ಕಲೆ ಮತ್ತು ವಾಸ್ತುಶಿಲ್ಪದ ಮೇರುಕೃತಿಯಾಗಿರುವ ಪುರಾತನ ದೇವಾಲಯಗಳು ಅದರ ವೈಭವದ ಗತಕಾಲದ ಕಥೆಯನ್ನು ಹೇಳುತ್ತವೆ. ತನ್ನ ದೇಶದ ಪುರಾತನ ದೇವಾಲಯ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತನ್ನ ಅತಿಥಿಗೆ ಪ್ರದರ್ಶಿಸಲು ಹಿಂದೂ ಎಂದಾದರೂ ನಾಚಿಕೆಪಡಬಹುದೇ? ಆದರೆ, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು 1955 ರ ಡಿಸೆಂಬರ್ನಲ್ಲಿ ಭಾರತದ ಪ್ರಾಚೀನ ನಗರವಾದ ಕಾಶಿಯಲ್ಲಿ ಸೌದಿ ರಾಜ ಸೌದ್ ಬಿನ್ ಅಬ್ದುಲ್ ಅಜೀಜ್ ಅಲ್-ಸೌದ್ ಪ್ರವಾಸ ಮಾಡುವಾಗ ದೇವಾಲಯಗಳ ಬಗ್ಗೆ ತುಂಬಾ ಮುಜುಗರಕ್ಕೊಳಗಾಗಿದ್ದಷ್ಟೇ ಅಲ್ಲದೆ ಅವುಗಳಿಗಾಗಿ ವಿಷಾದಿಸಿದ್ದರು. ಅಷ್ಟೇ ಅಲ್ಲ ಕಾಶಿಯಲ್ಲಿರುವ ಎಲ್ಲಾ ದೇವಾಲಯಗಳನ್ನು ಮುಚ್ಚಲು ಆಗ್ರಹಿಸಿದ್ದರು.
ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಆಹ್ವಾನದ ಮೇರೆಗೆ ಸೌದಿ ರಾಜ ಸೌದ್ ಬಿನ್ ಅಬ್ದುಲ್ ಅಜೀಜ್ ಅವರು 17 ದಿನಗಳ ಭಾರತದ ಭೇಟಿಯಲ್ಲಿದ್ದರು. ಡಿಸೆಂಬರ್ 4, 1955 ರಂದು ಸೌದಿ ಕಿಂಗ್ನನ್ನ ಸಂಪೂರ್ಣ ರಾಜಮನೆತನದ ಶೈಲಿಯಲ್ಲಿ ಸ್ವಾಗತಿಸಲಾಯಿತು. ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ, ರಾಜ ಸೌದಿ ಬಿನ್ ಅಬ್ದುಲ್ ಅಜೀಜ್, ತನ್ನೊಂದಿಗೆ ಹಲವಾರು ರಾಜಕುಮಾರರನ್ನು ಒಳಗೊಂಡಂತೆ ದೊಡ್ಡ ನಿಯೋಗವನ್ನು ಕರೆತಂದಿದ್ದನು. ಹೈದರಾಬಾದ್, ಮೈಸೂರು, ಶಿಮ್ಲಾ, ಆಗ್ರಾ, ಅಲಿಗಢ ವಾರಣಾಸಿ ಮತ್ತು ಮುಂಬೈನಂತಹ ಹಲವಾರು ಭಾರತೀಯ ನಗರಗಳಲ್ಲಿ ಪ್ರವಾಸ ಮಾಡಿದ್ದನು.
ಸೌದಿ ಕಿಂಗ್ ವಾರಣಾಸಿಯನ್ನು ತಲುಪಿದಾಗ, ಆಗ ಭಾರತದ ಪ್ರಧಾನಿ, ನೆಹರೂ ಅವರು ರಾಜನ ಬೆಂಗಾವಲು ಪಡೆಯ ದಾರಿಯಲ್ಲಿ ಬರುವ ಎಲ್ಲಾ ದೇವಾಲಯಗಳು ಮತ್ತು ವಿಗ್ರಹಗಳನ್ನು ಪರದೆಗಳಿಂದ ಮುಚ್ಚಲು ಆದೇಶಿಸಿದರು. ಸೌದಿ ಕಿಂಗ್ ಸೌದ್ ಬಿನ್ ಅಬ್ದುಲ್ ಅಜೀಜ್ ವಾರಣಾಸಿಯಲ್ಲಿ ತಂಗುವವರೆಗೆ, ನಗರದ ಎಲ್ಲಾ ಸರ್ಕಾರಿ ಕಟ್ಟಡಗಳು “ಕಲ್ಮಾ ತಯ್ಯಿಬಾ” ಎಂಬ ಪದಗಳಿಂದ ಧ್ವಜವನ್ನು ಹೊಂದಿದ್ದವು. ದೇವಸ್ಥಾನಗಳಲ್ಲಿ ಪೂಜೆ, ಆರತಿ ನಿಲ್ಲಿಸಲಾಯಿತು.
