‘ಹರ ಹರ ಶಂಭೋ’ ಹಾಡಿದ್ದಕ್ಕೆ ಮುಲ್ಲಾ ಮೌಲಾನಾಗಳಿಂದ ಧಮಕಿ: ಬರೋಬ್ಬರಿ 1 ಕೋಟಿಯ ಸ್ಟೂಡಿಯೋದಲ್ಲಿ ಮಂದಿರ ನಿರ್ಮಿಸಿ ಮೌಲಾನಾಗಳಿಗೆ ಕಪಾಳಮೋಕ್ಷ ಮಾಡಿದ ಫರ್ಮಾನಿ ನಾಜ್

in Uncategorized 5,457 views

Farmani Naaz studio: ‘ಹರ ಹರ ಭೋಲೇ’ ಶಿವಭಜನೆ ಹಾಡುವ ಮೂಲಕ ಸುದ್ದಿಯಾಗುದ್ದ ಗಾಯಕಿ ಫರ್ಮಾನಿ ನಾಜ್ ಅವರ ಸುಮಧುರ ಧ್ವನಿಗೆ ಖ್ಯಾತ ಗಾಯಕಿ ನೇಹಾ ಕಕ್ಕಡ್ ಕೂಡ ಅಭಿಮಾನಿಯಾಗಿದ್ದರು. ಇಂಡಿಯನ್ ಐಡಲ್ 2020 ರ ಭಾಗವಾಗಿದ್ದ ಫರ್ಮಾನಿ ನಾಜ್ ಅವರ ಶಿವ ಭಜನ್ ಗೀತೆಯಿಂದ ಮುಸ್ಲಿಂ ಮೂಲಭೂತವಾದಿಗಳು ಫರ್ಮಾನಿ ನಾಜ್ ವಿರುದ್ಧ ಕೆಂಡಾಮಂಡಲವಾಗಿದ್ದರು. ಫರ್ಮಾನಿಗೆ ಬೆದರಿಕೆ ಹಾಕಲಾಗಿತ್ತು. ಆದರೆ ಇವೆಲ್ಲಾ ಟೀಕೆಗಳ ಹೊರತಾಗಿ, ಫರ್ಮಾನಿ ಅವರ ಗಮನವು ತಮ್ಮ ಕೆಲಸದ ಮೇಲೆ ಮಾತ್ರವಿದೆ.

Advertisement

ತನ್ನ ಮಾಂತ್ರಿಕ ಧ್ವನಿಯಿಂದ ಜನರ ಹೃದಯವನ್ನು ಗೆಲ್ಲುತ್ತಿರುವ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್, ಶಿವ ಭಜನ್ ಹಾಡಿನಲ್ಲಿ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಶ್ರಾವಣ ಮಾಸದಲ್ಲಿ ‘ಹರ ಹರ ಶಂಭು’ ಎಂಬ ಶಿವ ಸ್ತೋತ್ರವನ್ನು ಹಾಡುವ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫರ್ಮಾನಿ ಅವರ ಬದುಕು ತುಂಬಾ ಕಷ್ಟಕರವಾಗಿತ್ತು. ಆದರೆ ಫರ್ಮಾನಿ ಯಾವಾಗಲೂ ಸವಾಲುಗಳನ್ನು ದಿಟ್ಟತನದಿಂದ ಎದುರಿಸುತ್ತಿದ್ದರು. ಇದೇ ಕಾರಣಕ್ಕೆ ಫರ್ಮಾನಿ ಅಭಿಮಾನಿಗಳ ಅಚ್ಚುಮೆಚ್ಚಿನ ಗಾಯಕಿಯಾಗಿದ್ದಾರೆ. ಅವರು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದ್ದಾರೆ. 1 ಕೋಟಿಯಲ್ಲಿ ನಿರ್ಮಿಸಿದ ಅವರ ಸ್ಟುಡಿಯೋ ಅವರ ಯಶಸ್ಸಿಗೆ ಸಾಕ್ಷಿಯಾಗಿದೆ. ಸ್ಟುಡಿಯೋ ನಿರ್ಮಿಸಲು 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸ್ವತಃ ಫರ್ಮಾನಿ ಹೇಳಿಕೊಂಡಿದ್ದಾರೆ.

ಒಳಗಿನಿಂದ ಹೇಗೆ ಕಾಣುತ್ತೆ ಫರ್ಮಾನಿಯವರ ಸ್ಟೂಡಿಯೋ?

ಫರ್ಮಾನಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟುಡಿಯೊದ ಒಳಗಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತುಂಬಾ ಕಷ್ಟಪಟ್ಟು ಈ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಸ್ಟುಡಿಯೋ ನಿರ್ಮಾಣವಾಗಿರುವ ಕಟ್ಟಡದ ಪ್ರತಿ ಮಹಡಿಯ ವಿವರಗಳನ್ನು ಫಿರ್ಮಾನಿ ಹಂಚಿಕೊಂಡಿದ್ದಾರೆ. ಅತಿಥಿಗಳು ತಂಗಲು ಐಷಾರಾಮಿ ಕೊಠಡಿಗಳನ್ನು ಮಾಡಲಾಗಿದೆ. ಅಲ್ಲಿ ಎಲ್ಲ ಸೌಲಭ್ಯಗಳಿವೆ. ಜಿಮ್‌ಗಾಗಿ ವಿಶೇಷ ಜಾಗವನ್ನು ಸಹ ಮಾಡಲಾಗಿದೆ. ಫರ್ಮಾನಿ ಲಿಪ್ಸಿಂಗ್ ರೂಮ್‌ನ್ನೂ ತೋರಿಸಿದರು, ಅದು ಐಷಾರಾಮಿಯಾಗಿದೆ. ಇದರ ನಂತರ ಫರ್ಮಾನಿ ಸ್ಟುಡಿಯೋದಲ್ಲಿ ಎಂಟ್ರಿ ಆಗುತ್ತೆ.

