“ಹಿಂದುಗಳಲ್ಲಿ ಎರಡು ರೀತಿಯ ಹಿಂದುಗಳಿದಾರೆ, ಮೊದಲನೆಯವರು ದೇವಸ್ಥಾನಕ್ಕೆ ಹೋಗ್ತಾರೆ ಎರಡನೆಯವರು….”: ಮೀರಾ ಕುಮಾರ್, ಲೋಕಸಭೆಯ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕಿ

in Kannada News/News 581 views

ನವದೆಹಲಿ:

Advertisement
ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಈ ಹಿಂದೆ, ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಉ ಗ್ರ ಸಂಘಟನೆಗಳಾದ ಬೊಕೊ ಹರಾಮ್ ಮತ್ತು ಐಸಿಸ್‌ಗೆ ಹೋಲಿಸಿದ್ದರು. ಇದೀಗ ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಹಿಂದೂಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೀರಾ ಕುಮಾರ್ ಮಾತನಾಡಿದ ಅವರು, ದೇಶದಲ್ಲಿ ಎರಡು ರೀತಿಯ ಹಿಂದೂಗಳಿದ್ದಾರೆ. ಒಬ್ಬರು ದೇವಸ್ಥಾನಗಳಿಗೆ ಹೋಗಬಹುದು, ಇನ್ನೊಬ್ಬರು ದೇವಸ್ಥಾನಕ್ಕೆ ಹೋಗದ ಹಿಂದೂಗಳು ಎಂದಿದ್ದಾರೆ.

ಇದನ್ನೂ ಓದಿ: 26/11 ಗೆ 13 ವರ್ಷ: ತಮ್ಮ ಹೊಟೆಲ್ ಹಾಗು ದೇಶದ ಮೇಲಾದ ದಾ-ಳಿಯ ಬಗ್ಗೆ ಮೌನಮುರಿದು ಪೋಸ್ಟ್ ಶೇರ್ ಮಾಡಿದ ರತನ್ ಟಾಟಾ

ಮೀರಾ ಕುಮಾರ್ ಕಾಂಗ್ರೆಸ್ ನಾಯಕ ಜಗಜೀವನ್ ರಾಮ್ ಅವರ ಪುತ್ರಿ. ಈ ಹಿಂದೆ ಲೋಕಸಭಾ ಸ್ಪೀಕರ್ ಕೂಡ ಆಗಿದ್ದರು. ಜಾತಿ ತಾರತಮ್ಯದಿಂದ ಹಿಂದೂ ಧರ್ಮವನ್ನು ತೊರೆಯುವಂತೆ ಅನೇಕರು ತಮ್ಮ ತಂದೆ ಬಾಬು ಜಗಜೀವನ್ ರಾಮ್ ಅವರಿಗೆ ಸಲಹೆ ನೀಡಿದ್ದರು ಆದರೆ ನನ್ನ ತಂದೆ ತಾನು ಹಿಂದೂ ಧರ್ಮವನ್ನು ತೊರೆದು ವ್ಯವಸ್ಥೆಯ ವಿ ರು ದ್ಧ ಹೋರಾಡುವುದಿಲ್ಲ ಎಂದು ಹೇಳಿದರು ಎಂದು ಮೀರಾ ಕುಮಾರ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾಹ್ ಮಾಸ್ಟರ್‌ಸ್ಟ್ರೋಕ್: ದಿಢೀರ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ರಚನೆಯಾಗಲಿದೆ ಬಿಜೆಪಿ‌ ಸರ್ಕಾರ? ಕಂಗಾಲಾದ ಉದ್ಧವ್ ಠಾಕ್ರೆ

ಈ ಹಿಂದೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಹಾಗು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ಬಂದಿತ್ತು. ಈ ಪುಸ್ತಕದ ಹೆಸರು “ಸನರೈಸ್ ಓವರ್ ಅಯೋಧ್ಯಾ” ಎಂಬುದಾಗಿತ್ತು. ಸಲ್ಮಾನ್ ಖುರ್ಷಿದ್ ಈ ಪುಸ್ತಕದಲ್ಲಿ ಹಿಂದುತ್ವವನ್ನು ಭ ಯೋ ತ್ಪಾ ದನೆಯೊಂದಿಗೆ ಜೋಡಿಸಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ನಾಯಕರು ಹಿಂದೂಗಳ ಬಗ್ಗೆ ವಿಚಿತ್ರ ಹೇಳಿಕೆ ನೀಡುತ್ತಿದ್ದು, ಇದರಿಂದ ಅಸಮಾಧಾನವೂ ವ್ಯಕ್ತವಾಗಿದೆ.

ಇದನ್ನೂ ಓದಿ: “ಜನ್ನತ್ ಆಸೆ ತೋರಿಸಿ ನನ್ನ ಸಮೇತ 10 ಜನರನ್ನ ಮುಂಬೈಗೆ ಕಳಿಸಲಾಗಿತ್ತು” ನಾರ್ಕೋ ಟೆಸ್ಟ್ ನಲ್ಲಿ ಕಸಬ್‌ಗೆ ಕೇಳಲಾದ ಪ್ರಶ್ನೆಗಳು

ಕೆಲವು ವರ್ಷಗಳ ಹಿಂದೆ, ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಪುಸ್ತಕ ಬಿಡುಗಡೆ ಮಾಡುವಾಗ ಹಿಂದೂ ಭ ಯೋ ತ್ಪಾ ದನೆಯ ಬಗ್ಗೆ ಮಾತನಾಡಿದ್ದರು.

2008ರಲ್ಲಿ ಮುಂಬೈನಲ್ಲಿ ನಡೆದ ಉ ಗ್ರ ರ ದಾ ಳಿ ಯಲ್ಲಿ ಹಿಂ ದೂ ಗಳ ಕೈ ವಾ ಡ ವಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದರು. ಆದರೆ, ಈ ದಾ ಳಿ ಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಭ ಯೋ ತ್ಪಾ ದಕ ಅಜ್ಮಲ್ ಕಸಬ್‌ನನ್ನು ಜೀ ವಂ ತ ವಾಗಿ ಬಂ ಧಿ ಸ ಲಾಗಿತ್ತು.

Advertisement
Share this on...