ಆಗ ನಜೀರ್ ಬನಾರಸಿ ಎಂಬಾತ ಹಿಂದುಗಳ ಬಗ್ಗೆ ಅವಹೇಳನ ಮಾಡುತ್ತ, “ಅದನಾ ಸಾ ಗುಲಾಮ್ ಉನಕಾ, ಗುಜರಾ ಥಾ ಬನಾರಸ್ ಸೆ… ಮೂಹ್ ಅಪನಾ ಛುಪಾಥೇ ಥೆ, ಕಾಶಿ ಕೆ ಸನಮ್-ಖಾನೆ” ಎಂದು ಬರೆದಿದ್ದ.
ಭಾರತದ ಮೊದಲ ಪ್ರಧಾನಿ ನೆಹರೂ ಯಾವ ರೀತಿಯ ಮಾನಸಿಕ ಗುಲಾಮಗಿರಿಯಿಂದ ಬಳಲುತ್ತಿದ್ದರು? ಭಾರತದ ಮೂಲ ಮತ್ತು ಸಾಂಸ್ಕೃತಿಕ ಪರಂಪರೆಯಾಗಿರುವ ದೇವಾಲಯಗಳು ಮತ್ತು ದೇವತೆಗಳನ್ನು ಬಟ್ಟೆಗಳಿಂದ ಮುಚ್ಚುವ ಅಂದರೆ ಕವರ್ ಮಾಡುವ ಅಗತ್ಯವಾದರೂ ಏನಿತ್ತು? ವಾರಣಾಸಿಯನ್ನು ಕಾಶಿ ಎಂದೂ ಕರೆಯುತ್ತಾರೆ, ಇದು ಭಾರತದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದ್ದು ಇದು ಭಾರತದ ಪ್ರಾಚೀನ ನಗರವಾಗಿದೆ, ಇದು ಪ್ರಾಚೀನ ದೇವಾಲಯಗಳು ಮತ್ತು ಸಮಕಾಲೀನವಾದವುಗಳಿಂದ ತುಂಬಿದೆ. ಕಾಶಿಯು ಹಲವಾರು ಇಸ್ಲಾಮಿಕ್ ಆ ಕ್ರ ಮ ಣಗಳಲ್ಲಿ ಕ್ರೂರವಾಗಿ ದಾ-ಳಿ ಮಾಡಿ ನಾಶವಾಗಿದ್ದ ನಗರವಾಗಿದೆ. ಪವಿತ್ರ ಗಂಗಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಕಾಶಿ ವಿಶ್ವನಾಥ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲಾದ ಕಾಶಿ ವಿಶ್ವನಾಥ ದೇವಾಲಯವನ್ನು ಮೊಹಮ್ಮದ್ ಘೋರಿಯ ಕಮಾಂಡರ್ ಕುತುಬುದ್ದೀನ್ ಐಬಕ್ 1194 ರಲ್ಲಿ ಮೊದಲು ನಾಶಪಡಿಸಿದನು. ಇದನ್ನು 100 ವರ್ಷಗಳ ನಂತರ ಗುಜರಾತಿ ವ್ಯಾಪಾರಿಯೊಬ್ಬ ಮರುನಿರ್ಮಾಣ ಮಾಡಿದರು. ಇದರ ಮೇಲೆ ಮತ್ತೆ ಸಿಕಂದರ್ ಲೋಧಿಯಿಂದ ದಾ-ಳಿ ಮಾಡಲಾಯಿತು. 1585 ರಲ್ಲಿ ರಾಜಾ ಮಾನ್ ಸಿಂಗ್ ಮತ್ತು ರಾಜಾ ತೋಡರ್ಮಲ್ ಅವರು ದೇವಾಲಯವನ್ನು ಪುನರ್ನಿರ್ಮಿಸಿದ್ದರು. ಅಕ್ಟೋಬರ್ 1669 ರಲ್ಲಿ, ಔರಂಗಜೇಬ್ ಕಾಶಿ ನಗರದ ಮೇಲೆ ದಾ-ಳಿ ಮಾಡಿದನು. ಅವನ ರ ಕ್ತಪಿಪಾಸು ಸೈನ್ಯವು ದಾರಿಯಲ್ಲಿ ಕಂಡ ಪ್ರತಿಯೊಂದು ದೇವಾಲಯವನ್ನು