ನಮಸ್ತೆ ಸ್ನೇಹಿತರೆ, ಸಿನಿಮಾ ಲೋಕಾನೆ ಹಾಗೆ, ಮಾಯ ಲೋಕದ ಕಡೆಗೆ ಆಕರ್ಷಿತವಾಗುವ ಹಲಾವರು ಯುವಕರು ಓದುವುದನ್ನು ಅರ್ಧಕ್ಕೆ ಬಿಟ್ಟು ಮುಂದಿನ ಜೀವನ ಹೇಗಪ್ಪ ಅನ್ನುವ ಅಲೋಚನೆ ಕೂಡ ಮಾಡದೆ ದೊಡ್ಡ ಸ್ಟಾರ್ ಆಗಬೇಕು ಎಂದು ಬರ್ತಾರೆ. ಆದರೆ ಕೊನೆಗೆ ಏನು ಸಿಗದೇ ಜೀವನವನ್ನು ನಾ-ಶ ಮಾಡಿಕೊಳ್ಳುವ ತುಂಬಾ ಜನ ಯುವಕರನ್ನು ನೋಡಬಹುದು.. ಈ ನಟನ ಸ್ಥಿತಿ ಕೂಡ ಅದೇ ಆಗಿದೆ. ಚೆಲುವಿನ ಚಿತ್ತಾರ ಸಿನಿಮಾ ತಮಿಳಿನ ಕಾದಲ್ ಚಿತ್ರದ ರಿಮೇಕ್ ಅನ್ನುವ ವಿಷಯ ಎಲ್ಲರಿಗೂ ಗೊತ್ತಿರುವುದೆ. ಕಾದಲ್ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲನ ಕ್ರಿಯೇಟ್ ಮಾಡಿತ್ತು.. ಈ ಚಿತ್ರದಲ್ಲಿ ಸಿನಿಮಾ ಅವಕಾಶಗಳನ್ನು ಹುಡುಕಿಕೊಂಡು ಚೆನ್ನೈಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲು ಬಾಬು ನಟಿಸಿದ್ದರು.
ಈ ಪಲ್ಲು ಬಾಬು ನಟನೆ ಮತ್ತು ಡೈಲಾಗ್ಸ್ ಜನರಿಗೆ ಮಸ್ತ್ ಮನರಂಜನೆ ಕೊಟ್ಟಿತ್ತು.. ಆಗೆಯೇ ಈ ಚಿತ್ರದ ನಂತರ ನನಗೆ ಬೇಜಾನ್ ಅವಕಾಶಗಳು ಸಿಗುತ್ತೆ ಎಂದು ಭಾವಿಸಿದರು ಪಲ್ಲು ಬಾಬು.. ಆದರೆ ಆಗಿದ್ದೆ ಬೇರೆ. ಕಾದಲ್ ಚಿತ್ರದ ನಂತರ ಈ ನಟನಿಗೆ ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಪಾತ್ರ ಸಿಕ್ಕಿತಾದರು ಅವು ಕೈ ಹಿಡಿಯಲಿಲ್ಲ. ನಂತರ ಯಾವೊಂದು ಅವಕಾಶ ಸಿಗಲಿಲ್ಲ.. ಅತ್ತ ಬಡತನದಲ್ಲಿ ಬೆಂ’ದು ಹೋದ ಈ ನಟನ ತಂದೆ ತಾಯಿ ಅನಾರೋಗ್ಯದಿಂದ ಮ’ರ’ಣ ಹೊಂದಿದರು. ಓದುವ ವಯಸ್ಸಿನಲ್ಲಿ ನಟನೆಯ ಕಡೆ ಆಕರ್ಷಣೆ ಬೆಳೆಸಿಕೊಂಡು ಶಾಲೆಯನ್ನು ಅರ್ಧಕ್ಕೆ ಬಿಟ್ಟ ಪಲ್ಲು ಬಾಬು ಕೈಯಲ್ಲಿ ವಿದ್ಯೆ ಇಲ್ಲದ ಕಾರಣ ನಗರದಲ್ಲಿ ಯಾವುದೇ ಕೆಲಸ ಸಿಗಲಿಲ್ಲ..
ಒಂದು ಕಡೆ ತಂದೆ ತಾಯಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ ಅನ್ನುವ ನೋವು, ಇನ್ನೊಂದು ಕಡೆ ಕೆಲಸ ಇಲ್ಲ ಇದರಿಂದ ಮಾನಸಿಕವಾಗಿ ನೊಂದು ಹೋದ ಪಲ್ಲು ಬಾಬು ಹೊಟ್ಟೆ ಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಒಂದು ದಿನ ಭಿಕ್ಷೆ ಬೇಡಲು ಕೂತರು.. ನಂತರ ಅದೇ ಈ ನಟನ ಕೆಲಸವಾಗಿ ಮಾರ್ಪಟ್ಟಿತು. ಸ್ಟಾರ್ ಆಗಬೇಕೆಂದು ತುಂಬಾ ಜನ ಮನೆ ಬಿಟ್ಟು ಮಾಯಾ ನಗರಗಳಿಗೆ ಬರುತ್ತಾರೆ.. ಅದರಲ್ಲಿ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ, ಹೆಚ್ಚು ಜನಕ್ಕೆ ಆಗುವುದಿಲ್ಲ. ಪಲ್ಲು ಬಾಬು ಪರಿಸ್ಥಿತಿ ನೊಡಿದ ಕೆಲವು ಕಲಾವಿದರು ಸಹಾಯದ ಹಸ್ತವನ್ನು ಚಾಚಿದರು.. ಕೊನೆಗೆ ಪಲ್ಲು ಬಾಬು ಚೆನ್ನೈನ ಆಟೋರಿಕ್ಷಾವೊಂದರಲ್ಲಿ ಶ’ವವಾಗಿ ಪತ್ತೆಯಾಗುತ್ತಾರೆ. ಒಂದು ಹಂತದವರೆಗೆ ಆದ್ರೂ ಓದನ್ನು ಮುಗಿಸಿ ನಂತರ ಮಾಯಾಲೋಕದ ಕಡೆಗೆ ಗಮನ ಹರಿಸೋದು ಉತ್ತಮ..