Advertisement
Share this on...