ನಾಶಪಡಿಸಿತು, ದೇವಾಲಯವನ್ನು ಉಳಿಸಲು ಪ್ರಯತ್ನಿಸುತ್ತಿದ್ದ ಪ್ರತಿಯೊಬ್ಬ ಭಕ್ತನನ್ನು ಕೊಂ-ದು ಹಾಕಿತು. ಔರಂಗಜೇಬನು ಜ್ಞಾನವಾಪಿ ಕಾಶಿ ವಿಶ್ವನಾಥ ದೇವಾಲಯದ ಮೇಲೆ ದಾ-ಳಿ ಮಾಡಿದಾಗ, ದೇವಾಲಯದ ಪ್ರಧಾನ ಅರ್ಚಕನು ಶಿವಲಿಂಗವನ್ನು ತನ್ನ ಎದೆಗೆ ಅವುಚಿಕೊಂಡು ಬಾವಿಗೆ ಹಾರಿದನು. ಔರಂಗಜೇಬನು ಜ್ಞಾನವಾಪಿ ಕಾಶಿ ವಿಶ್ವನಾಥ ದೇವಾಲಯವನ್ನು ಕೆಡವಿ ಅದೇ ಅವಶೇಷಗಳನ್ನ ಬಳಸಿಕೊಂಡು ಆ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದನು.
ಭಾರತದ ನಾಗರಿಕತೆಯ ಮೇಲಾಗಿರುವ ಗಾಯಗಳು ಮಸೀದಿಗಳ ರೂಪದಲ್ಲಿ ಬಹಳ ಆಳವಾಗಿವೆ, ಅವುಗಳಲ್ಲಿ ಬಹುತೇಕ ದೇವಾಲಯಗಳನ್ನ ಕೆಡವಿದ ನಂತರವೇ ನಿರ್ಮಿಸಲಾಗಿವೆ. ಆಕ್ರಮ ಣಕಾರ ಮತ್ತು ದಬ್ಬಾಳಿಕೆಯ ನಂಬಿಕೆಯನ್ನು ನೆಹರೂ ಏಕೆ ಸಮರ್ಥಿಸಿಕೊಂಡರು? ರಾಷ್ಟ್ರದ ಸ್ವಂತ ಸಾಂಸ್ಕೃತಿಕ ಪರಂಪರೆಯನ್ನು ಅವಮಾನಿಸುವ ಮೂಲಕ ನೆಹರೂ ಸೌದಿ ರಾಜನ ಮುಂದೆ ಏಕೆ ಸಾಷ್ಟಾಂಗ ನಮಸ್ಕಾರ ಮಾಡಿದರು? ಸೌದಿ ರಾಜ ತನ್ನ ದೇಶದಲ್ಲಿ ಅನುಸರಿಸುವುದನ್ನು ಭಾರತ ಏಕೆ ಅನುಸರಿಸಬೇಕು?
ನೆಹರು ಪ್ರದರ್ಶಿಸಿದ ಮಾನಸಿಕ ಗುಲಾಮಗಿರಿಯ ಕೆಟ್ಟ ಮತ್ತೊಂದು ವಿಷಯವೇನೆಂದರೆ “ಭಾರತೀಯ ಮುಸ್ಲಿಮರ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂದು ಜಗತ್ತಿಗೆ ತಿಳಿಸಿ” ಎಂದು ಸೌದಿ ರಾಜನಿಗೆ ನೆಹರು ಹೇಳಿದ್ದರು.
#King_#Saud stressed in his speech in the presence of President,Rajendra Prada,and Prime MinisterJawaharlal #Nehru,in which he said:”I desire to say to my #Muslim brethren all over the world with satisfaction that the fate of #Indian_Muslims is in safe hands.”That was his wish.