ಫ್ಯಾನ್ಸ್ ಗಳಿಗೆ ಧನ್ಯವಾದ ತಿಳಿಸಿದ ಫರ್ಮಾನಿ

ಫರ್ಮಾನಿ ತಮ್ಮ ಗೀತರಚನೆಕಾರರನ್ನು (song writer) ಪರಿಚಯಿಸಿದರು. ಫರ್ಮಾನಿ ಸ್ಟುಡಿಯೋ ಹೆಸರು ನಾಜ್ ಸ್ಟುಡಿಯೋ. ಫರ್ಮಾನಿ ಅವರ ಸ್ಟುಡಿಯೋದಲ್ಲಿ ದೇವಸ್ಥಾನವನ್ನು ಸಹ ನಿರ್ಮಿಸಿದ್ದಾರೆ. ತನ್ನನ್ನ ಪ್ರೋತ್ಸಾಹಿಸಿ ಬೆಂಬಲಿಸಿದ್ದಕ್ಕೆ ಅಭಿಮಾನಿಗಳಿಗೆ ಫರ್ಮಾನಿ ಧನ್ಯವಾದ ತಿಳಿಸಿದ್ದಾರೆ. ಮುಂದೆಯೂ ತನ್ನ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತೇನೆ ಎಂದು ಫರ್ಮಾನಿ ಭರವಸೆ ನೀಡಿದ್ದಾರೆ. ಫರ್ಮಾನಿ ನಾಜ್ ಅವರ ಈ vlog ಅನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಫರ್ಮಾನಿ ನಾಜ್ ಅವರ ಸ್ಟುಡಿಯೋವನ್ನು ನೋಡಿದ ಅಭಿಮಾನಿಗಳು ಅವರ ಯಶಸ್ಸು ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಆಶಿಸಿದ್ದಾರೆ. ಫರ್ಮಾನಿ ಸ್ಟುಡಿಯೊದೊಳಗೆ ನಿರ್ಮಿಸಲಾದ ದೇವಸ್ಥಾನವು ಜನರ ಗಮನಕ್ಕೆ ಬಂದಿದೆ.

ಸ್ಟೂಡಿಯೋ ನೋಡಿ ಖುಷ್ ಆದ ಫ್ಯಾನ್ಸ್

ಒಬ್ಬ ಯೂಸರ್ ಕಮೆಂಟ್ ಮಾಡುತ್ತ, “ಮುಸಲ್ಮಾನರ ಸ್ಟುಡಿಯೋದಲ್ಲಿ ಸರಸ್ವತಿ ದೇವಿಯ ಪ್ರತಿಮೆ ವಾಹ್ 🥰🤩🥳🟢” ಎಂದು ಬರೆದರೆ ಮತ್ತೊಬ್ಬ ಯೂಸರ್ – “ಸ್ಟುಡಿಯೋವನ್ನು ನೋಡಿದ ತುಂಬಾ ಖುಷಿಯಾಯ್ತು. ಅದ್ಭುತ ಸ್ಟುಡಿಯೋ” ಎಂದು ಬರೆದಿದ್ದಾರೆ. ಮತ್ತಷ್ಟ ಜನ ಕಮೆಂಟ್ ಮಾಡುತ್ತ – ನಿಮ್ಮ ಸ್ಟುಡಿಯೋದಲ್ಲಿ ಫರ್ಮಾನಿ ಜೀ ದೇವಸ್ಥಾನವನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು, ಫರ್ಮಾನಿ ನಾಜ್ ಈ ಯಶಸ್ಸಿಗೆ ಅರ್ಹರಾಗಿದ್ದಾರೆ ಎಂದಿದ್ದಾರೆ.

ಫರ್ಮಾನಿ ನಾಜ್ ಇಂಡಿಯನ್ ಐಡಲ್ 12 ರಲ್ಲಿ ಭಾಗವಹಿಸಿದ್ದರು. ಈ ಶೋ ಫರ್ಮಾನಿ ನಾಜ್‌ಗೆ ಯಶಸ್ಸು ತಂದುಕೊಟ್ಟಿತ್ತು. ಆದಾಗ್ಯೂ, ಪ್ರದರ್ಶನದಲ್ಲಿ, ಫರ್ಮಾನಿ ತನ್ನ ಪ್ರಯಾಣವನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು. ಆದರೆ ಫರ್ಮಾನಿ ಎಂದಿಗೂ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಈಗ ಎಲ್ಲ ಕಷ್ಟಗಳನ್ನೂ ಎದುರಿಸಿ ಈ ಹಂತಕ್ಕೆ ತಲುಪಿದ್ದಾರೆ.

Advertisement
Share this on...