ಹತ್ತೇ ಹತ್ತು ನಿಮಿಷಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 850 ಕೋಟಿ ಗಳಿಸಿದ ಉದ್ಯಮಿ: ನಿಬ್ಬೆರಗಾದ ಜಗತ್ತು

in Kannada News/News 509 views

ನವದೆಹಲಿ (ಅ.08): ಭಾರತದ ವಾರೆನ್‌ ಬಫೆಟ್‌ ಖ್ಯಾತಿಯ ಪ್ರಮುಖ ಷೇರು ಹೂಡಿಕೆದಾರ ರಾಕೇಶ್‌ ಜುಂಜುಂನ್‌ವಾಲಾ ಅವರ ಸಂಪತ್ತು ಕೆಲವೇ ನಿಮಿಷಗಳಲ್ಲಿ ಭಾರೀ ಜಿಗಿತಗೊಂಡಿದೆ. ಕೇವಲ 10 ನಿಮಿಷಗಳಲ್ಲಿ ಜುಂಜುನ್‌ವಾಲಾ ಸಂಪತ್ತು 854 ಕೋಟಿ ರು. ಏರಿಕೆಯಾಗಿದೆ.

Advertisement

ಹೌದು ಗುರುವಾರ ಷೇರುಪೇಟೆ ಸೂಚ್ಯಂಕದಲ್ಲಿ ಟೈಟಾನ್‌ ಕಂಪನಿಯ ಷೇರು ಮೌಲ್ಯ ದಾಖಲೆಯ 2,234ಕ್ಕೆ ತಲುಪಿತ್ತು. ಇದರಿಂದ ಕಂಪನಿಯ ಷೇರು 17,770 ಕೋಟಿಗೆ ಏರಿಕೆಯಾಗಿದೆ.

ರಾಕೇಶ್‌ ಜುಂಝುನ್‌ವಾಲಾ ಮತ್ತು ಅವರ ಪತ್ನಿ ಟೈಟಾನ್‌ ಕಂಪನಿಯಲ್ಲಿ ಶೇ.4.81ರಷ್ಟುಪಾಲನ್ನು ಹೊಂದಿದ್ದಾರೆ. ಹೀಗಾಗಿ ಜುಂಜುನ್‌ವಾಲಾ ಸಂಪತ್ತು ಹತ್ತೇ ನಿಮಿಷದಲ್ಲಿ 854 ಕೋಟಿ ಕೋಟಿ ರು. ಹೆಚ್ಚಿದೆ. ಇದರೊಂದಿಗೆ ಕಂಪನಿಯಲ್ಲಿ ಜುಂಜುನ್‌ವಾಲಾ ಷೇರು ಮೌಲ್ಯ ಸುಮಾರು 10,000 ಕೋಟಿಗೆ ಏರಿಕೆಯಾಗಿದೆ.

ಅಂಬಾನಿ ಆಸ್ತಿ ಏರಿಕೆ

ಏಷ್ಯಾ ಮತ್ತು ಭಾರತದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿಯ(Mukesh Ambani) ಒಟ್ಟು ಆಸ್ತಿ ಮೌಲ್ಯದಲ್ಲಿ ಒಂದೇ ದಿನ 2.27 ಬಿಲಿಯನ್ ಡಾಲರ್ (ಸುಮಾರು 16,765 ಕೋಟಿ) ಹೆಚ್ಚಾಗಿದೆ. Bloomberg Billionaires Index ಪ್ರಕಾರ, ಅವರ ನಿವ್ವಳ ಮೌಲ್ಯ ಈಗ 95.4 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ ಅವರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನಕ್ಕೇರಿದ್ದಾರೆ. ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಷೇರುಗಳು ಗುರುವಾರ 2.43 ಶೇಕಡಾ ಏರಿಕೆಯಾಗಿದೆ. ಇದು ಅಂಬಾನಿಯ ನಿವ್ವಳ ಮೌಲ್ಯದಲ್ಲಿ ಜಿಗಿತಕ್ಕೆ ಕಾರಣವಗಿದೆ. ಈ ವರ್ಷ ಅವರ ನಿವ್ವಳ ಮೌಲ್ಯ 18.7 ಬಿಲಿಯನ್ ಡಾಲರ್ ಹೆಚ್ಚಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ, ಅಂಬಾನಿ 90 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಅವರ ನಿವ್ವಳ ಮೌಲ್ಯ 95.4 ಬಿಲಿಯನ್ ಡಾಲರ್ ಇದ್ದರೂ, ಟಾಪ್‌ 10 ರಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ, ವಿಶ್ವದ ಅಗ್ರ 10 ಶ್ರೀಮಂತ ರ ನಿವ್ವಳ ಮೌಲ್ಯ 100 ಬಿಲಿಯನ್ ಡಾಲರ್ ಗಿಂತ ಹೆಚ್ಚಿರುವುದು. 10 ನೇ ಸ್ಥಾನದಲ್ಲಿ ಅಮೆರಿಕದ ಪೌರಾಣಿಕ ಹೂಡಿಕೆದಾರ ವಾರೆನ್ ಬಫೆಟ್ ಇದ್ದಾರೆ, ಅವರ ನಿವ್ವಳ ಮೌಲ್ಯ 101 ಬಿಲಿಯನ್ ಡಾಲರ್. ಅಂಬಾನಿಯ ನಿವ್ವಳ ಮೌಲ್ಯ ಪ್ರಸ್ತುತ ಅವರಿಗಿಂತ 5.6 ಬಿಲಿಯನ್ ಡಾಲರ್ ಕಡಿಮೆ ಇದೆ.

ಏತನ್ಮಧ್ಯೆ, ಅದಾನಿ ಗ್ರೂಪ್ (Adani Group) ಅಧ್ಯಕ್ಷ ಗೌತಮ್ ಅದಾನಿ(Gautam Adani) 68.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಂತರ ಅವರು ಭಾರತ ಮತ್ತು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ. ಅಂಬಾನಿ ಮತ್ತು ಅದಾನಿ ನಡುವೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್(Francoise Bettencourt Meyers) ಮೇಯರ್ಸ್ 12 ನೇ ಮತ್ತು ಸ್ಪೇನ್‌ನ ಅಮಾನ್ಸಿಯೊ ಒರ್ಟೆಗಾ(Amancio Ortega) ಸ್ಥಾನ ಪಡೆದಿದ್ದಾರೆ. ಅದಾನಿಯ ನಿವ್ವಳ ಮೌಲ್ಯವು ಈ ವರ್ಷ 34.7 ಬಿಲಿಯನ್ ಡಾಲರ್ ಹೆಚ್ಚಾಗಿದೆ

Advertisement
Share this on...