— الملك سعود (@kingsaud) August 23, 2019
ಹಾಗಾದರೆ ಭಾರತದಲ್ಲಿರುವ ಮುಸ್ಲಿಮರು ಯಾರು? ಭಾರತದಲ್ಲಿ ಹಿಂದೂಗಳ ಮೇಲೆ ನ ರಮೇಧ ಮಾಡಿದ ಇಸ್ಲಾಮಿಕ್ ಆಕ್ರಮಣ ಕಾರರು ಅಥವಾ ಮತಾಂತರಗೊಂಡವರ ವಂಶಸ್ಥರೇ. ಇಸ್ಲಾಮಿಕ್ ಆಕ್ರಮಣ ಕಾರರ ವಂಶಸ್ಥರು ಮಾಡಿದ ಹಿಂದೂ ನರ ಮೇಧದ ದೊಡ್ಡ ಪಟ್ಟಿಯೇ ಇದೆ. 1990 ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದೂ ನ ರ ಮೇಧ, ಸ್ವತಂತ್ರ ಭಾರತದಲ್ಲಿ ಹಿಂದೂಗಳನ್ನು ಕೊಂ ದು ಕಣಿವೆಯಿಂದಲೇ ಹೊರಹಾಕಲಾಗಿತ್ತು.
ದುರದೃಷ್ಟಕರ ಸಂಗತಿಯೇನೆಂದರೆ ಈ ಹ ತ್ಯಾ ಕಾಂಡದಲ್ಲಿ ಸಾವಿರಾರು ಹಿಂದುಗಳು ಕೊ ಲ್ಲ ಲ್ಪಟ್ಟರು. 1955 ರಲ್ಲಿ, ನೆಹರು ಸೌದಿ ರಾಜನನ್ನು “ಭಾರತೀಯ ಮುಸಲ್ಮಾನರ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ” ಎಂದು ಹೇಳಲು ವಿನಂತಿಸಿಕೊಂಡಿದ್ದರು. ಇದರರ್ಥ “ಅಪರಾಧಿಗಳು ಬಲಿಪಶುಗಳ ಸುರಕ್ಷಿತ ಕೈಯಲ್ಲಿದ್ದಾರೆ” ಎಂಬುದಾಗಿತ್ತಾ?
ಸೆಪ್ಟೆಂಬರ್ 25, 1956 ರಂದು ಭಾರತದ ಮೊದಲ ಪ್ರಧಾನಿ ಕೂಡ ಪಶ್ಚಿಮ ಏಷ್ಯಾದ ರಾಜತಾಂತ್ರಿಕತೆಯನ್ನು ಮುಂದುವರಿಸಲು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದರು. ನೆಹರೂ ಅವರನ್ನು ಸ್ವಾಗತಿಸಲು ಸೌದಿ ರಾಜ ಯಾವುದಾದರೂ ದೇವಾಲಯವನ್ನು ನಿರ್ಮಿಸಿದನೇ? ಸೌದಿ ಅರೇಬಿಯಾದಲ್ಲಿ ದೇವಾಲಯಗಳ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ, ಏಕೆಂದರೆ ಅದು ಅವರ ಧಾರ್ಮಿಕ ನಂಬಿಕೆಯನ್ನು ವಿರೋಧಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೌದಿ ಅರೇಬಿಯಾ ತನ್ನ ನಂಬಿಕೆಗಳು ಮತ್ತು ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಆದರೆ, ನೆಹರೂ ಸೌದಿ ರಾಜನನ್ನು ಮೆಚ್ಚಿಸಲು ಮಾತ್ರ ಸೌದಿ ರಾಜನೆದುರು ತಲೆಬಾಗಿ ನಿಂತಿದ್ದರು.
