“ಹಿಂದುಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಇವರು….”: ಸಾವಿಗೂ ಮುನ್ನ ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ರವರು ಹೇಳಿದ್ದ ಹಳೆಯ ವಿಡಿಯೋ ವೈರಲ್

in Uncategorized 490 views

ನವದೆಹಲಿ: ಇಂದು ಕಾಮಿಡಿ ಕಿಂಗ್ ಮತ್ತು ಜಗತ್ತನ್ನೇ ನಗೆಗಡಲಲ್ಲಿ ತೇಲಿಸಿದ್ದ ಗಜೋಧರ್ ಭಯ್ಯಾ ಎಂಬ ಹೆಸರಿನ ರಾಜು ಶ್ರೀವಾಸ್ತವ್ (Raju Srivastav) ಸಾವು ಎಲ್ಲರನ್ನೂ ಅಳುವಂತೆ ಮಾಡಿದೆ. 42 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ರಾಜು ಶ್ರೀವಾಸ್ತವ್ ನೆನ್ನೆ ವಿಧಿವಶರಾಗಿದ್ದರು. 58 ನೇ ವಯಸ್ಸಿನ‌ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು. ನೆನ್ನೆ ಬೆಳಗ್ಗೆ 10.15ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದರು. ಆಗಸ್ಟ್ 10 ರಂದು ಹೃದಯಾಘಾತದಿಂದ ಗಜೋಧರ್ ಭಯ್ಯಾ ಅವರನ್ನು ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ರಾಜು ಶ್ರೀವಾಸ್ತವ್ ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾಗಿದ್ದರು. ಇದಾದ ಬಳಿಕ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರು ನಿರಂತರವಾಗಿ ವೆಂಟಿಲೇಟರ್‌ನಲ್ಲಿದ್ದರು. ರಾಜು ಶ್ರೀವಾಸ್ತವ್ ಅವರ ಯೋಗಕ್ಷೇಮಕ್ಕಾಗಿ ಕುಟುಂಬ ಸದಸ್ಯರು ಮತ್ತು ಅವರ ಅಭಿಮಾನಿಗಳು ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಎಲ್ಲರಿಗೂ ತಮ್ಮ ಹಾಸ್ಯದ ಮೂಲಕ ಕಚಗುಳಿ ಇಟ್ಟಿದ್ದ ರಾಜು ಶ್ರೀವಾಸ್ತವ್ ನೆನ್ನೆ ಎಲ್ಲರನ್ನೂ ಶಾಶ್ವತವಾಗಿ ವಿದಾಯ ಹೇಳಿ ಇಹಲೋಕ ತ್ಯಜಿಸಿ ಹೋಗಿದ್ದು ನಿಜಕ್ಕೂ ವಿಷಾದದ ಸಂಗತಿ. ಕಾಮಿಡಿ ಕಿಂಗ್ ನಿಧನದ ಸುದ್ದಿ ಹೊರಬರುತ್ತಲೇ ಎಲ್ಲರೂ ಶಾಕ್ ಆಗಿದ್ದರು. ಅವರ ನಿಧನದ ಸುದ್ದಿ ತಿಳಿದು ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ದೊಡ್ಡ ನಾಯಕರವರೆಗೂ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ಅವರು ಪ್ರತಿಯೊಂದು ವಿಚಾರದಲ್ಲೂ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದರು. ಪ್ರತಿಯೊಂದು ವಿಚಾರದಲ್ಲೂ ತಮ್ಮ ಪ್ರತಿಕ್ರಿಯೆಯನ್ನು ಹಾಸ್ಯದ ಮೂಲಕ ನೀಡುತ್ತಿದ್ದರು. ಈ ನಡುವೆ ಗಜೋಧರ್ ಭಯ್ಯಾ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯದ ಬಗ್ಗೆ ತುಂಬಾ ಕೋಪಗೊಂಡು ಮಾತನಾಡಿದ್ದರು. ಈ ವೀಡಿಯೋದಲ್ಲಿ ರಾಜು ಶ್ರೀವಾತ್ಸವ್, “ಇಂತಹ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡುವವರಿಗೆ ನಾಚಿಕೆಯಾಗಬೇಕು. ನೀವು ನಮ್ಮ ಹಿಂದೂ ದೇವತೆಗಳನ್ನು ಗೇಲಿ ಮಾಡುತ್ತೀರಿ. ನಿಮಗೆ ನಾಚಿಕೆಯಾಗಬೇಕು. ನಿಮಗೆ ಧೈರ್ಯವಿದ್ದರೆ ಬೇರೆ ಧರ್ಮದವರ ಮೇಲೂ ಇಂತಹ ಕಾಮಿಡಿ ಮಾಡಿ. ಆಗುವುದಿಲ್ಲವೇ? ಏಕೆಂದರೆ ಅವರು ನಿಮ್ಮ ಶಿರಚ್ಛೇದ ಮಾಡುತ್ತಾರೆ. ವೆಬ್ ಸಿರೀಸ್ ನಲ್ಲಿ ಪ್ರತಿ ಬಾರಿ ಸೈಫ್ ಅಲಿ ಖಾನ್ ಈ ಕೃತ್ಯವನ್ನು ಮತ್ತೆ ಮತ್ತೆ ಮಾಡುತ್ತಾರೆ. ಅವನನ್ನು ತಡೆಯುವವರು ಯಾರೂ ಇಲ್ಲ. ಕಾನೂನು ಇಲ್ಲ. ಹಿಂದೂ ಧರ್ಮದಲ್ಲಿ ಎಲ್ಲರೂ ಸಹಿಷ್ಣುಗಳು, ಹಿಂದೂಗಳು ದೊಡ್ಡ ಹೃದಯವನ್ನು ಹೊಂದಿದ್ದಾರೆ, ಅವರು ಕ್ಷಮಿಸುತ್ತ ಹೋಗುತ್ತಿದ್ದಾರೆ, ಅವರು ಕ್ಷಮಿಸುವ ಗುಣ ಹೊಂದಿದ್ದಾರೆ” ಎಂದಿದ್ದರು.

ಮುಂದೆ ಮಾತನಾಡುವ ರಾಜು ಶ್ರೀವಾಸ್ತವ, “ಈಗ ಸಮಯ ಬಂದಿದೆ, ಹಿಂದೂಗಳೇ ಎಚ್ಚೆತ್ತುಕೊಳ್ಳಿ, ನೀವು ಎಚ್ಚೆತ್ತುಕೊಳ್ಳಲೇಬೇಕು. ಈಗ ಈ ದೃಶ್ಯವನ್ನು ತೆಗೆದುಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ದೃಶ್ಯವನ್ನು ಡಿಲೀಟ್ ಮಾಡುವುದರಿಂದ ಏನೂ ಆಗಲ್ಲ. ಇಂತಹವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಮತ್ತೆ ಈ ರೀತಿಯ ಕೆಲಸ ಮಾಡಬಾರದು ಅಂತಹ ಕಠಿಣ ಕಾನೂನು ರೂಪಿಸಬೇಕು” ಎಂದಿದ್ದರು. ಅವರ ಈ ವೀಡಿಯೊವನ್ನು ಅವರ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಹೆಚ್ಚೆಚ್ಚು ಶೇರ್ ಮಾಡಿ ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವರವರನ್ನ ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ.

ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಯೋಧರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ರಾಜು ಶ್ರೀವಾಸ್ತವ್ ರವರ ವಿಡಿಯೋ ಇಲ್ಲಿದೆ ನೋಡಿ

Advertisement
Share this on...