ರಾಷ್ಟ್ರ ನಿರ್ಮಾಣಕ್ಕೆ ನೆಹರೂ ಅವರ ಮಾರ್ಗವೇನಾಗಿತ್ತು? ಮಾನಸಿಕ ಗುಲಾಮಗಿರಿಯನ್ನು ಇಂಜೆಕ್ಟ್ ಮಾಡುವ ಮೂಲಕ, ದಬ್ಬಾಳಿಕೆ ಮಾಡಿದವರನ್ನು ರಕ್ಷಿಸಲು ಮತ್ತು ವೈಭವೀಕರಿಸುವದೇ? ಒಂದು ರಾಷ್ಟ್ರವು ಭವಿಷ್ಯವನ್ನು ವ್ಯಾಖ್ಯಾನಿಸಲು ಬಯಸಿದರೆ ಅದರ ಹಿಂದಿನದನ್ನು ಅಂದರೆ ಅದರ ಇತಿಹಾಸವನ್ನ ಅಧ್ಯಯನ ಮಾಡಬೇಕು. ಭಾರತದ 1/3 ಭೂಮಿಯನ್ನು ವಶಪಡಿಸಿಕೊಂಡ ಇಸ್ಲಾಮಿಕ್ ಆಕ್ರಮಣ ಕಾರರು, ಭಾರತದ ನಾಗರಿಕತೆಯ ಮೇಲೆ ವಾಸಿಮಾಡಲಾಗದ ಆಘಾತಕಾರಿ ಗಾಯಗಳನ್ನು ಉಂಟುಮಾಡಿದ್ದಾರೆ. ಬ್ರಿಟಿಷ ಆಡಳಿತ ಭಾರತವನ್ನು ಮೂಲಭೂತವಾಗಿ ಶೋಷಿಸಿತು. ನಂತರ, ಭಾರತಕ್ಕೆ ತನ್ನ ಬೇರು, ಧರ್ಮ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಅವಮಾನಿಸಲು ಕಲಿಸಿದ ನೆಹರೂವಿಯನ್ ಸಿದ್ಧಾಂತವು ಬ್ರಿಟಿಷರ, ಮೊಘಲರ ಮಾನಸಿಕ ಅಧೀನತೆಯನ್ನು ಇಂಜೆಕ್ಟ್ ಮಾಡಲು ಮುಂದಾಯಿತೇ ಹೊರತು ಭಾರತದ ಭವ್ಯ ಸಂಸ್ಕೃತಿಯನ್ನು ರಕ್ಷಿಸುವ ಯಾವ ಕೆಲಸಗಳನ್ನೂ ಮಾಡಲಿಲ್ಲ.
ಆದರೆ ಇಂದು ನೀವು ಯಾರ ಗುಲಾಮಗಿರಿ ಮಾಡುತ್ತ ಆ ವ್ಯಕ್ತಿ (ನರೇಂದ್ರ ಮೋದಿ) ಯ ಮೇಲೆ ಅನೇಕಾನೇಕ ಆರೋಪಗಳನ್ನ ಮಾಡುತ್ತಿದ್ದೀರೋ ಆ ಮಹಾತ್ಮ ಅದೇ ಸೌದಿ ಅರೇಬಿಯಾದಲ್ಲಿ ಮಂದಿರ ನಿರ್ಮಾಣ ಮಾಡಿಬಿಟ್ಟ. ಬಾಂಗ್ಲಾದೇಶದ ಕಾಳಿ ಮಂದಿರದ ಜೀರ್ಣೋದ್ಧಾರ ಮಾಡಿಸುತ್ತಿದ್ದಾನೆ. 350 ವರ್ಷಗಳಿಂದ ಯಾವ ನಂದಿ ತನ್ನ ಒಡೆಯ ಶಿವನಿಗಾಗಿ ಕಾದಿತ್ತೋ ಇಂದು ಅದೇ ಕಾಶಿಯ ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಆಕ್ರಮಣಕಾರರ ಆಡಳಿತ ಭಾರತದಿಂದ ಹೋಗೇ ಇರಲಿಲ್ಲ, ಅದು ಒಂದಲ್ಲ ಒಂದು ರೂಪದಲ್ಲಿ ಭಾರತದಲ್ಲಿ ಬೇರೆ ಬೇರೆ ವ್ಯಕ್ತಿಗಳ (ಒಂದು ಪಕ್ಷದ) ಕೈಯಲ್ಲಿ ನಮ್ಮ ಮಂದಿರಗಳ, ಸಭ್ಯತೆಯ, ಸಂಸ್ಕೃತಿಯನ್ನ ಮುಚ್ಚಿಡುವ, ಅವಹೇಳನ ಮಾಡುವ ರೂಪದಲ್ಲೇ ಇತ್ತು.
– Vinod Hindu Nationalist